ಬ್ಯೂಟಿ ಟಿಪ್ಸ್: ಮುದ್ದು ಮುಖಕ್ಕೆ 'ಗ್ರೀನ್ ಟೀ' ಫೇಸ್ ಪ್ಯಾಕ್

By: Arshad
Subscribe to Boldsky

ತೀರಾ ಇತ್ತೀಚೆಗೆ ಭಾರತದಲ್ಲಿ ಪರಿಚಯಿಸಲ್ಪಟ್ಟ ಹಸಿರು ಟೀ (ಗ್ರೀನ್ ಟೀ)ಅಲ್ಪ ಸಮಯದಲ್ಲಿಯೇ ಜನಪ್ರಿಯತೆ ಪಡೆದುಕೊಂಡು ಸುಪರ್ ಫುಡ್ ಎಂಬ ಖ್ಯಾತಿಯನ್ನೂಗಳಿಸಿದೆ. ಇದು ಕೇವಲ ಆರೋಗ್ಯಕರ ಮಾತ್ರವಲ್ಲ, ಹಲವು ವಿಧದಲ್ಲಿ ಸೌಂದರ್ಯವರ್ಧಕವೂ ಹೌದು. ಸೌಂದರ್ಯವೃದ್ಧಿಗಾಗಿ ಹಸಿರು ಟೀ ಅನ್ನು ಕೆಲವಾರು ರೀತಿಯಲ್ಲಿ ಬಳಸಬಹುದು.

ಇದರಲ್ಲಿರುವ ಅತಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಮೊಡವೆಗಳನ್ನು ಕಡಿಮೆಗೊಳಿಸಲು, ತಲೆಯ ತುರಿಕೆ ಕಡಿಮೆಮಾಡಲು, ದುರ್ಬಲವಾಗಿದ್ದ ಕೂದಲನ್ನು ದೃಢಗೊಲಿಸಲು, ಕಲೆಗಳನ್ನು ನಿವಾರಿಸಲು ಮೊದಲಾದವುಗಳ ಸಹಿತ ಇನ್ನೂ ಹಲವಾರು ವಿಧದಲ್ಲಿ ಹಸಿರು ಟೀ ಉಪಯುಕ್ತವಾಗಿದೆ. ಹಸಿರು ಟೀ ಯಲಿರುವ ಅಮೈನೋ ಆಮ್ಲ, ಕಿಣ್ವ, ಪೊಟ್ಯಾಶಿಯಂ, ಮೆಗ್ನೀಶಿಯಂ ಮತ್ತು ಕೆಫೀನ್ ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿಯಾಗಿದೆ. ಹಸಿರು ಟೀ ಅನ್ನು ಸೌಂದರ್ಯವರ್ಧಕವಾಗಿ ಬಳಸಲು ಕೆಲವು ವಿಧಾನಗಳನ್ನು ಕೆಳಗೆ ಸೂಚಿಸಲಾಗಿದೆ...  

ಚರ್ಮದ ಬಣ್ಣವನ್ನು ಸಹಜವರ್ಣಕ್ಕೆ ತರಲು

ಚರ್ಮದ ಬಣ್ಣವನ್ನು ಸಹಜವರ್ಣಕ್ಕೆ ತರಲು

ಎಲ್ಲರಿಗೂ ಕಾಂತಿಯುಕ್ತ ಮತ್ತು ಬೆಳ್ಳಗಿನ ಚರ್ಮ ಬೇಕೆಂಬಾಸೆ ಇರುತ್ತದೆ. ಆದರೆ ನಿಸರ್ಗ ನಮ್ಮ ಚರ್ಮಕ್ಕೆ ಕೊಟ್ಟ ಸಹಜವರ್ಣ(ಬಿಸಿಲು ತಾಕದ ಚರ್ಮದ ಬಣ್ಣ)ವನ್ನು ಮಾತ್ರವೇ ಪಡೆಯಲು ಸಾಧ್ಯ. ಆದರೆ ಬಿಸಿಲು ಮತ್ತಿತರ ಕಾರಣಗಳಿಂದ ಚರ್ಮ ಗಾಢಗೊಂಡಿದ್ದರೆ ಇದನ್ನು ಮತ್ತೆ ಸಹಜವರ್ಣಕ್ಕೆ ತರಲು ಹಸಿರು ಟೀ ನೆರವಾಗುತ್ತದೆ. ಹಸಿರು ಟೀ ಬಳಕೆಯಿಂದ ಚರ್ಮದಡಿಯಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳು ಮತ್ತು ಧೂಳನ್ನು ನಿವಾರಿಸಿ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

ಚರ್ಮದ ಸ್ವರೂಪ ಉತ್ತಮಗೊಳಿಸಲು

ಚರ್ಮದ ಸ್ವರೂಪ ಉತ್ತಮಗೊಳಿಸಲು

ಒಂದು ಹಸಿರು ಟೀಬ್ಯಾಗ್ ಅನ್ನು ಕತ್ತರಿಸಿ ಇದರಲ್ಲಿರುವ ಪುಡಿಯನ್ನು ಸಂಗ್ರಹಿಸಿ. ಇದಕ್ಕೆ ಒಂದು ಚಮಚ ಲಿಂಬೆರಸ ಮತ್ತು ಒಂದು ಚಮಚ ಜೇನು ಸೇರಿಸಿ ಮಿಶ್ರಣ ಮಾಡಿ. ಈ ಲೇಪನವನ್ನು ಮುಖದ ಚರ್ಮಕ್ಕೆ ಹಚ್ಚಿ ಸುಮಾರು ಹದಿನೈದು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ.

ವೃದ್ಧಾಪ್ಯದ ಲಕ್ಷಣಗಳನ್ನು ತಡವಾಗಿಸಲು

ವೃದ್ಧಾಪ್ಯದ ಲಕ್ಷಣಗಳನ್ನು ತಡವಾಗಿಸಲು

ಹಸಿರು ಟೀ ಬಳಕೆಯಿಂದ ಚರ್ಮದ ಸೆಳೆತ ಹೆಚ್ಚುವುದರಿಂದ ವೃದ್ದಾಪ್ಯದ ಚಿಹ್ನೆಗಳಾದ ನೆರಿಗೆ ಮೊದಲಾದವು ಕಡಿಮೆಯಾಗುತ್ತವೆ. ಇದರಲ್ಲಿರುವ ಪಾಲಿಫೆನಾಲ್‌ಗಳು ದೇಹದಲ್ಲಿರುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳು ಚರ್ಮದ ಜೀವಕೋಶಗಳನ್ನು ಘಾಸಿಗೊಳಿಸುವುದನ್ನು ತಡೆದು ನೆರಿಗೆಯಾಗದಂತೆ ಸಹಕರಿಸುತ್ತದೆ.

ಹಸಿರು ಟೀ ಬಳಕೆ ಹೇಗೆ?

ಹಸಿರು ಟೀ ಬಳಕೆ ಹೇಗೆ?

ವೃದ್ಧಾಪ್ಯದ ಚಿಹ್ನೆಗಳನ್ನು ದೂರಾಗಿಸಲು ಒಂದು ಅಥವಾ ಎರಡು ಟೀ ಬ್ಯಾಗ್‌ನ ಪುಡಿಯನ್ನು ಸಂಗ್ರಹಿಸಿ ಇದಕ್ಕೆ ಒಂದು ಚಮಚ ಮೊಸರು ಬೆರೆಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತೆಳುವಾಗಿ ಮುಖ, ಕುತ್ತಿಗೆ ಕೈಗಳಿಗೆ ಹಚ್ಚಿ ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಿರಿ. ಈ ವಿಧಾನವನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಪುನರಾವರ್ತಿಸಿದರೆ ನೆರಿಗೆಗಳು ಮೂಡುವ ಸಾಧ್ಯತೆ ಕಡಿಮೆಯಾಗುತ್ತದೆ.

ಕಾಂತಿ ವರ್ಧಿಸುವ ಮಾಸ್ಕ್

ಕಾಂತಿ ವರ್ಧಿಸುವ ಮಾಸ್ಕ್

ಎರಡು ಬಳಸಿದ ಟಿ ಬ್ಯಾಗ್ ಗಳನ್ನು ಒಂದು ಪಾತ್ರೆಗೆ ಹಾಕಿ ಇದಕ್ಕೆ ಚಮಚದಷ್ಟು ಜೇನನ್ನು ಸೇರಿಸಿ ಮತ್ತು ಕೆಲವು ಹನಿಗಳಷ್ಟು ಲಿಂಬೆ ರಸವನ್ನು ಸೇರಿಸಿಕೊಳ್ಳಿ. ಇದನ್ನು ದಪ್ಪನೆಯ ಮಿಶ್ರಣದಂತೆ ಸಿದ್ಧಪಡಿಸಿ. ನಿಮ್ಮ ಮುಖ ಮತ್ತು ಕುತ್ತಿಗೆಗೆ ಈ ಮಾಸ್ಕ್ಅನ್ನು ಹಚ್ಚಿಕೊಳ್ಳಿ. ಇದನ್ನು 30 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ಸ್ಕ್ರಬ್ ಮಾಡಿ ಮತ್ತು ತಣ್ಣೀರಿನಲ್ಲಿ ತೊಳೆದುಕೊಳ್ಳಿ. ನಿಮ್ಮ ದಣಿದ ತ್ವಚೆಗೆ ಈ ಮಾಸ್ಕ್ ಹೆಚ್ಚಿನ ಆರಾಮವನ್ನು ನೀಡುತ್ತದೆ.

ಹಸಿರು ಚಹಾ ಮತ್ತು ಜೇನಿನ ಮುಖಲೇಪ

ಹಸಿರು ಚಹಾ ಮತ್ತು ಜೇನಿನ ಮುಖಲೇಪ

ಬಿಸಿನೀರಿನಲ್ಲಿ ಎರಡು ಅಥವಾ ಮೂರು ಹಸಿರು ಚಹಾ ಇರುವ ಚೀಲಗಳನ್ನು ಕೊಂಚಕಾಲ ಮುಳುಗಿಸಿ. ಬಳಿಕ ಈ ಚೀಲಗಳನ್ನು ಕತ್ತರಿಸಿ ಒಳಗಿನ ಟೀಪುಡಿಯನ್ನು ಒಂದು ಬೋಗುಣಿಯಲ್ಲಿ ಹಾಕಿ ಒಂದು ಚಿಕ್ಕ ಚಮಚ ಜೇನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇನ್ನು ಈ ಲೇಪವನ್ನು ಮುಖ ಮತ್ತು ಗಂಟಲಿಗೆ ಹಚ್ಚಿ ಸುಮಾರು ಹದಿನೈದು ನಿಮಿಷಗಳವರೆಗೆ ನಯವಾಗಿ ಮಸಾಜ್ ಮಾಡಿ. ಬಳಿಕ ಉಗುರುಬೆಚ್ಚನಿಯ ನೀರಿನಿಂದ ತೊಳೆದುಕೊಳ್ಳಿ. ನಂತರ ಸೋಪು ಉಪಯೋಗಿಸಬೇಡಿ. ಇದರಿಂದ ಮುಖದ ಚರ್ಮ ಕಾಂತಿಯುತವಾಗಿ ಮತ್ತು ತಾಜಾತನದಿಂದ ಕೂಡಿರುತ್ತದೆ.

ಹಸಿರು ಚಹಾ ಮತ್ತು ಬೇವಿನ ಎಲೆಯ ಮುಖಲೇಪ

ಹಸಿರು ಚಹಾ ಮತ್ತು ಬೇವಿನ ಎಲೆಯ ಮುಖಲೇಪ

ಒಂದು ಕಪ್ ಕುದಿಯುವ ನೀರಿನಲ್ಲಿ ಒಂದು ಚೀಲ ಹಸಿರು ಚಹಾ ಮತ್ತು ಸುಮಾರು ಆರು ಕರಿಬೇಬಿನ ಎಲೆಗಳನ್ನು ಹಾಕಿ ಕುದಿಸಿ. ನೀರು ಆವಿಯಾಗಿ ಸ್ವಲ್ಪವೇ ನೀರು ಇರುವಂತಿದ್ದಾಗ ಇಳಿಸಿ ಚೆನ್ನಾಗಿ ಅರೆಯಿರಿ. ಈ ಲೇಪನ ತಣ್ಣಗಾದ ಬಳಿಕ ಮುಖಕ್ಕೆ ಹಚ್ಚಿ ಹದಿನೈದು ನಿಮಿಷ ಒಣಗಲು ಬಿಡಿ. ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಚರ್ಮ ಹೊಸಕಾಂತಿಯನ್ನು ಮತ್ತು ತಾಜಾತನವನ್ನು ಪಡೆಯುತ್ತದೆ.

 
English summary

Different Ways To Include Green Tea In Your Beauty Regimen

Green tea contains a good amount of essential amino acids, enzymes, potassium, magnesium and caffeine that benefit your skin and hair. If you want to enhance your beauty with the help of green tea, here are several ways to do so. Listed here are the benefits and ways to include green tea in your beauty regimen.
Subscribe Newsletter