ಮುಖದ ಮೇಲೆ ಈ ರೀತಿಯ ಮೊಡವೆಗೆ ಕಾರಣವೇನು?

By: Arshad
Subscribe to Boldsky

ಹದಿಹರೆಯದಲ್ಲಿ ಮೊಡವೆಗಳ ಕಾಟ ಸಾಮಾನ್ಯ. ಮೊಡವೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಸ್ಥಳಗಳೆಂದರೆ ಗಲ್ಲ, ಕೆನ್ನೆಯ ಮೇಲ್ಭಾಗ, ಟೀ-ಜೋನ್ ಎಂದರೆ ಮೂಗಿನ ಮೇಲಿನಿಂದ ಪ್ರಾರಂಭಿಸಿ ಕಣ್ಣುಗಳ ನಡುವೆ ಹಾದು ಹಣೆಯ ಮೇಲೆ ಅಡ್ಡಲಾಗಿ, ಅಂದರೆ ಟಿ ಅಕ್ಷರದ ಆಕಾರದ ಸ್ಥಳದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ.  ಮನೆಮದ್ದಿನ ಮಾಯಾ ಜಾದೂಗೆ ಮೊಡವೆ ಮಂಗಮಾಯ!

ಯಾಕೆ ಹೀಗೆ? ಪ್ರಥಮವಾಗಿ ಈ ಪ್ರಶ್ನೆಗೆ ಸಿಗುವ ಉತ್ತರವೆಂದರೆ ಈ ಭಾಗದಲ್ಲಿ ಚರ್ಮದ ಅಡಿಯಲ್ಲಿ ಸಂಗ್ರಹವಾಗುವ ಎಣ್ಣೆ. ಆದರೆ ಇದು ಸರಿಯಾದ ಉತ್ತರವಲ್ಲ. ಏಕೆಂದರೆ ಒಣಚರ್ಮವಿದ್ದು ಎಣ್ಣೆಯ ಪಸೆಯೂ ಇಲ್ಲದವರಿಗೂ ಮೊಡವೆ ಕಾಡುತ್ತದೆ. ಸಾಮಾನ್ಯ ಮತ್ತು ಕೊಂಚವೇ ಎಣ್ಣೆ ಪಸೆಯ ಚರ್ಮವಿರುವವರಲ್ಲಿ ಈ ಭಾಗಗಳಲ್ಲಿಯೇ ಹೆಚ್ಚು ಮೊಡವೆಗಳೂ ಕಾಣಿಸಿಕೊಳ್ಳುತ್ತದೆ.  ಮುಖದ ಕಲೆ ಹೋಗಲಾಡಿಸಬೇಕೆ? ಈ ರೀತಿ ಮಾಡಿ

ಆದರೆ ಸೌಂದರ್ಯ ತಜ್ಞರು ಈ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿದ್ದು ಇವರ ಅನುಭವದ ಪ್ರಕಾರ ಈ ಪ್ರಶ್ನೆಗೆ ಕಾರಣಗಳೇನು ಎಂಬುದನ್ನು ಈ ಲೇಖನದಲ್ಲಿ ನೀಡಲಾಗಿದೆ, ಮುಂದೆ ಓದಿ.....  

ಚರ್ಮದ ಸೂಕ್ಷ್ಮ ರಂಧ್ರಗಳು ಮುಚ್ಚುವುದು

ಚರ್ಮದ ಸೂಕ್ಷ್ಮ ರಂಧ್ರಗಳು ಮುಚ್ಚುವುದು

ನಮ್ಮ ಚರ್ಮದ ಸೂಕ್ಷ್ಮರಂಧ್ರಗಳು ಯಾವುದೋ ಕಾರಣಕ್ಕೆ ಮುಚ್ಚಿ ಒಳಗಣ ತೈಲ ಮತ್ತು ಕಲ್ಮಶ ಹೊರಬರಲು ಆಗದಿದ್ದಾಗ ಮೊಡವೆ ಮೂಡಲು ಪ್ರಾರಂಭವಾಗುತ್ತದೆ. ವಿಶೇಷವಾಗಿ ಹದಿಹರೆಯದಲ್ಲಿ ಗಲ್ಲ, ಕೆನ್ನೆಯ ಮೇಲ್ಭಾಗ ಮತ್ತು ಟೀ-ಜೋನ್ ಪ್ರದೇಶದಲ್ಲಿ ಸೂಕ್ಷ್ಮ ರಂಧ್ರಗಳು ಸಾಕಷ್ಟು ತೆರೆಯದೇ ಮೊಡವೆ ಪ್ರಾರಂಭವಾಗುತ್ತದೆ. ಇದರ ಹೊರತಾಗಿ ಒತ್ತಡ, ಗರ್ಭಾವಸ್ಥೆ, ಮಹಿಳೆಯರ ಮಾಸಿಕ ದಿನಗಳು, ಗರ್ಭ ನಿರೋಧಕ ಗುಳಿಗೆಗಳನ್ನು ಸೇವಿಸಲು ಪ್ರಾರಂಭಿಸುವುದು ಅಥವಾ ನಿಲ್ಲಿಸುವುದು ಈ ಸ್ಥಿತಿಗೆ ಇತರ ಕಾರಣಗಳಾಗಿವೆ.

ಮುಚ್ಚಿನ ಸೂಕ್ಷ್ಮರಂಧ್ರಗಳಲ್ಲಿ ತೈಲ ತುಂಬಿಕೊಳ್ಳುವುದು

ಮುಚ್ಚಿನ ಸೂಕ್ಷ್ಮರಂಧ್ರಗಳಲ್ಲಿ ತೈಲ ತುಂಬಿಕೊಳ್ಳುವುದು

ಸೂಕ್ಷ್ಮರಂಧ್ರಗಳು ಮುಚ್ಚಿದ ಬಳಿಕ ಚರ್ಮದ ಕೆಳಗಿನ ಪದರದಲ್ಲಿ ಒಸರುವ ತೈಲ ಹೊರಬರಲು ಸಾಧ್ಯವಾಗದೇ ಗಡ್ಡೆಕಟ್ಟುತ್ತದೆ. ಇದಕ್ಕೆ overactive oil glands blockage ಎಂದು ಕರೆಯಲಾಗುತ್ತದೆ.

ಪಿ. ಆಕ್ನೆ ಬ್ಯಾಕ್ಟೀರಿಯಾ

ಪಿ. ಆಕ್ನೆ ಬ್ಯಾಕ್ಟೀರಿಯಾ

ಚರ್ಮದ ಸೂಕ್ಷ್ಮರಂಧ್ರಗಳಲ್ಲಿ ತುಂಬಿಕೊಂಡ ಕೊಳೆಯಲ್ಲಿ ಕೆಲವು ಬ್ಯಾಕ್ಟೀರಿಯಾಗಳೂ ಆಶ್ರಯ ಪಡೆಯುತ್ತವೆ. ಇದರಲ್ಲಿ Propionibacterium acnes (P.acnes) ಎಂಬ ಬ್ಯಾಕ್ಟೀರಿಯಾ ತನ್ನ ಕಾಲೋನಿಯನ್ನು ವೃದ್ದಿಸಿಕೊಂಡು ಚರ್ಮದ ಒಳಗೆ ಸೋಂಕು ಹರಡಲು ಪ್ರಾರಂಭಿಸುತ್ತದೆ. ಇದು ಚರ್ಮದ ಒಳಗಣ ತೈಲದ ಸಂಯೋಜನೆಯನ್ನೇ ಬದಲಿಸಿಬಿಡುತ್ತದೆ. ಇದು ಚರ್ಮದಲ್ಲಿ ತುರಿಕೆ ಪ್ರಾರಂಭಿಸುತ್ತದೆ ಮತ್ತು ಕೀವು ತುಂಬಿಕೊಳ್ಳಲು ಕಾರಣವಾಗುತ್ತದೆ. ಇದೇ ಮೊಡವೆ.

ಗಲ್ಲದ ಮೊಡವೆಗೆ ಆನುವಂಶಿಕ ಕಾರಣಗಳು

ಗಲ್ಲದ ಮೊಡವೆಗೆ ಆನುವಂಶಿಕ ಕಾರಣಗಳು

ಗಲ್ಲದಲ್ಲಿ ಮೂಡುವ ಮೊಡವೆಗಳಿಗೆ ಆನುವಂಶಿಕವಾದ ಕಾರಣಗಳೇ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತವೆ. ಎಕೆಂದರೆ ಈ ತೊಂದರೆ ಇರುವವರ ವಂಶವಾಹಿನಿಯಲ್ಲಿ ಇದು ಇರುವುದು ಕಂಡುಬರುತ್ತದೆ. ಗಲ್ಲದ ಅಡಿ ಇರುವ ಸಬೇಶಿಯಸ್ ಗ್ರಂಥಿಗಳು ಸೂಕ್ಷ್ಮಸಂವೇದಿಯಾಗಿದ್ದು ರಸದೂತಗಳ ಪ್ರಮಾಣದಲ್ಲಿಯೂ ಏರುಪೇರು ಉಂಟುಮಾಡುತ್ತದೆ. ವಿಶೇಷವಾಗಿ ಆಂಡ್ರೋಜೆನ್ ಎಂಬ ಪುರುಷರ ದೇಹದಲ್ಲಿ ಸ್ರವಿಸುವ ರಸದೂತ ಗದ್ದದಲ್ಲಿ ಮೊಡವೆಗೆ ಕಾರಣವಾಗುತ್ತದೆ.

 ಚರ್ಮದ ಉರಿಯೂತ

ಚರ್ಮದ ಉರಿಯೂತ

ಮೊಡವೆ ಮೂಡಿದ ಸ್ಥಳದಲ್ಲಿ ಚರ್ಮ ಕೆಂಪಗಾಗುವುದು, ಊದಿಕೊಳ್ಳುವುದು, ಬಿಸಿಯಾಗುವುದು ಮತ್ತು ತುರಿಕೆ, ಕಿರಿಕಿರಿ ಎನಿಸುವುದು ಎಲ್ಲಕ್ಕೂ ಚರ್ಮದ ಅಡಿಯ ಉರಿಯೂತವೇ ಕಾರಣವಾಗಿದೆ. ಏಕೆಂದರೆ ಇದು ನಮ್ಮ ಚರ್ಮದ ಒಳಗೆ ಆಶ್ರಯ ಪಡೆದಿದ್ದ ಬ್ಯಾಕ್ಟೀರಿಯಾಗಳನ್ನು ಹೊರಹಾಕಲು ನಮ್ಮ ರೋಗ ನಿರೋಧಕ ಶಕ್ತಿ ಕೀವು ಉಂಟಾಗುವಂತೆ ಮಾಡುತ್ತದೆ. ಕೀವಿನ ಮೂಲಕ ಬ್ಯಾಕ್ಟೀರಿಯಾಗಳೂ ಹೊರಹೋಗುತ್ತವೆ.

ಜೀರ್ಣಕ್ರಿಯೆಯಲ್ಲಿ ಏರುಪೇರು

ಜೀರ್ಣಕ್ರಿಯೆಯಲ್ಲಿ ಏರುಪೇರು

ಮೊಡವೆಗಳಿಗೆ ಆಹಾರದ ಕೆಲವು ಪೋಷಕಾಂಶಗಳೂ ಕಾರಣವಾಗಿವೆ. ವಿಶೇಷವಾಗಿ ಎಣ್ಣೆ ಜಿಡ್ಡಿನ ತಿಂಡಿಗಳು. ಕರಿದ, ಹುರಿದ, ಪ್ರಾಣಿಜನ್ಯ ಕೊಬ್ಬು ಇರುವ ಆಹಾರಗಳು ಮೊಡವೆಗಳನ್ನು ಹೆಚ್ಚಿಸುತ್ತವೆ.

 
English summary

This Is Why You Get Acne on the Chin and T-Zone

Are your chin and T- zone the favourite spots of acne and pimples? It is not abnormal. These are acne prone areas and are more prone to breakouts than other parts of your face. Some people believe that oily skin is most susceptible to acne breakouts.
Subscribe Newsletter