For Quick Alerts
ALLOW NOTIFICATIONS  
For Daily Alerts

ಮೂಖದ ಮೇಲೆ ಕಾಣಿಸಿಕೊಳ್ಳುವ ಮೊಡವೆಗೆ ಒಂದು ಈರುಳ್ಳಿ ಸಾಕು!

By Hemanth
|

ತ್ವಚೆ ಮೇಲೆ ಮೊಡವೆಗಳು ಕಾಣಿಸಿಕೊಂಡರೆ ಆಗ ಅದು ಖಂಡಿತವಾಗಿಯೂ ಕಲೆ ಉಂಟುಮಾಡಿ ಸೌಂದರ್ಯ ಕೆಡಿವುದು. ಮೊಡವೆ ನಿವಾರಣೆ ಮಾಡಲು ಹಲವಾರು ರೀತಿಯ ಕ್ರೀಮ್ ಗಳು ಲಭ್ಯವಿದ್ದರೂ ಮನೆಮದ್ದನ್ನು ಬಳಸಿಕೊಂಡು ಮೊಡವೆ ನಿವಾರಣೆ ಮಾಡಿದರೆ ಇದು ಶಾಶ್ವತ ಪರಿಹಾರ ನೀಡುವುದು. ಇದರಲ್ಲಿ ನಾವು ಪ್ರತಿನಿತ್ಯ ಪದಾರ್ಥಗಳಲ್ಲಿ ಬಳಸುವಂತಹ ಈರುಳ್ಳಿ ಕೂಡ ಒಂದಾಗಿದೆ. ಈರುಳ್ಳಿಯು ಮೊಡವೆ ನಿವಾರಣೆ ಮಾಡುವುದರೊಂದಿಗೆ ಇತರ ಹಲವಾರು ಸಮಸ್ಯೆಗಳ ನಿವಾರಣೆ ಮಾಡುವುದು. ಇದು ಮೊಡವೆ ಮತ್ತು ಮೊಡವೆ ಕಲೆಗಳ ನಿವಾರಿಸುವುದು. ಇದರಲ್ಲಿರುವಂತಹ ಸಲ್ಫರ್ ಅಂಶ ಮತ್ತು ಇತರ ಕೆಲವು ಔಷಧೀಯ ಗುಣಗಳು ಚರ್ಮದ ರೋಗಗಳನ್ನು ತುಂಬಾ ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು.

ಸಾಮಾನ್ಯವಾಗಿ ತ್ವಚೆಯಲ್ಲಿ ಮೂಡುವಂತಹ ಮೊಡವೆ, ಕಲೆಗಳು, ಕಪ್ಪುಕಲೆಗಳು, ಕಪ್ಪುವೃತ್ತಗಳು, ಬೊಕ್ಕೆಗಳು ಇತ್ಯಾದಿ ಸೌಂದರ್ಯ ಕೆಡಿಸುವುದು. ಇದು ಹೊರಗಿನ ಕಲುಷಿತ ವಾತಾವರಣ, ಬಿಸಿಲಿನ ಹಾನಿಕಾರಕ ಯುವಿ ಕಿರಣಗಳು, ಹಾರ್ಮೋನು ಅಸಮತೋಲನ, ಅತಿಯಾದ ಧೂಮಪಾನ ಮತ್ತು ಮದ್ಯಪಾನದಿಂದ ಬರುವುದು. ಇದಕ್ಕಾಗಿ ರಾಸಾಯನಿಕಯುಕ್ತ ಕ್ರೀಮ್ ಗಳನ್ನು ಬಳಸಿದರೆ ಅದರಿಂದ ತ್ವಚೆಗೆ ಮತ್ತಷ್ಟು ಹಾನಿಯಾಗುವುದು ಖಚಿತ.
ಹೀಗೆ ಆಗದಿರುವಂತೆ ತಡೆಯಲು ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ತುಂಬಾ ಒಳ್ಳೆಯದು. ಈ ಲೇಖನದಲ್ಲಿ ತ್ವಚೆಯ ಹಲವಾರು ಸಮಸ್ಯೆಗಳಿಗೆ ನೈಸರ್ಗಿಕವಾದ ಸಮಸ್ಯೆಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.

Does Onion Help In Treating Acne

ಹೌದು ಈರುಳ್ಳಿಯಲ್ಲಿ ಸೂಕ್ಷ್ಮಾಣುವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಉರಿಯೂತ ಮತ್ತು ಚರ್ಮ ಕೆಂಪಾಗುವುದು ಮತ್ತು ತುರಿಕೆ ಕಡಿಮೆ ಮಾಡುವುದು. ಈರುಳ್ಳಿ ರಸವು ಕಾಲಜನ್ ಉತ್ಪತ್ತಿಯನ್ನು ಉತ್ತೇಜಿಸಿ ಮೊಡವೆ ಕಲೆಗಳನ್ನು ನಿವಾರಿಸುವುದು. ಈರುಳ್ಳಿಯು ಮುಖದಲ್ಲಿರುವ ಅತಿಯಾದ ಎಣ್ಣೆಯಂಶವನ್ನು ತೆಗೆದುಹಾಕುವುದು. ಇದರಿಂದ ಮುಖವು ಕಾಂತಿಯುತವಾಗಿ ಕಾಣುವುದು. ಉತ್ತಮ ಫಲಿತಾಂಶ ಪಡೆಯಲು ಯಾವಾಗಲೂ ತಾಜಾ ಈರುಳ್ಳಿ ಬಳಸಿಕೊಳ್ಳಿ. ಈ ಲೇಖನದಲ್ಲಿ ನೀಡಿರುವಂತಹ ಕೆಲವೊಂದು ಈರುಳ್ಳಿಯಿಂದ ತಯಾರಿಸಬಹುದಾದ ಮನೆಮದ್ದುಗಳು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಇದರ ಬಗ್ಗೆ ತಿಳಿದು ನೀವು ಬಳಸಿಕೊಂಡು ಲಾಭ ಪಡೆಯಿರಿ.
ಈರುಳ್ಳಿ ಮತ್ತು ಸೌತೆಕಾಯಿ

ಈರುಳ್ಳಿ ಮತ್ತು ಸೌತೆಕಾಯಿ

*2 ಚಮಚ ಈರುಳ್ಳಿ ರಸ

*2 ಚಮಚ ಸೌತೆಕಾಯಿ ರಸ

*1 ಮೊಟ್ಟೆ

*1 ಚಮಚ ಆಲಿವ್ ತೈಲ

ತಯಾರಿಸುವುದು ಹೇಗೆ?

*ಮೊಟ್ಟೆಯಿಂದ ಅದರ ಬಿಳಿ ಭಾಗ ತೆಗೆದು ಅದನ್ನು ಕಲಸಿಕೊಳ್ಳಿ.

*ಆಲಿವ್ ತೈಲ, ಸೌತೆಕಾಯಿರಸ ಮತ್ತು ಈರುಳ್ಳಿ ರಸ ಬೆರೆಸಿಕೊಳ್ಳಿ.

*ಎಲ್ಲವನ್ನು ಜತೆಯಾಗಿ ಮಿಶ್ರಣ ಮಾಡಿ.

*ಇದನ್ನು ಮುಖಕ್ಕೆ ಹಚ್ಚಿಕೊಂಡು ನಿಧಾನವಾಗಿ ಬೆರಳುಗಳಿಂದ ಮಸಾಜ್ ಮಾಡಿ.

*15 ನಿಮಿಷ ಹಾಗೆ ಬಿಟ್ಟು ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಈರುಳ್ಳಿ ಮತ್ತು ಓಟ್ ಮೀಲ್

ಈರುಳ್ಳಿ ಮತ್ತು ಓಟ್ ಮೀಲ್

ಬೇಕಾಗುವ ಸಾಮಗ್ರಿಗಳು

*1 ಸಣ್ಣ ಈರುಳ್ಳಿ

*½ ಕಪ್ ಓಟ್ ಮೀಲ್

*1 ಚಮಚ ಜೇನುತುಪ್ಪ

ತಯಾರಿ ಹೇಗೆ?

*ಈರುಳ್ಳಿಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ ಮತ್ತು ಮೆತ್ತಗಿನ ಪೇಸ್ಟ್ ಮಾಡಿ.

*ಓಟ್ ಮೀಲ್ ನ್ನು 20 ನಿಮಿಷ ಕಾಲ ಬೇಯಿಸಿ ಮತ್ತು ತಣ್ಣಗಾಗಲು ಬಿಡಿ.

*ಅಂತಿಮವಾಗಿ ಒಂದು ಪಿಂಗಾಣಿಗೆ ಬೇಯಿಸಿದ ಓಟ್ ಮೀಲ್, ಜೇನುತುಪ್ಪ ಮತ್ತು ಈರುಳ್ಳಿ ಪೇಸ್ಟ್ ಹಾಕಿಕೊಳ್ಳಿ.

*ಸ್ವಚ್ಛಗೊಳಿಸಿದ ಮುಖದ ಮೇಲೆ ಇದನ್ನು ಹಚ್ಚಿಕೊಳ್ಳಿ ಮತ್ತು 15-20 ನಿಮಿಷ ಕಾಲ ಹಾಗೆ ಬಿಡಿ ಮತ್ತು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಈರುಳ್ಳಿ, ಮೊಟ್ಟೆ ಮತ್ತು ಕ್ಯಾರೆಟ್

ಈರುಳ್ಳಿ, ಮೊಟ್ಟೆ ಮತ್ತು ಕ್ಯಾರೆಟ್

ಬೇಕಾಗುವ ಸಾಮಗ್ರಿಗಳು

*1 ಮೊಟ್ಟೆ

*1 ಸಣ್ಣ ಈರುಳ್ಳಿ

*1 ಸಣ್ಣ ಕ್ಯಾರೆಟ್

*1 ಸಣ್ಣ ಆಲಿವ್ ತೈಲ

ತಯಾರಿಸುವುದು ಹೇಗೆ?

*ಈರುಳ್ಳಿ ಮತ್ತು ಕ್ಯಾರೆಟ್ ನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಅದರ ನಯವಾಗಿ ಪೇಸ್ಟ್ ಮಾಡಿಕೊಳ್ಳಿ.

*ಮೊಟ್ಟೆಯ ಹಳದಿ ಭಾಗ ಬೇರ್ಪಡಿಸಿ ಅದನ್ನು ಕಲಸಿಕೊಳ್ಳಿ.

*ಇದನ್ನು ಕ್ಯಾರೆಟ್ ಮತ್ತು ಈರುಳ್ಳಿ ಪೇಸ್ಟ್ ಗೆ ಹಾಕಿಕೊಳ್ಳಿ.

*ಅಂತಿಮವಾಗಿ ಆಲಿವ್ ತೈಲವನ್ನು ಹಾಕಿ ಮತ್ತು ಎಲ್ಲವನ್ನು ಜತೆಯಾಗಿ ಮಿಶ್ರಣ ಮಾಡಿ.

*ಇದನ್ನು ಬಾಧಿತ ಜಾಗ ಅಥವಾ ಸಂಪೂರ್ಣ ಮುಖಕ್ಕೆ ಹಚ್ಚಿಕೊಳ್ಳಿ.

*10-15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಸಾಮಾನ್ಯ ನೀರಿನಿಂದ ತೊಳೆಯಿರಿ.

ಹಾಲು ಮತ್ತು ಈರುಳ್ಳಿ

ಹಾಲು ಮತ್ತು ಈರುಳ್ಳಿ

ಬೇಕಾಗುವ ಸಾಮಗ್ರಿಗಳು

*¼ ಲೋಟ ತಣ್ಣಗಿನ ಹಾಲು

*2 ಚಮಚ ಈರುಳ್ಳಿ ರಸ

ತಯಾರಿಸುವ ವಿಧಾನ

*ಈರುಳ್ಳಿಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಅದರ ರಸ ತೆಗೆಯಿರಿ.

*ಇದಕ್ಕೆ ತಣ್ಣಗಿನ ಹಾಲು ಹಾಕಿ ಎರಡನ್ನು ಮಿಶ್ರಣ ಮಾಡಿ.

*ಇದನ್ನು ಮುಖಕ್ಕೆ ಹಚ್ಚಿಕೊಂಡು ಸರಿಯಾಗಿ ಮಸಾಜ್ ಮಾಡಿ.

*ವಾರದಲ್ಲಿ 2-3 ಸಲ ನೀವು ಹೀಗೆ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುವುದು.

ಈರುಳ್ಳಿ ಮತ್ತು ಕವೊಲಿನ್ ಕ್ಲೇ

ಈರುಳ್ಳಿ ಮತ್ತು ಕವೊಲಿನ್ ಕ್ಲೇ

ಬೇಕಾಗುವ ಸಾಮಗ್ರಿಗಳು

*1 ಚಮಚ ಈರುಳ್ಳಿ ರಸ

*1 ಚಮಚ ಕವೊಲಿನ್ ಕ್ಲೇ

*1 ಚಮಚ ಜೇನುತುಪ್ಪ

ತಯಾರಿಸುವ ವಿಧಾನ

*ಈರುಳ್ಳಿ ರಸ, ಕವೊಲಿನ್ ಕ್ಲೇ ಮತ್ತು ಜೇನುತುಪ್ಪ ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿಕೊಳ್ಳಿ.

*ಮುಖ ತೊಳೆದುಕೊಂಡು ಇದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.

*ಇದು ಹಾಗೆ ಒಣಗಲು ಬಿಡಿ.

*20 ನಿಮಿಷ ಬಿಟ್ಟು ಸಾಮಾನ್ಯ ನೀರಿನಿಂದ ಇದನ್ನು ತೊಳೆಯಿರಿ.

ಕಲೆಗಳ ನಿವಾರಣೆಗೆ-

*1 ಚಮಚ

*ಈರುಳ್ಳಿ ರಸ

*1 ಚಮಚ ಲಿಂಬೆರಸ

*1 ಹತ್ತಿ ಉಂಡೆ

ಬಳಸುವ ವಿಧಾನ

ಈರುಳ್ಳಿ ರುಬ್ಬಿಕೊಂಡು ಅದರ ಪೇಸ್ಟ್ ಮಾಡಿ. ಲಿಂಬೆಯನ್ನು ಎರಡು ತುಂಡು ಮಾಡಿಕೊಂಡು ಅದರಿಂದ ಕೆಲವು ಹನಿ ರಸವನ್ನು ಈರುಳ್ಳಿ ಪೇಸ್ಟ್ ಗೆ ಹಾಕಿ. ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಸೂಚನೆ

ನೀವು ಮನೆಮದ್ದನ್ನು ಬಳಸುವ ಮೊದಲು ಅದನ್ನು ದೇಹದ ಬೇರೆ ಭಾಗಕ್ಕೆ ಬಳಸಿಕೊಂಡು ಪರೀಕ್ಷೆ ಮಾಡಿಕೊಳ್ಳಿ. ಕೆಲವು ಸೂಕ್ಷ್ಮ ಚರ್ಮದವರಿಗೆ ಇದು ವ್ಯತಿರಿಕ್ತ ಪರಿಣಾಮ ಬೀರಬಹುದು. ಕೈಗೆ ಹಚ್ಚಿಕೊಂಡು ಪರೀಕ್ಷೆ ಮಾಡಬಹುದು. ಚರ್ಮದಲ್ಲಿ ಯಾವುದೇ ರೀತಿಯ ಕಿರಿಕಿರಿ ಕಾಣಿಸದೆ ಇದ್ದರೆ ಆಗ ಮುಖಕ್ಕೆ ಬಳಸಬಹುದು. ಸಾಮಾನ್ಯ ಚರ್ಮದ ಸಮಸ್ಯೆಗಳ ನಿವಾರಣೆಗೆ ಇದನ್ನು ಬಳಸಿಕೊಳ್ಳಿ ಮತ್ತು ಇದು ನಿಮಗೆ ಯಾವ ರೀತಿಯ ಪರಿಣಾಮ ಬೀರಿದೆ ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ. ಫೇಸ್ ಬುಕ್, ಇನ್ ಸ್ಟಾಗ್ರಾಂ ಮತ್ತು ಟ್ವಿಟ್ಟರ್ ನಲ್ಲಿ ನಮ್ಮನ್ನು ಫಾಲೋ ಮಾಡಿ ಆರೋಗ್ಯದ ಸಲಹೆಗಳನ್ನು ಪಡೆಯಿರಿ.

ಬ್ಯೂಟಿ ಟಿಪ್ಸ್: ಒಂದೆರಡು ದಿನಗಳಲ್ಲಿಯೇ ತ್ವಚೆಯ ಸೌಂದರ್ಯ ಹೆಚ್ಚಿಸುವ ಈರುಳ್ಳಿ!

English summary

Does Onion Help In Treating Acne?

Stubborn acne scars and spots can make your skin look dull. Apart from being a mere kitchen ingredient, onion helps in combating many beauty-related issues especially those related to skin. Onion helps in preventing pimples and healing acne scars.The sulphur compounds and other medicinal compounds in onion help in treating skin diseases effectively. Onion also possesses antimicrobial and anti-inflammatory properties that will help in treating inflammations or any kind of skin redness and irritation.
X
Desktop Bottom Promotion