ಮೊಡವೆ ಕಲೆ ನಿವಾರಣೆಗೆ, ಸರಳ ಟಿಪ್ಸ್-ತ್ವರಿತ ಪರಿಹಾರ

By: Hemanth
Subscribe to Boldsky

ಮುಖದ ಸೌಂದರ್ಯವನ್ನು ಕೆಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದೇ ಮೊಡವೆಗಳು. ಅದರಲ್ಲೂ ಹದಿಹರೆಯದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಯಾಕೆಂದರೆ ದೇಹದಲ್ಲಿ ಆಗುವಂತಹ ಹಾರ್ಮೋನು ಬದಲಾವಣೆಯಿಂದಾಗಿ ಮೊಡವೆಗಳು ಕಾಣಿಸಿಕೊಳ್ಳುತ್ತದೆ. ಇಂತಹ ಮೊಡವೆಗಳಿಂದ ರಕ್ಷಣೆ ಪಡೆಯಲು ಟಿವಿಗಳಲ್ಲಿ ಬರುವಂತಹ ಜಾಹೀರಾತುಗಳನ್ನು ನೋಡಿಕೊಂಡು ಹಲವಾರು ಬಗೆಯ ಕ್ರೀಮ್ ಗಳನ್ನು ಪ್ರಯೋಗಿಸಲು ಆರಂಭಿಸುತ್ತೇವೆ. ಓ ಮೊಡವೆ ಕಲೆಗಳೇ, ನೀ ಹೀಗೇಕೆ ಕಾಡುತ್ತಿರುವೆ?

ಮೊಡವೆಗಳು ನಿವಾರಣೆಯಾದರೂ ಮೊಡವೆಗಳ ಕಲೆಗಳು ಮುಖದ ಮೇಲೆ ಹಾಗೆ ಉಳಿದುಕೊಂಡಿರುತ್ತದೆ. ಇಂತಹ ಕಲೆಗಳನ್ನು ಹೋಗಲಾಡಿಸಲು ಕ್ರೀಮ್ ಗಳನ್ನು ಬಳಸಿದರೂ ಕಲೆಗಳು ಮಾತ್ರ ಹಾಗೆ ಉಳಿದುಕೊಳ್ಳುತ್ತದೆ. ಆದರೆ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡು ಮೊಡವೆಯ ಕಲೆಗಳನ್ನು ನಿವಾರಣೆ ಮಾಡಬಹುದು. ಮೊಡವೆಗಳ ಕಲೆಗಳನ್ನು ನಿವಾರಣೆ ಮಾಡಲು ಇರುವ ಮನೆಮದ್ದಿನ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ... 

ಇಂಗಿನ ಪೇಸ್ಟ್

ಇಂಗಿನ ಪೇಸ್ಟ್

ಇಂಗಿನ ಪೇಸ್ಟ್ ಮಾಡಿಕೊಂಡು ಕಲೆ ಇರುವ ಜಾಗಕ್ಕೆ ಹಚ್ಚಿದರೆ ಕಲೆ ಮಾಯವಾಗುವುದು ಮತ್ತು ಹೊಸ ಮೊಡವೆಗಳು ಮೂಡದಂತೆ ಇದು ತಡೆಯುವುದು.

ಮೊಸರಿನ ಮಸಾಜ್

ಮೊಸರಿನ ಮಸಾಜ್

ಕಲೆ ಇರುವಂತಹ ಜಾಗಕ್ಕೆ ಮೊಸರನ್ನು ಪ್ರತೀದಿನ ಮಸಾಜ್ ಮಾಡಿದರೆ ಅದರಿಂದ ಮೊಡವೆಯ ಕಲೆಗಳ ಅಪಾಯ ಕಡಿಮೆ ಮತ್ತು ಮೃಧು ಹಾಗೂ ಕಾಂತಿಯುತ ಚರ್ಮವನ್ನು ಪಡೆಯಬಹುದು. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಹಣ್ಣುಗಳಲ್ಲಿ ಇರುವಂತಹ ಸಿಟ್ರಿಕ್ ಆಮ್ಲಕ್ಕಿಂತ ಹಗುರವಾಗಿರುವ ಕಾರಣ ಚರ್ಮವನ್ನು ಸುಡುವುದಿಲ್ಲ. ಮೊಸರಿನ ಫೇಸ್ ಮಾಸ್ಕ್: ಕಡಿಮೆ ಖರ್ಚು ಅಧಿಕ ಲಾಭ...

ಕಡಲೆ ಹಿಟ್ಟು ಮತ್ತು ರೋಸ್ ವಾಟರ್ ಫೇಸ್ ಪ್ಯಾಕ್

ಕಡಲೆ ಹಿಟ್ಟು ಮತ್ತು ರೋಸ್ ವಾಟರ್ ಫೇಸ್ ಪ್ಯಾಕ್

ಕಡಲೆ ಹಿಟ್ಟಿನೊಂದಿಗೆ ರೋಸ್ ವಾಟರ್ ಅನ್ನು ಮಿಶ್ರಣ ಮಾಡಿಕೊಂಡು ಪ್ರತೀದಿನ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆ ಕಲೆಗಳು ಮಾಯವಾಗುವುದು ಮತ್ತು ಮುಖಕ್ಕೆ ಕಾಂತಿ ಬರುವುದು. ಕಡಲೆ ಹಿಟ್ಟು ಬಳಸಿ, ತ್ವಚೆಯ ಕಾಂತಿ ವೃದ್ಧಿಸಿ

ಕಿತ್ತಳೆ ಹಣ್ಣಿನ ಫೇಸ್ ಪ್ಯಾಕ್

ಕಿತ್ತಳೆ ಹಣ್ಣಿನ ಫೇಸ್ ಪ್ಯಾಕ್

ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಹುಡಿ ಮಾಡಿಕೊಂಡು ಅದನ್ನು ಹಾಲಿಗೆ ಹಾಕಿ ಫೇಸ್ ಪ್ಯಾಕ್ ಮಾಡಿಕೊಳ್ಳಬೇಕು. ರೆಟಿನಾಲ್ ಅಧಿಕವಾಗಿರುವಂತಹ ಕಿತ್ತಳೆ ಹಣ್ಣು ಈಗಿರುವ ಚರ್ಮವನ್ನು ಒಣಗಿಸುವುದು ಮತ್ತು ಕಲೆ ಹಾಗೂ ಮೊಡವೆಗಳು ಇಲ್ಲದೆ ಇರುವಂತಹ ಹೊಸ ಚರ್ಮ ಬರುವಂತೆ ಮಾಡುವುದು. ಒಳ್ಳೆಯ ಚರ್ಮವನ್ನು ಪಡೆಯಲು ಇದು ನಿಮಗೆ ನೆರವಾಗುವುದು.

ಕಿತ್ತಳೆ ಹಣ್ಣಿನ ಫೇಸ್ ಪ್ಯಾಕ್

ಕಿತ್ತಳೆ ಹಣ್ಣಿನ ಫೇಸ್ ಪ್ಯಾಕ್

ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಹುಡಿ ಮಾಡಿಕೊಂಡು ಮುಚ್ಚಳ ಮುಚ್ಚಿರುವ ಡಬ್ಬದಲ್ಲಿ ಹಾಕಿಡಬೇಕು. ಮೊಡವೆ ಕಲೆಗಳನ್ನು ನಿವಾರಿಸುವಂತಹ ಇತರ ಮನೆಮದ್ದುಗಳೆಂದರೆ ಟೊಮೆಟೋ ಜ್ಯೂಸ್, ಆಲೂಗಡ್ಡೆ ಸಿಪ್ಪೆ ಫೇಸ್ ಪ್ಯಾಕ್ ಮತ್ತು ಅಲೋವೆರಾ ಜೆಲ್. ಮುಖದ ಅಂದಕ್ಕೆ-ಕಿತ್ತಳೆ ಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್

 
English summary

Home Remedies To Remove Acne Scars

Acne is a common problem among men and women who are in their teens or until they are thirty. The harmonal variation in the body leads to pimples, boils, etc. To keep away acne is possible if the right diet is had and the skin is taken a little more care. For the existing acne, the best way to keep away the scars and marks is not touch or squeeze them. Today, we shall see on other home remedies that can help treat the scars and regain the clear skin. Take a look.
Subscribe Newsletter