ಮುಖದಲ್ಲಿ ಮೂಡುವ ನೆರಿಗೆಯ ಸಮಸ್ಯೆ! ಇಲ್ಲಿದೆ ನೋಡಿ ಮನೆಮದ್ದುಗಳು

By: Hemanth
Subscribe to Boldsky

ಮನುಷ್ಯ ಎಷ್ಟು ಸ್ವಾರ್ಥಿಯೆಂದರೆ ತನಗೆ ವಯಸ್ಸಾದರೂ ಅದನ್ನು ಮರೆಮಾಚಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾ ಇರುತ್ತಾನೆ. ತನಗೆ ವಯಸ್ಸಾಗಿಲ್ಲವೆನ್ನುವ ಭಾವನೆ ಆತನಲ್ಲಿ ಯಾವಾಗಲೂ ಇರುತ್ತದೆ. ಇದಕ್ಕಾಗಿ 30ರ ಹರೆಯದ ದಾಟುತ್ತಿರುವಂತೆ ಮುಖದಲ್ಲಿ ಕಂಡುಬರುವಂತಹ ವಯಸ್ಸಾಗುವ ಕೆಲವೊಂದು ಲಕ್ಷಣಗಳನ್ನು ಮರೆಮಾಚಲು ಯತ್ನಿಸುತ್ತಾನೆ. ಇದಕ್ಕಾಗಿ ಕ್ರೀಮ್‌ಗಳನ್ನು ಬಳಸುವುದು ಸಾಮಾನ್ಯವಾಗಿದೆ. ಆದರೆ ಈ ಕ್ರೀಮ್‌ಗಳಿಂದ ಮುಂದೆ ಅಡ್ಡಪರಿಣಾಮಗಳು ಇದ್ದೇ ಇದೆ.  ನೆರಿಗೆ ಬೀಳದಂತೆ ತ್ವಚೆ ರಕ್ಷಣೆ ಮಾಡುವ 9 ಜ್ಯೂಸ್

ಹಾಗಾಗಿ ಬೋಲ್ಡ್ ಸ್ಕೈ ಇಂದು ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಇರುವಂತಹ ನೈಸರ್ಗಿಕ ಸಾಮಗ್ರಿಗಳನ್ನು ಬಳಸಿಕೊಂಡು ಅಕಾಲಿಕ ನೆರಿಗೆಯನ್ನು ತೆಗೆದು ಹಾಕುವ ಪರಿಹಾರವನ್ನು ಹೇಳಿಕೊಡಲಿದೆ. ಇದನ್ನು ನಿಮಗೆ ಬೇಕಾದಾಗ ಬಳಸಿಕೊಳ್ಳಬಹುದು. ಮನೆಯಲ್ಲೇ ಇದನ್ನು ತಯಾರಿಸುವುದು ಹೇಗೆಂದು ತಿಳಿಯಲು ನೀವು ಲೇಖನವನ್ನು ಮುಂದೆ ಓದಲೇಬೇಕು... 

ಮೊಸರಿನ ಪ್ಯಾಕ್

ಮೊಸರಿನ ಪ್ಯಾಕ್

ಬೇಕಾಗುವ ಸಾಮಗ್ರಿಗಳು

*ಒಂದು ಕಪ್ ಮೊಸರು

*ತೆಂಗಿನ ಎಣ್ಣೆ

*ಆಲಿವ್ ತೈಲ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಒಂದು ಕಪ್ ಮೊಸರಿಗೆ ಎರಡು ಚಮಚ ತೆಂಗಿನ ಎಣ್ಣೆ ಮತ್ತು ಒಂದು ಚಮಚ ಆಲಿವ್ ತೈಲವನ್ನು ಮಿಶ್ರಣ ಮಾಡಿಕೊಳ್ಳಿ.

*ಈ ಮಿಶ್ರಣವನ್ನು ಫ್ರಿಡ್ಜ್ ನಲ್ಲಿ ಇಟ್ಟುಬಿಡಿ. ಸ್ವಲ್ಪ ತಣ್ಣಗಾದ ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ.

*ಮೊಸರು ಚರ್ಮದಿಂದ ಜಾರಿ ಹೋಗುವ ಕಾರಣದಿಂದಾಗಿ ಮುಖದ ಮೇಲೆ ಸರಿಯಾಗಿ ಮಸಾಜ್ ಮಾಡಿಕೊಳ್ಳಿ

*15 ನಿಮಿಷ ಕಾಲ ಮಸಾಜ್ ಮಾಡಿ.

*ಬಳಿಕ ಬಿಸಿ ನೀರಿನಿಂದ ತೊಳೆಯಿರಿ

ತೆಂಗಿನ ಹಾಲಿನ ಪ್ಯಾಕ್

ತೆಂಗಿನ ಹಾಲಿನ ಪ್ಯಾಕ್

ಬೇಕಾಗುವ ಸಾಮಗ್ರಿಗಳು

*ಒಂದು ಕಪ್ ತೆಂಗಿನ ಹಾಲು

*ಒಂದು ಚಿಟಿಕೆ ಅರಶಿನ

*ಒಂದು ಚಮಚ ಹಾಲು

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಒಂದು ಪಾತ್ರೆಗೆ ತೆಂಗಿನ ಹಾಲನ್ನು ಹಾಕಿಕೊಳ್ಳಿ. ಮನೆಯಲ್ಲೇ ತೆಂಗಿನ ಹಾಲನ್ನು ತಯಾರಿಸಿಕೊಳ್ಳಬಹುದು ಅಥವಾ ಮಾರುಕಟ್ಟೆಯಲ್ಲೂ ಲಭ್ಯವಿದೆ. ಇದಕ್ಕೆ ಒಂದು ಚಿಟಿಕೆ ಅರಶಿನ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

*ಅರಿಶಿನ ಗಟ್ಟಿಯಾಗದಂತೆ ನೋಡಿಕೊಂಡು ಕಲಸಿ.

*ಒಂದು ಚಮಚ ಹಾಲನ್ನು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

*ಹತ್ತಿ ಉಂಡೆಯನ್ನು ತೆಗೆದುಕೊಂಡು ಹಾಲಿನಲ್ಲಿ ಅದ್ದಿ ಮುಖಕ್ಕೆ ಹಚ್ಚಿಕೊಳ್ಳಿ. ಜಾರಿಹೋಗುವ ಕಾರಣದಿಂದ ಇದನ್ನು ಸರಿಯಾಗಿ ಮಸಾಜ್ ಮಾಡಿಕೊಳ್ಳಿ.

*20 ನಿಮಿಷ ಬಿಟ್ಟು ತಣ್ಣಗಿನ ನೀರಿನಿಂದ ತೊಳೆದುಕೊಳ್ಳಿ.

ಟೊಮೆಟೋ ಪ್ಯಾಕ್

ಟೊಮೆಟೋ ಪ್ಯಾಕ್

ಬೇಕಾಗುವ ಸಾಮಗ್ರಿಗಳು

*ಒಂದು ಟೊಮೆಟೊ

*ಆಲಿವ್ ತೈಲ

*ಸಾಸಿವೆ ಎಣ್ಣೆ(ಬೇಕಿದ್ದರೆ ಮಾತ್ರ)

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಒಂದು ಟೊಮೆಟೊ ತೆಗೆದುಕೊಂಡು ಅದನ್ನು ಸರಿಯಾಗಿ ಕಿವುಚಿಕೊಳ್ಳಿ. ಇದನ್ನು ಮಿಕ್ಸಿಗೆ ಹಾಕಬೇಡಿ. ಯಾಕೆಂದರೆ ಅದರಿಂದ ಟೊಮೆಟೊ ಜ್ಯೂಸ್ ಬರಬಹುದು.

*ಟೊಮೆಟೊದ ತಿರುಳಿಗೆ ಹೀಗ ಒಂದು ಚಮಚ ಆಲಿವ್ ತೈಲವನ್ನು ಸೇರಿಸಿಕೊಳ್ಳಿ.

*ಸಾಸಿವೆ ಎಣ್ಣೆಯಿಂದ ಅಲರ್ಜಿ ಇಲ್ಲವಾದರೆ ಒಂದು ಚಮಚ ಸಾಸಿವೆ ಎಣ್ಣೆಯನ್ನು ಟೊಮೆಟೊಗೆ ಸೇರಿಸಿಕೊಳ್ಳಿ.

*ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಇದರಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. 15 ನಿಮಿಷ ಬಿಟ್ಟು ಮುಖ ತೊಳೆಯಿರಿ.

 
English summary

Natural Anti-wrinkle Treatments To Prepare At Home

If you are wondering how to prepare natural anti-wrinkle treatments at home, this post can help you out. You can prepare these homemade anti-wrinkle treatments and use them as per your convenience, without fearing about any side effects...
Story first published: Thursday, March 16, 2017, 23:40 [IST]
Subscribe Newsletter