For Quick Alerts
ALLOW NOTIFICATIONS  
For Daily Alerts

ಸೀಬೆ ಎಲೆಗಳು ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ!

By Hemanth
|

ಪ್ರಕೃತಿಯಲ್ಲಿ ಸಿಗುವಂತಹ ಹಣ್ಣುಗಳು ಒಂದಲ್ಲಾ ಒಂದು ರೀತಿಯಿಂದ ನಮ್ಮ ಆರೋಗ್ಯಕ್ಕೆ ನೆರವಾಗುವುದು. ಆಯಾಯ ಕಾಲಕ್ಕೆ ಅನುಗುಣವಾಗಿ ಹಣ್ಣುಗಳು ಸಿಗುವುದು. ಇದರಲ್ಲಿ ಪೇರಳೆ ಅಥವಾ ಸೀಬೆ ಹಣ್ಣು ಕೂಡ ಒಂದು. ಪೇರಳೆ ಹಣ್ಣು ವರ್ಷದ ಹೆಚ್ಚಿನ ಸಮಯದಲ್ಲಿ ನಮಗೆ ಲಭ್ಯವಾಗುವುದು. ಇದು ಆರೋಗ್ಯಕ್ಕೆ ತುಂಬಾ ಲಾಭಕಾರಿ. ಅದೇ ರೀತಿ ಸೀಬೆ ಎಲೆಗಳನ್ನು ಸೌಂದರ್ಯವರ್ಧಕವಾಗಿಯು ಬಳಸಿಕೊಳ್ಳಬಹುದು. ಇದು ದೇಹದ ಸೌಂದರ್ಯ ಹೆಚ್ಚಿಸುವುದು. ಪೇರಳೆ ಎಲೆಗಳು, ತ್ವಚೆ, ಕೂದಲಿಗೆ ತುಂಬಾ ಪರಿಣಾಮಕಾರಿ.

ಭಾರತದ ಹೆಚ್ಚಿನ ಮನೆಗಳಲ್ಲಿ ಪೇರಳೆ ಎಲೆಗಳನ್ನು ಸೌಂದರ್ಯವರ್ಧಕವಾಗಿ ಹಿಂದಿನಿಂದಲೂ ಬಳಸಿಕೊಂಡು ಬರುತ್ತಿದ್ದಾರೆ. ಪೇರಳೆ ಎಲೆಗಳಲ್ಲಿ ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ, ಆ್ಯಂಟಿಆಕ್ಸಿಡೆಂಟ್ ಇತ್ಯಾದಿ ಗುಣಗಳು ಇವೆ. ಚರ್ಮ ಮತ್ತು ತ್ವಚೆಗೆ ಇದನ್ನು ಸೌಂದರ್ಯವರ್ಧಕವಾಗಿ ಬಳಸಿದರೆ ತುಂಬಾ ಲಾಭಕಾರಿ. ಬನ್ನಿ ಚರ್ಮ ಮತ್ತು ಕೂದಲಿಗೆ ಸೀಬೆ ಎಲೆಗಳನ್ನು ಬಳಸಿಕೊಳ್ಳುವುದು ಹೇಗೆ ಎಂದು ತಿಳಿಯುವ.....

ಕಪ್ಪು ಕಲೆಗಳ ನಿವಾರಣೆ

ಕಪ್ಪು ಕಲೆಗಳ ನಿವಾರಣೆ

ಕಪ್ಪು ಕಲೆಗಳ ನಿವಾರಣೆ ಮಾಡುವಲ್ಲಿ ಪೇರಳೆ ಎಲೆಗಳು ತುಂಬಾ ಪರಿಣಾಮಕಾರಿ. ಕೆಲವು ಪೇರಳೆ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ. ಸ್ವಲ್ಪ ನೀರು ಹಾಕಿ ಪೇರಳೆ ಎಲೆಗಳನ್ನು ರುಬ್ಬಿಕೊಳ್ಳಿ ಮತ್ತು ಇದಕ್ಕೆ ಚಿಟಿಕೆಯಷ್ಟು ಅರಶಿನ ಹುಡಿ ಹಾಕಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಬೆರಳ ತುದಿಯಿಂದ ಸ್ಕ್ರಬ್ ಮಾಡಿ. ತಣ್ಣೀರಿನಿಂದ ಇದನ್ನು ತೊಳೆಯಿರಿ. ವಾರದಲ್ಲಿ ಎರಡು ಸಲ ಹೀಗೆ ಮಾಡಿ.

ಮೊಡವೆ ಮತ್ತು ಕಲೆಗಳನ್ನು ಕಡಿಮೆ ಮಾಡುವುದು

ಮೊಡವೆ ಮತ್ತು ಕಲೆಗಳನ್ನು ಕಡಿಮೆ ಮಾಡುವುದು

ಪೇರಳೆ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಮೊಡವೆ ಉಂಟು ಮಾಡುವ ಕೋಶಗಳನ್ನು ತೆಗೆದುಹಾಕುವುದು. ಇದು ಕಪ್ಪು ಕಲೆಗಳು ಮತ್ತು ಇತರ ಬೊಕ್ಕೆಗಳನ್ನು ನಿವಾರಣೆ ಮಾಡುವುದು. ಸ್ವಲ್ಪ ಪೇರಳೆ ಎಲೆಗಳನ್ನು ತೆಗೆದುಕೊಂಡು ಅದನ್ನು ಹಿಚುಕಿಕೊಳ್ಳಿ. ಇದನ್ನು ಬಾಧಿತ ಜಾಗ ಅಥವಾ ಸಂಪೂರ್ಣ ಮುಖಕ್ಕೆ ಹಚ್ಚಿಕೊಳ್ಳಿ. ನಿಯಮಿತವಾಗಿ ಪೇರಳೆ ಎಲೆಗಳನ್ನು ಬಳಸುವುದರಿಂದ ಮುಖದಲ್ಲಿರುವ ಮೊಡವೆಗಳು ಹಾಗೂ ಕಪ್ಪು ಕಲೆಗಳು ನಿವಾರಣೆಯಾಗುವುದು.

ನೆರಿಗೆ ನಿವಾರಣೆ

ನೆರಿಗೆ ನಿವಾರಣೆ

ಸೀಬೆ ಎಲೆಗಳಲ್ಲಿ ಇರುವಂತಹ ಗುಣಗಳು ನೆರಿಗೆ ನಿವಾರಣೆ ಮಾಡುವಂತಹ ಶಕ್ತಿ ಹೊಂದಿದೆ. ಇದು ಮುಖದಲ್ಲಿನ ಫ್ರೀ ರ್ಯಾಡಿಕಲ್ ತೆಗೆಯುವುದು ಮತ್ತು ಮುಖದಲ್ಲಿ ವಯಸ್ಸಾಗುವ ಲಕ್ಷಣಗಳು ಮೂಡದಂತೆ ತಡೆಯುವುದು. ಸ್ವಲ್ಪ ಸೀಬೆ ಎಲೆಗಳನ್ನು ನೀರಿಗೆ ಹಾಕಿ ಸರಿಯಾಗಿ ಕುದಿಸಿ. ಇದರ ಸಾರವನ್ನು ಪಡೆದುಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದ ಚರ್ಮವು ಬಿಳಿಯಾಗುವುದು ಮತ್ತು ಚರ್ಮದ ಕಾಂತಿ ಹೆಚ್ಚುವುದು.

ತುರಿಕೆ ಕಡಿಮೆ ಮಾಡುವುದು

ತುರಿಕೆ ಕಡಿಮೆ ಮಾಡುವುದು

ಸೀಬೆ ಎಲೆಗಳಲ್ಲಿ ಇರುವ ಗುಣವು ಉರಿಯೂತ ಕಡಿಮೆ ಮಾಡುವುದು. ಇದರಿಂದ ತುರಿಕೆ ಕಡಿಮೆಯಾಗುವುದು. ಸುಡುವ ಚರ್ಮ ಮತ್ತು ಇತರ ಚರ್ಮದ ಅಲರ್ಜಿಗೆ ಇದು ತುಂಬಾ ಪರಿಣಾಮಕಾರಿ. ಯಾಕೆಂದರೆ ಇದು ಅಲರ್ಜಿ ಉಂಟು ಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುವುದು. ಪೇರಳೆ ಎಲೆಗಳನ್ನು ರುಬ್ಬಿಕೊಂಡು ಅದನ್ನು ಬಾಧಿತ ಜಾಗಕ್ಕೆ ಹಚ್ಚಿದರೆ ಇದು ಒಳ್ಳೆಯ ಪರಿಹಾರ ನೀಡುವುದು.

ಕೂದಲು ಉದುರುವಿಕೆ ತಡೆಯುವುದು

ಕೂದಲು ಉದುರುವಿಕೆ ತಡೆಯುವುದು

ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವ ಪೇರಳೆ ಎಲೆಗಳು ಕೂದಲಿನ ಬೆಳವಣಿಗೆ ಸುಧಾರಿಸುವುದು. ಕೂದಲು ಉದುರುವಿಕೆಗೆ ಇದು ಅತ್ಯುತ್ತಮ ನೈಸರ್ಗಿಕ ಪರಿಹಾರ. ಸ್ವಲ್ಪ ಪೇರಳೆ ಎಲೆಗಳನ್ನು ತೆಗೆದುಕೊಂಡು ಅದನ್ನು ನೀರಿಗೆ ಹಾಕಿ ಕುದಿಸಿ. ಇದನ್ನು ತಂಪಾಗಲು ಬಿಡಿ. ಈ ನೀರನ್ನು ಕೂದಲು, ತಲೆಬುರುಡೆಗೆ ಹಚ್ಚಿಕೊಂಡು ಮಸಾಜ್ ಮಾಡಿ. ಹತ್ತು ನಿಮಿಷ ಬಳಿಕ ತಣ್ಣೀರಿನಿಂದ ತೊಳೆಯಿರಿ. ಸುಮಾರು 20 ನಿಮಿಷ ಕಾಲ ಪೇರಳೆ ಎಲೆಗಳನ್ನು ಕುದಿಸಿ. ಇದರಿಂದ ಎಲೆಗಳ ಸಾರವು ಹೊರಬರುವುದು.

ತಲೆಬುರುಡೆ ಸೋಂಕು ನಿವಾರಿಸುವುದು

ತಲೆಬುರುಡೆ ಸೋಂಕು ನಿವಾರಿಸುವುದು

ಸೀಬೆ ಎಲೆಗಳನ್ನು ತಲೆಬುರುಡೆಯ ಸೋಂಕು ನಿವಾರಣೆಗೂ ಬಳಸಿಕೊಳ್ಳಲಾಗುತ್ತದೆ. ಬೇಯಿಸಿದ ಸೀಬೆ ಎಲೆಗಳನ್ನು ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿ. 25 ನಿಮಿಷ ಕಾಲ ಹಾಗೆ ಬಿಡಿ ಮತ್ತು ತಣ್ಣೀರಿನಿಂದ ತೊಳೆಯಿರಿ. ಪೇರಳೆ ಎಲೆಗಳು ಕಂಡೀಷನರ್ ಹಾಗೆ ಕೆಲಸ ಮಾಡುವುದು. ವೇಗವಾಗಿ ಫಲಿತಾಂಶ ಬೇಕೆಂದರೆ ವಾರದಲ್ಲಿ ಎರಡು ಸಲ ಇದನ್ನು ಬಳಸಿ.

ಚರ್ಮ ಬಿಳಿಗೊಳಿಸಲು ಪೇರಳೆ ಎಲೆಗಳು

ಚರ್ಮ ಬಿಳಿಗೊಳಿಸಲು ಪೇರಳೆ ಎಲೆಗಳು

ಸೀಬೆ ಎಲೆಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಇತರ ಅಂಶಗಳು ಇವೆ. ಇದು ಚರ್ಮದಲ್ಲಿ ಸತ್ತ ಕೋಶಗಳನ್ನು ತೆಗೆದುಹಾಕುವುದು. ಇದು ಬ್ಯಾಕ್ಟೀರಿಯಾ ಕೊಂದು, ಚರ್ಮವು ಆರೋಗ್ಯಕಾರಿ ಮತ್ತು ನಯವಾಗುವುದು. ಇದರಿಂದ ಚರ್ಮದ ಬಣ್ಣವು ಬಿಳಿಯಾಗುವುದು. ಪೇರಳೆ ಎಲೆಗಳನ್ನು ರುಬ್ಬಿಕೊಂಡು ಅದಕ್ಕೆ ಒಂದು ಚಿಟಿಕೆ ಅರಶಿನ ಮತ್ತು ರೋಸ್ ವಾಟರ್ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. 15 ನಿಮಿಷ ಹಾಗೆ ಬಿಟ್ಟ ಬಳಿಕ ತೊಳೆದು ಮುಖ ಒಣಗಲು ಬಿಡಿ.

ಬಾಯಿಯ ಸ್ವಚ್ಛತೆ ಕಾಪಾಡುವುದು

ಬಾಯಿಯ ಸ್ವಚ್ಛತೆ ಕಾಪಾಡುವುದು

ಬಾಯಿಯ ಸ್ವಚ್ಛತೆ ಕಾಪಾಡಲು ಸೀಬೆ ಎಲೆಗಳನ್ನು ತುಂಬಾ ಹಿಂದಿನಿಂದಲೂ ಬಳಕೆ ಮಾಡುತ್ತಾ ಬರುತ್ತಿದ್ದಾರೆ. ಪೇರಳೆಯ ಚಿಗುರೆಲೆಗಳನ್ನು ನೀರಿಗೆ ಹಾಕಿ ಕುದಿಸಿ ಮತ್ತು ಸ್ವಲ್ಪ ಉಪ್ಪು ಹಾಕಿ. ಇದು ತಣ್ಣಗಾದ ಬಳಿಕ ಮೌಥ್ ವಾಶ್ ಹಾಗೆ ಬಳಸಬಹುದು. ದಿನದಲ್ಲಿ ಎರಡು ಸಲ ಹೀಗೆ ಮಾಡಿ.

ಸೀಬೆ ಎಲೆಗಳನ್ನು ಕುದಿಸಿದ ನೀರು

ಸೀಬೆ ಎಲೆಗಳನ್ನು ಕುದಿಸಿದ ನೀರು

ಒಂದು ಕಪ್ ನೀರಿಗೆ ಒಂದು ಹಿಡಿ ಸೀಬೆ ಎಲೆಗಳನ್ನು ಹಾಕಿ ಬಿಸಿ ಮಾಡಿ. 15-20 ನಿಮಿಷ ಕುದಿಸಿದ ಬಳಿಕ ನೀರನ್ನು ತೆಗೆಯಿರಿ. ನೀರನ್ನು ಹಾಗೆ ಕೋಣೆಯ ಉಷ್ಣತೆಯಲ್ಲಿ ತಣ್ಣಗಾಗಲು ಬಿಡಿ. ನೀರನ್ನು ಸರಿಯಾಗಿ ಗಾಳಿಸಿಕೊಂಡು ಅದನ್ನು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ. ಒಂದು ಗಂಟೆ ಕಾಲ ಇದನ್ನು ಹಾಗೆ ಬಿಟ್ಟು ಬಳಿಕ ತೊಳೆಯಿರಿ.

ಸೀಬೆ ಎಲೆಗಳನ್ನು ಕುದಿಸಿದ ನೀರು

ಸೀಬೆ ಎಲೆಗಳನ್ನು ಕುದಿಸಿದ ನೀರು

ಒಂದು ಕಪ್ ನೀರಿಗೆ ಒಂದು ಹಿಡಿ ಸೀಬೆ ಎಲೆಗಳನ್ನು ಹಾಕಿ ಬಿಸಿ ಮಾಡಿ. 15-20 ನಿಮಿಷ ಕುದಿಸಿದ ಬಳಿಕ ನೀರನ್ನು ತೆಗೆಯಿರಿ. ನೀರನ್ನು ಹಾಗೆ ಕೋಣೆಯ ಉಷ್ಣತೆಯಲ್ಲಿ ತಣ್ಣಗಾಗಲು ಬಿಡಿ. ನೀರನ್ನು ಸರಿಯಾಗಿ ಗಾಳಿಸಿಕೊಂಡು ಅದನ್ನು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ. ಒಂದು ಗಂಟೆ ಕಾಲ ಇದನ್ನು ಹಾಗೆ ಬಿಟ್ಟು ಬಳಿಕ ತೊಳೆಯಿರಿ.

ಸರಳ ಟಿಪ್ಸ್

ಸರಳ ಟಿಪ್ಸ್

ಒಂದು ಲೀಟರ್ ನೀರಿನಲ್ಲಿ 15 ರಿಂದ 20 ನಿಮಿಷಗಳ ಕಾಲ ಮುಷ್ಟಿಯಷ್ಟು ಸೀಬೆಯ ಎಲೆಗಳನ್ನು ಕುದಿಸಿಕೊಳ್ಳಿ. ಚೆನ್ನಾಗಿ ಕುದಿದ ನಂತರ, ತಣ್ಣಗಾಗಲು ಬಿಡಿ. ನೀರನ್ನು ಬಸಿದು ಅದನ್ನು ಕೂದಲ ಬುಡದಿಂದ ತುದಿಯವರೆಗೆ ತಕ್ಷಣವೇ ಹಚ್ಚಿಕೊಳ್ಳಿ. ಸೀಬೆ ಎಲೆಯೊಂದಿಗೆ ಕುದಿಸಿರುವ ನೀರನ್ನು ಕೂದಲಿಗೆ ಬಳಸಿಕೊಳ್ಳುವುದರಿಂದ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಯಾಗುತ್ತದೆ.

English summary

eight-beauty-benefits-of-guava-leaves

Beauty benefits of guava leaves extends to several years ago, when Indian women used it as an important ingredient in their beauty regimen. Guava leaves have analgesic, anti-inflammatory, antimicrobial, and antioxidant properties that help in curing the skin and hair-related beauty issues. Let us unveil some of the best beauty benefits of guava leaves for hair and skin.
X
Desktop Bottom Promotion