ಒಣ ಚರ್ಮ ಸಮಸ್ಯೆಗೆ ನೈಸರ್ಗಿಕ ಪರಿಹಾರ-ಪ್ರಯತ್ನಿಸಿ ನೋಡಿ

By: hemanth
Subscribe to Boldsky

ಚರ್ಮವನ್ನು ನೋಡಿ ಆರೋಗ್ಯವನ್ನು ಹೇಳಬಹುದಂತೆ. ಚರ್ಮ ಕಾಂತಿಯುತವಾಗಿದ್ದರೆ ಆತನು ಆರೋಗ್ಯವಾಗಿದ್ದಾನೆಂದರ್ಥ. ಕಾಂತಿಯುತ ಚರ್ಮವು ಸೌಂದರ್ಯವನ್ನು ಪ್ರತಿಬಿಂಬಿಸುವಲ್ಲೂ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದರಿಂದಾಗಿ ಪ್ರತಿಯೊಬ್ಬರು ಚರ್ಮದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. ಚರ್ಮವನ್ನು ಆರೋಗ್ಯವಾಗಿಟ್ಟುಕೊಂಡರೆ ಆಗ ಸೌಂದರ್ಯವು ಎದ್ದು ಕಾಣುತ್ತಾ ಇರುತ್ತದೆ.

ಆದರೆ ಹದಿಹರೆಯದವರಿಂದ ಹಿಡಿದು ಮಧ್ಯವಯಸ್ಕರ ತನಕ ಪ್ರತಿಯೊಬ್ಬರನ್ನೂ ಒಣ ಚರ್ಮದ ಸಮಸ್ಯೆಯು ಕಾಡುತ್ತಾ ಇರುತ್ತದೆ. ಒಣ ಚರ್ಮವಿದ್ದವರಿಗೆ ಅದನ್ನು ಆರೈಕೆ ಮಾಡುವುದು ತುಂಬಾ ಕಷ್ಟಕರ ಕೆಲಸವಾಗುತ್ತದೆ. ಯಾಕೆಂದರೆ ಒಣ ಚರ್ಮವು ಪ್ರತಿಯೊಂದು ಋತುವಿನಲ್ಲೂ ಸಮಸ್ಯೆಯಾಗಿ ಕಾಡುತ್ತದೆ.

ಅದರಲ್ಲೂ ಚಳಿಗಾಲದಲ್ಲಿ ಇದರ ಸಮಸ್ಯೆ ಅತಿಯಾಗಿರುತ್ತದೆ. ಶೀತ ಗಾಳಿಯು ಚರ್ಮದಲ್ಲಿ ಇರುವಂತಹ ತೇವಾಂಶವನ್ನು ಹೀರಿಕೊಂಡು ಒಣ, ಕೆಂಪು ಹಾಗೂ ತುರಿಕೆ ಉಂಟು ಮಾಡುವಂತಹ ಚರ್ಮವನ್ನು ನಿರ್ಮಿಸುತ್ತದೆ. ಒಣ ಚರ್ಮವನ್ನು ಆರೈಕೆ ಮಾಡುವುದು ತುಂಬಾ ಕಷ್ಟಕರ ಕೆಲಸವಾಗಿದೆ. ಒಣ ತ್ವಚೆಗೆ ಅತ್ಯುತ್ತಮವಾದ ಮಾಯಿಶ್ಚರೈಸರ್

ಆದರೆ ಸಮಸ್ಯೆ ಮತ್ತಷ್ಟು ಹದಗೆಡುವ ಮೊದಲು ಅದಕ್ಕೊಂದು ಚಿಕಿತ್ಸೆ ಮಾಡಿಕೊಳ್ಳುವುದು ಒಳ್ಳೆಯದು. ಒಣ ಚರ್ಮದ ಸಮಸ್ಯೆಯನ್ನು ಎದುರಿಸುವವರು ಕೆಲವೊಂದು ಮನೆಮದ್ದನ್ನು ಬಳಸಿಕೊಂಡು ಸಮಸ್ಯೆಯನ್ನು ನಿವಾರಿಸುವುದು ಹೇಗೆಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಒಣತ್ವಚೆಗೆ ಬೇಕು ಸೂಕ್ತ ರೀತಿಯ ಮನೆಮದ್ದಿನ ಉಪಚಾರ

ಪಪ್ಪಾಯಿ

ಪಪ್ಪಾಯಿ

ಒಣ ಚರ್ಮಕ್ಕೆ ಪಪ್ಪಾಯಿ ಅತ್ಯುತ್ತಮ ನೈಸರ್ಗಿಕ ಮದ್ದಾಗಿದೆ. ಇದು ನಿಸ್ತೇಜ ಹಾಗೂ ಒಣ ಚರ್ಮಕ್ಕೆ ತುಂಬಾ ಪರಿಣಾಮಕಾರಿ. ಪಪ್ಪಾಯಿಯಲ್ಲಿ ಇರುವಂತಹ ವಿಟಮಿನ್ ಎ ಚರ್ಮದ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಹಸಿ ಪಪ್ಪಾಯಿಯನ್ನು ತೆಗೆದುಕೊಂಡು ಅದನ್ನು ಮುಖದ ಮೇಲೆ ಸ್ಕ್ರಬ್ ಮಾಡಿ. ಇದನ್ನು ನಿಯಮಿತವಾಗಿ ವೃತ್ತಾಕಾರದಲ್ಲಿ ಮಾಡಿ. 10-15 ನಿಮಿಷ ಕಾಲ ನಿರಂತರವಾಗಿ ಮಾಡಿ. ಬಳಿಕ ತಂಪಾದ ನೀರಿನಿಂದ ಮುಖ ತೊಳೆಯಿರಿ. ಪಪ್ಪಾಯಿ ಹಣ್ಣಿನ ಫೇಸ್ ಪ್ಯಾಕ್-ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ಆಲಿವ್ ತೈಲ

ಆಲಿವ್ ತೈಲ

ಆ್ಯಂಟಿ ಆಕ್ಸಿಡೆಂಟ್ ಹಾಗೂ ಆರೋಗ್ಯಕರ ಕೊಬ್ಬಿನಾಮ್ಲವನ್ನು ಹೊಂದಿರುವ ಆಲಿವ್ ತೈಲವು ಒಣ ಚರ್ಮಕ್ಕೆ ತುಂಬಾ ಪರಿಣಾಮಕಾರಿಯಾಗಲಿದೆ. ಆಲಿವ್ ತೈಲ ಬಳಸುವುದರಿಂದ ಚರ್ಮಕ್ಕೆ ತಂಪು ಉಂಟಾಗಿ ಒಣ ಚರ್ಮದ ಸಮಸ್ಯೆಯು ಬೇಗನೆ ನಿವಾರಣೆಯಾಗುತ್ತದೆ. ಸ್ವಲ್ಪ ಆಲಿವ್ ತೈಲವನ್ನು ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಈಗ ಈ ಎಣ್ಣೆಯಿಂದ ಮುಖ, ಕೈ ಹಾಗೂ ಕಾಲುಗಳಿಗೆ ಮಸಾಜ್ ಮಾಡಿಕೊಳ್ಳಿ. ರಾತ್ರಿಯಿಡಿ ಹಾಗೆ ಬಿಡಿ. ಹದ ಬಿಸಿ ನೀರಿನಿಂದ ಬೆಳಿಗ್ಗೆ ಮುಖ, ಕೈಕಾಲುಗಳನ್ನು ತೊಳೆಯಿರಿ. ನಿಸ್ತೇಜ ಹಾಗೂ ಒಣ ಚರ್ಮದಿಂದ ಮುಕ್ತಿ ಪಡೆಯಲು ಇದನ್ನು ದಿನದಲ್ಲಿ ಎರಡು ಸಲ ಬಳಸಿ.

ಮೊಸರು

ಮೊಸರು

ಒಣ ಹಾಗೂ ನಿಸ್ತೇಜ ಚರ್ಮಕ್ಕೆ ಮೊಸರನ್ನು ಬಳಸಿದರೆ ಅದು ಬೇಗನೆ ಫಲಿತಾಂಶವನ್ನು ನೀಡುವುದು. ಚರ್ಮದಲ್ಲಿ ಉರಿಯೂತ ಹಾಗೂ ತುರಿಕೆಯನ್ನು ಉಂಟು ಮಾಡುವ ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳನ್ನು ಇದು ಕೊಂದು ಹಾಕುತ್ತದೆ. ಸ್ವಲ್ಪ ಮೊಸರಿಗೆ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ನಿಂಬೆರಸವನ್ನು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದರಿಂದ ಮುಖ ಹಾಗೂ ಕೈಗಳಿಗೆ ಮಸಾಜ್ ಮಾಡಿಕೊಳ್ಳಿ. ಸ್ವಲ್ಪ ಸಮಯದ ಬಳಿಕ ತಣ್ಣಗಿನ ನೀರಿನಿಂದ ತೊಳೆಯಿರಿ. ಮುಖದ ಅಂದ-ಚೆಂದ ಹೆಚ್ಚಿಸುವ ಮೊಸರಿನ ಫೇಸ್ ಪ್ಯಾಕ್!

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ಒಣ ಹಾಗೂ ಎದ್ದುಬರುವ ಚರ್ಮದ ಸಮಸ್ಯೆಯ ನಿವಾರಣೆಗೆ ತೆಂಗಿನ ಎಣ್ಣೆ ತುಂಬಾ ಉಪಯೋಗಕಾರಿ. ಉರಿಯೂತ ಶಮನಕಾರಿ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ತೆಂಗಿನ ಎಣ್ಣೆಯಲ್ಲಿ ಕೊಬ್ಬಿನಾಮ್ಲವು ಇದೆ. ಇದು ಚರ್ಮವನ್ನು ತಂಪು ಹಾಗೂ ನಯವಾಗಿರಿಸುತ್ತದೆ. ಸ್ವಲ್ಪ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಈಗ ಎಣ್ಣೆಯನ್ನು ಮುಖ ಹಾಗೂ ಕೈಗಳಿಗೆ ಮಸಾಜ್ ಮಾಡಿಕೊಳ್ಳಿ. ಸ್ವಲ್ಪ ಸಮಯದ ಬಳಿಕ ತೊಳೆಯಿರಿ. ಪ್ರತೀ ದಿನ ಮಲಗುವ ಮೊದಲು ಹೀಗೆ ಮಾಡಿ. ಇದರಿಂದ ಒಣ ಹಾಗೂ ಕಿತ್ತುಬರುವ ಚರ್ಮದ ಸಮಸ್ಯೆಗೆ ನೆರವಾಗುವುದು.

ಓಟ್ ಮೀಲ್

ಓಟ್ ಮೀಲ್

ದೀರ್ಘ ಕಾಲದ ತನಕ ಒಣಚರ್ಮವನ್ನು ತೇವಾಂಶದಿಂದ ಇಡಲು ಓಟ್ ಮೀಲ್ ನ್ನು ಬಳಸಿ. ಓಟ್ ಮೀಲ್ ನಲ್ಲಿ ಇರುವಂತಹ ಪ್ರೋಟೀನ್ ಚರ್ಮದಲ್ಲಿ ಕೋಟೆಯಂತೆ ಕೆಲಸ ಮಾಡುತ್ತದೆ. ಇದು ಚರ್ಮವು ನೀರಿನಾಂಶವನ್ನು ಕಳೆದುಕೊಳ್ಳದಂತೆ ಮಾಡಿ ದೀರ್ಘಕಾಲದ ತನಕ ಚರ್ಮವು ತೇವಾಂಶದಿಂದ ಇರುವಂತೆ ನೋಡಿಕೊಳ್ಳುತ್ತದೆ. ಒಂದು ಕಪ್ ಓಟ್ ಮೀಲ್ ಗೆ ಸ್ವಲ್ಪ ಮೊಸರು, ಜೇನುತುಪ್ಪ ಮತ್ತು ನಿಂಬೆರಸ ಸೇರಿಸಿಕೊಳ್ಳಿ. ಸರಿಯಾಗಿ ಕಿವುಚಿಕೊಂಡ ಅರ್ಧ ಬಾಳೆಹಣ್ಣನ್ನು ಇದಕ್ಕೆ ಸೇರಿಸಿಕೊಳ್ಳಿ. ಇದನ್ನು ಮುಖ ಹಾಗೂ ದೇಹದ ಇತರ ಭಾಗಗಳಿಗೆ ಹಚ್ಚಿಕೊಳ್ಳಿ ಮತ್ತು ಸ್ವಲ್ಪ ಸಮಯ ಹಾಗೆ ಬಿಡಿ. ತಣ್ಣಗಿನ ನೀರಿನಿಂದ ತೊಳೆದ ಬಳಿಕ ಒಣಗಲು ಬಿಡಿ. ಓಟ್ ಮೀಲ್ ಮ್ಯಾಜಿಕ್: ಏಳೇ ದಿನಗಳಲ್ಲಿ ಸೌಂದರ್ಯ ವೃದ್ಧಿ!

ಗಂಧದ ಪೇಸ್ಟ್

ಗಂಧದ ಪೇಸ್ಟ್

ಗಂಧದ ಪೇಸ್ಟ್ ಒಣ ಹಾಗೂ ಎದ್ದುಬರುವ ಚರ್ಮಕ್ಕೆ ತುಂಬಾ ಒಳ್ಳೆಯದು. 2-3 ಚಮಚ ಗಂಧದ ಹುಡಿ, ಇದಕ್ಕೆ ಕೆಲವು ಹನಿ ಗುಲಾಬಿ ನೀರು ಹಾಗೂ ನಿಂಬೆರಸವನ್ನು ಸೇರಿಸಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಒಣಗಿದ ಬಳಿಕ ತಣ್ಣೀರಿನಿಂದ ತೊಳೆಯಿರಿ. ಇದು ಒಣ ಹಾಗೂ ಚರ್ಮ ಕಿತ್ತುಬರುವ ಸಮಸ್ಯೆಗೆ ತುಂಬಾ ಒಳ್ಳೆಯದು.

English summary

Home Remedies To Treat Dry Skin

Dry skin can be a problem in all the seasons, but it may be really troublesome to take care of your skin during the summer days. The cold air sucks the moisture from the skin, which may lead to scaly skin, redness and inflammation on the skin as well. So if you are the one who is suffering from dry skin, try these easily available home remedies.
Story first published: Monday, March 13, 2017, 23:41 [IST]
Subscribe Newsletter