For Quick Alerts
ALLOW NOTIFICATIONS  
For Daily Alerts

ಚೆಲುವೆಯ ಅಂದದ ಮುಖಕ್ಕೆ ಜೇನಿನ ಫೇಸ್ ಮಾಸ್ಕ್!

By Manu
|

ಜೇನುತುಪ್ಪ ಸೇವಿಸಲು ಎಷ್ಟು ರುಚಿಯೋ ಹಾಗೆಯೇ ಆರೋಗ್ಯಕ್ಕೂ ಅಷ್ಟೇ ಹಿತ. ಜೇನಿಗೆ ಜೇನೇ ಸಾಟಿ ಎಂಬ ಮಾತಿದೆ. ಇದರಿಂದ ಅನೇಕ ರೀತಿಯ ಆರೋಗ್ಯಕ ಲಾಭಗಳುಂಟು. ಇದು ನಮಗೆ ಸುಲಭವಾಗಿ ಸಿಗುವಂತಿದ್ದು, ಒಂದು ರೀತಿಯಲ್ಲಿ ಮಾನವರಿಗೆ ಸಂಜೀವಿನಿಯೇ ಸರಿ. ಇದರಿಂದ ನಮ್ಮ ಚರ್ಮದ ಸಮಸ್ಯೆಗಳನ್ನೂ ಸಹ ಪರಿಣಾಮಕಾರಿಯಾಗಿ ನಿವಾರಿಸಬಹುದು ಎಂಬ ಅಂಶವು ಹೆಚ್ಚಿನವರಿಗೆ ತಿಳಿದಿಲ್ಲ. ಹೌದು ಇದು ಚರ್ಮಕ್ಕೆ ಉತ್ತಮ ಸೌಂದರ್ಯ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.

ಮುಖದ ಕಾಂತಿಗೆ ಪಪ್ಪಾಯ-ಜೇನುತುಪ್ಪದ ಫೇಸ್ ಪ್ಯಾಕ್

ಇದರಲ್ಲಿರುವ ಕೆಲವು ವಿಶಿಷ್ಟ ಗುಣಲಕ್ಷಣದಿಂದ ನಿಮಗೆ ಹೆಚ್ಚು ಉಪಯುಕ್ತವಾಗುತ್ತದೆ. ಚರ್ಮದ ಸಮಸ್ಯೆಯನ್ನು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ನಿವಾರಿಸುವ ಜೇನಿನ ಫೇಸ್‌ ಪ್ಯಾಕ್ ನಿಜಕ್ಕೂ ಅದ್ಭುತ ಫಲಿತಾಂಶವನ್ನು ನೀಡುತ್ತದೆ. ಈ ಲೇಖನದಲ್ಲಿ ನಿಮಗೆ ಜೇನಿನ ಫೇಸ್ ಪ್ಯಾಕ್‌ಗಳ ಬಳಕೆಯ ಬಗ್ಗೆ ಕೆಲವು ಸಂಗತಿಗಳನ್ನು ನೀಡಲಾಗಿದೆ, ಮುಂದೆ ಓದಿ...

ಜೇನುತುಪ್ಪ ಮತ್ತು ಬಾದಾಮಿ ಎಣ್ಣೆಯ ಫೇಸ್ ಪ್ಯಾಕ್

ಜೇನುತುಪ್ಪ ಮತ್ತು ಬಾದಾಮಿ ಎಣ್ಣೆಯ ಫೇಸ್ ಪ್ಯಾಕ್

ಒಂದು ಚಮಚ ಬಾದಾಮಿ ಎಣ್ಣೆ ತೆಗೆದುಕೊಂಡರೆ ಎರಡು ಚಮಚ ಜೇನುತುಪ್ಪವನ್ನು ತೆಗೆದುಕೊಳ್ಳಬೇಕು. ಇವೆರಡನ್ನು ಚೆನ್ನಾಗಿ ಮಿಶ್ರಣಗೊಳಿಸಿ ಮುಖಕ್ಕೆ ಹಚ್ಚಬೇಕು. ಸುಮಾರು ಅರ್ಥ ಗಂಟೆಗಳ ಕಾಲ ಮುಖದ ಮೇಲೆ ಆರಲು ಬಿಡಿ. ನಂತರ ತಣ್ಣೀರಿನಲ್ಲಿ ಫೇಸ್ ಪ್ಯಾಕ್ ತೆಗೆಯಿರಿ. ಮುಖದಲ್ಲಿ ಇರುವ ಸೂರ್ಯನ ಕಿರಣದ ಕಪ್ಪು ಕಲೆ ಹೋಗಬೇಕೆಂದರೆ ಈ ಮಿಶ್ರಣಕ್ಕೆ ಒಂದು ಚಿಕ್ಕ ಲಿಂಬೆ ತುಂಡಿನ ರಸವನ್ನು ಬೆರೆಸಿ ಹಚ್ಚಿಕೊಳ್ಳಿ. ಮುಖವು ಬಹಳ ಒಣ ತ್ವಚೆಯಿಂದ ಕೂಡಿದೆ ಎಂದೆನಿಸಿದರೆ ಬಾದಾಮಿ ಎಣ್ಣೆಯ ಬದಲು ತೆಂಗಿನೆಣ್ಣೆಯನ್ನು ಬಳಸಿ.

 ಜೇನುತುಪ್ಪ ಮತ್ತು ಪಪ್ಪಾಯ ಫೇಸ್ ಪ್ಯಾಕ್

ಜೇನುತುಪ್ಪ ಮತ್ತು ಪಪ್ಪಾಯ ಫೇಸ್ ಪ್ಯಾಕ್

ಅರ್ಧ ಕಪ್ ಪಪ್ಪಾಯದ ತಿರುಳಿಗೆ 2 ಚಮಚ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣಮಾಡಿ. ನಂತರ ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಮುಖದ ಮೇಲೆ ಆರಲು ಬಿಡಬೇಕು. ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಸೂರ್ಯನ ಕಿರಣದಿಂದ ಮುಂಕಾದ ತ್ವಚೆ ಹೊಳಪನ್ನು ಪಡೆದುಕೊಳ್ಳುತ್ತದೆ. ಜೊತೆಗೆ ಚರ್ಮವು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಪಪ್ಪಾಯಿ ಹಣ್ಣಿನಲ್ಲಿದೆ 'ಸೌಂದರ್ಯದ' ಮಾಂತ್ರಿಕ ಶಕ್ತಿ!

ಕಡಲೆ ಹಿಟ್ಟು+ ಜೇನುತುಪ್ಪ

ಕಡಲೆ ಹಿಟ್ಟು+ ಜೇನುತುಪ್ಪ

4 ಚಮಚ ಕಡಲೆ ಹಿಟ್ಟು, 1 ಚಮಚ ಅರಿಶಿನ, 2 ಚಮಚ ಗೋಧಿ ಹಿಟ್ಟು, ಚಿಟಿಕೆಯಷ್ಟು ನ್ಯಾಚುರಲ್ ಕ್ಯಾಂಪ್‍ಪೋರ್, ಒಂದೆರಡು ಎಸಳು ಕೇಸರಿ, 2 ಚಮಚ ಸಾಸಿವೆ ಎಣ್ಣೆ, 2 ಚಮಚ ಜೇನುತುಪ್ಪ, 2ಚಮಚ ಹಾಲು. ಇವೆಲ್ಲವನ್ನು ಒಂದು ಬೌಲ್‍ನಲ್ಲಿ ಹಾಕಿ ಸರಿಯಾಗಿ ಕಲಸಿ. ನಂತರ 10-15 ನಿಮಿಷ ನೆನೆಯಲು ಬಿಡಿ. ಬಳಿಕ ಮುಖಕ್ಕೆ ಹಚ್ಚಿಕೊಳ್ಳಬೇಕು. ಮುಖಕ್ಕೆ ಹಚ್ಚಿದ ಫೇಸ್ ಪ್ಯಾಕ್ ಒಣಗಿದ ಮೇಲೆ ತಣ್ಣೀರಿನಲ್ಲಿ ಮುಖವನ್ನು ತೊಳೆಯಿರಿ.

ಚಕ್ಕೆ ಮತ್ತು ಜೇನು ತುಪ್ಪ ಬ್ಲಾಕ್ ಹೆಡ್

ಚಕ್ಕೆ ಮತ್ತು ಜೇನು ತುಪ್ಪ ಬ್ಲಾಕ್ ಹೆಡ್

ಚಿಕಿತ್ಸೆ ಮುಖದ ಮೇಲೆ ಕಾಣಿಸಿಕೊಳ್ಳುವ ಬ್ಲಾಕ್ ಹೆಡ್ ಅಥವಾ ಕಪ್ಪು ತಲೆಗಳನ್ನು ನಿವಾರಿಸಲು ಚಕ್ಕೆ ಮತ್ತು ಜೇನು ತುಪ್ಪದ ಮಾಸ್ಕ್ ತಯಾರಿಸಿಕೊಳ್ಳಬಹುದು. ಈ ಎರಡರ ಸಮ್ಮಿಶ್ರಣವು ಕಪ್ಪು ತಲೆಗಳನ್ನು ನಿವಾರಿಸುವುದರ ಜೊತೆಗೆ ಮುಖದಲ್ಲಿನ ಬ್ಯಾಕ್ಟೀರಿಯಾಗಳನ್ನು ಹೊರದಬ್ಬಿ, ತ್ವಚೆಯ ರಕ್ಷಣೆಯನ್ನು ಸಹ ಮಾಡುತ್ತವೆ.

ಆರೋಗ್ಯದ ಆಗರ ಸಿಹಿ ಜೇನಿನ ಮಹತ್ವ ಅರಿಯಿರಿ

ಜೇನು ತುಪ್ಪ ಬಾಡಿ ವಾಷ್

ಜೇನು ತುಪ್ಪ ಬಾಡಿ ವಾಷ್

ನಾಲ್ಕು ಸರಳ ಪದಾರ್ಥಗಳು, ಒಂದು ಬಾಟಲ್ ಅಷ್ಟೇ. ಸ್ವಾಭಾವಿಕವಾದ ಈ ಎಲ್ಲಾ ಅಂಶಗಳು ನಿಮ್ಮ ಸೂಕ್ಷ್ಮ ತ್ವಚೆಗೆ ಸರಿಸಾಟಿಯಿಲ್ಲದ ಪರಿಪೂರ್ಣವಾದ ಆರೈಕೆ ಮತ್ತು ಸ್ವಚ್ಛತೆಯನ್ನು ಒದಗಿಸುತ್ತವೆ.

ನಯವಾದ ತುಟಿಗಳಿಗೆ

ನಯವಾದ ತುಟಿಗಳಿಗೆ

ಒಣ ಹಾಗೂ ಒಡೆದ ತುಟಿಗಳ ಆರೈಕೆಗೆ ಜೇನುತುಪ್ಪವು ಅತೀ ಉತ್ತಮ ಔಷಧಿಯಾಗಿದೆ. ಸ್ವಲ್ಪ ಬಾದಾಮಿಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನೆಸಿ. ರುಬ್ಬಿಕೊಂಡು ಅದರ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ತುಟಿಗಳಿಗೆ ಹಚ್ಚಿಕೊಂಡು ಮಸಾಜ್ ಮಾಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ. ಒಣ ಹಾಗೂ ಒಡೆದ ತುಟಿಗಳ ಆರೈಕೆಗೆ ದಿನದಲ್ಲಿ ಎರಡು ಸಲ ಇದನ್ನು ಬಳಸಿ.

ಅವೊಕ್ಯಾಡೊ ಜೇನು ತುಪ್ಪದ ಮಾಸ್ಕ್

ಅವೊಕ್ಯಾಡೊ ಜೇನು ತುಪ್ಪದ ಮಾಸ್ಕ್

ನಾವು ಸಾಮಾನ್ಯವಾಗಿ ನಮ್ಮ ಸೌಂದರ್ಯದ ಬಗ್ಗೆ ಎಲ್ಲರ ಮುಂದೆ ಜಂಭಕೊಚ್ಚಿಕೊಳ್ಳುವುದಿಲ್ಲ. ಆದರೆ ಈ ಜೇನು ತುಪ್ಪ ಮತ್ತು ಅವೊಕ್ಯಾಡೊಗಳ ಮಾಸ್ಕ್ ನಿಸ್ಸಂಶಯವಾಗಿ ನಿಮ್ಮ ಸೌಂದರ್ಯಕ್ಕೆ ಗರಿ ಮೂಡಿಸುತ್ತದೆ. ಇದನ್ನು ಬಳಸುವುದು ಸ್ವಲ್ಪ ಗೋಜಲಾದರು, ಬಳಸಿದ ನಂತರ ಸಿಗುವ ಫಲಿತಾಂಶವು ನಿಸ್ಸಂಶಯವಾಗಿ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

English summary

Genius ways to use honey in your beauty routine

The wonder potion honey is known for many beauty benefits. This healthier sweetener has been used for centuries to treat several ailments. Wonder how it’s good for your skin and hair? Honey contains antibacterial and healing properties which can nourish your skin and even hair. And yes, choosing the right honey matters here—the honey should be raw and unfiltered for enhanced benefits. Flip through and know the amazing benefits of honey..
X
Desktop Bottom Promotion