For Quick Alerts
ALLOW NOTIFICATIONS  
For Daily Alerts

ಕುಂಬಳಕಾಯಿ ಬೀಜದಿಂದ ಸೌಂದರ್ಯ ವೃದ್ಧಿಸುವುದು ಹೇಗೆ?

By Hemanth
|

ಪ್ರಕೃತಿಯಲ್ಲಿ ಸಿಗುವಂತಹ ಹಣ್ಣು, ತರಕಾರಿ, ಗಿಡಮೂಲಿಕೆಗಳನ್ನು ಬಳಸಿಕೊಂಡು ನಮ್ಮ ಸೌಂದರ್ಯ ಕಾಪಾಡಿಕೊಳ್ಳಬಹುದು. ಇದರಲ್ಲಿ ಪ್ರಮುಖವಾಗಿ ಕುಂಬಳಕಾಯಿ ಬೀಜಗಳು ಕೂದಲು ಹಾಗೂ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಇರುವಂತಹ ವಿಟಮಿನ್ ಗಳು, ಖನಿಜಾಂಶಗಳು, ಕೊಬ್ಬಿನಾಮ್ಲಗಳು ಹಾಗೂ ಇತರ ಕೆಲವೊಂದು ಅಂಶಗಳು ಅದ್ಭುತವಾಗಿ ಸೌಂದರ್ಯ ಗುಣಗಳನ್ನು ಹೊಂದಿದೆ ಮತ್ತು ಇದು ಚರ್ಮ ಹಾಗೂ ಕೂದಲಿಗೆ ನೈಸರ್ಗಿಕವಾಗಿ ತುಂಬಾ ಒಳ್ಳೆಯದು.

benefits of pumpkin seeds for skin and hairhow to use pumpkin for skin care, pumpkin benefits

ಹಿಂದಿನಿಂದಲೂ ವಿಶ್ವದೆಲ್ಲೆಡೆ ಇದನ್ನು ಮಹಿಳೆಯರು ತಮ್ಮ ಸೌಂದರ್ಯದ ಆರೈಕೆಯಲ್ಲಿ ಬಳಸಿಕೊಂಡು ಬರುತ್ತಾ ಇದ್ದಾರೆ. ಈ ಸೌಂದರ್ಯವರ್ಧಕವು ಎಲ್ಲಾ ರೀತಿಯ ಚರ್ಮಕ್ಕೆ ಹೊಂದಿಕೊಳ್ಳುವುದು. ಕುಂಬಳಕಾಯಿಯ ಸೌಂದರ್ಯವರ್ಧಕ ಲಾಭಗಳನ್ನು ನೀವು ಇದುವರೆಗೆ ಬಳಸಿಕೊಳ್ಳದೆ ಇದ್ದರೆ ಖಂಡಿತವಾಗಿಯೂ ಈ ಲೇಖನ ಓದಿಕೊಳ್ಳಲೇಬೇಕು. ಸೌಂದರ್ಯವರ್ಧಕಗಳಿಗೆ ಹಣ ವ್ಯಯಿಸುವ ಬದಲು ಇದು ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಮುಖಕ್ಕೆ ಕಾಂತಿ ಹಾಗೂ ಕೂದಲಿಗೆ ಹೊಳಪು ನೀಡುವುದು. ಕುಂಬಳಕಾಯಿ ಬೀಜಗಳನ್ನು ಬಳಸುವುದು ಹೇಗೆ ಎಂದು ತಿಳಿಯಿರಿ.

1. ಕಾಲಜನ್ ಉತ್ಪತ್ತಿ ಹೆಚ್ಚಿಸುವುದು

1. ಕಾಲಜನ್ ಉತ್ಪತ್ತಿ ಹೆಚ್ಚಿಸುವುದು

ಚರ್ಮದ ಸಂಪೂರ್ಣ ಆರೋಗ್ಯ ಮತ್ತು ಹೊಳಪಿಗೆ ಕಾಲಜನ್ ಉತ್ತಮ ಮಟ್ಟದಲ್ಲಿ ಇರುವುದು ಅತೀ ಅಗತ್ಯವಾಗಿದೆ. ಇನ್ನೊಂದು ಕಡೆಯಲ್ಲಿ ಕಾಲಜನ್ ವಿಘಟನೆಗೊಂಡರೆ ಆಗ ಚರ್ಮವು ನೆರೆಗೆಗಟ್ಟುವುದು ಮತ್ತು ವಯಸ್ಸಾಗುವ ಲಕ್ಷಣ ವೇಗಗೊಳಿಸುವುದು. ಕುಂಬಳಕಾಯಿ ನೆರವಿನಿಂದ ಚರ್ಮದಲ್ಲಿ ಕಾಲಜನ ಉತ್ಪತ್ತಿ ಹೆಚ್ಚಿಸಬಹುದು ಮತ್ತು ಇದು ಚರ್ಮದ ಆರೋಗ್ಯ, ಸೌಂದರ್ಯ ಮತ್ತು ಯೌವನಯುವಾಗಿ ಕಾಣಲು ನೈಸರ್ಗಿಕವಾಗಿ ನೆರವಾಗುವುದು.

2.ಚರ್ಮದ ಪುನರ್ಶ್ಚೇತನಕ್ಕೆ ವೇಗ

2.ಚರ್ಮದ ಪುನರ್ಶ್ಚೇತನಕ್ಕೆ ವೇಗ

ಪೋಷಕಾಂಶಗಳಾಗಿರುವಂತಹ ಸತು, ಪೈಥೊಸ್ಟೆರಾಲ್ಸ್ ಗಳು ಚರ್ಮದ ಪುರ್ನರ್ಶ್ಚೇತನಗೊಳಿಸುವ ವೇಗವನ್ನು ಹೆಚ್ಚಿಸುವುದು. ಇದರಿಂದ ಚರ್ಮವು ಪುನರ್ಶ್ವೇತನಗೊಂಡು ಯೌವನಯುತ ಮತ್ತು ಬಿಳಿಯಾಗಿ ಕಾಣುಸವುದು. ಕುಂಬಳಕಾಯಿ ಬೀಜವು ಹಾನಿಗೊಂಡಿರುವ ಚರ್ಮ ಹಾಗೂ ಕೂದಲನ್ನು ಸರಿಪಡಿಸುವುದು.

3. ಚರ್ಮದ ಕಾಂತಿ ವೃದ್ಧಿಸುವುದು

3. ಚರ್ಮದ ಕಾಂತಿ ವೃದ್ಧಿಸುವುದು

ಕಾಲವನ್ನು ತಡೆಯೋರು ಯಾರೂ ಇಲ್ಲ, ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ...." ಈ ಜನಪ್ರಿಯ ಸಿನಿಮಾ ಗೀತೆಯನ್ನು ನಾವೆಲ್ಲರೂ ಕೇಳಿದ್ದೇವೆ. ಇದ೦ತೂ ಖ೦ಡಿತವಾಗಿಯೂ ಸತ್ಯ. ಕಾಲಚಕ್ರವು ಒ೦ದು ಕ್ಷಣವೂ ನಿಲ್ಲದೇ ಮು೦ದೆ ಸಾಗುತ್ತಲೇ ಇರುತ್ತದೆ. ಈ ಅಖ೦ಡವಾದ ಕಾಲಚಕ್ರದ ಭಾಗಗಳೇ ಆಗಿರುವ ನಮಗೂ ಕೂಡ ದಿನಗಳೆದ೦ತೆಲ್ಲಾ ವಯಸ್ಸು ಹೆಚ್ಚುತ್ತಲೇ ಸಾಗುತ್ತದೆ, ಅ೦ತೆಯೇ ನಮ್ಮ ದೇಹದ ಸೌಂದರ್ಯದಲ್ಲೂ ಏರುಪೇರು ಆಗುವುದರ ಜೊತೆಗೆ ತಾರುಣ್ಯ ಕೂಡ ಕ್ಷೀಣಿಸುತ್ತಾ ಸಾಗುತ್ತದೆ. ಈ ಪ್ರಕ್ರಿಯೆಯು ಜೀವನದ ಅವಿಭಾಜ್ಯ ಅ೦ಗವೂ, ಅನಿವಾರ್ಯವಾದುದೂ ಆಗಿದೆ. ಇದನ್ನು ತಡೆಯಲು ನಮ್ಮಿ೦ದ ಸಾಧ್ಯವಿಲ್ಲವಾದರೂ ಕೂಡಾ, ಕೆಲವೊಂದು ನೈಸರ್ಗಿಕ ಪರಿಹಾರಗಳ ಮೂಲಕ ಸ್ವಲ್ಪ ಮಟ್ಟಿಗಾದರೂ ನಿಯಂತ್ರಿಸಬಹುದು.

ಅದಕ್ಕೆ ಕುಂಬಳಕಾಯಿ ಬೀಜಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ವಿಟಮಿನ್ ಇ ಒಳಗೊಂಡಿರುವ ಕುಂಬಳಕಾಯಿ ಬೀಜಗಳು ಚರ್ಮದ ಕಾಂತಿ ವೃದ್ಧಿಸುವುದು. ಇದನ್ನು ನಿಯಮಿತವಾಗಿ ಬಳಸಿಕೊಂಡು ನಿಸ್ತೇಜ ಚರ್ಮವು ದೂರವಾಗಿ ಬಿಳಿ ಹಾಗೂ ಕಾಂತಿಯುತ ಚರ್ಮವು ನಿಮ್ಮದಾಗುವುದು. ಇದನ್ನು ಚರ್ಮಕ್ಕೆ ಕಾಂತಿ ನೀಡುವ ಸಾಮಗ್ರಿ ಎಂದು ಪರಿಗಣಿಸಲಾಗಿದೆ.

4. ಚರ್ಮದ ಸ್ಥಿತಿಸ್ಥಾಪಕತ್ವ ಸುಧಾರಣೆ

4. ಚರ್ಮದ ಸ್ಥಿತಿಸ್ಥಾಪಕತ್ವ ಸುಧಾರಣೆ

ಕುಂಬಳಕಾಯಿ ಬೀಜದಲ್ಲಿ ಇರುವಂತಹ ಸತು ಹಲವಾರು ರೀತಿಯ ಚರ್ಮದ ಸುಧಾರಣೆ ಮಾಡುವ ಗುಣ ಹೊಂದಿದೆ. ಇದರಲ್ಲಿ ಪ್ರಮುಖವೆಂದರೆ ಚರ್ಮದ ಸ್ಥಿತಿಸ್ಥಾಪಕತ್ವ ಸುಧಾರಣೆ ಮಾಡುವುದು. ಇದರಿಂದ ಚರ್ಮವು ಬಿಗಿ ಮತ್ತು ಯೌವನಯುತವಾಗಿ ಕಾಣಿಸುವುದು. ಕುಂಬಳಕಾಯಿಯಲ್ಲಿರುವಂತಹ ಸತು ಚರ್ಮದ ಸ್ಥಿತಿಸ್ಥಾಪಕತ್ವ ಕಾಪಾಡುವುದು. ಇದನ್ನು ಬಳಸಿಕೊಂಡರೆ ಚರ್ಮವು ಜೋತು ಬೀಳುವುದನ್ನು ತಡೆಯಬಹುದು.

5. ಕಲೆಗಳನ್ನು ತೆಗೆದುಹಾಕುವುದು

5. ಕಲೆಗಳನ್ನು ತೆಗೆದುಹಾಕುವುದು

ಕುಂಬಳಕಾಯಿ ಬೀಜದಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗುಣಗಳು ಚರ್ಮದಲ್ಲಿರುವ ಕಲೆಗಳನ್ನು ನಿವಾರಣೆ ಮಾಡುವುದು. ಕುಂಬಳಕಾಯಿ ಬೀಜಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿರುವ ಕಾರಣ ಇದನ್ನು ಕಲೆಗಳಿಗೆ ಒಳ್ಳೆಯ ಪರಿಹಾರ ನೀಡುವುದು. ಇದು ಕಲೆಗಳು ಮತ್ತು ಕಂದು ಕಲೆಗಳನ್ನು ಮಾಯ ಮಾಡುವುದು.

ಕೂದಲಿಗೆ ಕುಂಬಳಕಾಯಿ ಬೀಜಗಳ ಲಾಭಗಳು

6. ಕೂದಲಿನ ಬೆಳವಣಿಗೆಗೆ ಸಹಕಾರಿ

6. ಕೂದಲಿನ ಬೆಳವಣಿಗೆಗೆ ಸಹಕಾರಿ

ಕುಂಬಳಕಾಯಿ ಬೀಜದಲ್ಲಿರುವಂತಹ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಕೂದಲಿನ ಬೆಳವಣಿಗೆಗೆ ನೆರವಾಗುವುದು. ಇದು ಕೂದಲಿನ ಬೆಳವಣಿಗೆಗೆ ನೆರವಾಗುವುದು ಮಾತ್ರವಲ್ಲದೆ ಕೂದಲು ತುಂಡಾಗುವುದನ್ನು ತಡೆಯುವುದು. ಕೂದಲಿಗೆ ಇದನ್ನು ನಿಯಮಿತವಾಗಿ ಬಳಸಿಕೊಂಡರೆ ಉದ್ದ ಹಾಗೂ ಬಲವಾದ ಕೂದಲು ಪಡೆಯಬಹುದು.

7. ತಲೆಹೊಟ್ಟು ತಡೆಯುವುದು

7. ತಲೆಹೊಟ್ಟು ತಡೆಯುವುದು

ಹದಿಹರೆಯದವರನ್ನು ಮತ್ತು ವಯಸ್ಕರನ್ನು ಅತೀ ಸಾಮಾನ್ಯವಾಗಿ ಕಾಡುವ ಮತ್ತು ಅತೀ ಕಿರಿಕಿರಿಯನ್ನು೦ಟು ಮಾಡುವ ಸಮಸ್ಯೆಗಳಲ್ಲೊ೦ದು ಈ ತಲೆಹೊಟ್ಟು. ತಲೆಹೊಟ್ಟು ಯಾವ ವಯಸ್ಸಿನಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ತಲೆಹೊಟ್ಟು ಸಾಮಾನ್ಯವಾಗಿ ಮುಜುಗುರಕ್ಕೀಡಾಗುವ ಸನ್ನಿವೇಶವನ್ನು೦ಟು ಮಾಡುತ್ತದೆ. ಏಕೆ೦ದರೆ, ತಲೆಹೊಟ್ಟು ತಲೆದೋರಿದಾಗ, ವ್ಯಕ್ತಿಯ ತಲೆಯಿ೦ದ ನಿರ್ಜೀವ ತ್ವಚೆಯು ಸಣ್ಣ ಸಣ್ಣ ತುಣುಕುಗಳ ರೂಪದಲ್ಲಿ ಉದುರುತ್ತವೆ ಅಥವಾ ಕೆಲವೊಮ್ಮೆ ತಲೆಯ ಮೇಲೆ ಹಾಗೆಯೇ ಉಳಿದುಬಿಡುತ್ತವೆ ಇಲ್ಲವೇ ಕೆಲವೊಮ್ಮೆ ಧರಿಸಿಕೊ೦ಡಿರುವ ಬಟ್ಟೆಗಳ ಮೇಲೂ ಉದುರಿಬಿಡುತ್ತವೆ.

ಚಿಂತಿಸದಿರಿ ಇಂತಹ ಸಮಸ್ಯೆಗೆ ಕುಂಬಳಕಾಯಿ ಬೀಜದಿಂದ ಸರಳವಾಗಿ ಪರಿಹಾರ ಕಂಡು ಕೊಳ್ಳಬಹುದು ಕುಂಬಳಕಾಯಿ ಬೀಜದಲ್ಲಿ ಇರುವಂತಹ ವಿಟಮಿನ್ ಇ ಮತ್ತು ಸತು ತಲೆಬುರುಡೆಯಲ್ಲಿ ಮಾಯಿಶ್ಚರೈಸ್ ಉಳಿಯುವಂತೆ ಮಾಡುವುದು ಮತ್ತು ಇದರಿಂದ ಒಣ ಹಾಗೂ ತಲೆಹೊಟ್ಟು ತಡೆಯುವುದು. ಕೂದಲಿನ ಆರೋಗ್ಯಕ್ಕೆ ತಲೆಬುರುಡೆಯು ಒಳ್ಳೆಯ ರೀತಿಯಲ್ಲಿ ಮಾಯಿಶ್ಚಿರೈಸ್ ಆಗಿ ಇರುವುದು ಅತೀ ಅಗತ್ಯ. ಇದು ಕೂದಲಿನ ಕಾಂತಿ ಸುಧಾರಿಸುವುದು. ಇದರಿಂದ ತಲೆಹೊಟ್ಟು ದೂರವಿರುವುದು.

8. ಅಕಾಲಿಕ ಕೂದಲು ಬಿಳಿಯಾಗುವುದನ್ನು ತಡೆಯುವುದು

8. ಅಕಾಲಿಕ ಕೂದಲು ಬಿಳಿಯಾಗುವುದನ್ನು ತಡೆಯುವುದು

ಕುಂಬಳಕಾಯಿಯಲ್ಲಿ ಇರುವಂತಹ ಖನಿಜಾಂಶಗಳು ಮೆಲನಿನ್ ಉತ್ಪತ್ತಿ ಹೆಚ್ಚಿಸುವುದು. ಇದರಿಂದ ನೈಸರ್ಗಿಕವಾಗಿ ಕೂದಲಿನ ಬಣ್ಣವು ಹಾಗೆ ಉಳಿಯುವುದು. ಕುಂಬಳಕಾಯಿ ಬೀಜಗಳನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯಬಹುದು. ಇದು ತುಂಬಾ ಸುರಕ್ಷಿತ ಮತ್ತು ನೈಸರ್ಗಿಕವಾಗಿದೆ. ಇದು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳಿಗಿಂತ ಒಳ್ಳೆಯದು. ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಕುಂಬಳಕಾಯಿಯು ಈ ರೀತಿಯಿಂದ ನೆರವಾಗುವುದು. ಇದು ಕೇವಲ ಸುಂದರ ಚರ್ಮ ಹಾಗೂ ಕೂದಲು ನೀಡುವುದು ಮಾತ್ರವಲ್ಲದೆ ಸೌಂದರ್ಯವನ್ನು ಕಳೆಗುಂದಿಸುವ ಸಮಸ್ಯೆಗಳಿಗೆ ಪರಿಹಾರ ನೀಡುವುದು. ಇದರಿಂದ ನಿಮ್ಮ ಸೌಂದರ್ಯದ ಆರೈಕೆಯಲ್ಲಿ ಕುಂಬಳಕಾಯಿ ಬೀಜಗಳನ್ನು ಹಾಕಲು ಮರೆಯಬೇಡಿ.

Read more about: beauty skincare
English summary

benefits of pumpkin seeds for skin and hair

A storehouse of essential vitamins, minerals, fatty acids and many other compounds, seeds of a pumpkin are hailed as wondrous beauty ingredients that can beautify your skin and hair naturally. Instead of splurging big money on commercial beauty products, you can just give this natural ingredient a try to get the kind of skin and hair that you've always yearned for.
X
Desktop Bottom Promotion