For Quick Alerts
ALLOW NOTIFICATIONS  
For Daily Alerts

ಅರ್ಧ ಗಂಟೆಯಲ್ಲಿ ಮುಖದ ಸೌಂದರ್ಯ ಹೆಚ್ಚಿಸುವ ಹಾಲಿನ ಹುಡಿಯ ಫೇಸ್ ಮಾಸ್ಕ್‌ಗಳು

By Hemanth
|

ಸುಂದರ ಹಾಗೂ ಕಾಂತಿಯುತ ತ್ವಚೆಯು ಪ್ರತಿಯೊಬ್ಬರ ಕನಸಾಗಿರುವುದು. ಅದರಲ್ಲೂ ಕೆಲವರು ಇದಕ್ಕಾಗಿ ತುಂಬಾ ಶ್ರಮವಹಿಸುವರು. ಮಾರುಕಟ್ಟೆಯಲ್ಲಿ ಸಿಗುವ ಹಲವಾರು ರೀತಿಯ ಕ್ರೀಮ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡಲು ಪ್ರಯತ್ನಿಸುವರು. ಇದರಲ್ಲಿ ಪ್ರಮುಖವಾಗಿ ಹಾಲು ಮತ್ತು ಹಾಲಿನ ಹುಡಿಯು ನಿಮ್ಮ ತ್ವಚೆಯ ಆರೈಕೆಯಲ್ಲಿ ಸ್ಥಾನ ಪಡೆಯಬಹುದು. ಯಾಕೆಂದರೆ ಹೆಚ್ಚಾಗಿ ಹಾಲಿನಿಂದ ತ್ವಚೆಯು ಕಾಂತಿ ಪಡೆಯುವುದು. ಇದು ತ್ವಚೆಗೆ ಕ್ಲೆನ್ಸರ್ ಆಗಿ ಕೆಲಸ ಮಾಡುವುದು ಮಾತ್ರವಲ್ಲದೆ ಸೌಂದರ್ಯ ವರ್ಧಿಸುವುದು. ಹಿಂದಿನ ಕಾಲದಲ್ಲಿ ರಾಣಿಯರು ಹಾಲಿನಿಂದ ಸ್ನಾನ ಮಾಡುತ್ತಲಿದ್ದ ಕಾರಣ ಅವರು ಸೌಂದರ್ಯ ವೃದ್ಧಿಸಿಕೊಳ್ಳುತ್ತಿದ್ದರು. ಆದರೆ ಹಾಲಿನಿಂದ ಸ್ನಾನ ಮಾಡುವುದು ಇಂದಿನ ದಿನಗಳಲ್ಲಿ ಆಗದ ಮಾತು. ಇದಕ್ಕಾಗಿ ಹಾಲಿನ ಹುಡಿಯನ್ನು ಬಳಸಿಕೊಂಡು ಸೌಂದರ್ಯವರ್ಧಿಸಿ.

Milk Powder

ಈ ಲೇಖನದಲ್ಲಿ ಹಾಲಿನ ಹುಡಿಯಿಂದ ತ್ವಚೆಯ ಕಾಂತಿ ವೃದ್ಧಿಸುವ ಬಗ್ಗೆ ಹೇಳಿಕೊಡಲಿದ್ದೇವೆ. ಹಾಲಿನ ಹುಡಿ ಯಾಕೆ? ಹಾಲನ್ನು ಯಾಕೆ ಬಳಸಬಾರದು ಎಂದು ನೀವು ಪ್ರಶ್ನಿಸಬಹುದು. ಹಾಲಿನ ಹುಡಿಯು ಹಾಲನ್ನು ನಿರ್ಜಲೀಕರಿಸಿದ ಸ್ಥಿತಿಯಾಗಿದೆ. ಇದು ಚರ್ಮಕ್ಕೆ ಕಾಂತಿ ನೀಡುವುದು. ಯಾಕೆಂದರೆ ಹಾಲಿನಲ್ಲಿರುವ ನೀರಿನಾಂಶವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿರುತ್ತದೆ ಮತ್ತು ಇದರಲ್ಲಿ ಘನ ಹಾಲು ಮಾತ್ರ ಉಳಿದಿರುವುದು. ದ್ರವ ಹಾಲಿಗಿಂತ ಇದರಲ್ಲಿ ಹೆಚ್ಚಿನ ಶಕ್ತಿಯಿದೆ. ನೈಸರ್ಗಿಕವಾಗಿ ತ್ವಚೆ ಆರೈಕೆ ಮಾಡಲು ಬೇಕಾಗುವಂತಹ ವಿಟಮಿನ್ ಗಳು, ಪೋಷಕಾಂಶಗಳು ಮತ್ತು ಖನಿಜಾಂಶಗಳು ಇದರಲ್ಲಿದೆ.

ಹಾಲಿನ ಹುಡಿ ಬಳಸುವ ಮೊದಲು ಅದರ ಲಾಭಗಳ ಬಗ್ಗೆ ತಿಳಿಯಲು ನೀವು ಬಯಸುವಿರಾದರೆ ಮುಂದಕ್ಕೆ ಓದಿ....
•ಹಾಲಿನ ಹುಡಿಯಲ್ಲಿ ಉನ್ನತ ಮಟ್ಟದ ವಿಟಮಿನ್ ಎ ಇದೆ ಮತ್ತು ಇದು ಆರೋಗ್ಯಕರ ಕೋಶ ವಿಭಜನೆಗೆ ಇದು ನೆರವಾಗುವುದು ಮತ್ತು ನಿಸ್ತೇಜ ಚರ್ಮಕ್ಕೆ ನೆರವಾಗುವುದು.
•ಹಾಲಿನ ಹುಡಿಯಲ್ಲಿರುವ ವಿಟಮಿನ್ ಸಿ ಯು ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು ಮತ್ತು ಚರ್ಮವು ಯೌವನಯುತ ಹಾಗೂ ಕಾಂತಿಯುತವಾಗುವುದು.
•ವಿಟಮಿನ್ ಬಿ6 ಹೊಸ ಕೋಶಗಳು ಉತ್ಪತ್ತಿಯಾಗಲು ನೆರವಾಗುವುದು ಮತ್ತು ಚರ್ಮವು ಮೊಶ್ಚಿರೈಸ್ ಮತ್ತು ಆರೋಗ್ಯಕಾರಿಯಾಗಿರಲು ನೆರವಾಗುವುದು.
•ಹಾಲಿನಲ್ಲಿರುವಂತಹ ಲ್ಯಾಕ್ಟಿಕ್ ಆಮ್ಲವು ಚರ್ಮವನ್ನು ನಯ, ಬಿಳಿ ಮತ್ತು ಕಾಂತಿಯುತವಾಗಿಸುವುದು.
•ಹಾಲಿನ ಹುಡಿಯು ಒಳ್ಳೆಯ ಕ್ಲೆನ್ಸರ್ ಮತ್ತು ನಿಸ್ತೇಜ ಚರ್ಮಕ್ಕೆ ನೆರವಾಗುವುದು.
•ಕಾಲಜನ್ ಉತ್ಪತ್ತಿಗೆ ಇದು ನೆರವಾಗುವುದು ಮತ್ತು ಹೊಸ ಚರ್ಮ ನಿರ್ಮಾಣಕ್ಕೆ ನೆರವಾಗುವುದು.
•ಇದು ಮುಖದ ಮೇಲೆ ಕಪ್ಪು ಕಲೆಗಳು, ಮೊಡವೆ, ಚರ್ಮದ ಕಿರಿಕಿರಿ ತಡೆಯುವುದು ಮತ್ತು ಚರ್ಮವು ತೇವಾಂಶದಿಂದ ಇರುವಂತೆ ಮಾಡುವುದು.

ಕಾಂತಿಯುತ ಚರ್ಮಕ್ಕೆ ಮಾಡಬಹುದಾದ ಫೇಸ್ ಮಾಸ್ಕ್ ಗಳು

ಹಾಲಿನ ಹುಡಿಯ ಲಾಭಗಳ ಬಗ್ಗೆ ನಿಮಗೆ ಈಗಾಗಲೇ ತಿಳಿಸಿದ್ದೇವೆ. ಇನ್ನು ಕಾಂತಿಯುತ ಚರ್ಮಕ್ಕೆ ಫೇಸ್ ಮಾಸ್ಕ್ ಹೇಗೆ ಮಾಡುವುದು ಎಂದು ತಿಳಿಯಿರಿ.

1. ಕಿತ್ತಳೆ ಜ್ಯೂಸ್ ಮತ್ತು ಕಡಲೆಹಿಟ್ಟಿನೊಂದಿಗೆ ಹಾಲಿನ ಹುಡಿ

ಹಾಲಿನ ಹುಡಿಯಂತೆ ಕಿತ್ತಳೆ ಜ್ಯೂಸ್ ನಲ್ಲಿ ಕೂಡ ವಿಟಮಿನ್ ಸಿ ಸಮೃದ್ಧವಾಗಿದೆ ಮತ್ತು ಇದು ಚರ್ಮವನ್ನು ಬಿಳಿಗೊಳಿಸುವುದು. ಕಡಲೆಹಿಟ್ಟು ಕಿತ್ತೊಗೆಯುವ ಗುಣವನ್ನು ಹೊಂದಿದೆ ಮತ್ತು ಇದು ಸತ್ತ ಚರ್ಮದ ಕೋಶಗಳನ್ನು ತೆಗೆಯುವುದು. ಇದು ಕಾಂತಿಯುತ ಚರ್ಮ ಪಡೆಯಲು ತುಂಬಾ ಪರಿಣಾಮಕಾರಿ.

ಬೇಕಾಗುವ ಸಾಮಾಗ್ರಿಗಳು
1 ಚಮಚ ಹಾಲಿ ಹುಡಿ
1 ಅಥವಾ 2 ಚಮಚ ಕಿತ್ತಳೆ ಜ್ಯೂಸ್
1 ಚಮಚ ಕಡಲೆಹಿಟ್ಟು

ಬಳಸುವ ವಿಧಾನ
• ಹಾಲಿನ ಹುಡಿ ಮತ್ತು ಕಡಲೆಹಿಟ್ಟನ್ನು ಒಂದು ಪಿಂಗಾಣಿಗೆ ಹಾಕಿಕೊಳ್ಳಿ.
• ತಾಜಾ ಕಿತ್ತಳೆಯಿಂದ ರಸ ತೆಗೆದಿಟ್ಟುಕೊಳ್ಳಿ.
• ಎಲ್ಲವನ್ನು ಜತೆಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ.
• ಕೈಬೆರಳಿನಿಂದ ಅಥವಾ ಸಣ್ಣ ಬ್ರಶ್ ನಿಂದ ಈ ಪೇಸ್ಟ್ ನ್ನು ತೊಳೆದ ಮುಖಕ್ಕೆ ಹಚ್ಚಿಕೊಳ್ಳಿ.
• 10-15 ನಿಮಿಷ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ.
ಒಂದು ತಿಂಗಳ ಕಾಲ ಎರಡು ದಿನಕ್ಕೊಮ್ಮೆ ಈ ಮಾಸ್ಕ್ ನ್ನು ಬಳಸಿಕೊಳ್ಳಿ ಮತ್ತು ಫಲಿತಾಂಶ ನೋಡಿ.

2. ಮೊಸರು ಮತ್ತು ಲಿಂಬೆರಸ

ಮೊಸರು ಮತ್ತು ಲಿಂಬೆರಸವು ಚರ್ಮವನ್ನು ಬಿಳಿಯಾಗಿಸಲು ತುಂಬಾ ಪರಿಣಾಮಕಾರಿ. ಈ ಮಾಸ್ಕ್ ಹೈಪರ್ ಪಿಗ್ಮೆಂಟೇಶ್ ನ್ನು ತಡೆದು ನಿಸ್ತೇಜ ಚರ್ಮ ನಿರ್ಮಾಣವಾಗದಂತೆ ನೋಡಿಕೊಳ್ಳುವುದು.

ಬೇಕಾಗುವ ಸಾಮಗ್ರಿಗಳು
2 ಚಮಚ ಮೊಸರು
2 ಚಮಚ ಹಾಲಿನ ಹುಡಿ
ಅರ್ಧ ಲಿಂಬೆ ರಸ

ವಿಧಾನ
*ಎಲ್ಲವನ್ನು ಜತೆಯಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿ.
*ಆರಂಭದಲ್ಲಿ ಬಿಸಿ ನೀರಿನಲ್ಲಿ ಒಂದು ಟವೆಲ್ ಮುಳುಗಿಸಿ ಮತ್ತು ಮುಖದ ಮೇಲೆ ಹಾಕಿಕೊಳ್ಳಿ. ಇದರಿಂದ ಚರ್ಮದ ರಂಧ್ರಗಳು ತೆರೆಯುವುದು.
*ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಕಾಲ ಹಾಗೆ ಬಿಡಿ.
*ತಣ್ಣೀರಿನಿಂದ ತೊಳೆಯಿರಿ.
* ಉತ್ತಮ ಫಲಿತಾಂಶಕ್ಕಾಗಿ ಎರಡು ದಿನಕ್ಕೊಮ್ಮೆ ಬಳಸಿ.

3. ಅರಿಶಿನ ಮತ್ತು ಜೇನುತುಪ್ಪದೊಂದಿಗೆ ಹಾಲಿನ ಹುಡಿ

ಹಾಲಿನ ಹುಡಿ, ಅರಶಿನ ಮತ್ತು ಜೇನುತುಪ್ಪದ ಮಾಸ್ಕ್ ನಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇದ್ದು, ಮೊಡವೆ ಹಾಗೂ ಕಲೆಗಳ ನಿವಾರಣೆ ಮಾಡುವುದು. ಇದರಿಂದ ತ್ವಚೆಯು ಕಾಂತಿಯುತವಾಗುವುದು. ಜೇನುತುಪ್ಪವು ಚರ್ಮಕ್ಕೆ ಮೊಶ್ಚಿರೈಸ್ ಮಾಡಿದರೆ, ಅರಶಿನವು ಹಾಲಿನ ಹುಡಿಯೊಂದಿಗೆ ಬಳಸಿದಾಗ ಕಾಂತಿ ನೀಡುವುದು.

ಬೇಕಾಗುವ ಸಾಮಗ್ರಿಗಳು
1 ಚಮಚ ಹಾಲಿನ ಹುಡಿ
¼ ಚಮಚ ಅರಶಿನ ಹುಡಿ
1 ಚಮಚ ಜೇನುತುಪ್ಪ

ಬಳಸುವ ವಿಧಾನ
ಎಲ್ಲವನ್ನು ಒಂದು ಚಮಚದಿಂದ ಮಿಶ್ರಣ ಮಾಡಿಕೊಳ್ಳಿ ಮತ್ತು ದಪ್ಪಗಿನ ಪೇಸ್ಟ್ ಮಾಡಿ.
ಇದನ್ನು ತೊಳೆದುಕೊಂಡು ಮುಖಕ್ಕೆ ಹಚ್ಚಿ
15 ನಿಮಿಷ ಹಾಗೆ ಬಿಡಿ ಮತ್ತು ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
ಪರಿಣಾಮಕಾರಿಯಾಗಲು ವಾರದಲ್ಲಿ ಒಂದು ಸಲ ಬಳಸಿ.

4.ಹಾಲಿನ ಹುಡಿ ಮತ್ತು ಮುಲ್ತಾನಿ ಮಿಟ್ಟಿ

ಎಣ್ಣೆಯುಕ್ತ ಮುಖವು ನಿಸ್ತೇಜವಾಗಿ ಕಾಣಿಸುವುದು. ಇದರಿಂದ ಜಿಡ್ಡಿನ ಚರ್ಮಕ್ಕೆ ಹಾಲಿನ ಹುಡಿ ಬಳಸಿ ಮತ್ತು ಕಾಂತಿಯುತ ತ್ವಚೆ ಪಡೆಯಿರಿ.

ಬೇಕಾಗುವ ಸಾಮಗ್ರಿಗಳು
• 1 ಚಮಚ ಮುಲ್ತಾನಿ ಮಿಟ್ಟಿ
• 1 ಚಮಚ ಹಾಲಿನ ಹುಡಿ
• ಕೆಲವು ಹನಿ ರೋಸ್ ವಾಟರ್

ಬಳಸುವ ವಿಧಾನ
ಎಲ್ಲವನ್ನು ಮಿಶ್ರಣ ಮಾಡಿ ಪೇಸ್ಟ್ ಮಾಡಿ.
ಇದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಹಾಗೆ ಬಿಡಿ.
ಒಣಗಿದ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ
ಎಣ್ಣೆಯುಕ್ತ ಚರ್ಮ ನಿವಾರಿಸಿ ಕಾಂತಿ ಪಡೆಯಲು ವಾರದಲ್ಲಿ ಒಂದು ಸಲ ಬಳಸಿ.

5. ಒಣಚರ್ಮದ ಸಮಸ್ಯೆ ಕಾಡುತ್ತಿದ್ದರೆ

ಒಂದೆರಡು ಚಮಚ ಹಾಲಿನ ಹುಡಿಗೆ ಒಂದು ಬಾಳೆಹಣ್ಣಿನ ತಿರುಳನ್ನು ಚೆನ್ನಾಗಿ ಕಿವುಚಿ ದಪ್ಪನೆಯ ಲೇಪನವನ್ನಾಗಿಸಿ. ಈ ಲೇಪನ ಚರ್ಮದ ಮೇಲೆ ದಪ್ಪನಾಗಿ ಆವರಿಸುವಂತೆ ಮಾಡಿ ಮೂವತ್ತು ನಿಮಿಷದ ಬಳಿಕ ತೊಳೆದುಕೊಂಡರೆ ಅತ್ಯುತ್ತಮ ಆರೈಕೆ ಪಡೆಯಬಹುದು.

6. ಮುಖದಲ್ಲಿ ಕಲೆಗಳಾಗಿದ್ದರೆ

ಒಂದು ವೇಳೆ ನಿಮ್ಮ ಚರ್ಮದಲ್ಲಿ ಹಳೆಯ ಗಾಯ, ಮೊಡವೆಗಳ ಕಲೆಯಿದ್ದು ಇದರಿಂದ ಮುಕ್ತಿ ಪಡೆಯಬೇಕೆಂದರೆ ಹಾಲಿನ ಹುಡಿ ಅತ್ಯುತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮವನ್ನು ತಿಳಿಗೊಳಿಸುವ ಗುಣವನ್ನು ಹೊಂದಿದೆ. ಇದಕ್ಕೆ ನೀವು ಮಾಡಬೇಕಾದದು ಇಷ್ಟೇ ಅರ್ಧ ಗ್ಲಾಸ್ ಗ್ರೀನ್ ಟೀಗೆ, ಸುಮಾರು ಎರಡು ಟೇಬಲ್ ಚಮಚ ಹಾಲಿನ ಹುಡಿ ಬೆರೆಸಿ, ಪೇಸ್ಟ್ ರೀತಿ ಮಾಡಿಕೊಳ್ಳಿ. ಇನ್ನು ಈ ಮಿಶ್ರಣಕಲೆ ಇದ್ದ ಚರ್ಮದ ಭಾಗದ ಮೇಲೆ ಹಚ್ಚಿ. ಕೊಂಚ ಒಣಗಿದ ಬಳಿಕ ಮತ್ತೊಮ್ಮೆ ಹಚ್ಚಿ. 20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ

7. ಹಾಲಿನ ಹುಡಿ ಮತ್ತು ರೋಸ್ ವಾಟರ್:

3-4 ಚಮಚ ಹಾಲಿನ ಹುಡಿಗೆ, ಒಂದು ಚಮಚ ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಪೇಸ್ಟ್ ರೀತಿ ಮಾಡಿಕೊಳ್ಳಿ, ಇನ್ನು ಇದನ್ನು ಮುಖವನ್ನು ಉಜ್ಜಿ 15 ನಿಮಿಷ ಬಿಟ್ಟು ತಣ್ಣೀರು ಅಥವಾ ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು.

8. ಅಕ್ಕಿ ಮತ್ತು ಹಾಲಿನ ಹುಡಿಯ ಫೇಸ್ ಮಾಸ್ಕ್

ಒಂದೆರಡು ಚಮಚ ಅಕ್ಕಿಯನ್ನು ತೆಗೆದುಕೊಂಡು ಸಣ್ಣಗೆ ಹುಡಿ ಮಾಡಿಕೊಳ್ಳಿ, ಇನ್ನು ಇದಕ್ಕೆ ಸ್ವಲ್ಪ ಹಾಲಿನ ಹುಡಿಯನ್ನು ಬೆರೆಸಿಕೊಳ್ಳಿ. ತದನಂತರ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಹಾಲನ್ನು ಇದಕ್ಕೆ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಸ್ವಲ್ಪ ನೀರು ಅಥವಾ ಹಾಲು ಹಾಕಿಕೊಂಡು ಒಳ್ಳೆಯ ಪೇಸ್ಟ್ ಮಾಡಿಕೊಳ್ಳಿ. ಮುಖ ಹಾಗೂ ಕುತ್ತಿಗೆಗೆ ಈ ಪೇಸ್ಟ್ ನ್ನು ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ನೀರಿನಿಂದ ಮುಖವನ್ನು ತೊಳೆಯಿರಿ. ಈ ಫೇಸ್ ಮಾಸ್ಕ್ ಅನ್ನು ಬಳಸುವುದರಿಂದ ತ್ವಚೆಯು ಮಾಯಿಶ್ಚರೈಸ್ ಆಗುವುದು ಮತ್ತು ದೀರ್ಘ ಸಮಯದ ತನಕ ತೇವಾಂಶ ಉಳಿದುಕೊಳ್ಳುತ್ತದೆ.

English summary

Easy Milk Powder Face Masks For Glowing Skin

In this article, we will focus on ways to enhance your complexion with milk powder. Why milk powder and not milk itself, you ask? Well, milk powder is a dehydrated form of milk, with effective concentrated properties that can help your skin radiate better. That means, the water content in the milk is completely evaporated and only the solid material is left behind. Hence, it is more potent than liquid milk, with higher concentration of vitamins, nutrients and minerals which makes it an effective natural skincare remedy.
X
Desktop Bottom Promotion