For Quick Alerts
ALLOW NOTIFICATIONS  
For Daily Alerts

ತ್ವಚೆಯ ಕೋಮಲತೆಗೆ 'ಅರಿಶಿನ' ಫೇಸ್ ಸ್ಕ್ರಬ್

ಅರಿಶಿನ ಮತ್ತು ಇತರ ಉತ್ಪನ್ನಗಳಿಂದ ತಯಾರಿಸಿರುವ ಫೇಸ್ ಸ್ಕ್ರಬ್ ಕುರಿತಾದ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಈ ಸ್ಕ್ರಬ್ ತಯಾರಿಯನ್ನು ನಿಮಗೆ ಸರಳವಾಗಿ ಸಿದ್ಧಪಡಿಸಬಹುದಾಗಿದೆ.

By Jaya Subramanya
|

ಸೌಂದರ್ಯದ ಹೆಚ್ಚಿನ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಉತ್ತಮ ಪರಿಹಾರವಿದೆ ಎಂಬುದು ಹಿಂದಿನ ಕಾಲದಿಂದಲೂ ನಂಬಿಕೊಂಡು ಬಂದಿರುವ ಸಂಗತಿಯಾಗಿದೆ. ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕ ಉತ್ಪನ್ನಗಳಿಗಿಂತಲೂ ಈ ಆಯುರ್ವೇದ ಅಂತೆಯೇ ನಿಸರ್ಗದ ಉತ್ಪನ್ನಗಳು ಅತ್ಯುತ್ತಮ ಪರಿಹಾರವನ್ನು ನೀಡಲಿದೆ.

besan

ನಿಸರ್ಗ ಉತ್ಪನ್ನಗಳಲ್ಲಿ ಒಂದೆನಿಸಿರುವ ಅರಿಶಿನವು ನಿಮ್ಮ ಮುಖದ ಸೌಂದರ್ಯವನ್ನು ವೃದ್ಧಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಈ ಉತ್ಪನ್ನಗಳಿಂದ ಮಾಡುವ ಸ್ಕ್ರಬ್ ನಿಮ್ಮ ಮುಖದ ಕಾಂತಿಹೀನತೆಯನ್ನು ನಿವಾರಿಸಿ ಹೊಳಪನ್ನು ಉಂಟುಮಾಡುತ್ತದೆ ಅಂತೆಯೇ ಮುಖದಲ್ಲಿರುವ ಕೆಟ್ಟ ಅಂಶಗಳನ್ನು ದೂರಮಾಡುತ್ತದೆ.

ಅರಿಶಿನ ಮತ್ತು ಇತರ ಉತ್ಪನ್ನಗಳಿಂದ ತಯಾರಿಸಿರುವ ಫೇಸ್ ಸ್ಕ್ರಬ್ ಕುರಿತಾದ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಈ ಸ್ಕ್ರಬ್ ತಯಾರಿಯನ್ನು ನಿಮಗೆ ಸರಳವಾಗಿ ಸಿದ್ಧಪಡಿಸಬಹುದಾಗಿದೆ. ಹಾಗಿದ್ದರೆ ಬನ್ನಿ ಈ ಸ್ಕ್ರಬ್ ಅನ್ನು ಮನೆಯಲ್ಲಿಯೇ ಅತಿ ಸರಳವಾಗಿ ತಯಾರಿಸುವುದು ಹೇಗೆ ಎಂಬುದನ್ನು ಕಂಡುಕೊಳ್ಳೋಣ. ಚಿನ್ನದ ದೇವತೆ 'ಅರಿಶಿನದ' ಸೌಂದರ್ಯ ಗುಣಗಳು

ಬೇಕಾಗಿರುವ ಸಾಮಾಗ್ರಿಗಳು
ಅರಿಶಿನ, ಹಾಲಿನ ಕೆನೆ (ಮಿಲ್ಕ್ ಕ್ರೀಮ್) ಕಡಲೆ ಹಿಟ್ಟು ಮತ್ತು ಗುಲಾಬಿ ಎಸಳು

ಮಾಡುವ ವಿಧಾನ
ಕಡಲೆಹಿಟ್ಟು, ಅರಿಶಿನ, ಮಿಲ್ಕ್ ಕ್ರೀಮ್ ಅನ್ನು ಒಟ್ಟಾಗಿ ಬೆರೆಸಿಕೊಂಡು ದಪ್ಪನೆಯ ಪೇಸ್ಟ್ ತಯಾರಿಸಿ ನಂತರ, ಈ ಮಿಶ್ರಣಕ್ಕೆ ಗುಲಾಬಿ ದಳವನ್ನು ಸೇರಿಸಿ. ಇದರಿಂದ ನಿಮ್ಮ ಸ್ಕ್ರಬ್ ಸುವಾಸನೆಯಿಂದ ಕೂಡಿರುತ್ತದೆ

ಸ್ಕ್ರಬ್‌ನಲ್ಲಿ ಬಳಸಿರುವ ಸಾಮಾಗ್ರಿಗಳ ಪ್ರಯೋಜನಗಳು
ಅರಿಶಿನವು ಮುಖದಲ್ಲಿ ಕಮಾಲನ್ನೇ ಉಂಟುಮಾಡಲಿದೆ. ಇದು ಉತ್ಕರ್ಷಣ ನಿರೋಧಿ ಅಂಶಗಳನ್ನು ಪಡೆದುಕೊಂಡಿದ್ದು, ತ್ವಚೆಯಲ್ಲಿ ವರ್ಣದ್ರವ್ಯಗಳ ನಿವಾರಣೆಗೆ ಸಹಾಯ ಮಾಡಲಿದೆ. ಇದು ಮೊಡವೆ ಮತ್ತು ಕಲೆಗಳ ನಿವಾರಣೆಯನ್ನು ಮಾಡಲಿದೆ. ಮುಖಕ್ಕೆ ಹೊಳೆಯುವ ಕಾಂತಿಯನ್ನು ಇದು ನೀಡಲಿದ್ದು, ತ್ವಚೆಯ ಕಂದುಬಣ್ಣಕ್ಕೆ ಉತ್ತಮ ಉಪಚಾರವನ್ನು ಇದು ಮಾಡಲಿದೆ. ಮನೆ ಔಷಧಿ: ಚಿನ್ನದ ದೇವತೆ ಅರಿಶಿನದ ಚಿನ್ನದಂತಹ ಗುಣಗಳು

ಕಡಲೆಹಿಟ್ಟು ಮುಖದ ಕಾಂತಿಯನ್ನು ಇಮ್ಮಡಿಗೊಳಿಸುವಲ್ಲಿ ನೆರವನ್ನು ನೀಡಲಿದೆ. ಇದು ತ್ವಚೆಯಲ್ಲಿರುವ ಮೃತ ಕೋಶಗಳನ್ನು ನಿವಾರಿಸಲಿದ್ದು ಮುಖಕ್ಕೆ ತಾಜಾ ಮತ್ತು ಹೊಳಪಿನ ಕಾಂತಿಯನ್ನು ನೀಡಲಿದೆ. ಮಿಲ್ಕ್ ಕ್ರೀಮ್‌ನಲ್ಲಿ ಲ್ಯಾಕ್ಟಿಕ್ ಆಸಿಡ್ ಇದ್ದು ತ್ವಚೆಗೆ ಮಾಯಿಶ್ಚರೈಸ್ ಅನ್ನು ಉಂಟುಮಾಡಲಿದೆ. ತೊಗಟೆಯು ತ್ವಚೆಯನ್ನು ಡ್ರೈಮಾಡುವುದಿಲ್ಲ ಎಂಬುದಾಗಿ ಖಾತ್ರಿಪಡಿಸಿ.

ಸ್ಕ್ರಬ್‌ನಲ್ಲಿ ಗುಲಾಬಿ ಎಸಳನ್ನು ಸೇರಿಸುವುದರಿಂದ ಇದನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿ ಮಾರ್ಪಡಿಸಬಹುದಾಗಿದೆ. ಇದು ಉತ್ತಮ ಸುವಾಸನೆಯನ್ನು ಉಂಟುಮಾಡಲಿದ್ದು, ಸ್ಕ್ರಬ್ ಅನ್ನು ಹೆಚ್ಚು ನಯ ಮತ್ತು ಸುವಾಸನೆಯಿಂದ ಒಳಗೊಂಡಿರುವಂತೆ ಮಾಡಲಿದೆ.

English summary

How To Make Turmeric Face Scrub

Turmeric is quite honestly one of the best ingredients discovered in the Indian subcontinent. It has health as well as skin benefits. So today, we will let you know of an easy turmeric face scrub recipe. Scrubs, as we know, help remove the dead skin cells from the face. This is really important, as the dead skin can make your face look dull, while scrubbing can make your face look healthy and give a nice flush to your skin.
X
Desktop Bottom Promotion