For Quick Alerts
ALLOW NOTIFICATIONS  
For Daily Alerts

ಮುಖದ ಅಂದಕ್ಕೆ-ಮನೆಯಂಗಳದ ಹೂವಿನ ಫೇಸ್ ಪ್ಯಾಕ್

ಯಾವುದೇ ರಾಸಾಯನಿಕಗಳನ್ನು ಬಳಸದೆ ಹೂವುಗಳಿಂದ ಮಾಡಿದಂತಹ ಫೇಸ್ ಪ್ಯಾಕ್ ಮತ್ತು ಮಾಸ್ಕ್ ಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಇದನ್ನು ಬಳಸಿಕೊಂಡು ನಿಮ್ಮ ಸೌಂದರ್ಯವನ್ನು ಹೆಚ್ಚಿಸಿ...

By Jaya Subramanya
|

ಸೌಂದರ್ಯ ಪ್ರಜ್ಞೆ ಎಂಬುದು ಅನಾದಿ ಕಾಲದಿಂದಲೂ ಸ್ತ್ರೀ ಸಮುದಾಯದಲ್ಲಿ ಅನವರತ ಕೇಳಿಬರುತ್ತಿರುವ ಮಾತಾಗಿದೆ. ನಮ್ಮ ಹಿರಿಯರ ಸಮಯದಿಂದ ಹಿಡಿದು ಇಲ್ಲಿಯವರೆಗೆ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮತ್ತು ಇನ್ನಷ್ಟು ಅಂದಗಾಣಲು ಹಲವಾರು ಪ್ರಯೋಗಗಳನ್ನು ನಡೆಸುತ್ತಲೇ ಬಂದಿದ್ದಾರೆ. ಮುಖದಲ್ಲಿ ಸಣ್ಣ ಮೊಡವೆ ಕಲೆಗಳು ಉಂಟಾದಾಗ ಕೂಡ ಹೌಹಾರಿ ಬಿಡುತ್ತೇವೆ!

ಪ್ರಸ್ತುತ ಬಳಸುತ್ತಿರುವ ಸೋಪು, ಲೋಷನ್, ಫೇಸ್‌ವಾಶ್ ಅನ್ನು ಬದಲಾಯಿಸಿ ನೈಸರ್ಗಿಕವಾದುದನ್ನು ಆಯ್ಕೆಮಾಡುತ್ತೇವೆ. ಸೌಂದರ್ಯ ತಜ್ಞೆಯರ ಸಲಹೆಗಳನ್ನು ಕೇಳಿ ಅದನ್ನು ಪ್ರಯೋಗಿಸುತ್ತೇವೆ. ಅದಕ್ಕೆಂದೇ ನಿಮ್ಮ ಪ್ರಯೋಗಗಳಿಗೆ ಸೂಕ್ತವಾಗಿರುವ ಹೂವುಗಳ ಫೇಸ್ ಪ್ಯಾಕ್ ವಿವರಗಳನ್ನು ನಾವು ಇಲ್ಲಿ ನೀಡುತ್ತಿದ್ದೇವೆ. ಸುಮಬಾಲೆಯ ತ್ವಚೆಗೆ ಹೂವಿನ ಫೇಸ್ ಪ್ಯಾಕ್

ಮೃದುವಾದ ಹೂವುಗಳಿಂದ ತಯಾರಿಸಲಾಗವು ಈ ಫೇಸ್‌ ಪ್ಯಾಕ್ ನಿಮ್ಮ ತ್ವಚೆಯನ್ನು ಮೃದುವಾಗಿಯೂ ಕಾಂತಿಯುಕ್ತವಾಗಿಯೂ ಮಾಡಿ ನಳನಳಿಸುವ ಸೌಂದರ್ಯವನ್ನು ನಿಮಗೆ ನೀಡುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಈ ಫೇಸ್ ಪ್ಯಾಕ್‌ಗಳನ್ನು ಸಿದ್ಧಪಡಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ....

ಗುಲಾಬಿ ದಳ ಮತ್ತು ಗೋಧಿ ಫೇಸ್ ಪ್ಯಾಕ್

ಗುಲಾಬಿ ದಳ ಮತ್ತು ಗೋಧಿ ಫೇಸ್ ಪ್ಯಾಕ್

ನಿಮ್ಮ ತ್ವಚೆಯನ್ನು ಹೈಡ್ರೇಟ್ ಆಗಿ ಇರಿಸಲು ಮತ್ತು ಮಾಯಿಶ್ಚರೈಸ್‌ಗೊಳಿಸಲು ಗುಲಾಬಿ ಎಸಳು ಸಹಕಾರಿ ಎಂದೆನಿಸಿದೆ. ಗೋಧಿಯನ್ನು ಮುಖಕ್ಕೆ ಬಳಸುವುದರಿಂದ ನಿಮ್ಮ ತ್ವಚೆ ನೈಸರ್ಗಿಕವಾಗಿ ಕಾಂತಿಯುಕ್ತಗೊಳ್ಳುತ್ತದೆ ಮತ್ತು ಇದು ತ್ವಚೆಯನ್ನು ಆಳವಾಗಿ ಎಕ್ಸ್‌ಫೋಲಿಯೇಟ್ ಮಾಡುತ್ತದೆ. ಸ್ವಲ್ಪ ಗುಲಾಬಿ ದಳಗಳನ್ನು ತೆಗೆದುಕೊಂಡು ಅದನ್ನು ಸೂರ್ಯನ ಬಿಸಿಲಿನಲ್ಲಿರಿಸಿ. ಅವುಗಳನ್ನು ಹುಡಿ ಮಾಡಿ ಪೇಸ್ಟ್ ತಯಾರಿಸಿ. ಈಗ ಎರಡು ಚಮಚ ಗುಲಾಬಿ ದಳದ ಹುಡಿಯನ್ನು ತೆಗೆದುಕೊಂಡು ಅದಕ್ಕೆ ಎರಡು ಚಮಚ ಗೋಧಿ ಹುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಯೋಗರ್ಟ್ ಸೇರಿಸಿಕೊಳ್ಳಿ. ಮುಖಕ್ಕೆ ಇದನ್ನು ಹಚ್ಚಿಕೊಂಡು ಸ್ವಲ್ಪ ಹೊತ್ತಿನ ಬಳಿಕ ತಣ್ಣನೆಯ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ದಾಸವಾಳ ಮತ್ತು ಮೊಸರಿನ ಫೇಸ್ ಪ್ಯಾಕ್

ದಾಸವಾಳ ಮತ್ತು ಮೊಸರಿನ ಫೇಸ್ ಪ್ಯಾಕ್

ನಿಮ್ಮ ತ್ವಚೆಗೆ ಅತ್ಯುತ್ತಮವಾಗಿರುವ ದಾಸವಾಳ ತ್ವಚೆಯನ್ನು ಸದಾಕಾಲ ಚಿರ ಯವ್ವೌನಗೊಳಿಸುತ್ತದೆ ಮತ್ತು ಗೆರೆಗಳು ಹಾಗೂ ಕಪ್ಪು ವರ್ತುಲಗಳನ್ನು ದೂರಮಾಡುತ್ತದೆ. ಸ್ವಲ್ಪ ದಾಸವಾಳವನ್ನು ಸೂರ್ಯನ ಬಿಸಿಲಿನ ಅಡಿಯಲ್ಲಿ ಇರಿಸಿ ಮತ್ತು ಚೆನ್ನಾಗಿ ಹುಡಿ ಮಾಡಿಕೊಂಡು ಡಬ್ಬದಲ್ಲಿ ಸಂಗ್ರಹಿಸಿಡಿ. ಮೂರು ಚಮಚ ಈ ಪುಡಿಯನ್ನು ನಾಲ್ಕು ಚಮಚ ಮೊಸರಿನೊಂದಿಗೆ ಕಲಸಿಕೊಳ್ಳಿ. ಈಗ ಒಂದು ಚಮಚ ಶ್ರೀಗಂಧ ಹುಡಿಯನ್ನು ಮಿಶ್ರ ಮಾಡಿ. ಚೆನ್ನಾಗಿ ಎಲ್ಲವನ್ನೂ ಬೆರೆಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಅದ್ಭುತ ಕಾಂತಿಯನ್ನು ಪಡೆದುಕೊಳ್ಳಿ.

ತಾವರೆ ಮತ್ತು ಬಾದಾಮಿ ಫೇಸ್‌ ಪ್ಯಾಕ್

ತಾವರೆ ಮತ್ತು ಬಾದಾಮಿ ಫೇಸ್‌ ಪ್ಯಾಕ್

ಸೂಕ್ಷ್ಮ ಮತ್ತು ಒಣ ತ್ವಚೆಗಾಗಿ ತಾವರೆ ಅತ್ಯುತ್ತಮವಾದುದು. ನಿಮ್ಮ ತ್ವಚೆಯನ್ನು ಹೈಡ್ರೇಟ್‌ಗೊಳಿಸಲು ತಾವರೆ ನೆರವಾಗಲಿದೆ. ಅಂತೆಯೇ ದೀರ್ಘಸಮಯದವರೆಗೆ ತ್ವಚೆಯನ್ನು ಪೋಷಿಸಲಿದೆ. ರಂಧ್ರಗಳನ್ನು ಬಿಗಿಗೊಳಿಸಿ ನಿಮ್ಮ ತ್ವಚೆಯನ್ನು ನೈಸರ್ಗಿಕವಾಗಿ ಕಾಂತಿಯುಕ್ತಗೊಳಿಸಲು ಇದು ಸಹಕಾರಿಯಾಗಿದೆ. ಐದು- ಆರು ತಾವರೆ ಎಸಳನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಹಾಲಿನೊಂದಿಗೆ ಅರೆದು ಪೇಸ್ಟ್ ತಯಾರಿಸಿ. ಈಗ ಈ ಮಿಶ್ರಣಕ್ಕೆ ಕೆಲವು ಚಮಚಗಳಷ್ಟು ಬಾದಾಮಿ ಪೌಡರ್ ಅನ್ನು ಸೇರಿಸಿಕೊಳ್ಳಿ. ನಂತರ ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.

ಮಲ್ಲಿಗೆ ಮತ್ತು ಹಾಲಿನ ಫೇಸ್‌ ಪ್ಯಾಕ್

ಮಲ್ಲಿಗೆ ಮತ್ತು ಹಾಲಿನ ಫೇಸ್‌ ಪ್ಯಾಕ್

ಮಲ್ಲಿಗೆ ಮತ್ತು ಹಾಲಿನ ಫೇಸ್ ಪ್ಯಾಕ್ ಮುಖದಲ್ಲಿರುವ ಮೊಡವೆಗಳನ್ನು ನಿವಾರಿಸಲಿದೆ. ಇದು ಆಂಟಿ ಏಜಿಂಗ್ ಅಂಶಗಳನ್ನು ಒಳಗೊಂಡಿದ್ದು ಇದು ಮೊಡವೆ ಮತ್ತು ವರ್ತುಲಗಳನ್ನು ನಿವಾರಿಸಲಿದೆ. ಮಲ್ಲಿಗೆ ಮತ್ತು ಹಾಲಿನ ಫೇಸ್ ಪ್ಯಾಕ್ ಮೃತಕೋಶಗಳಿಂದ ಸಂರಕ್ಷಣೆಯನ್ನು ನೀಡಲಿದೆ. ಅಂತೆಯೇ ತ್ವಚೆಯನ್ನು ಕಾಂತಿಕಯುಕ್ತಗೊಳಿಸಲಿದೆ. ಮುಷ್ಟಿಯಷ್ಟು ಮಲ್ಲಿಗೆ ಎಸಳನ್ನು ತೆಗೆದುಕೊಂಡು ಅದನ್ನು ಹುಡಿ ಮಾಡಿಕೊಳ್ಳಿ. ಇದಕ್ಕೆ ಎರಡು ಚಮಚ ಹಾಲು ಸೇರಿಸಿಕೊಳ್ಳಿ. ಮತ್ತು ಮುಲ್ತಾನಿ ಮಿಟ್ಟಿಯನ್ನು ಬೆರೆಸಿ ಮತ್ತು ಎರಡು ಚಮಚ ಓಟ್ಸ್ ಅನ್ನು ಬೆರೆಸಿಕೊಳ್ಳಿ. ಎಲ್ಲಾ ಮಿಶ್ರಣಗಳನ್ನು ಚೆನ್ನಾಗಿ ಕಲಸಿಕೊಂಡು ನಿಮ್ಮ ಮುಖಕ್ಕೆ ಈ ಮಾಸ್ಕ್ ಅನ್ನು ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತು ಕಾಯಿರಿ ತದನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಗುಲಾಬಿ ಮತ್ತು ಹಾಲಿನ ಪ್ಯಾಕ್

ಗುಲಾಬಿ ಮತ್ತು ಹಾಲಿನ ಪ್ಯಾಕ್

ಸೂಕ್ಷ್ಮ ತ್ವಚೆಗೆ ಅತ್ಯಂತ ಉತ್ತಮವಾದುದಾಗಿದೆ ಹಾಲು ಮತ್ತು ಗುಲಾಬಿ ಫೇಸ್ ಪ್ಯಾಕ್. ತ್ವಚೆಯನ್ನು ಇದು ಆಳವಾಗಿ ಕ್ಲೆನ್ಸ್ ಮಾಡಲಿದ್ದು ಮುಚ್ಚಿರುವ ರಂಧ್ರಗಳನ್ನು ತೆರೆಯಲಿದೆ. ಕೆಲವು ಗುಲಾಬಿ ದಳಗಳನ್ನು ಹಾಲಿನೊಂದಿಗೆ ಅರೆದುಕೊಳ್ಳಿ. ನಲ್ವತ್ತು ನಿಮಿಷಗಳ ಕಾಲ ಕಾಯಿರಿ ಮತ್ತು ಎಸಳು ಮೃದುವಾದ ನಂತರವೇ ಅದನ್ನು ಅರೆದುಕೊಳ್ಳಿ. ಅರೆದ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತಿನ ಬಳಿಕ ಇದನ್ನು ತೊಳೆದುಕೊಳ್ಳಿ.

ಚೆಂಡು ಹೂವು ಮತ್ತು ಗುಲಾಬಿ ಫೇಸ್ ಮಾಸ್ಕ್

ಚೆಂಡು ಹೂವು ಮತ್ತು ಗುಲಾಬಿ ಫೇಸ್ ಮಾಸ್ಕ್

ದಳಗಳೊಂದಿಗೆ ಚೆಂಡು ಹೂವನ್ನು ಕೀಳಿ. ಈಗ ಗುಲಾಬಿಯ ಕೆಲವು ಎಸಳುಗಳನ್ನು ತೆಗೆದುಕೊಳ್ಳಿ. ಎರಡೂ ಎಸಳನ್ನು ಚೆನ್ನಾಗಿ ಅರೆದು ಪೇಸ್ಟ್ ತಯಾರಿಸಿಕೊಳ್ಳಿ. ಇವುಗಳ ಎರಡು ಚಮಚ ಪೇಸ್ಟ್ ಅನ್ನು ತೆಗೆದುಕೊಂಡು ಅದಕ್ಕೆ ಎರಡು ಚಮಚ ಯೋಗರ್ಟ್ ಸೇರಿಸಿ. ಚೆನ್ನಾಗಿ ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ. ನಂತರ ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತಿನ ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಚೆಂಡು ಹೂವು ಮತ್ತು ಗುಲಾಬಿ ದಳದ ಫೇಸ್ ಮಾಸ್ಕ್ ನಿಮ್ಮ ತ್ವಚೆಯನ್ನು ಮೃದುವಾಗಿಸಿ ಹೈಡ್ರೇಟ್ ಮಾಡಲಿದೆ. ಸೌಂದರ್ಯ ವೃದ್ಧಿಗೆ ಬಳಸಿ ಚೆಂಡು ಹೂವಿನ ಆರೋಗ್ಯಕಾರಿ ಸಲಹೆ

English summary

Different Floral Face Masks You Should Try At Home

Flowers contain a high amount of proteins, vitamins, and antioxidants that help to benefit your skin in several ways. Using flower face packs helps to brighten up your skin and also improves the skin's elasticity. If you want to enjoy the benefits of flowers, here are some homemade flower packs you should try at home.Take a look.
X
Desktop Bottom Promotion