For Quick Alerts
ALLOW NOTIFICATIONS  
For Daily Alerts

ಚಳಿಗಾಲದ ಸಮಯದಲ್ಲಿ ತ್ವಚೆಯ ಆರೈಕೆಗೆ ಸರಳ ಬ್ಯೂಟಿ ಟಿಪ್ಸ್

|

ಚಳಿಗಾಲದ ಸಮಯದಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಅಗತ್ಯವಾಗಿದೆ. ಚಳಿಗಾಲದಲ್ಲಿ ಕೇವಲ ದೇಹದ ಆರೋಗ್ಯ ಮಾತ್ರವಲ್ಲದೆ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಚಳಿಗಾಲದಲ್ಲಿ ಹೊರಗಿನ ಹವಾಮಾನದಿಂದಾಗಿ ಚರ್ಮವು ಒಡೆಯುವುದು ಮತ್ತು ನೆರಿಗಗಳು ಬೀಳುವುದು ಸಾಮಾನ್ಯ. ಇಂತಹ ಸಮಯದಲ್ಲಿ ಇದನ್ನು ಕಾಪಾಡುವುದು ಅತೀ ಅಗತ್ಯ. ಈ ಲೇಖನದಲ್ಲಿ ಚಳಿಗಾಲದಲ್ಲಿ ಮುಖದ ಅಂದವನ್ನು ಹಾಗೆ ಇಟ್ಟುಕೊಳ್ಳುವುದು ಸವಾಲಿನ ಕೆಲಸವಾಗಿರುವುದು. ಯಾಕೆಂದರೆ ಚಳಿಗಾಲವು ಅತಿಯಾಗಿ ಪ್ರಭಾವ ಬೀರುವುದು ತ್ವಚೆಯ ಮೇಲೆ.

ಹೀಗಾಗಿ ಈ ಲೇಖನದಲ್ಲಿ ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೇಗೆ ಮಾಡುವುದು ಎಂದು ತಿಳಿಯಲು ನಿಮಗೆ ನೆರವಾಗಲಿದ್ದೇವೆ. ಇದರ ಹೊರತಾಗಿ ನೀವು ಬೇರೆ ಸೌಂದರ್ಯವರ್ಧಕಗಳನ್ನು ಕೂಡ ಬಳಸಿಕೊಳ್ಳಬಹುದು. ಆದರೆ ಇಂದಿನ ದಿನಗಳಲ್ಲಿ ಜನರು ಹೆಚ್ಚಾಗಿ ನೈಸರ್ಗಿಕ ಸೌಂದರ್ಯವರ್ಧಕಗಳ ಮೊರೆ ಹೋಗುವರು. ಚಳಿಗಾಲದಲ್ಲಿ ನೀವು ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂದು ತಿಳಿಯುವ. ನೀವು ಮನೆಯಲ್ಲೇ ಮುಖಕ್ಕೆ ಸ್ಕ್ರಬ್ ಮಾಡಿಕೊಳ್ಳಬಹುದು. ಇದನ್ನು ನೀವು ಮನೆಯಲ್ಲೇ ತಯಾರಿಸಿಕೊಳ್ಳಿ. ಇದು ತಯಾರಿಸಲು ತುಂಬಾ ಸುಲಭವಾಗಿರುವುದು.

Homemade beauty tips for winter

ಸೂರ್ಯಕಾಂತಿ

*ಸೂರ್ಯಕಾಂತಿ ಬೀಜಗಳು ಅಥವಾ ಅಗಸೆ ಬೀಜಗಳನ್ನು ಕಾಫಿ ಗ್ರೈಂಡರ್ ಅಥವಾ ಬ್ಲೆಂಡರ್ ಬಳಸಿಕೊಂಡು ಹುಡಿ ಮಾಡಿ.

*ಇದನ್ನು ಒಂದು ದೊಡ್ಡ ಪಿಂಗಾಣಿಗೆ ಹಾಕಿ. ಇದಕ್ಕೆ ಅರ್ಧ ಕಪ್ ಹಾಲಿನ ಕ್ರೀಮ್ ಹಾಕಿಕೊಳ್ಳಿ ಮತ್ತು ಸರಿಯಾಗಿ ಮಿಶ್ರಣ ಮಾಡಿ.

*ಈ ಸ್ಕ್ರಬ್ ನ್ನು ಬಳಸಿಕೊಳ್ಳುವ ಮೊದಲು ಮುಖ ತೊಳೆಯಿರಿ ಮತ್ತು ಇದನ್ನು ಒದ್ದೆ ಚರ್ಮದ ಮೇಲೆ ಮಸಾಜ್ ಮಾಡಿ.

ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಟವೆಲ್ ಬಳಸಿಕೊಂಡು ಒರೆಸಿಕೊಳ್ಳಿ. ಒಳ್ಳೆಯ ಫಲಿತಾಂಶ ಪಡೆಯಲು ನೀವು ಮೊಶ್ಚಿರೈಸರ್ ಕೂಡ ಬಳಸಿಕೊಳ್ಳಿ.

ಎಲ್ಲಾ ವಿಧದ ಚರ್ಮಕ್ಕೆ ಮಾಯಿಶ್ಚರೈಸರ್ ಕ್ರೀಮ್

*ಸ್ಕ್ರಬಿಂಗ್ ಮಾಡಿದ ಬಳಿಕ ಮುಖದಲ್ಲಿ ಗೆರೆಗಳು ಕಾಣಿಸಿಕೊಳ್ಳಬಹುದು. ಇದಕ್ಕಾಗಿ ಚರ್ಮಕ್ಕೆ ಮೊಶ್ಚಿರೈಸ್ ಮಾಡುವುದು ಅತೀ ಅಗತ್ಯ. ಹಣ್ಣಾದ ಪಪ್ಪಾಯಿ ಬಳಸಿಕೊಂಡು ಮುಖಕ್ಕೆ ಮೊಶ್ಚಿರೈಸ್ ಮಾಡಬಹುದು. ಚಳಿಗಾಲದಲ್ಲಿ ಪಪ್ಪಾಯಿ ಹೆಚ್ಚಾಗಿ ಸಿಗುವುದು.

*ಸಣ್ಣ ಪಪ್ಪಾಯಿ ಸಿಪ್ಪೆ ತೆಗೆಯಿರಿ ಮತ್ತು ಅದನ್ನು ಒಂದು ಪಿಂಗಾಣಿಗೆ ಹಾಕಿಕೊಂಡು ಹಿಚುಕಿಕೊಳ್ಳಿ.

*ಹಿಚುಕಿಕೊಂಡ ಪಪ್ಪಾಯಿಗೆ ಒಂದು ಚಮಚ ಆಲಿವ್ ತೈಲ ಹಾಕಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.

ಈ ಮಿಶ್ರಣವನ್ನು ಮುಖದಲ್ಲಿ ಸುಮಾರು 20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಬಿಸಿ ನೀರಿನಿಂದ ತೊಳೆಯಿರಿ. ಚರ್ಮಕ್ಕೆ ಹೆಚ್ಚಿನ ಮೊಶ್ಚಿರೈಸ್ ಬೇಕಿದ್ದರೆ ಆಗ ಬೇಬಿ ಲೋಶನ್ ಬಳಸಿಕೊಳ್ಳಿ.

Most Read: ಮೊಡವೆ ಕಲೆಗಳನ್ನು ನಿವಾರಿಸಲು 'ಗ್ರೀನ್ ಟೀ' ಬಳಸಿ ನೋಡಿ!

ಚರ್ಮಕ್ಕೆ ಟೋನರ್

ಟೋನರ್ ಬಳಸಿಕೊಳ್ಳದೆ ಚರ್ಮವನ್ನು ಶುಚಿಗೊಳಿಸುವಂತಹ ಕೆಲಸವು ಪೂರ್ತಿಯಾಗದು. ಆದರೆ ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವೊಂದು ಉತ್ಪನ್ನಗಳನ್ನು ಬಳಸಿಕೊಂಡರೆ ಆಗ ಅದರಿಂದ ಹೆಚ್ಚಿನ ನಷ್ಟವಾಗುವುದು. ಇದಕ್ಕಾಗಿ ನೀವು ಅಲೋವೆರಾವನ್ನು ಬಳಸಿಕೊಂಡು ಸ್ಕಿನ್ ಟೋನರ್ ತಯಾರಿಸಿಕೊಳ್ಳಬೇಕು. ಅಲೋವೆರಾ ಎಲೆಗಳು ಹೆಚ್ಚಿನ ಕಡೆಗಳಲ್ಲಿ ಸಿಗುವುದು. ನಿಮ್ಮ ಮನೆಯ ಕೈದೋಟದಲ್ಲೂ ಇದನ್ನು ಬೆಳೆಸಬಹುದು.

Homemade beauty tips for winter

ಅಲೋವೆರಾ ಜೆಲ್

½ ಕಪ್ ಅಲೋವೆರಾ ಜೆಲ್ ನ್ನು ಒಂದು ಬಾಟಲಿಗೆ ಹಾಕಿಡಿ ಮತ್ತು ಇದಕ್ಕೆ ಒಂದು ಕಪ್ ಡಿಸ್ಟಿಲ್ಡ್ ವಾಟರ್ ಹಾಕಿ. ನಿಮ್ಮ ಆಯ್ಕೆಯ ಸಾರಭೂತ ತೈಲವನ್ನು 8-10 ಹನಿ ಇದಕ್ಕೆ ಹಾಕಿ. ಒಣ ಚರ್ಮದ ಸಮಸ್ಯೆಯಿದ್ದರೆ ಆಗ ನೀವು ಜೆರೇನಿಯಂ ಗುಲಾಬಿ, ಕ್ಯಾಮೊಮೈಲ್, ಲ್ಯಾವೆಂಡರ್, ರೋಸ್ಮರಿ, ಸಿಹಿ ಕಿತ್ತಳೆ, ಶುಂಠಿ ಅಥವಾ ಮಲ್ಲಿಗೆ ತೈಲವನ್ನು ಬಳಸಿಕೊಳ್ಳಬಹುದು. ಈ ಮಿಶ್ರಣವನ್ನು ಸರಿಯಾಗಿ ಅಲುಗಾಡಿಸಿಕೊಳ್ಳಿ. ಒಂದು ಹತ್ತಿ ಉಂಡೆ ತೆಗೆದುಕೊಂಡು ಅದನ್ನು ಮಿಶ್ರಣದಲ್ಲಿ ಹದ್ದಿಕೊಂಡು ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ. ನೀವು ಇದನ್ನು ಸ್ಪ್ರೇ ಬಾಟಲಿಗೆ ಹಾಕಿಕೊಂಡು ನಿಮಗೆ ಬೇಕೆಂದಾಗ ಮುಖದ ಮೇಲೆ ಸ್ಪ್ರೇ ಮಾಡಬಹುದು.

Most Read: ದೇಹದ ಮಚ್ಚೆಗಳ ಮೇಲೆ ಕೂದಲು ಬೆಳೆದರೆ, ಅದು ಕ್ಯಾನ್ಸರ್ ರೋಗದ ಲಕ್ಷಣವೇ?

Homemade beauty tips for winter

ಚಾಕಲೇಟ್ ಫೇಸ್ ಮಾಸ್ಕ್

ನಿಮಗೆ ತುಂಬಾ ಇಷ್ಟವಿರುವಂತಹ ಚಾಕಲೇಟ್ ನ್ನು ಬಾಯಿಗೆ ಹಾಕಿಕೊಳ್ಳುವ ಬದಲು ಸೌಂದರ್ಯವರ್ಧಕವಾಗಿಯೂ ಬಳಸಿಕೊಳ್ಳಬಹುದು. ಪ್ರತಿಯೊಂದು ಹಬ್ಬ ಹಾಗೂ ಹುಟ್ಟುಹಬ್ಬಕ್ಕೆ ಚಾಕಲೇಟನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯವಾಗಿದೆ. ಬಾಲ್ಯದಲ್ಲಿ ನೀವು ಅತಿಯಾಗಿ ಚಾಕಲೇಟ್ ತಿನ್ನುವ ವೇಳೆ ಇದರಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ತಿಳಿಸಿರಬಹುದು. ಆದರೆ ಇತ್ತೀಚಿನ ವರದಿಯ ಪ್ರಕಾರ ಚಾಕಲೇಟ್ ಅದರಲ್ಲೂ ಡಾರ್ಕ್ ಚಾಕಲೇಟ್ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ ಎಂದು ಹೇಳಲಾಗಿದೆ. ಇದನ್ನು ನೀವು ಸೌಂದರ್ಯವರ್ಧಕವಾಗಿ ಬಳಸಿಕೊಂಡರೆ ಅದರಿಂದ ಲಾಭಗಳು ಸಿಗುವುದು.

ಡಾರ್ಕ್ ಚಾಕಲೇಟ್

ಉದಾಹರಣಗೆ ಡಾರ್ಕ್ ಚಾಕಲೇಟ್ ನಲ್ಲಿ ಇರುವಂತಹ ಕೋಕಾದಲ್ಲಿ ಹೆಚ್ಚಿನ ಮಟ್ಟದ ಆ್ಯಂಟಿಆಕ್ಸಿಡೆಂಟ್ ಇದೆ. ಕೆಂಪು ವೈನ್, ಗ್ರೀನ್ ಟೀ ಮತ್ತು ಬ್ಲ್ಯಾಕ್ ಟೀ ಗಿಂತಲೂ ಹೆಚ್ಚಿನ ಆ್ಯಂಟಿಆಕ್ಸಿಡೆಂಟ್ ಕೋಕಾದಲ್ಲಿದೆ. ಸಿಯೋಲ್ ಯೂನಿವರ್ಸಿಟಿಯು ನಡೆಸಿರುವಂತಹ ಅಧ್ಯಯನಗಳಲ್ಲೂ ಇದು ಸಾಬೀತಾಗಿದೆ. ಚರ್ಮದ ಅಂಗಾಂಶಗಳಿಗೆ ಹಾನಿಯುಂಟು ಮಾಡುವಂತಹ ಫ್ರೀ ರ್ಯಾಡಿಕಲ್ ನ್ನು ಇದು ತಟಸ್ಥಗೊಳಿಸುವುದು. ಕೋಕಾದಲ್ಲಿರುವಂತಹ ಫ್ಲಾವನಾಲ್ ಚರ್ಮದ ನಿರ್ಜಲೀಕರಣ ತಡೆದು, ರಕ್ತ ಸಂಚಾರವನ್ನು ಸುಗಮಗೊಳಿಸಿ, ಗಡಸು ಚರ್ಮವನ್ನು ನಯ ಮಾಡಿ, ಹಾನಿಕಾರವಾಗಿರುವಂತಹ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುವುದು. ಇದರಲ್ಲಿ ಉನ್ನತ ಮಟ್ಟದ ವಿಟಮಿನ್ ಗಳಾಗಿರುವ ಬಿ-12, ಡಿ ಮತ್ತು ಇ ಇದೆ. ಇದರಿಂದಾಗಿ ಚರ್ಮದ ಕೋಶಗಳು ಬೆಳೆಯಲು ಮತ್ತು ಕ್ಯಾಲ್ಸಿಯಂ ಹೀರಿಕೊಳ್ಳಲು ನೆರವಾಗುವುದು. ಇದರಲ್ಲಿ ಇರುವಂತಹ ಕಬ್ಬಿನಾಂಶ, ತಾಮ್ರ, ಮ್ಯಾಂಗನೀಸ್, ಸತ ಮತ್ತು ಮೆಗ್ನಿಶಿಯಂ ಚರ್ಮದ ಆರೋಗ್ಯ ವೃದ್ಧಿಸುವುದು. ಪ್ರತಿಯೊಂದು ಪೋಷಕಾಂಶವು ಹಾನಿಗೀಡಾಗಿರುವಂತಹ ಅಂಗಾಂಶವನ್ನು ಮರುಸ್ಥಾಪಿಸಲು ನೆರವಾಗಿ, ಇದು ಬೆಳೆಯುವಂತೆ ಮಾಡುವುದು ಮತ್ತು ಚರ್ಮವು ಸರಿಯಾಗಿ ಪೋಷಕಾಂಶಗಳನ್ನು ಹೀರಿಕೊಳ್ಳುವಂತೆ ಮಾಡುವುದು.

English summary

Homemade beauty tips for winter

Winter is the time when you stay healthy and fine throughout the day. But, it is also important for you to get optimized with the weather condition. Something to get your skin free from wrinkles and chapped skin layer is really important. Today, people have found out several ways to get best presentation of face during winter. A complete skin care routine is always important.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more