For Quick Alerts
ALLOW NOTIFICATIONS  
For Daily Alerts

ಸೌಂದರ್ಯ ಪ್ರಿಯರಿಗೆ 'ಚಾಕೊಲೇಟ್' ಫೇಸ್ ಪ್ಯಾಕ್!

ಕೋಕಾದಿಂದ ಮಾಡಲ್ಪಡುವ ಚಾಕೊಲೇಟ್ ಕೇವಲ ತಿನ್ನಲು ಮಾತ್ರವಲ್ಲದೆ ಅದರಿಂದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ... ಅಲ್ಲವೇ? ಹಾಗಾದರೆ ಮುಂದೆ ಓದಿ...

By Hemanth
|

ಚಾಕಲೇಟ್ ಎಂದ ಕೂಡಲೇ ಪ್ರತಿಯೊಬ್ಬರ ಬಾಯಿಯಲ್ಲೂ ನೀರು ಬರುವುದು. ಅದರಲ್ಲೂ ಹುಡುಗಿಯರಿಗೆ ಚಾಕಲೇಟ್ ತುಂಬಾ ಪ್ರಿಯ. ಚಾಕಲೇಟ್ ನಲ್ಲಿ ಹಲವಾರು ಆರೋಗ್ಯ ಲಾಭಗಳು ಇವೆ. ಚಾಕಲೇಟ್ ನ್ನು ತಿನ್ನದೆ ಅದನ್ನು ಸೌಂದರ್ಯವರ್ಧಕವಾಗಿ ಹೇಗೆ ಬಳಸಿಕೊಳ್ಳಬಹುದು ಎಂದು ಬೋಲ್ಡ್ ಸ್ಕೈ ನಿಮಗೆ ಇಂದು ಹೇಳಿಕೊಡಲಿದೆ.

chocolate

ಚಾಕಲೇಟ್ ನ್ನು ಸೌಂದರ್ಯವರ್ಧಕವಾಗಿಯೂ ಬಳಸಿಕೊಳ್ಳಬಹುದು ಎಂದು ಹೆಚ್ಚಿನವರಿಗೆ ತಿಳಿದಿದೆ. ಇನ್ನು ತಿಳಿದಿರುವವರು ಇದು ತುಂಬಾ ದುಬಾರಿ ಮತ್ತು ಮೈಕೈಗೆ ಹಚ್ಚಿಕೊಳ್ಳುವ ಬದಲು ತಿನ್ನುವುದೇ ಒಳ್ಳೆಯದು ಎಂದು ಭಾವಿಸುತ್ತಾರೆ. ತುಂಬಾ ದುಬಾರಿಯಾದರೂ ಚಾಕಲೇಟ್ ನಲ್ಲಿ ಹಲವಾರು ರೀತಿಯ ಸೌಂದರ್ಯವರ್ಧಕ ಗುಣಗಳು ಇವೆ. ಇದು ಯಾವುದೆಂದು ನೀವು ಮುಂದಕ್ಕೆ ಓದುತ್ತಾ ತಿಳಿಯಿರಿ.

ಚಾಕೊಲೇಟ್ ತೆಂಗಿನಕಾಯಿ ಸ್ಕ್ರಬ್
ಚರ್ಮಕ್ಕೆ ಯಾವುದೇ ರೀತಿಯ ಸೌಂದರ್ಯವರ್ಧಕಗಳನ್ನು ಬಳಸುವ ಮೊದಲು ಚರ್ಮದಲ್ಲಿ ಇರುವಂತಹ ಸತ್ತ ಕೋಶಗಳನ್ನು ತೆಗೆದುಹಾಕುವುದು ಅತೀ ಮುಖ್ಯ. ಕಂದು ಸಕ್ಕರೆಯನ್ನು ತೆಂಗಿನ ಎಣ್ಣೆಯಲ್ಲಿ ಬಿಸಿ ಮಾಡಿ. ಈ ಮಿಶ್ರಣವು ಬಿಸಿಯಾಗಿರುವಾಗಲೇ ಅದಕ್ಕೆ ಕೋಕಾ ಪೌಡರ್ ಹಾಕಿ. ಸ್ಕ್ರಬ್ ಮಾಡಿಕೊಳ್ಳಲು ಇದಕ್ಕೆ ಸ್ವಲ್ಪ ಓಟ್ ಮೀಲ್ ಪೌಡರ್ ಹಾಕಿ. ಈಗ ಮುಖವನ್ನು ವೃತ್ತಾಕಾರವಾಗಿ ಸ್ಕ್ರಬ್ ಮಾಡಿ.

ಚಾಕೊಲೇಟ್ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್
ಚಾಕೊಲೇಟ್ ನ ಪ್ರಮುಖ ಲಾಭವೆಂದರೆ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಸಮೃದ್ಧವಾಗಿದೆ. ಆ್ಯಂಟಿ ಆಕ್ಸಿಡೆಂಟ್ ವಯಸ್ಸಾಗುವ ಲಕ್ಷಣಗಳನ್ನು ತಡೆಯುತ್ತದೆ. ಕೋಕಾದೊಂದಿಗೆ ಗ್ರೀನ್ ಟೀಯನ್ನು ಸೇರಿಸಿಕೊಂಡಾಗ ಎರಡರಲ್ಲೂ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗುಣಗಳು ಮತ್ತಷ್ಟು ಹೆಚ್ಚುವುದು. ಇದರಿಂದ ವಯಸ್ಸಾಗುವ ಲಕ್ಷಣವನ್ನು ತಡೆಯುವಂತಹ ಫೇಸ್ ಪ್ಯಾಕ್ ಅನ್ನು ಪಡೆಯಬಹುದಾಗಿದೆ.
ಕಡು ಕೋಕಾ ಪೌಡರ್ ನ್ನು ಜೇನುತುಪ್ಪ ಮತ್ತು ಹಾಲಿನ ಕೆನೆಯೊಂದಿಗೆ ಮಿಶ್ರಣ ಮಾಡಿಕೊಂಡು ಒಂದು ಫೇಸ್ ಪ್ಯಾಕ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ. ಉಗುರುಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ. 15 ದಿನಕ್ಕೊಮ್ಮೆ ಹೀಗೆ ಮಾಡುತ್ತಾ ಇದ್ದರೆ ನೀವು ಮತ್ತೆ 20ರ ಹರೆಯದವರಂತೆ ಕಾಣುವುದರಲ್ಲಿ ಸಂಶಯವೇ ಇಲ್ಲ.

ಕೋಕಾ ಬೆಣ್ಣೆ ಫೇಶಿಯಲ್
ಮಗುವಿನಂತಹ ತ್ವಚೆ ನಿಮ್ಮದಾಗಬೇಕಿದ್ದರೆ ಬೆಣ್ಣೆ ಮತ್ತು ಚಾಕಲೇಟಿನ ಫೇಶಿಯಲ್ ನ್ನು ನಿಮ್ಮದಾಗಿಸಿಕೊಳ್ಳಿ. ಈ ಸೌಂದರ್ಯವರ್ಧಕದಲ್ಲಿ ಕೋಕಾ ಬೆಣ್ಣೆ, ಜೇನುತುಪ್ಪ, ಕಾಟೇಜ್ ಚೀಸ್, ಬಾದಾಮಿ ಎಣ್ಣೆ ಮತ್ತು ಕಡು ಚಾಕೊಲೇಟ್ ಪೌಡರ್ ಒಳಗೊಂಡಿರುತ್ತದೆ. ಇದೆಲ್ಲವನ್ನೂ ಮಿಶ್ರಣ ಮಾಡಿಕೊಂಡು ದಪ್ಪಗಿನ ಪೇಸ್ಟ್ ಮಾಡಿ ತ್ವಚೆಗೆ ಮಸಾಜ್ ಮಾಡಿ. ಚರ್ಮವು ಇದನ್ನು ಹೀರಿಕೊಳ್ಳಲು ಬಿಡಿ ಮತ್ತು ನಯವಾದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಿ.

ಚಾಕೊಲೇಟ್ ಸ್ನಾನ
ಚಾಕಲೇಟಿನಲ್ಲಿ ಉರಿಯೂತ ಶಮನಕಾರಿ ಗುಣಗಳು ಇರುವ ಕಾರಣದಿಂದ ಇದನ್ನು ತ್ವಚೆಗೆ ಬಳಸುವುದು ತುಂಬಾ ಸುರಕ್ಷಿತ. ಯಾವುದೇ ಚಾಕೊಲೇಟ್ (ಮೇಣ ಕೂಡ) ತ್ವಚೆಯನ್ನು ನಯವಾಗಿಸುವುದು. ಚಾಕೊಲೇಟ್ ಸ್ನಾನ ಮಾಡಿದರೆ ಚರ್ಮ ಎಷ್ಟು ಮೃಧುವಾಗಬಹುದು ಎಂದು ನೀವೇ ಯೋಚಿಸಿ. ಸಾಮಾನ್ಯ ಜೆಲೆಟಿನ್ ಅನ್ನು ಶಾಂಪೂ ಜತೆಗೆ ಸೇರಿಸಿ ಕುದಿಸಿ. ಜೆಲೆಟಿನ್ ಸಂಪೂರ್ಣವಾಗಿ ಕರಗುವ ತನಕ ಕುದಿಸಿ. ಇದಕ್ಕೆ ಕೋಕಾ ಹುಡಿ ಅಥವಾ ಕೋಕಾ ಎಣ್ಣೆ ಹಾಕಿ. ನಾಲ್ಕು ಗಂಟೆಗಳ ಕಾಲ ಇದನ್ನು ರೆಫ್ರಿಜರೇಟರ್ ನಲ್ಲಿಡಿ. ಬಳಿಕ ಸ್ನಾನ ಮಾಡಿ.

ಚಾಕೊಲೇಟ್ ಮತ್ತು ಮೊಸರಿನ ಫೇಸ್ ಪ್ಯಾಕ್
ಮೊಡವೆಗಳು ಹಾಗೂ ಚರ್ಮದ ರಂಧ್ರಗಳು ತುಂಬಿ ಹೋಗಿದ್ದರೆ ಅದರಿಂದ ಮುಕ್ತಿಯನ್ನು ಪಡೆಯಲು ಚಾಕೊಲೇಟ್ ಅತೀ ಉತ್ತಮ ಮದ್ದಾಗಿದೆ. ಸಿಹಿ ಹಾಕದೆ ಇರುವ ಕೋಕಾ ಪೌಡರ್ ಅನ್ನು ಮೊಸರಿನ ಜತೆ ಸೇರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ಓಟ್ ಮೀಲ್ ಪೌಡರ್(ಕಡಲೆಹಿಟ್ಟು ಬಳಸಬಹುದು) ಹಾಕಿ ಮಿಶ್ರಣ ಮಾಡಿಕೊಳ್ಳಿ. ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಟ್ಟುಬಿಡಿ. ವಾರದಲ್ಲಿ ಒಂದು ಸಲ ಇದನ್ನು ಬಳಸಿದರೆ ಇದು ಚರ್ಮದ ರಂಧ್ರಗಳನ್ನು ತೆರೆಯುವಂತೆ ಮಾಡುವುದು. ಇದರಿಂದ ಮೊಡವೆಗಳು ನಿವಾರಣೆಯಾಗುವುದು. ಕಾಂತಿಯುತವಾದ ತ್ವಚೆಗೆ ಚಾಕೊಲೇಟ್ ಅನ್ನು ಬಳಸುವುದು ಅತೀ ಉತ್ತಮ.

English summary

Top Beauty Recipes Using Chocolate

However, it is actually difficult to find women who regularly try out homemade beauty recipes of chocolate for their daily skin care needs. May be because cocoa is an expensive or you would rather eat it than apply it on your face, chocolate containing beauty recipes have not caught on. Here are some of the best recipes that illustrate the
X
Desktop Bottom Promotion