Just In
- 1 hr ago
ಆಫ್ರಿಕಾ ಸುಂದರಿ ಮುಡಿಗೇರಿದ 2019 ವಿಶ್ವ ಸುಂದರಿ ಪಟ್ಟ
- 2 hrs ago
ಹೇರ್ ಡೈ ಬಳಸಿದರೆ ಬರುವ 6 ಅಪಾಯಕಾರಿ ಕಾಯಿಲೆಗಳು
- 3 hrs ago
ಪಾರ್ಟಿ ಲುಕ್ಗೆ ಶಿಮ್ಮರಿ ಐ ಮೇಕಪ್ ಹೀಗಿರಲಿ
- 10 hrs ago
ಸೋಮವಾರದ ದಿನ ಭವಿಷ್ಯ (9-12-2019)
Don't Miss
- News
ಉಪ ಚುನಾವಣೆ; ಕೆ.ಆರ್.ಪುರದಲ್ಲಿ ಮತ್ತೆ ಬೈರತಿ ಗೆಲುವು
- Sports
ತನ್ನ 400* ದಾಖಲೆ ಮುರಿಯಲು ಈ ಇಬ್ಬರು ಭಾರತೀಯರಿಂದ ಸಾಧ್ಯ; ಬ್ರ್ಯಾನ್ ಲಾರಾ
- Automobiles
ಬರೋಬ್ಬರಿ 10 ತಿಂಗಳ ನಂತರ ಮಾರುತಿ ಸುಜುಕಿ ಕಾರು ಉತ್ಪಾದನೆಯಲ್ಲಿ ಹೆಚ್ಚಳ
- Finance
ಮಾರುಕಟ್ಟೆಯಲ್ಲಿ ಈರುಳ್ಳಿ ಡಬಲ್ ಸೆಂಚುರಿ; ಕೌನ್ ಬನೇಗಾ ಕೋಟ್ಯಧಿಪತಿ?
- Education
ECIL Recruitment 2019: 64 ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ವಾಟ್ಸಪ್ ಚಾಟ್ ಅನ್ನು PDF ಫಾರ್ಮೇಟ್ಗೆ ಕನ್ವರ್ಟ್ ಮಾಡುವುದು ಹೇಗೆ ಗೊತ್ತಾ?
- Movies
28 ದಿನದ ಬಳಿಕ ಆಸ್ಪತ್ರೆಯಿಂದ ಮನೆಗೆ ಮರಳಿದ ಲತಾ ಮಂಗೇಶ್ಕರ್
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ನಿಮಗೆ ಗೊತ್ತಾ? ಬಾಳೆಹಣ್ಣಿನ ಸಿಪ್ಪೆಯಿಂದ ಮೊಡವೆ ನಿಯಂತ್ರಿಸಬಹುದು!
ಹದಿಹರೆಯದಲ್ಲಿ ಸಾಮಾನ್ಯವಾದ ಮೊಡವೆ ಅಳಿದರೂ ಕಲೆಗಳನ್ನು ಉಳಿಸುತ್ತದೆ. ಕೆಲವರಿಗಂತೂ ಎಷ್ಟೇ ವಯಸ್ಸಾದರೂ ಇವು ಬಿಟ್ಟು ಹೋಗುವ ಮಾತನ್ನೇ ಆಡುವುದಿಲ್ಲ. American Academy of Dermatology ವಿಶ್ವವಿದ್ಯಾಲಯದ ಪ್ರಕಾರ ಚರ್ಮದಡಿಯಲ್ಲಿರುವ ಸಬೇಶಿಯಸ್ ಗ್ರಂಥಿಗಳು ಸ್ರವಿಸುವ ಎಣ್ಣೆಯ ಜಿಡ್ಡು ಸತ್ತ ಜೀವಕೋಶಗಳೊಂದಿಗೆ ಮಿಶ್ರಣಗೊಂಡಾಗ ಇದರಲ್ಲಿ ಕೊಳೆ ಹಾಗೂ ಬ್ಯಾಕ್ಟೀರಿಯಾಗಳು ಜೊತೆಗೂಡಿ ಚರ್ಮದ ಸೂಕ್ಷ್ಮರಂಧ್ರಗಳನ್ನು ಮುಚ್ಚಿ ಅಡಿಯಲ್ಲಿಯೇ ಬೆಳೆಯತೊಡಗುತ್ತವೆ. ಇದು ಮೊಡವೆಗೆ ಕಾರಣವಾಗುತ್ತದೆ.
ಬಾಳೆಹಣ್ಣಿನ ಸಿಪ್ಪೆ ಎಸೆಯಬೇಡಿ! ಇದರಿಂದ ಸಾಕಷ್ಟು ಪ್ರಯೋಜನಗಳಿವೆ...
ಬನ್ನಿ, ಮೊಡವೆಗಳನ್ನು ನೈಸರ್ಗಿಕವಾಗಿ ನಿವಾರಿಸಲು ಬಾಳೆಸಿಪ್ಪೆಯನ್ನು ಹೇಗೆ ಬಳಸಬಹುದು ಎಂಬುದನ್ನು ಒಂಬತ್ತು ವಿಧಾನಗಳ ಮೂಲಕ ಅರಿಯೋಣ. ಇದರಲ್ಲಿ ನಿಮಗೆ ಸೂಕ್ತವಾದುದನ್ನು ಆರಿಸಿಕೊಂಡು ನಿಯಮಿತವಾಗಿ ಅನುಸರಿಸುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು....

ಬಾಳೆಸಿಪ್ಪೆಯನ್ನು ನೇರವಾಗಿ ಹಚ್ಚಿಕೊಳ್ಳುವುದು
*ಚೆನ್ನಾಗಿ ಕಳಿತ ಬಾಳೆಯ ಹಣ್ಣಿನ ಸಿಪ್ಪೆಯನ್ನೆ ಎಸೆಯದೇ ಒಳಭಾಗವನ್ನು ಮುಟ್ಟದೇ ಬದಿಗೆ ತೆಗೆದಿರಿಸಿ
*ಮೊದಲು ಮುಖವನ್ನು ತಣ್ಣೀರಿನಿಂದ ಸೌಮ್ಯ ಸೋಪು ಬಳಸಿ ತೊಳೆದುಕೊಂದು ಟವೆಲ್ಲಿನಿಂದ ಒತ್ತಿಕೊಂಡು ಒಣಗಿಸಿಕೊಳ್ಳಿ.
*ಈಗ ಬಾಳೆಹಣ್ಣಿನ ಸಿಪ್ಪೆಯ ಅಡಿಭಾಗವನ್ನು ಮೊಡವೆಗಳಿರುವ ಚರ್ಮದ ಮೇಲೆ ನಯವಾಗಿ ಉಜ್ಜುತ್ತಾ ಒರೆಸಿಕೊಳ್ಳಿ.
ಹೀಗೆ ಉಜ್ಜುತ್ತಿದ್ದಂತೆಯೇ ಕೊಂಚ ಹೊತ್ತಿನಲ್ಲಿ ಸಿಪ್ಪೆಯ ಅಡಿಯ ಭಾಗ ಕೊಂಚ ಗಾಢ ವರ್ಣಕ್ಕೆ ತಿರುಗುತ್ತದೆ. ಆಗ ಇನ್ನೊಂದು ಭಾಗದಿಂದ ಒರೆಸುವುದನ್ನು ಮುಂದುವರೆಸಿ.
*ಮೊಡವೆಯ ಕೊಳೆಯನ್ನು ಹೀರಿಕೊಳ್ಳುವುದರಿಂದಲೇ ಇದು ಗಾಢವಾಗುತ್ತದೆ.
*ಸುಮಾರು ಹತ್ತು ಹದಿನೈದು ನಿಮಿಷದವರೆಗೆ ಹಲವು ಸಿಪ್ಪೆಗಳನ್ನು ಬಳಸಿ ಹೀಗೇ ಒರೆಸಿಕೊಳ್ಳಿ.
ರಾತ್ರಿ ಮಲಗುವ ಮುನ್ನ ಈ ಕ್ರಮವನ್ನು ಅನುಸರಿಸಿ. ಈಗ ಮುಖ ತೊಳೆಯದೇ ಹಾಗೇ ಪವಡಿಸಿ ಇಡಿಯ ರಾತ್ರಿ ಹಾಗೆಯೇ ಇರಲು ಬಿಡಿ.
*ಮರುದಿನ ಬೆಳಿಗ್ಗೆ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.
ಈ ವಿಧಾನವನ್ನು ಕನಿಷ್ಠ ಎರಡು ವಾರ ಕಾಲ ಅನುಸರಿಸಿ
ಸೂಚನೆ: ಒಂದು ವೇಳೆ ಸಿಪ್ಪೆ ಉಜ್ಜುವಾಗ ನೋವಾಗುತ್ತಿದೆ ಅನ್ನಿಸಿದರೆ, ಅಥವಾ ರಕ್ತ ಒಸರಿದರೆ, ಸಿಪ್ಪೆಯನ್ನು ಉಜ್ಜುವ ಬದಲು ಸಿಪ್ಪೆಯಡಿಯ ಭಾಗದ ದಾರಗಳನ್ನು ಪ್ರತ್ಯೇಕಿಸಿ ಚಮಚದಿಂದ ಜಜ್ಜಿ ಲೇಪನವಾಗಿಸಿ ಈ ಲೇಪನವನ್ನು ದಪ್ಪನಾಗಿ ಹಚ್ಚಿಕೊಳ್ಳಿ.
ಸ್ವಲ್ಪ ಹುಷಾರ್, ಇದು ಅಂತಿಂಥ ಮೊಡವೆ ಅಲ್ಲ..!

ಬಾಳೆಸಿಪ್ಪೆ, ಓಟ್ಸ್ ರವೆ ಹಾಗೂ ಸಕ್ಕರೆ
ಓಟ್ಸ್ ರವೆ ಉತ್ತಮವಾದ ಸತ್ತಜೀವಕೋಶ ನಿವಾರಕವಾಗಿದೆ. ಹಾಗೂ ಹೆಚ್ಚಿನ ಎಣ್ಣೆಯಂಶವನ್ನು ಹೀರಿಕೊಂಡು ಮೊಡವೆಗಳು ಮಾಗಲು ನೆರವಾಗುತ್ತದೆ. ಸಕ್ಕರೆಯೂ ಈ ಕಾರ್ಯಕ್ಕೆ ನೆರವಾಗುವುದರ ಜೊತೆಗೇ ಸೂಕ್ಷ್ಮರಂಧ್ರಗಳನ್ನು ತೆರೆಯಲೂ ನೆರವಾಗುತ್ತದೆ.
ವಿಧಾನ:
*ಒಂದು ಬಾಳೆಯಹಣ್ಣಿನ ಸಿಪ್ಪೆ, ಅರ್ಧ ಕಪ್ ಓಟ್ಸ್ ರವೆ, ಮೂರು ದೊಡ್ಡ ಚಮಚ ಸಕ್ಕರೆ ಇಷ್ಟನ್ನೂ ನುಣ್ಣಗೆ ಅರೆದು ನಯವಾದ ಲೇಪನ ತಯಾರಿಸಿ.
*ಈ ಲೇಪನವನ್ನು ನಯವಾದ ಮಸಾಜ್ ನೊಂದಿಗೆ ಮೊಡವೆಗಳಿರುವ ಭಾಗಕ್ಕೆ ಹಚ್ಚಿ.
ಸುಮಾರು ಹತ್ತರಿಂದ ಹದಿನೈದು ನಿಮಿಷ ಒಣಗಲು ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡು ಮೃದುವಾದ ಟವೆಲ್ಲಿನಿಂದ ಒತ್ತಿಕೊಂಡು ಒರೆಸಿಕೊಳ್ಳಿ.
*ಈ ವಿಧಾನದಿಂದ ಚರ್ಮ ಒಣಗುವ ಕಾರಣ ಒರೆಸಿಕೊಂಡ ಬಳಿಕ ಸೌಮ್ಯ ತೇವಕಾರಕ (ಮಾಯಿಸ್ಚರೈಸರ್) ಬಳಸಿ.
*ಒಂದು ವೇಳೆ ನಿಮ್ಮ ಚರ್ಮ ತೀರಾ ಒಣಚರ್ಮವಾಗಿದ್ದರೆ ಈ ವಿಧಾನ ಸೂಕ್ತವಲ್ಲ.
*ವಾರಕ್ಕೆ ಎರಡರಿಂದ ಮೂರು ಬಾರಿ ಈ ವಿಧಾನ ಅನುಸರಿಸಿದರೆ ಸಾಕು.

ಬಾಳೆಸಿಪ್ಪೆ ಮತ್ತು ಅರಿಶಿನ
*ಅರಿಶಿನದಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶ ಉತ್ತಮ ಉರಿಯೂತ ನಿವಾರಕವಾಗಿದ್ದು ಮೊಡವೆಗಳ ಚಿಕಿತ್ಸೆಯಲ್ಲಿ ಪವಾಡಗಳನ್ನೇ ಮಾಡುತ್ತದೆ. ಅಲ್ಲದೇ ಮೊಡವೆಗಳು ಮಾಗಿದ ಬಳಿಕ ಉಳಿಯುವ ಕಲೆಗಳನ್ನೂ ನಿವಾರಿಸಲು ನೆರವಾಗುತ್ತದೆ.
*ಮೊಡವೆಗಳ ನಿವಾರಣೆಗೆ ಬಾಳೆಸಿಪ್ಪೆ ಹಾಗೂ ಅರಿಶಿನ ಉತ್ತಮ ಆಯ್ಕೆಯಾಗಿದೆ. ಕೀವು ಭರಿತ ಕೆಂಪು ಮೊಡವೆ ಹಾಗೂ ಹಳದಿ ತುದಿಯ ಆಳವಾದ ಮೊಡವೆಗೆ ಈ ಚಿಕಿತ್ಸೆ ಅತ್ಯುತ್ತಮವಾಗಿದೆ.

ಬಾಳೆಸಿಪ್ಪೆ ಮತ್ತು ಅರಿಶಿನ
*ಮೊದಲು ಒಂದು ಬಾಳೆಯ ಹಣ್ಣಿನ ಸಿಪ್ಪೆಯನ್ನು ಚಿಕ್ಕದಾಗಿ ಹೆಚ್ಚಿ ನುಣ್ಣಗೆ ಅರೆಯಿರಿ
ಸರಿಸುಮಾರು ಇದಕ್ಕೆ ಸಮಪ್ರಮಾಣದ ಅರಿಶಿನ ಪುಡಿಯನ್ನು ಬೆರೆಸಿ ಮಿಶ್ರಣ ಮಾಡಿ. ತೊಟ್ಟು ತೊಟ್ಟಾಗಿ ನೀರನ್ನು ಬಿಡುತ್ತಾ ಮುಖಕ್ಕೆ ಹಚ್ಚಿಕೊಳ್ಳಲು ಸಾಧ್ಯವಾಗುವಷ್ಟು ದಪ್ಪನಾಗಿಸಿ.
*ಈ ಲೇಪನವನ್ನು ದಪ್ಪನಾಗಿ ಮೊಡವೆಗಳ ಮೇಲೆ ಹಚ್ಚಿ ಹದಿನೈದು ನಿಮಿಷ ಒಣಗಲು ಬಿಡಿ
ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ ಹಾಗೂ ಮೃದು ಟವೆಲ್ಲಿನಿಂದ ಒತ್ತಿಕೊಂಡು ಒರೆಸಿಕೊಳ್ಳಿ.
*ಒಂದು ವೇಳೆ ಒರೆಸಿಕೊಂಡ ಬಳಿಕ ಚರ್ಮ ಒಣಗಿದೆ ಎಂದೆನ್ನಿಸಿದರೆ ಕೊಂಚ ಎಣ್ಣೆರಹಿತ ತೇವಕಾರಕ ಅಥವಾ ಮಾಯಿಶ್ಚರೈಸರ್ ಸವರಿಕೊಳ್ಳಿ.
*ಈ ವಿಧಾನವನ್ನು ಪ್ರತಿ ದಿನ ಬಿಟ್ಟು ದಿನ ಅನುಸರಿಸಿದರೆ ಶೀಘ್ರವೇ ಮೊಡವೆಗಳು ಗುಣವಾಗುತ್ತವೆ.

ಬಾಳೆಸಿಪ್ಪೆ ಮತ್ತು ಲಿಂಬೆ
*ಒಂದು ವೇಳೆ ಮೊಡವೆಗಳು ಸೀಳುತ್ತಿದ್ದರೆ ಈ ವಿಧಾನ ಉತ್ತಮವಾಗಿದೆ.
ಮೊದಲು ಒಂದು ಬಾಳೆಯ ಹಣ್ಣಿನ ಸಿಪ್ಪೆಯನ್ನು ಚಿಕ್ಕದಾಗಿ ಹೆಚ್ಚಿ ನುಣ್ಣಗೆ ಅರೆಯಿರಿ. ಸುಮಾರು ಸಮಪ್ರಮಾಣದ ಲಿಂಬೆರಸವನ್ನು ಬೆರೆಸಿ ಲೇಪನವನ್ನು ತಯಾರಿಸಿ.
*ಈ ಲೇಪನವನ್ನು ನಯವಾಗಿ ಮಸಾಜ್ ಮಾಡುತ್ತಾ ಮೊಡವೆಗಳ ಮೇಲೆ ಹತ್ತಿಯುಂಡೆಯೊಂದನ್ನು ಬಳಸಿ ಹಚ್ಚಿಕೊಳ್ಳಿ.
*ಸುಮಾರು ಹದಿನೈದು ನಿಮಿಷದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡು ಮೃದು ಟವೆಲ್ಲಿನಿಂದ ಒತ್ತಿಕೊಂಡು ಒರೆಸಿಕೊಳ್ಳಿ.
*ಉತ್ತಮ ಪರಿಣಾಮಕ್ಕಾಗಿ ನಿಯಮಿತವಾಗಿ ಬಳಸಿ. ಉರಿ ಅನ್ನಿಸಿದರೆ ಪ್ರತಿದಿನ ಬೇಡ, ದಿನ ಬಿಟ್ಟು ದಿನ ಅಥವಾ ಮೂರು ದಿನಕ್ಕೊಮ್ಮೆ ಅನುಸರಿಸಿ.

ಅಡುಗೆ ಸೋಡಾ ಮತ್ತು ಬಾಳೆಸಿಪ್ಪೆ
*ಒಂದು ವೇಳೆ ಮೊಡವೆಗಳಿಂದ ಹೆಚ್ಚೇ ಅನ್ನಿಸುವಷ್ಟು ಎಣ್ಣೆಯಪಸೆ ಒಸರುತ್ತಿದ್ದರೆ ಈ ವಿಧಾನ ಉತ್ತಮವಾಗಿದೆ. ಅಡುಗೆಸೋಡಾ ಈ ಎಣ್ಣೆಯಂಶವನ್ನು ಹೀರಿಕೊಳ್ಳುತ್ತದೆ ಹಾಗೂ ಮೊಡವೆಗಳು ಮಾಗಿದ ಬಳಿಕ ಕಲೆ ಉಳಿಯದಿರದಂತೆ ನೋಡಿಕೊಳ್ಳುತ್ತದೆ.
*ಒಂದು ಚೆನ್ನಾಗಿ ಹಣ್ಣಾದ ಬಾಳೆಹಣ್ಣಿನ ಸಿಪ್ಪೆಯನ್ನು ಚಿಕ್ಕದಾಗಿ ಕೊಚ್ಚಿ ಅರೆದು ನುಣ್ಣಗಾಗಿಸಿ.
*ಒಂದು ದೊಡ್ಡ ಚಮಚದಷ್ಟು ಈ ಲೇಪನಕ್ಕೆ ಸುಮಾರು ಅರ್ಧ ದೊಡ್ಡಚಮಚ ಅಡುಗೆ ಸೋಡಾ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
ಮುಖಕ್ಕೆ ಹಚ್ಚಿಕೊಳ್ಳಲು ಅಗತ್ಯವೆನಿಸಿದಷ್ಟು ನೀರು ಬೆರೆಸಿ.
*ಈಗ ಹತ್ತಿಯುಂಡೆಯೊಂದನ್ನು ಬಳಸಿ ಮೊಡವೆಗಳ ಮೇಲೆ ವೃತ್ತಾಕಾರದಲ್ಲಿ ಈ ಲೇಪವನ್ನು ಹೆಚ್ಚಿನ ಒತ್ತಡವಿಲ್ಲದೇ ಒರೆಸಿಕೊಳ್ಳಿ.
ಎರಡು ನಿಮಿಷಗಳಿಗಿಂತ ಹೆಚ್ಚು ಈ ಲೇಪನವನ್ನು ಮುಖದ ಮೇಲೆ ಇರಿಸಬಾರದು. ಇದು ತೀರಾ ಪ್ರಬಲವಾದುದರಿಂದ ಚರ್ಮವನ್ನು ಸುಡಬಹುದು.
*ಎರಡು ನಿಮಿಷಗಳಾದ ತಕ್ಷಣ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
*ಚರ್ಮ ಒಣಗಿದೆ ಅನ್ನಿಸಿದರೆ ತೇವಕಾರಕ ದ್ರಾವಣವನ್ನು ಕೊಂಚ ಹಚ್ಚಿಕೊಳ್ಳಿ.
*ದಿನಕ್ಕೊಂದು ಬಾರಿಯಂತೆ ಕೇವಲ ಒಂದು ವಾರದವರೆಗೆ ಅನುಸರಿಸಿ
ಸೂಚನೆ: ಅಡುಗೆ ಸೋಡಾ ಬದಲು ಬೇಕಿಂಗ್ ಪೌಡರ್ ಸಹಾ ಬಳಸಬಹುದು.

ಬಾಳೆಸಿಪ್ಪೆ ಹಾಗೂ ಜೇನು
*ಚರ್ಮದ ಪುನಃಶ್ಚೇತನಕ್ಕೆ ಜೇನಿನಲ್ಲಿ ಹಲವು ಪೋಷಕಾಂಶಗಳಿವೆ.
ಮೊದಲು ಒಂದು ಚೆನ್ನಾಗಿ ಹಣ್ಣಾದ ಬಾಳೆಹಣ್ಣಿನ ಸಿಪ್ಪೆಯನ್ನು ಚಿಕ್ಕದಾಗಿ ಕೊಚ್ಚಿ ಅರೆದು ನುಣ್ಣಗಾಗಿಸಿ.
*ಒಂದು ದೊಡ್ಡ ಚಮಚ ಈ ಲೇಪನದೊಂದಿಗೆ ಅರ್ಧ ಚಿಕ್ಕ ಚಮಚ ಜೇನು ಬೆರೆಸಿ ಮಿಶ್ರಣ ಮಾಡಿ.
*ಈ ಲೇಪನವನ್ನು ಸುಮಾರು ಹದಿನೈದು ಇಪ್ಪತ್ತು ನಿಮಿಷಗಳವರೆಗೆ ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ.
ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡು ಮೃದು ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ.
*ಚರ್ಮ ಒಣಗಿದೆ ಅನ್ನಿಸಿದರೆ ತೇವಕಾರಕ ದ್ರಾವಣವನ್ನು ಕೊಂಚ ಹಚ್ಚಿಕೊಳ್ಳಿ.
*ಸಾಮಾನ್ಯ ಗಾತ್ರದ ಮೊಡವೆಗಳಿಗೆ ಈ ವಿಧಾನ ಸೂಕ್ತವಾಗಿದ್ದು ಈ ವಿಧಾನವನ್ನು ಪ್ರತಿದಿನ ಅನುಸರಿಸಿ.

ಬಾಳೆಸಿಪ್ಪೆ ಹಾಗೂ ಹಸಿಹಾಲು
*ಹೆಚ್ಚು ಎಣ್ಣೆಯೂ ಅಲ್ಲದ, ಒಣಗಿಯೂ ಇಲ್ಲದ ಚರ್ಮದದವರಿಗೆ ಈ ವಿಧಾನ ಸೂಕ್ತವಾಗಿದೆ.
*ಮೊದಲು ಮುಖವನ್ನು ತಣ್ಣೀರಿನಿಂದ ತೊಳೆದುಕೊಂದು ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ
ಕೊಂಚ ಹಸಿಹಾಲನ್ನು ಹಸ್ತದ ಮೇಲೆ ತೆಗೆದುಕೊಂಡು ಬೆರಳುಗಳಿಂದ ಹಸಿಹಾಲನ್ನು ನಯವಾಗಿ ಮಸಾಜ್ ಮಾಡುತ್ತಾ ವೃತ್ತಾಕಾರದಲ್ಲಿ ಹಚ್ಚಿಕೊಳ್ಳಿ. ಒಂದು ಹತ್ತಿಯುಂಡೆಯನ್ನು ಬಳಸಿ ಹೆಚ್ಚುವರಿ ಹಾಲನ್ನು ಹೀರಿಕೊಳ್ಳುವಂತೆ ಮಾಡಿ.
*ಈಗ ಬಾಳೆಸಿಪ್ಪೆಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಅಡಿಯಭಾಗದಿಂದ ಮೊಡವೆಗಳ ಮೇಲೆ ನಯವಾಗಿ ಉಜ್ಜಿಕೊಳ್ಳಿ.
*ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಉಜ್ಜಿಕೊಳ್ಳುತ್ತಾ ಸಿಪ್ಪೆ ಅಡಿಯ ಭಾಗ ಕಪ್ಪಗಾಗುವವರೆಗೆ ಅಥವಾ ಸುಮಾರು ಇಪ್ಪತ್ತು ನಿಮಿಷಗಳವೆರೆಗೆ ಮುಂದುವರೆಸಿ. ಬಳಿಕ ಈ ಲೇಪನವನ್ನು ಸುಮಾರು ಇಪ್ಪತ್ತು ನಿಮಿಷಗಳವರೆಗೆ ಹಾಗೇ ಒಣಗಲು ಬಿಡಿ.
*ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡು ಮೃದು ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ.
ಚರ್ಮ ಒಣಗಿದೆ ಅನ್ನಿಸಿದರೆ ತೇವಕಾರಕ ದ್ರಾವಣವನ್ನು ಕೊಂಚ ಹಚ್ಚಿಕೊಳ್ಳಿ.
*ನಿಯಮಿತವಾಗಿ ಈ ವಿಧಾನವನ್ನು ಅನುಸರಿಸುತ್ತಾ ಉತ್ತಮ ಫಲಿತಾಂಶ ಪಡೆಯುವವರೆಗೆ ಮುಂದುವರೆಸಿ.

ಬಾಳೆಸಿಪ್ಪೆ ಹಾಗೂ ಸೇಬಿನ ಶಿರ್ಕಾ (Apple Cider Vinegar)
*ಚಿಕ್ಕದಾಗಿ ಮುಖವಿಡೀ ಹರಡಿಕೊಳ್ಳುವ ಮೊಡವೆಗಳಿಗೆ ಇದು ಉತ್ತಮ ವಿಧಾನವಾಗಿದೆ. ಸೇಬಿನ ಶಿರ್ಕಾದಲ್ಲಿರುವ ಉರಿಯೂತ ನಿವಾರಕ, ಪ್ರತಿಜೀವಕ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣ ಮೊಡವೆಗಳನ್ನು ನಿವಾರಿಸಲು ನೆರವಾಗುತ್ತದೆ.
*ಮೊದಲು ಒಂದು ಚೆನ್ನಾಗಿ ಹಣ್ಣಾದ ಬಾಳೆಹಣ್ಣಿನ ಸಿಪ್ಪೆಯನ್ನು ಚಿಕ್ಕದಾಗಿ ಕೊಚ್ಚಿ ಅರೆದು ನುಣ್ಣಗಾಗಿಸಿ.
*ಒಂದು ದೊಡ್ಡ ಚಮಚ ಈ ಲೇಪನದೊಂದಿಗೆ ಅರ್ಧ ಚಿಕ್ಕ ಚಮಚ ಸೇಬಿನ ಶಿರ್ಕಾ ಬೆರೆಸಿ ಮಿಶ್ರಣ ಮಾಡಿ.
*ಈ ಮಿಶ್ರಣವನ್ನು ಮೊಡವೆಗಳಿರುವ ಭಾಗಕ್ಕೆ ಹಚ್ಚಿ ಹತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.
*ದಿನಕ್ಕೊಂದು ಬಾರಿ ಈ ವಿಧಾನ ಅನುಸರಿಸುವ ಮೂಲಕ ಮೊಡವೆಗಳು ಶೀಘ್ರವೇ ಗುಣವಾಗುತ್ತದೆ.

ಬಾಳೆಸಿಪ್ಪೆ ಹಾಗೂ ಲೋಳೆಸರ
ಲೋಳೆಸರ ಒಂದು ನೈಸರ್ಗಿಕ ಬ್ಯಾಕ್ಟೀರಿಯಾ ನಿವಾರಕ, ಉರಿಯೂತ ನಿವಾರಕ, ಪ್ರತಿಜೀವಕವಾಗಿದ್ದು ಉರಿಶಮನಮಾಡುವ ಗುಣಗಳನ್ನೂ ಹೊಂದಿದೆ. ಈ ವಿಧಾನ ದೊಡ್ಡದಾದ ಹಾಗೂ ಭಾರೀ ನೋವು ಕೊಡುವ ಮೊಡವೆಗಳಿಗೆ ಸೂಕ್ತವಾಗಿದೆ.
*ಒಂದು ಲೋಳೆಸರದ ಕೋಡನ್ನು ಸೀಳಿ ಒಳಗಿನ ತಿರುಳನ್ನು ಸಂಗ್ರಹಿಸಿ.
*ಸಮಪ್ರಮಾಣದಲ್ಲಿ ಬಾಳೆಸಿಪ್ಪೆ ಹಾಗೂ ಈ ತಿರುಳನ್ನು ಮಿಶ್ರಣ ಮಾಡಿ ಬ್ಲೆಂಡರಿನಲ್ಲಿ ಎರಡು ನಿಮಿಷ ನುಣ್ಣಗೆ ಅರೆಯಿರಿ.
*ಈ ಲೇಪನವನ್ನು ಮೊಡವೆಗಳ ಮೇಲೆ ದಪ್ಪನಾಗಿ ಹಚ್ಚಿ ಸುಮಾರು ಅರ್ಧ ಘಂಟೆ ಪವಡಿಸಿ.
*ಬಳಿಕ ತಣ್ಣೀರಿನಿಂದ ತೊಳೆದುಕೊಂಡು ಮೃದು ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ.
*ಮೊಡವೆಗಳು ತೀರಾ ದೊಡ್ಡದಿದ್ದರೆ ದಿನಕ್ಕೆರಡು ಬಾರಿ, ಇಲ್ಲದಿದ್ದರೆ ದಿನಕ್ಕೊಂದು ಬಾರಿ ಮೊಡವೆಗಳು ಹೋಗುವವರೆಗೂ ಅನುಸರಿಸಿ.