For Quick Alerts
ALLOW NOTIFICATIONS  
For Daily Alerts

ಮೊಡವೆಗೆ 'ಆಯುರ್ವೇದ' ಔಷಧಿಗಳು-ಯಾವುದೇ ಅಡ್ಡಪರಿಣಾಮಗಳಿಲ್ಲ

ಮೊಡವೆಗಳು ಮುಖದ ಮೇಲಿದ್ದರೆ ಅದು ಕಿರಿಕಿರಿಯನ್ನು ಉಂಟು ಮಾಡುತ್ತದೆ. ಇಂತಹ ಮೊಡವೆಗಳಿಂದ ಪರಿಹಾರ ಪಡೆಯಲು ಹಲವಾರು ರೀತಿಯ ಉಪಾಯಗಳು ಇವೆ. ಇವುಗಳನ್ನು ಬಳಸಿದರೆ ಮೊಡವೆಗಳು ನಿವಾರಣೆಯಾಗಿ ಮುಖದ ಸೌಂದರ್ಯವು ಹೆಚ್ಚುವುದು.

By Hemanth
|

ಆಯುರ್ವೇದವೆನ್ನುವುದು ಕೇವಲ ಒಂದು ಕಾಯಿಲೆಗೆ ಮಾತ್ರ ಚಿಕಿತ್ಸೆಯನ್ನು ನೀಡದೆ ಇಡೀ ದೇಹವನ್ನು ಪುನರ್ಚೇತನಗೊಳಿಸುತ್ತದೆ. ಹಿಂದಿನಿಂದಲೂ ಭಾರತೀಯರು ಹೆಚ್ಚಾಗಿ ಆಯುರ್ವೇದವನ್ನೇ ನಂಬಿಕೊಂಡು ಬಂದಿದ್ದಾರೆ. ಆಯುರ್ವೇದ ಔಷಧಿಯಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲದಿರುವುದರಿಂದ ಇದನ್ನು ಪ್ರತಿಯೊಬ್ಬರು ಸೇವಿಸಬಹುದು. ಮೊಡವೆ ಸಮಸ್ಯೆಗೆ ಯಾಕೆ ಚಿಂತೆ? ಮನೆಯಲ್ಲಿಯೇ ಇದೆ ಪರಿಹಾರ!

ಕಾಡಿನಲ್ಲಿ ಸಿಗುವಂತಹ ಹಲವಾರು ರೀತಿಯ ಔಷಧೀಯ ಸಸ್ಯಗಳನ್ನು ತಂದು ಆಯುರ್ವೇದ ಮದ್ದನ್ನು ತಯಾರಿಸಲಾಗುತ್ತದೆ. ಆಯುರ್ವೇದಿಂದ ಮೊಡವೆಗಳನ್ನು ನಿವಾರಣೆ ಮಾಡಿದರೆ ಅದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಮುಖದ ಮೇಲೆ ಆಗುವುದಿಲ್ಲ. ತ್ವಚೆಯ ಮೊಡವೆ ನಿವಾರಣೆಗೆ ಬರೀ ಏಳೇ ದಿನಗಳು ಸಾಕು!

ಇದು ಮೊಡವೆಗಳನ್ನು ತೆಗೆದುಹಾಕುವುದು ಮಾತ್ರವಲ್ಲದೆ ಚರ್ಮವನ್ನು ಪುನಶ್ಚೇತನಗೊಳಿಸುವುದು. ಮೊಡವೆಗಳಿಗೆ ಆಯುರ್ವೇದ ಔಷಧಿಯ ಮೂಲಕ ಹೇಗೆ ಚಿಕಿತ್ಸೆ ನೀಡಬೇಕು ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಇದನ್ನು ಪ್ರಯೋಗಿಸಿ ಮೊಡವೆಗಳ ಸಮಸ್ಯೆಯಿಂದ ಮುಕ್ತರಾಗಿ....

ತುಳಸಿ ಎಲೆ ಮತ್ತು ಕರ್ಪೂರ

ತುಳಸಿ ಎಲೆ ಮತ್ತು ಕರ್ಪೂರ

ಸ್ವಲ್ಪ ಬೆಣ್ಣೆಯಲ್ಲಿ ಹುಡಿ ಮಾಡಿದ ಸ್ವಲ್ಪ ಕರ್ಪೂರವನ್ನು ಹಾಕಿಕೊಳ್ಳಿ. ತುಳಸಿ ಎಲೆಗಳನ್ನು ಸರಿಯಾಗಿ ರುಬ್ಬಿಕೊಂಡು ಇದಕ್ಕೆ ಸೇರಿಸಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮೊಡವೆಗಳು ಇರುವಂತಹ ಜಾಗಕ್ಕೆ ಹಚ್ಚಿಕೊಳ್ಳಿ. ರಾತ್ರಿ ಮುಖಕ್ಕೆ ಹಚ್ಚಿಕೊಂಡು ಮಲಗಿ ಬೆಳಿಗ್ಗೆ ಎದ್ದು ಮುಖ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ನಾಲ್ಕರಿಂದ ಐದು ಸಲ ಇದನ್ನು ಪ್ರಯತ್ನಿಸಿ.

ಅರಿಶಿನ ಮತ್ತು ತುಳಸಿ ಎಲೆಗಳು

ಅರಿಶಿನ ಮತ್ತು ತುಳಸಿ ಎಲೆಗಳು

ಒಂದು ಅರಿಶಿನದ ಕೊಂಬು, ಸ್ವಲ್ಪ ತುಳಸಿ ಎಲೆ ಮತ್ತು ಕರ್ಪೂರ ತೆಗೆದುಕೊಳ್ಳಿ. ನೀರಿನಲ್ಲಿ ಅರಶಿನ ಕೊಂಬಿನ ಪೇಸ್ಟ್ ಮಾಡಿಕೊಳ್ಳಿ ಮತ್ತು ಇದಕ್ಕೆ ರುಬ್ಬಿಕೊಂಡು ತುಳಸಿ ಎಲೆ ಮತ್ತು ಒಂದು ಕರ್ಪೂರದ ಹುಡಿ ಹಾಕಿ. ರಾತ್ರಿ ಮಲಗುವಾಗ ಇದನ್ನು ಮುಖಕ್ಕೆ ಹಚ್ಚಿಕೊಂಡು ಬೆಳಿಗ್ಗೆ ಎದ್ದಾಗ ತೊಳೆಯಿರಿ.

ಎಳ್ಳಿನ ಹುಡಿ ಮತ್ತು ಗೋಮೂತ್ರ

ಎಳ್ಳಿನ ಹುಡಿ ಮತ್ತು ಗೋಮೂತ್ರ

ಆರು ತಿಂಗಳು ಹಳೆದಾಗಿರುವ ಎಳ್ಳಿನ ಹುಡಿಯನ್ನು ತೆಗೆದುಕೊಳ್ಳಿ ಮತ್ತು ಇದನ್ನು ಗೋಮೂತ್ರದೊಂದಿಗೆ ಮಿಶ್ರಣ ಮಾಡಿ ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ ಮತ್ತು ಮೊಡವೆ ಇರುವ ಭಾಗಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಕಾಲ ಇದು ಹಾಗೆ ಇರಲಿ. ನೀರಿನಿಂದ ತೊಳೆದ ಬಳಿಕ ಮೊಶ್ಚಿರೈಸ್ ಮಾಡಿಕೊಳ್ಳಿ.

ಅಲೋವೆರಾ ಜೆಲ್ ಮತ್ತು ಅರಿಶಿನ ಹುಡಿ

ಅಲೋವೆರಾ ಜೆಲ್ ಮತ್ತು ಅರಿಶಿನ ಹುಡಿ

ಒಂದು ಚಮಚ ಅಲೋವೆರಾ ಜೆಲ್ ಮತ್ತು ಒಂದು ಚಮಚ ಅರಶಿನ ಹುಡಿ ಹಾಕಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ರಾತ್ರಿಯಿಡಿ ಹಾಗೆ ಬಿಡಿ. ಬೆಳಿಗ್ಗೆ ತಣ್ಣಗಿನ ನೀರಿನಿಂದ ಮುಖ ತೊಳೆಯಿರಿ. ಅರಶಿನ ಹುಡಿಯು ನಂಜುನಿರೋಧಕ ಮತ್ತು ಮೊಡವೆಗಳನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಅಲೋವೆರಾ ಮೊಶ್ಚಿರೈಸರ್ ಆಗಿ ಕೆಲಸ ಮಾಡುತ್ತದೆ.

ಕಡಲೆಹಿಟ್ಟು-ತುಳಸಿ ಎಲೆಯ

ಕಡಲೆಹಿಟ್ಟು-ತುಳಸಿ ಎಲೆಯ

ಪೇಸ್ಟ್ ಒಂದು ದೊಡ್ಡಚಮಚ ಕಡಲೆಹಿಟ್ಟಿನಲ್ಲಿ ಒಂದು ಹಿಡಿಯಷ್ಟು ತುಳಸಿ ಎಲೆಗಳನ್ನು ಸ್ವಲ್ಪ ನೀರು ಹಾಕಿ ಅರೆಯಿರಿ. ನೀರಿನ ಬದಲು ಗುಲಾಬಿ ನೀರು ಸೇರಿಸಿದರೆ ಈ ಮುಖಲೇಪ ಇನ್ನಷ್ಟು ಉತ್ತಮಗೊಳ್ಳುತ್ತದೆ. ಮುಖಕ್ಕೆ ಹಚ್ಚುವಷ್ಟು ಗಾಢತೆ ಬಂದ ಬಳಿಕ ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಸುಮಾರು ಅರ್ಧ ಗಂಟೆ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

ಹಾಲು ಮತ್ತು ತಾಜಾ ನಿಂಬೆ ರಸ

ಹಾಲು ಮತ್ತು ತಾಜಾ ನಿಂಬೆ ರಸ

ಕಾಯಿಸಿದ ಹಾಲಿಗೆ ತಾಜಾ ನಿಂಬೆ ರಸ ಬೆರೆಸಿ ಒಣಗಿದ ಚರ್ಮಕ್ಕೆ ಫೇಷಿಯಲ್ ರೀತಿಯಲ್ಲಿ ಬಳಸಬಹುದು. ಇದರಿಂದ ಕಪ್ಪು ಕಲೆಗಳು ಮತ್ತು ಮೊಡವೆಗಳು ಹೋಗುತ್ತವೆ. ತಾಜಾ ನಿಂಬೆ ರಸಕ್ಕೆ 2-3 ಹನಿ ಹಾಲು ಹಾಕಿ ಬೆರೆಸಿಕೊಳ್ಳಬೇಕು. ಸ್ವಲ್ಪ ಹತ್ತಿಯನ್ನು ತೆಗೆದುಕೊಂಡು ಈ ಮಿಶ್ರಣದಲ್ಲಿ ಅದನ್ನು ಅದ್ದಿ ಮೊಡವೆ ಇರುವ ಜಾಗಕ್ಕೆ ಅದನ್ನು ಹಚ್ಚಬೇಕು. ಸ್ವಲ್ಪ ಸಮಯದ ನಂತರ ತುಸು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು.

English summary

Easy and Quick Ayurvedic Remedies For Treating Acne

Using Ayurveda for treating acne is highly beneficial, as it doesn't come with any side effects. Especially for those with a sensitive skin, Ayurvedic remedies are the best. It contains the most natural ingredients and it not only treats the condition but also rejuvenates the skin. So, here are some of the best Ayurvedic remedies that you can prepare at home and say a goodbye to acne for good!
X
Desktop Bottom Promotion