For Quick Alerts
ALLOW NOTIFICATIONS  
For Daily Alerts

ಶ್ರೀಗಂಧ ಹಾಗೂ ಮೊಸರಿನ ಫೇಸ್ ಪ್ಯಾಕ್- ಸ್ಟೆಪ್ ಬೈ ಸ್ಟೆಪ್ ಟಿಪ್ಸ್...

By Hemanth
|

ಚರ್ಮದ ಆರೈಕೆ ಸರಿಯಾಗಿ ಮಾಡದೇ ಇದ್ದರೆ ಆಗ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳುವುದು. ಇದರಲ್ಲಿ ಪ್ರಮುಖವಾಗಿ ಒಣ ಹಾಗೂ ಒಡೆದ ಚರ್ಮ. ಇದು ತುಂಬಾ ಕಿರಿಕಿರಿ ಹಾಗೂ ನೋವುಂಟು ಮಾಡುವುದು. ಕೆಲವೊಂದು ಸಲ ರಕ್ತ ಕೂಡ ಒಸರಿ ಬರುವುದಿದೆ. ಚರ್ಮವು ಹೀಗೆ ಒಣಗಲು ಕಾರಣವೇನು? ತುಂಬಾ ಚಳಿಯ ತಾಪಮಾನ, ಸರಿಯಾಗಿ ನೀರು ಸೇವಿಸದೆ ಇರುವುದು, ನಿದ್ರಾಹೀನತೆ, ಕಲುಷಿತ ವಾತಾವರಣ, ಧೂಮಪಾನ, ಅತಿಯಾದ ಮೇಕಪ್, ಅನಾರೋಗ್ಯಕರ ಆಹಾರ ಇತ್ಯಾದಿಗಳು ಚರ್ಮ ಒಣಗಲು ಕಾರಣವಾಗಿದೆ.

ಒಣ ಚರ್ಮದ ಪ್ರಮುಖ ಲಕ್ಷಣವೆಂದರೆ ತುರಿಕೆ ಮತ್ತು ಪರಚುವಿಕೆ. ಇದನ್ನು ತಡೆಯಲು ಸಾಧ್ಯವಿಲ್ಲ. ಪರಚುವಿಕೆಯು ನಿರಂತರವಾಗಿದ್ದರೆ ಆಗ ಚರ್ಮವು ದಪ್ಪ ಮತ್ತು ಕಪ್ಪಾಗುವುದು. ಅತಿಯಾಗಿ ಚರ್ಮವು ಒಣಗಿದರೆ ಆಗ ಚರ್ಮವು ಒಡೆದು ನಿಸ್ತೇಜ ಚರ್ಮ ಉಂಟಾಗುವುದು.
ಒಣ ಚರ್ಮದ ನಿವಾರಣೆ ಮಾಡಲು ಕೇವಲ ಮೊಶ್ಚಿರೈಸ್ ಮಾಡಿದರೆ ಸಾಲವು. ಇದರೊಂದಿಗೆ ಕೆಲವು ಕ್ರಮ ತೆಗೆದುಕೊಳ್ಳಬೇಕು. ಚರ್ಮವು ಮೃಧು ಹಾಗೂ ಕಾಂತಿಯುತವಾಗಿರಲು ಕೆಲವೊಂದು ಮನೆಮದ್ದುಗಳನ್ನು ಬಳಕೆ ಮಾಡಿಕೊಳ್ಳಬೇಕು.

tips in kannada

ಇದರಿಂದ ಚರ್ಮದ ಆರೈಕೆಯು ಒಳ್ಳೆಯ ರೀತಿಯಲ್ಲಿ ಆಗುವುದು. ಶ್ರೀಗಂಧ ಮತ್ತು ಮೊಸರಿನ ಪ್ಯಾಕ್ ನಿಂದ ಚರ್ಮದ ಹೆಚ್ಚಿನ ಕಾಳಜಿ ವಹಿಸಬಹುದು. ಮನೆಯಲ್ಲೇ ತಯಾರಿಸಿದ ಪ್ಯಾಕ್ ನಲ್ಲಿ ಯಾವುದೇ ರೀತಿಯ ರಾಸಾಯನಿಕಗಳು ಇರದೇ ಇರುವ ಕಾರಣದಿಂದ ಚರ್ಮಕ್ಕೆ ಇದು ತುಂಬಾ ಸಹಕಾರಿ.
ಶ್ರೀಗಂಧದಲ್ಲಿ ಹಲವಾರು ರೀತಿಯ ಔಷಧೀಯ ಮತ್ತು ಸೌಂಧರ್ಯವರ್ಧಕ ಗುಣಗಳು ಇವೆ. ಶ್ರೀಗಂಧದ ಮಾಡಿರುವಂತಹ ಸೋಪು, ಸುಗಂಧ ದ್ರವ್ಯ ಇತ್ಯಾದಿಗಳು ನಮಗೆ ಕಾಣಲು ಸಿಗುವುದು. ಶ್ರೀಗಂಧದಲ್ಲಿರುವ ಗುಣಗಳಿಂದಾಗಿ ಅದು ತುಂಬಾ ಜನಪ್ರಿಯವಾಗಿದೆ. ಇದರು ಶಮನಕಾರಿ ಮತ್ತು ತಂಪು ನೀಡುವ ಗುಣ ಹೊಂದಿದೆ. ಇದರಿಂದಾಗಿ ಒಣ ಹಾಗೂ ನಿಸ್ತೇಜ ಚರ್ಮಕ್ಕೆ ಇದು ತುಂಬಾ ಸಹಕಾರಿ. ಇದು ಕಲೆ, ಕೆಂಪುಕಲೆ, ಕಪ್ಪು ಕಲೆ ನಿವಾರಣೆ ಮಾಡುವುದು.

ಮೊಸರಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವಿದೆ ಮತ್ತು ಇದು ಚರ್ಮಕ್ಕೆ ಪೋಷಣೆ ನೀಡುವುದು. ಇದರಲ್ಲಿ ಪ್ರೋಟೀನ್ ಗಳು, ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಇದೆ. ಇದು ಚರ್ಮದ ಬಣ್ಣವನ್ನು ಸುಧಾರಿಸುವುದು.

ಮೊಸರಿನಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ಒಳ್ಳೆಯ ಕಿತ್ತೊಗೆಯುವ ಗುಣ ಹೊಂದಿದೆ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವುದು ಮತ್ತು ಚರ್ಮಕ್ಕೆ ಮೊಶ್ಚಿರೈಸ್ ನೀಡುವುದು.ಇವೆರಡರ ಮಿಶ್ರಣವು ಅದ್ಭುತ ಪರಿಣಾಮ ಉಂಟು ಮಾಡಲಿದೆ. ಇದರಿಂದ ನೀವು ಒಣ ಹಾಗೂ ನಿಸ್ತೇಜ ಚರ್ಮಕ್ಕೆ ಒಳ್ಳೆಯ ಪರಿಹಾರ ಕಂಡುಕೊಂಡಂತೆ ಆಗುವುದು. ಈ ಲೇಖನದಲ್ಲಿ ಶ್ರೀಗಂಧ ಮತ್ತು ಮೊಸರಿನ ಬಗ್ಗೆ ತಿಳಿಸಿದ್ದೇವೆ. ಇದನ್ನು ನೀವು ಓದಿಕೊಂಡು ಬಳಸಿಕೊಳ್ಳಿ.

ಶ್ರೀಗಂಧ, ಜೇನುತುಪ್ಪ ಮತ್ತು ಮೊಸರಿನ ಫೇಸ್ ಪ್ಯಾಕ್

ಶ್ರೀಗಂಧದ ಹುಡಿಯಲ್ಲಿ ಇರುವಂತಹ ಹಲವಾರು ಲಾಭಕಾರಿ ಗುಣಗಳು ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಚರ್ಮವನ್ನು ಕಿತ್ತೊಗೆಯುವುದು, ಮೊಶ್ಚಿರೈಸ್ ಮಾಡುವುದು ಮತ್ತು ಚರ್ಮದ ಬಣ್ಣ ಸುಧಾರಿಸುವುದು. ಒಣ ಚರ್ಮವು ಚರ್ಮವನ್ನು ನಿಸ್ತೇಜವಾಗಿ ಮಾಡುವುದು ಮತ್ತು ಇದರಿಂದ ತುರಿಕೆ ಉಂಟಾಗುವುದು. ಶ್ರೀಗಂಧವು ಚರ್ಮಕ್ಕೆ ಶಮನ ನೀಡಿ ಕಾಂತಿಯುತವಾಗಿಸುವುದು.

ಮೊಸರಿನಲ್ಲಿ ಇರುವಂತಹ ಹಾಲಿನ ಪ್ರೋಟೀನ್ ಗಳು ಸತ್ತ ಚರ್ಮದ ಕೋಶಗಳನ್ನು ಕಿತ್ತೊಗೆಯಲು ನೆರವಾಗುವುದು ಮತ್ತು ಚರ್ಮಕ್ಕೆ ಮೊಶ್ಚಿರೈಸ್ ನೀಡುವುದು. ಇದರಿಂದ ಚರ್ಮವು ಮೃಧು ಹಾಗೂ ಹೊಳೆಯುವುದು.

ಜೇನುತುಪ್ಪವು ನೈಸರ್ಗಿಕ ಹ್ಯೂಮಕ್ವಂಟ್ ಆಗಿದ್ದು, ಇದು ಗಾಳಿಯಲ್ಲಿರುವ ಮೊಶ್ಚಿರೈಸನ್ನು ಪಡೆದು ಚರ್ಮಕ್ಕೆ ನೀಡುವುದು ಮತ್ತು ಅದು ಚರ್ಮದ ಪದರದಲ್ಲಿ ಉಳಿಯುವಂತೆ ಮಾಡುವುದು. ಇದರಿಂದ ಚರ್ಮದಲ್ಲಿ ದೀರ್ಘಕಾಲದ ತನಕ ತೇವಾಂಶವಿರುವುದು.

ಒಣ ಚರ್ಮದಿಂದ ತುರಿಕೆ ಹಾಗೂ ನಿಸ್ತೇಜ ಉಂಟಾಗುವುದು. ಜೇನುತುಪ್ಪವು ಚರ್ಮವು ಬಿಳಿ ಹಾಗೂ ಕಾಂತಿಯುತವಾಗಿಸುವುದು. ಜೇನುತುಪ್ಪದಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮಕ್ಕೆ ಸೋಂಕು ಬರದಂತೆ ತಡೆಯುವುದು.

ಒಣ ಹಾಗೂ ನಿಸ್ತೇಜ ಚರ್ಮಕ್ಕೆ ಶ್ರೀಗಂಧ, ಮೊಸರು ಮತ್ತು ಜೇನುತುಪ್ಪವು ಒಳ್ಳೆಯ ಫೇಸ್ ಪ್ಯಾಕ್ ತಯಾರಿಸಿಕೊಡುವುದು. ಇದು ಹೇಗೆಂದು ತಿಳಿಯಿರಿ.

ಬೇಕಾಗುವ ಸಾಮಗ್ರಿಗಳು
ಒಂದು ಚಮಚ ಶ್ರೀಗಂಧದ ಹುಡಿ
ಒಂದು ಚಮಚ ಮೊಸರು
ಅರ್ಧ ಚಮಚ ಜೇನುತುಪ್ಪ

ಬಳಸುವ ವಿಧಾನ
• ಒಂದು ಸಣ್ಣ ಪಿಂಗಾಣಿ ತೆಗೆದುಕೊಂಡು ಅದಕ್ಕೆ ಒಂದು ಚಮಚ ಶ್ರೀಗಂಧದ ಹುಡಿ, ಒಂದು ಚಮಚ ಮೊಸರು ಮತ್ತು ಅರ್ಧ ಚಮಚ ಜೇನುತುಪ್ಪ ಹಾಕಿ.
• ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ.
• ಇದನ್ನು ಮುಖ ಹಾಗೂ ಕುತ್ತಿಗೆಗೆ ಸರಿಯಾಗಿ ಹಚ್ಚಿಕೊಳ್ಳಿ.
• 30 ನಿಮಿಷದಿಂದ ಒಂದು ಗಂಟೆ ಕಾಲ ಮುಖದಲ್ಲಿ ಹಾಗೆ ಇರಲಿ.
• ಸಾಮಾನ್ಯ ನೀರಿನಿಂದ ತೊಳೆಯಿರಿ.
• ಕಾಂತಿಯುತ ಮತ್ತು ಆರೋಗ್ಯಕಾರಿ ಚರ್ಮಕ್ಕೆ ವಾರದಲ್ಲಿ 1-2 ಸಲ ಇದನ್ನು ಬಳಸಿ.
ಶ್ರೀಗಂಧದ ಲಾಭಗಳು
ಚರ್ಮಕ್ಕೆ ಶ್ರೀಗಂಧದ ಬಳಕೆಯಿಂದ ಹಲವಾರು ಲಾಭಗಳು ಇವೆ.

1. ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು

ಒಣ ಚರ್ಮವು ನೆರಿಗೆ ಉಂಟು ಮಾಡಲ್ಲವಾದರೂ ಅದನ್ನು ಹೆಚ್ಚು ಮಾಡುವುದು. ಚರ್ಮಕ್ಕೆ ತೇವಾಂಶ ಸಿಕ್ಕಿದಾಗ ಅದು ಮೊಶ್ಚಿರೈಸ್ ಆಗಿ ನೆರಿಗೆಯು ಸಣ್ಣದಾಗಿ ಕಾಣುವುದು. ಇದರಿಂದ ನೆರಿಗೆಗಳು ತುಂಬಾ ಸಣ್ಣದಾಗಿ ಕಾಣಲು ಚರ್ಮಕ್ಕೆ ಹೆಚ್ಚಿನ ಮೊಶ್ಚಿರೈಸರ್ ಬೇಕಾಗುವುದು. ಜೋತಾಡುವ ಚರ್ಮವನ್ನು ಶ್ರೀಗಂಧವು ಬಿಗಿಗೊಳಿಸುವುದು ಮತ್ತು ಮೊಡವೆಗಳ ಗಾತ್ರ ಕಡಿಮೆ ಮಾಡಿ ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು.

2. ತುರಿಕೆಯಿಂದ ಶಮನ

ಮೊದಲೇ ಹೇಳಿರುವಂತೆ ಶ್ರೀಗಂಧದಲ್ಲಿ ಇರುವಂತಹ ಶಮನಕಾರಿ ಮತ್ತು ತಂಪು ನೀಡುವ ಗುಣವು ಒಣ ಹಾಗೂ ಸೋಂಕು ಉಂಟು ಮಾಡುವಂತಹ ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಚರ್ಮ ಕೆಂಪಾಗುವುದು, ಉರಿಯೂತ ಮತ್ತು ನೋವಿರುವ ಚರ್ಮವನ್ನು ಸರಿಪಡಿಸುವುದು.

3. ಶುದ್ಧ ಹಾಗೂ ಸ್ವಚ್ಛ ತ್ವಚೆಗೆ

ಇತರ ಕೆಲವೊಂದು ಸಾಮಗ್ರಿಗಳೊಂದಿಗೆ ಶ್ರೀಗಂಧವು ಚರ್ಮವನ್ನು ಶುದ್ಧ ಹಾಗೂ ಸ್ವಚ್ಛವಾಗಿಡುವುದು. ಕೆಲ ನಿವಾರಣೆ ಮಾಡುವ ಗುಣ ಹೊಂದಿರುವ ಶ್ರೀಗಂಧವು ಚರ್ಮವು ತಾಜಾ ಮತ್ತು ಕಾಂತಿಯುತವಾಗಿಸುವುದು.

4. ಚರ್ಮ ಮೃಧುವಾಗಿಸುವುದು

ಶ್ರೀಗಂಧವು ತುಂಬಾ ಮೃಧುವಾದ, ಮಗುವಿನಂತಹ ಚರ್ಮ ನೀಡುವುದು.

ಮೊಸರಿನ ಲಾಭಗಳು

1. ಕಿತ್ತೊಗೆಯುವುದು

ಮೊಸರಿನಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ಚರ್ಮದಲ್ಲಿನ ಸತ್ತ ಕೋಶಗಳನ್ನು ತೆಗೆಯುವುದು ಮತ್ತು ಹೊಸ ಚರ್ಮ ನೀಡುವುದು. ಇದರಿಂದ ಮುಖವು ತುಂಬಾ ಕಾಂತಿಯುತ ಹಾಗೂ ಸುಂದರವಾಗುವುದು.

2. ಶುದ್ಧ ಹಾಗೂ ಸ್ವಚ್ಛ ಚರ್ಮ

ಮೊಸರಿನಲ್ಲಿ ಇರುವಂತಹ ಶುದ್ಧೀಕರಿಸುವಂತಹ ಗುಣವು ಚರ್ಮದಲ್ಲಿನ ಮೊಡವಿನ ನಿವಾರಣೆ ಮಾಡುವುದು ಮತ್ತು ಶುದ್ಧ ಹಾಗೂ ಶುಭ್ರ ಚರ್ಮ ನೀಡುವುದು. ಇದರಿಂದ ಚರ್ಮಕ್ಕೆ ಕಾಂತಿ ಬರುವುದು.

3. ವಯಸ್ಸಾಗುವ ಲಕ್ಷಣ ತಡೆಯುವುದು

ಚರ್ಮದಲ್ಲಿ ಇರುವಂತಹ ವಯಸ್ಸಾಗುವ ಲಕ್ಷಣ ತಡೆಯುವ ಗುಣಗಳು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಫ್ರೀ ರ್ಯಾಡಿಕಲ್ ನೆರಿಗೆ ಉಂಟು ಮಾಡುವುದು.

4. ಚರ್ಮದ ಕಾಂತಿಗೆ

ಮೊಸರಿನಲ್ಲಿ ಇರುವಂತಹ ಹಲವಾರು ಖನಿಜಾಂಶಗಳು ಚರ್ಮದ ಕಾಂತಿ ಸುಧಾರಣೆ ಮಾಡುವುದು ಮತ್ತು ನಿಸ್ತೇಜ ಚರ್ಮವು ಹೊಳೆಯುವಂತೆ ಮಾಡುವುದು.

5. ಚರ್ಮಕ್ಕೆ ತೇವಾಂಶ ನೀಡುವುದು

ಒಣ ಚರ್ಮಕ್ಕೆ ಹೆಚ್ಚಿನ ತೇವಾಂಶವು ಬೇಕಾಗುವುದು. ಮೊಸರಿನಲ್ಲಿರುವ ಕೆಲವೊಂದು ಅಂಶಗಳು ಚರ್ಮಕ್ಕೆ ಒಳ್ಳೆಯ ತೇವಾಂಶ ನೀಡುವುದು. ರಿಬೊಫ್ಲಾವಿನ್ ಎನ್ನುವ ಅಂಶವು ಚರ್ಮವು ತೇವಾಂಶ ಹಾಗೂ ಹೊಳೆಯುವಂತೆ ಮಾಡುವುದು.
ನಿಮಗೆ ಒಣ ಹಾಗೂ ನಿಸ್ತೇಜ ಚರ್ಮದ ಸಮಸ್ಯೆಯಿದ್ದರೆ ಅದನ್ನು ಪರಿಹರಿಸುವುದು ಎಂದು ತಿಳಿದಿದೆ ತಾನೇ? ಇದನ್ನು ನೀವು ಪ್ರಯತ್ನಿಸಿ.
ಮನೆಯಲ್ಲೇ ಈ ಫೇಸ್ ಪ್ಯಾಕ್ ತಯಾರಿಸಿ ಮತ್ತು ಚರ್ಮದಲ್ಲಿನ ಬದಲಾವಣೆ ನೋಡಿ. ನಿಮ್ಮ ನಿಸ್ತೇಜ ಮತ್ತು ಒಣ ಚರ್ಮವು ಕೆಲವೇ ತಿಂಗಳಲ್ಲಿ ಸರಿಯಾಗುವುದು. ನಿಮ್ಮ ಚರ್ಮದ ಬಗ್ಗೆ ಕಾಳಜಿ ವಹಿಸಿ ಸೌಂದರ್ಯ ಕಾಪಾಡಿ.

English summary

DIY Sandalwood And Curd Face Pack For Dull And Dry Skin

Dry and flaky skin is always annoying and sometimes even painful if you do not take care of your skin properly. Your skin tends to crack and bleed if not treated properly. What causes dryness? Frigid temperature, lack of water intake, stress, lack of sleep, pollution, smoking, wearing a lot of matte makeup, unhealthy diet, etc., can be the reasons for dryness. Below, we have a step-by-step procedure, as in how to make sandalwood and curd face pack.
X
Desktop Bottom Promotion