For Quick Alerts
ALLOW NOTIFICATIONS  
For Daily Alerts

ಬಿಳಿಯ ತ್ವಚೆ ಪಡೆಯಲು ಮನೆಯಲ್ಲೇ ತಯಾರಿಸಿ ನೈಸರ್ಗಿಕ ಬ್ಲೀಚಿಂಗ್

By Sushma Charhra
|

ಪ್ರತಿ ಮಹಿಳೆಯು ತನ್ನ ಮುಖ ಸುಂದರವಾಗಿರಬೇಕು, ಹೊಳೆಯುತ್ತಿರಬೇಕು, ಮೇಕಪ್ ಮಾಡಿದರೆ ಚೆನ್ನಾಗಿ ಕಾಣಬೇಕು ಎಂದು ಬಯಸುತ್ತಾಳೆ. ಅದೇ ಕಾರಣಕ್ಕೆಪಾರ್ಲರ್ ಗೆ ಸಾವಿರಾರು ರುಪಾಯಿ ಸುರಿಯುತ್ತಲೇ ಇರುತ್ತಾಳೆ. ಹಾಗೆ ಆಕೆ ಪಾರ್ಲರ್ ನಲ್ಲಿ ಮಾಡಿಸುವ ಸೇವೆಗಳಲ್ಲಿ ಬ್ಲೀಚಿಂಗ್ ಕೂಡ ಒಂದು. ಮುಖದಲ್ಲಿರುವ ಕೂದಲಿನ ಬಣ್ಣವು ಚರ್ಮಕ್ಕೆ ಹೊಂದಿಕೆಯಾಗುವಂತೆ ಮಾಡುವ ಒಂದು ಪ್ರಕ್ರಿಯೆಯೇ ಬ್ಲೀಚಿಂಗ್.ಆದರೆ ಇದಕ್ಕಾಗಿ ಪಾರ್ಲರ್ ಗೆ ಹೋಗುವ ಅಗತ್ಯವಿಲ್ಲ. ಸಾಕಷ್ಟು ಹಣ ವೆಚ್ಚ ಮಾಡುವ ಅನಿವಾರ್ಯತೆಯೂ ಇಲ್ಲ. ಯಾಕೆಂದರೆ ಬ್ಲೀಚಿಂಗ್ ನ್ನು ನೀವು ಮನೆಯಲ್ಲೇ ಮಾಡಿಕೊಳ್ಳಬಹುದು.

ಚರ್ಮದ ಕಾಂತಿ ಹೆಚ್ಚಳಕ್ಕಾಗಿ ಮಾರ್ಕೆಟ್ ನಲ್ಲಿ ಲಭ್ಯವಿರುವ ಬ್ಯೂಟಿ ಪ್ರೊಡಕ್ಟ್ ಗಳ ಪಟ್ಟಿ ಹನುಮಂತನ ಬಾಲದಂತೆಯೇ ಸರಿ, ಯಾಕೆಂದರೆ ರೆಡಿ ಮೇಡ್ ಬ್ಲೀಚ್ ಗಳು ಸಾಕಷ್ಟಿವೆ. ಆದರೆ ಇವೆಲ್ಲವೂ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ ಮತ್ತು ನಿಮ್ ಚರ್ಮಕ್ಕೆ ಅಡ್ಡ ಪರಿಣಾಮಗಳನ್ನು ಮಾಡುವ ಸಾಧ್ಯತೆಯೂ ಅಧಿಕವಾಗಿರುತ್ತದೆ. ಕೂಡಲೇ ಅಲ್ಲದಿದ್ದರೂ ನಿಧಾನಗತಿಯಲ್ಲಿ ಅದರ ಪರಿಣಾಮಗಳು ಕಾಣಿಸಿಕೊಳ್ಳಬಹುದು.

how to get a fair skin in kannada

ಬ್ಲೀಚಿಂಗ್ ನ ಪ್ರಮುಖ ಉದ್ದೇಶವೇನೆಂದರೆ,ಹೊಳೆಯುವ ಮತ್ತು ಬಿಳಿಯಾದ ತ್ವಚೆಯನ್ನು ಪಡೆಯುವುದೇ ಆಗಿದೆ. ಆದರೆ ಇದನ್ನು ನೀವು ಮನೆಯಲ್ಲೇ ಸಾಧಿಸಿಕೊಳ್ಳಬಹುದು. ಈ ಲೇಖನದಲ್ಲಿ ನಾವು ಬ್ಲೀಚಿಂಗ್ ನ್ನು ಹೇಗೆ ಮನೆಯಲ್ಲೇ ತಯಾರಿಸಿಕೊಳ್ಳಬಹುದು.ನೈಸರ್ಗಿಕವಾಗಿ ನಿಮ್ಮ ಸೌಂದರ್ಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ತಿಳಿಸಲಿದ್ದೇವೆ.ಅದನ್ನು ತಿಳಿಯಲು ಮುಂದೆ ಓದಿ.

ಜೇನುತುಪ್ಪ ಮತ್ತು ಮೊಸರಿನ ಬ್ಲೀಚ್

ಬೇಕಾಗುವ ಸಾಮಗ್ರಿಗಳು:
• 1 ಟೇಬಲ್ ಸ್ಪೂನ್ ಜೇನುತುಪ್ಪ
• 1 ಕಪ್ ನಷ್ಟು ಮೊಸರು ಅಥವಾ ಯೋಗರ್ಟ್
• 1 ಟೇಬಲ್ ಸ್ಪೂನ್ ನಿಂಬೆ ರಸ
• ಚಿಟಿಕೆ ಅರಿಶಿನ ಪುಡಿ

ಮಾಡುವ ವಿಧಾನ ಹೇಗೆ?
1. ಒಂದು ಸ್ವಚ್ಚವಾದ ಬೌಲ್ ನಲ್ಲಿ 1 ಟೇಬಲ್ ಸ್ಪೂನ್ ಜೇನುತುಪ್ಪ ಮತ್ತು ಒಂದು ಕಪ್ ಮೊಸರನ್ನು ಸೇರಿಸಿ.ಎಲ್ಲವನ್ನೂ ಒಟ್ಟಿಗೆ ಚೆನ್ನಾಗಿ ಕಲಸಿ
2. ಈ ಮಿಶ್ರಣಕ್ಕೆ ಚಿಟಿಕೆ ಅರಿಶಿನವನ್ನು ಸೇರಿಸಿ.
3. ಒಂದು ನಿಂಬೆ ಹಣ್ಣನ್ನು ಕತ್ತರಿಸಿ ಮತ್ತು ಕೆಲವು ಹನಿಗಳಷ್ಟು ನಿಂಬೆ ರಸವನ್ನು ತಾಜಾವಾಗಿ ಆ ಮಿಶ್ರಣಕ್ಕೆ ಹಿಂಡಿ .
4. ಎಲ್ಲಾ ಸಾಮಗ್ರಿಗಳು ಚೆನ್ನಾಗಿ ಕಲಸಿ
5. ಸಮನಾಗಿ ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ ಮತ್ತು ಅರ್ಧ ಗಂಟೆ ಮುಖದಲ್ಲಿ ಇಟ್ಟುಕೊಳ್ಳಿ .
6. ಮಿಶ್ರಣ ಮುಖದಲ್ಲಿ ಗಟ್ಟಿಯಾದ ನಂತರ, ತಿಳಿಯಾದ ಫೇಸ್ ವಾಷ್ ಬಳಸಿ ಸಹಜವಾದ ನೀರಿನಲ್ಲಿ ತೊಳೆಯಿರಿ.
7. ಪ್ರತಿ ದಿನ ಈ ಮಿಶ್ರಣವನ್ನು ಒಂದು ವಾರದವರೆಗೆ ಬಳಸಿ ಮತ್ತು ವ್ಯತ್ಯಾಸವನ್ನು ನೀವು ಗಮನಿಸಿಕೊಳ್ಳಲು ಸಾಧ್ಯವಾಗುತ್ತದೆ.

ಗುಲಾಬಿ ಮತ್ತು ಟೋಮೆಟೋ ಬ್ಲೀಚ್

ಬೇಕಾಗುವ ಸಾಮಗ್ರಿಗಳು:
• 2 ಟೊಮೆಟೋ
• 1 ಟೇಬಲ್ ಸ್ಪೂನ್ ಗುಲಾಬಿ ನೀರು
• 1 ಟೇಬಲ್ ಸ್ಪೂನ್ ನಿಂಬೆ ರಸ

ಮಾಡುವ ವಿಧಾನ ಹೇಗೆ?
1. ಮೊದಲಿಗೆ, ಟೋಮೆಟೊವನ್ನು ಅರೆಯಿರಿ ಮತ್ತು ಅದರ ಪಲ್ಪ್ ತೆಗೆದುಕೊಳ್ಳಿ.
2. ನಂತರ, ಅದಕ್ಕೆ 1 ಟೇಬಲ್ ಸ್ಪೂನ್ ನಿಂಬೆ ರಸ ಮತ್ತು 1 ಟೇಬಲ್ ಸ್ಪೂನ್ ಗುಲಾಬಿ ನೀರನ್ನು ಅದಕ್ಕೆ ಸೇರಿಸಿ
3. ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಒಟ್ಟಿಗೆ ಸೇರಿಸಿ ಮತ್ತು ಸ್ವಚ್ಛವಾಗಿರುವ ಮುಖಕ್ಕೆ ಅದನ್ನು ಅಪ್ಲೈ ಮಾಡಿ.
4. ಒಮ್ಮೆ ಇದು ಒಣಗಿದ ನಂತರ ಸಹಜವಾದ ನೀರಿನಿಂದ ತೊಳೆಯಿರಿ.
5. ನಿರಂತರವಾಗಿ ಕೆಲವು ವಾರಗಳವರೆಗೆ ಬಳಕೆ ಮಾಡಿದರೆ ವೇಗವಾದ ಮತ್ತು ಉತ್ಯುತ್ತಮವಾದ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ.

ಹಾಲು ಮತ್ತು ಕಡಲೆ ಹಿಟ್ಟು

ಬೇಕಾಗುವ ಸಾಮಗ್ರಿಗಳು
• 3 ಟೇಬಲ್ ಸ್ಪೂನ್ ಕಡಲೆ ಹಿಟ್ಟು
• 1 ಟೇಬಲ್ ಸ್ಪೂನ್ ನಿಂಬೆ ರಸ
• 5 ಟೇಬಲ್ ಸ್ಪೂನ್ ಹಾಲು
• ಚಿಟಿಕೆ ಅರಿಶಿನ ಪುಡಿ

ಮಾಡುವ ವಿಧಾನ ಹೇಗೆ?
1. ಒಂದು ಸ್ವಚ್ಚವಾದ ಬೌಲ್ ನಲ್ಲಿ 3 ಟೇಬಲ್ ಸ್ಪೂನ್ ಕಡಲೆ ಹಿಟ್ಟು ಮತ್ತು 5 ಟೇಬಲ್ ಸ್ಪೂನ್ ಹಸಿಯಾದ ಹಾಲನ್ನು ಸೇರಿಸಿ .
2. ತಾಜಾವಾಗಿ ಹಿಂಡಿದ ಕೆಲವು ಹನಿ ನಿಂಬೆರಸವನ್ನು ಹಾಕಿ
3. ಕೊನೆಯಲ್ಲಿ, ಚಿಟಿಕೆ ಅರಿಶಿನವನ್ನು ಸೇರಿಸಿ. ಅತಿಯಾಗಿ ಅರಿಶಿನವನ್ನು ಸೇರಿಸಿಕೊಳ್ಳಬೇಡಿ ಯಾಕೆಂದರೆ ಅರಿಶಿನ ನಿಮ್ಮ ಮುಖದಲ್ಲಿ ಹಳದಿ ಎಳೆಯನ್ನು ಹಾಗೆಯೇ ಉಳಿಸಿಬಿಡುತ್ತದೆ.
4. ಈ ಗಟ್ಟಿಯಾದ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ
5. ಇದು ಒಣಗಿದ ನಂತರ, ಸಹಜವಾದ ನೀರಿನಲ್ಲಿ ತೊಳೆಯಿರಿ.
6. ಈ ಪ್ಯಾಕ್ ನ್ನು ನಿರಂತರವಾಗಿ ಬಳಕೆ ಮಾಡಿದರೆ ಚರ್ಮದಲ್ಲಿ ಹೊಳಪು ಬರಲು ಸಾಧ್ಯವಾಗುತ್ತದೆ.

ಪುದೀನಾ ಬ್ಲೀಚ್

ಬೇಕಾಗುವ ಸಾಮಗ್ರಿಗಳು
• ಒಂದು ಮುಷ್ಟಿಯಷ್ಟು ಪುದೀನಾ ಎಲೆಗಳು
• ನೀರು

ಮಾಡುವ ವಿಧಾನ ಹೇಗೆ?
1. ಒಂದು ಮುಷ್ಟಿಯಾಗುವಷ್ಟು ತಾಜಾ ಪುದೀನಾ ಎಲೆಗಳನ್ನು ತೆಗೆದುಕೊಳ್ಳಿ ಮತ್ತು ಸ್ವಲ್ಪ ನೀರನ್ನು ಸೇರಿಸಿ ಅರೆಯಿರಿ .
2. ಈ ಪುದೀನಾ ಪೇಸ್ಟನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿಕೊಳ್ಳಿ. ಅರ್ಧ ಗಂಟೆ ಹಾಗೆಯೇ ಬಿಡಿ.
3. ಸಹಜವಾಗಿರುವ ನೀರಿನಿಂದ ತೊಳೆಯಿರಿ .
4. ಈ ಪ್ಯಾಕ್ ನ್ನು ನಿರಂತರವಾಗಿ ಬಳಕೆ ಮಾಡಿದರೆ ಚರ್ಮದ ಟೋನ್ ಹೆಚ್ಚಿಸಲು ಕೂಡ ನೆರವಾಗುತ್ತದೆ.

ಹಾಲಿನ ಪುಡಿ ಮತ್ತು ಮೂಸುಂಬಿ ರಸ

ಬೇಕಾಗುವ ಸಾಮಗ್ರಿಗಳು
• 1 ಟೇಬಲ್ ಸ್ಪೂನ್ ಹಾಲಿನ ಪುಡಿ
• 1 ಟೇಬಲ್ ಸ್ಪೂನ್ ಮೂಸುಂಬಿ ರಸ
• 1 ಟೇಬಲ್ ಸ್ಪೂನ್ ಓಟ್ ಮೀಲ್

ಮಾಡುವ ವಿಧಾನ ಹೇಗೆ?
1. ಒಂದು ಮೂಸುಂಬಿಯನ್ನು ತೆಗೆದುಕೊಳ್ಳಿ ಮತ್ತು ಅದರ ಪಲ್ಪ್ ಹೊರ ತೆಗೆಯಿರಿ
2. ಈ ತಾಜಾವಾಗಿ ತೆಗೆದ ಮೂಸುಂಬಿ ರಸಕ್ಕೆ 1 ಟೇಬಲ್ ಸ್ಪೂನ್ ಹಾಲಿನ ಪುಡಿ ಸೇರಿಸಿ.
3. ಓಟ್ ಮೀಲ್ ನ್ನು ತೆಗೆದುಕೊಂಡು ಅತ್ಯುತ್ತಮ ಪೌಡರ್ ತಯಾರಿಸಿ.
4. ಎಲ್ಲ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ,
5. ಸಮನಾಗಿ ಮುಖಕ್ಕೆ ಅಪ್ಲೈ ಮಾಡಿ ಮತ್ತು ಒಣಗಲು ಬಿಡಿ.
6. ಅಂದಾಜು 20 ರಿಂದ 30 ನಿಮಿಷದ ನಂತರ ಮುಖವನ್ನು ತೊಳೆಯಿರಿ.

ಪಪ್ಪಾಯ ಮತ್ತು ಜೇನುತುಪ್ಪ

ಬೇಕಾಗುವ ಸಾಮಗ್ರಿಗಳು
• ಪಪ್ಪಾಯ
• 1 ಟೇಬಲ್ ಸ್ಪೂನ್ ಜೇನುತುಪ್ಪ
• 1 ಟೇಬಲ್ ಸ್ಪೂನ್ ನಿಂಬೆ ರಸ

ಮಾಡುವ ವಿಧಾನ ಹೇಗೆ?
1. ½ ಪಪ್ಪಾಯ ತೆಗೆದುಕೊಳ್ಳಿ ಮತ್ತು ಅದನ್ನು ಅರೆದು ಪೇಸ್ಟ್ ತಯಾರಿಸಿಕೊಳ್ಳಿ.
2. ಅದಕ್ಕೆ ಕೆಲವು ಹನಿ ಜೇನುತುಪ್ಪ ಸೇರಿಸಿ ಮತ್ತು ತಾಜಾವಾಗಿ ಹಿಡಿದ ನಿಂಬೆ ರಸವನ್ನು ಪಪ್ಪಾಯ ಪಲ್ಪ್ ಗೆ ಸೇರಿಸಿ.
3. ಈ ಪಪ್ಪಾಯ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ.
4. 15-20 ನಿಮಿಷ ಇದನ್ನು ಹಾಗೆಯೇ ಬಿಡಿ.
5. ನಂತರ ತಣ್ಣನೆಯ ನೀರಿನಲ್ಲಿ ತೊಳೆಯಿರಿ.

English summary

easy-homemade-bleaches-for-fair-skin

We all prefer to do bleaching so that the colour of our facial hair matches with that of the skin. For this we go to the salons to get the help of beauticians. But did you know that this can be easily done by you yourself at home using some natural ingredients? We have a wide range of products from creams to lotions that are available in the market that claim to work well on the skin these days. But the chemicals that these ready-made bleaches contain can be harmful for our skin in the long run.
X
Desktop Bottom Promotion