For Quick Alerts
ALLOW NOTIFICATIONS  
For Daily Alerts

ತೋಳುಗಳಲ್ಲಿ ಕೆಂಪು ಬಣ್ಣದ ಗುಳ್ಳೆಗಳಾಗಿವೆಯೇ? ಇಲ್ಲಿದೆ ನೋಡಿ ಸರಳ ಪರಿಹಾರಗಳು

By Sushma Charhra
|

ಒಂದು ವೇಳೆ ನಿಮ್ಮ ತೋಳುಗಳಲ್ಲಿ ಕೆಂಪು ಬಣ್ಣದ ಗುಳ್ಳೆಗಳಾಗಿರುವುದನ್ನು ನೀವು ಗಮನಿಸಿದರೆ, ನೀವು ಕೂಡಲೇ ಗಂಭೀರವಾಗಿ ಜಾಗೃತೆ ವಹಿಸಬೇಕು ಎಂದರ್ಥ. ಈ ರೀತಿಯ ಕೆಂಪು ಚುಕ್ಕಿಗಳು ಕಾಣಿಸಿಕೊಳ್ಳುವುದನ್ನು ಕೆರಟೋಸಿಸ್ ಪಿಲರೀಸ್ ಅಥವಾ ಚಿಕನ್ ಸ್ಕಿನ್ ಎಂದು ಕರೆಯುತ್ತಾರೆ.

ಕೆರೋಟಿನ್ ಅನ್ನುವ ಪ್ರೋಟೀನ್ ಹೇರ್ ಫಾಲಿಕಲ್ಸ್ ಗಳನ್ನು ಬ್ಲಾಕ್ ಮಾಡುವ ಕಾರಣದಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.ಹಾಗಂತ ಇದು ಕೇವಲ ತೋಳುಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ ಚರ್ಮದ ಯಾವುದೇ ಭಾಗದಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು.

how to prevent bumps on arms

ಇದು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಹಾಗಂತ ಮಕ್ಕಳಲ್ಲಿ ಮಾತ್ರವಲ್ಲ ವಯಸ್ಕರಲ್ಲೂ ಇದು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾದ್ರೆ ಇದನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಇತರೆ ಹಲವು ಚರ್ಮದ ಸಮಸ್ಯೆಗಳಂತೆ ಇದನ್ನೂ ಕೂಡ ಮನೆಮದ್ದಿನಿಂದ ಪರಿಹರಿಸಿಕೊಳ್ಳಬಹುದು. ಹಾಗಾದ್ರೆ ಯಾವೆಲ್ಲ ಮನೆಮದ್ದುಗಳು ಈ ಸಮಸ್ಯೆಗೆ ಮುಕ್ತಿ ನೀಡಬಲ್ಲವು ಎಂಬುದನ್ನು ತಿಳಿಯಲು ಮುಂದೆ ಓದಿ.
ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆಯಲ್ಲಿರುವ ಮಾಯಿಶ್ಚರೈಸಿಂಗ್ ಗುಣಗಳಿಂದಾಗಿ ಇದು ಉರಿಯೂತ ಮತ್ತು ಶುಷ್ಕ ತ್ವಚೆ ಸಮಸ್ಯೆ ನಿವಾರಣೆಗೆ ಪರಿಣಾಮಕಾರಿಯಾಗಿ ವರ್ತಿಸುತ್ತದೆ. ಚರ್ಮವನ್ನು ಒಟ್ಟುಗೂಡಿಸುವುದಕ್ಕೆ ಕೊಬ್ಬರಿ ಎಣ್ಣೆ ಸಹಕಾರಿ ಮತ್ತು ಗುಳ್ಳೆಗಳು ಹೆಚ್ಚು ಗೋಚರಿಸದೇ ಇರುವಂತೆ ಮಾಡಿ, ದಿನದಿಂದ ದಿನಕ್ಕೆ ಗುಳ್ಳೆಗಳನ್ನು ಕಡಿಮೆ ಮಾಡುವ ಸಾಮರ್ಥ್ಯ ಕೊಬ್ಬರಿ ಎಣ್ಣೆಗಿದೆ.

ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹದವಾಗಿ ಬೆಚ್ಚಗೆ ಮಾಡಿ ಅದನ್ನು ಎಫೆಕ್ಟ್ ಆಗಿರುವ ಚರ್ಮದ ಭಾಗಕ್ಕೆ ಅಪ್ಲೈ ಮಾಡಿಯ ವೃತ್ತಾಕಾರದಲ್ಲಿ ಮಸಾಜ್ ಮಾಡಿ ಮತ್ತು 5 ನಿಮಿಷ ಹಾಗೆಯೇ ಇರಲು ಬಿಡಿ. ದಿನಕ್ಕೆ ಎರಡು ಬಾರಿ ಪುನರಾವರ್ತಿಸುವುದರಿಂದಾಗಿ ವೇಗವಾಗಿ ಗುಳ್ಳೆಗಳನ್ನು ನಿವಾರಿಸಿಕೊಳ್ಳಬಹುದು.

ಪ್ರತಿದಿನ ಒಂದು ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಸೇವನೆ ಮಾಡಬೇಕಂತೆ. ಹೀಗೆ ಮಾಡುವುದರಿಂದಾಗಿ ಕೆಲವೇ ವಾರಗಳಲ್ಲಿ ಈ ಸಮಸ್ಯೆಯಿಂದ ನೀವು ಮುಕ್ತಿ ಪಡೆಯಲು ಸಾಧ್ಯವಿದೆ,

ಅಲೋವೆರಾ

ಅಲೋವೆರಾವು ಚರ್ಮವನ್ನು ಹೈಡ್ರೇಟ್ ಆಗಿಡಲು ಒಂದು ಅತ್ಯುತ್ತಮ ವಸ್ತುವಾಗಿದೆ . ಇದು ಶುಷ್ಕ ತ್ವಚೆಗೆ ತೇವಾಂಶ ಒದಗಿಸುತ್ತದೆ ಮತ್ತು ಚರ್ಮದಲ್ಲಿ ಕೆಂಪು ಗುಳ್ಳೆಗಳು ಆಗದಂತೆ ತಡೆಯುತ್ತದೆ. ಒಂದು ಅಲೋವೆರಾ ಎಲೆಯನ್ನು ತೆಗೆದುಕೊಳ್ಳಿ. ಅದನ್ನು ಕತ್ತರಿಸಿ ಜೆಲ್ ನ್ನು ಹೊರತೆಗೆಯಿರಿ. ಈಗ ಆ ಜೆಲ್ ನ್ನು ಎಫೆಕ್ಟ್ ಆಗಿರುವ ಜಾಗಕ್ಕೆ ಅಪ್ಲೈ ಮಾಡಿ ಮತ್ತು ವೃತ್ತಾಕಾರದಲ್ಲಿ ಕೆಲವು ನಿಮಿಷ ಮಸಾಜ್ ಮಾಡಿ. ಆ ಮೂಲಕ ಚರ್ಮವು ಜೆಲ್ ನ್ನು ಹೀರಿಕೊಳ್ಳಲಿ. ನಂತರ 30 ನಿಮಿಷ ಹಾಗೆಯೇ ಬಿಡಿ. ಹದವಾಗಿ ಬೆಚ್ಚಗಿರುವ ನೀರಿನಲ್ಲಿ 30 ನಿಮಿಷದ ನಂತರ ತೊಳೆಯಿರಿ. ದಿನಕ್ಕೆ ಒಂದು ಅಥವಾ ಎರಡು ಬಾರಿ ಇದನ್ನು ಪುನರಾವರ್ತಿಸಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ತಾಜಾ ಅಲವೀರಾ ಎಲೆಗಳನ್ನು ಬಳಸಿ. ಒಂದು ವೇಳೆ ಅದು ನಿಮಗೆ ಲಭ್ಯವಿಲ್ಲದಿದ್ದರೆ ಮಾರ್ಕೆಟ್ ನಲ್ಲಿ ಸಿಗುವ ರೆಡಿಮೇಡ್ ಅಲವೀರಾ ಜಲ್ ಗಳನ್ನು ಬಳಕೆ ಮಾಡಬಹುದು.

ಆಲಿವ್ ಎಣ್ಣೆ

ಆಲಿವ್ ಎಣ್ಣೆಯಲ್ಲಿ ವಿಟಮಿನ್ ಇ ಅಂಶವಿರುತ್ತದೆ ಮತ್ತು ಇದು ಉರಿಯೂತ ಗುಣ ಪಡಿಸುವ , ತುರಿಕೆ ಮತ್ತು ಕೆಂಪಗಾಗಿರುವ ಚರ್ಮವನ್ನು ನಿವಾರಣೆ ಮಾಡುವ ತಾಕತ್ತನ್ನು ಹೊಂದಿದೆ. ಕೆಲವೇ ಹನಿಗಳನ್ನು ಆಲಿವ್ ಎಣ್ಣೆಯನ್ನು ಮೊದಲಿಗೆ ಬಿಸಿ ಮಾಡಿ ಮತ್ತು ಎಫೆಕ್ಟ್ ಆಗಿರುವ ಜಾಗಕ್ಕೆ ಅಪ್ಲೈ ಮಾಡಿ. ವೃತ್ತಾಕಾರದಲ್ಲಿ ನಿಧಾನವಾಗಿ ಮಸಾಜ್ ಮಾಡಿ ಮತ್ತು 30 ನಿಮಿಷ ಹಾಗೆಯೇ ಬಿಡಿ.ನಂತರ ತೊಳೆಯಿರಿ. ಪ್ರತಿದಿನ ಸ್ನಾನಕ್ಕೂ ಮುನ್ನ ನೀವು ಇದನ್ನು ಪ್ರಯತ್ನಿಸಬಹುದು. ಯಾಕೆಂದರೆ ಇದು ನಿಮ್ಮ ಚರ್ಮವನ್ನು ಮಾಯ್ಚರೈಸ್ ಮಾಡುತ್ತದೆ. ನೀವು ಬೇಕಿದ್ದರೆ ಒಂದು ಟೇಬಲ್ ಸ್ಪೂನ್ ಆಲಿವ್ ಎಣ್ಣೆಗೆ ಒಂದು ಟೇಬಲ್ ಸ್ಪೂನ್ ನಷ್ಟು ಬ್ರೌನ್ ಶುಗರ್ ನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಅದರ ಸ್ಕ್ರಬ್ ನ್ನು ಎಫೆಕ್ಟ್ ಆಗಿರುವ ಜಾಗಕ್ಕೆ ಬಳಸಬುಹುದು. ಸಹಜವಾದ ನೀರಿನಲ್ಲಿ ಸ್ವಲ್ಪ ಸಮಯ ಬಿಟ್ಟು ತೊಳೆಯುವುದರಿಂದ ಉತ್ತಮವಾಗುತ್ತದೆ ಮತ್ತು ನಂತರ ಅಗತ್ಯ ಬಿದ್ದರೆ ಮಾಯ್ಚರೈಸರ್ ಅಪ್ಲೈ ಮಾಡಬಹುದು.

ಮೊಸರು

ಮೊಸರು ಮತ್ತೊಂದು ಮನೆಯಲ್ಲೇ ಸಿಗುವ ಔಷಧಿಯಾಗಿದೆ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ಚರ್ಮದ ಸತ್ತ ಜೀವಕೋಶಗಳನ್ನು ತೆಗೆಯಲು ನೆರವಾಗುತ್ತದೆ. ಯಾವುದೇ ಬಣ್ಣ ಅಥವಾ ರುಚಿ ಸೇರಿಸಿರದ ತಾಜಾ ಮೊಸರಿನಿಂದ ನಿಮ್ಮ ಚರ್ಮಕ್ಕೆ ಮಸಾಜ್ ಮಾಡಿ. ಎಫೆಕ್ಟ್ ಆಗಿರುವ ಜಾಗದಲ್ಲಿ ಎರಡರಿಂದ ಮೂರು ನಿಮಿಷ ಹೀಗೆ ಮಾಡಿ ಮತ್ತು ಸುಮಾರು 10 ನಿಮಿಷ ಹಾಗೆಯೇ ಬಿಡಿ. ಸಹಜ ನೀರಿನಲ್ಲಿ ಮುಖವನ್ನು ತೊಳೆಯಿರಿ ಮತ್ತು ಪ್ರತಿದಿನ ಈ ಅಭ್ಯಾಸ ರೂಢಿಸಿಕೊಳ್ಳಿ.

ವಿಟಮಿನ್ ಎ ಮಾತ್ರೆಗಳು

ವಿಟಮಿನ್ ಎ ಗಳಲ್ಲಿ ರೆಟಿನಾಲ್ ಅಂಶಗಳಿರುತ್ತದೆ ಮತ್ತು ಅದು ಚರ್ಮದಲ್ಲಿ ಯಾವುದೇ ರೀತಿಯ ತುರಿಕೆ ಮತ್ತು ಕಿರಿಕಿರಿ ಇದ್ದರೂ ಕೂಡ ಅದನ್ನು ನಿವಾರಣೆ ಮಾಡುವ ಸಾಮರ್ಥ್ಯ ಹೊಂದಿದೆ. ಕತ್ತರಿಸಿ ವಿಟಮಿನ್ ಎ ಆಯಿಲ್ ನ ಕ್ಯೂಪ್ಸೂಲ್ ಗಳನ್ನು ತೆರೆಯಿರಿ ಮತ್ತು ನೇರವಾಗಿ ಆ ಎಣ್ಣೆಯನ್ನು ಎಫೆಕ್ಟ್ ಆಗಿರುವ ಚರ್ಮದ ಭಾಗಕ್ಕೆ ಅಪ್ಲೈ ಮಾಡಿ. ವೃತ್ತಾಕಾರದಲ್ಲಿ ಕೆಲವು ನಿಮಿಷ ಮಸಾಜ್ ಮಾಡಿ ಮತ್ತು ನಿಮಿಷ ಹಾಗೆಯೇ ಬಿಡಿ. ಅದಾದ ನಂತರ ಸಹಜವಾಗಿರುವ ನೀರಿನಲ್ಲಿ ತೊಳೆಯಿರಿ.

ಸನ್ ಸ್ಕ್ರೀನ್

ನಾವೆಲ್ಲರೂ ಸನ್ ಸ್ಕ್ರೀನ್ ಅನ್ನು ಕೇವಲ ಸೂರ್ಯನ ನೇರಳಾತೀತ ಕಿರಣಗಳಿಂದ ಆಗುವ ತೊಂದರೆಯನ್ನು ತಡೆದು ಚರ್ಮವನ್ನು ರಕ್ಷಿಸಿಕೊಳ್ಳಲು ಬಳಕೆ ಮಾಡುತ್ತೇವೆ. ಆದರೆ ಸನ್ ಸ್ಕ್ರನ್ ಇತರೆ ಚರ್ಮ ಸಂಬಂಧಿ ಕಾಯಿಲೆಗಳ ನಿವಾರಣೆಗೂ ಬಹಳ ಸಹಕಾರಿಯಾಗಿರುತ್ತದೆ. ಸನ್ ಸ್ಕ್ರೀನ್ ಬಳಕೆಯು ಗುಳ್ಳೆಗಳನ್ನು ಏಳದಂತೆ ತಡೆಯುವುದಿಲ್ಲ ಆದರೆ ಎದ್ದಿರುವ ಗುಳ್ಳೆಗಳನ್ನು ಒಂದು ಹಂತದ ವರೆಗೆ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಪ್ರತಿದಿನ SPF 30 ಇರುವ ಸನ್ ಸ್ಕ್ರೀನ್ ನ್ನು ಪ್ರತಿದಿನ ಬಳಕೆ ಮಾಡಿ.

ಸೂಚನೆ: ಈಗೆಲ್ಲ ಮಕ್ಕಳಿಗೆ ಈ ಸಮಸ್ಯೆ ಬರದಂತೆ ಚುಚ್ಚುಮದ್ದು ಹಾಕಿಸಲಾಗುತ್ತೆ. ದಯವಿಟ್ಟು ನಿಮ್ಮ ಮಗುವಿಗೂ ಚುಚ್ಚುಮದ್ದು ಹಾಕಿಸುವುದನ್ನು ಮರೆಯಬೇಡಿ.

English summary

Home Remedies To Get Rid Of Bumps On Arms

If you have noticed red bumps appearing on the arms lately, then it's high time to pay serious attention to it. Red bumps appear on the skin due to a condition often called keratosis pilaris, which is also called 'chicken skin'. Let us have a look at what are the home remedies to treat bumps on arms and how to use them.
Story first published: Monday, July 9, 2018, 15:25 [IST]
X
Desktop Bottom Promotion