ಚಳಿಗಾಲದ ಬ್ಯೂಟಿ ಟಿಪ್ಸ್: ಅಡುಗೆಮನೆಯಲ್ಲಿಯೇ ಒಂದು ರೌಂಡಪ್!

By: Arshad
Subscribe to Boldsky

ಚಳಿಗಾಲದಲ್ಲಿ ಗಾಳಿಯಲ್ಲಿ ಆರ್ದ್ರತೆ ತೀರಾ ಕಡಿಮೆಯಾಗುವ ಕಾರಣ ಚರ್ಮಕ್ಕೆ ಅಗತ್ಯವಾದ ಪಸೆ ದೊರಕದೇ ಒಣಗುತ್ತದೆ. ಈ ಚರ್ಮ ಬಿಸಿಲಿಗೆ ಒಡ್ಡಿದ ಬಳಿಕ ಇತರ ಸಮಯಕ್ಕಿಂತಲೂ ಶೀಘ್ರವಾಗಿ ಚರ್ಮದ ಬಣ್ಣ ಗಾಢವಾಗುತ್ತದೆ. ಕೆಲವೊಮ್ಮೆ ಸರಿಸುಮಾರು ಎರಡು ಹಂತಗಳಷ್ಟು ಗಾಢವಾಗುತ್ತದೆ.  ಚಳಿಗಾಲದಲ್ಲಿ ಸೌಂದರ್ಯ ರಕ್ಷಣೆಗೆ ಬ್ಯೂಟಿ ಟಿಪ್ಸ್

ಈ ಪರಿಸ್ಥಿತಿ ಎದುರಾಗದೇ ಇರಲು ಚರ್ಮದ ಆರೈಕೆ ಇತರ ಸಮಯಕ್ಕಿಂತಲೂ ಚಳಿಗಾಲದಲ್ಲಿ ಹೆಚ್ಚು ಅಗತ್ಯ. ಇದಕ್ಕಾಗಿ ಕೃತಕ ಮತ್ತು ಅಪಾಯಕಾರಿ ರಾಸಾಯನಿಕಗಳಿಂದ ಕೂಡಿದ ಸುಂದರ ಪ್ರಸಾಧನಗಳ ಬದಲು ನೈಸರ್ಗಿಕ ಪರಿಕರಗಳನ್ನು ಬಳಸುವುದೇ ಜಾಣತನ. ಬನ್ನಿ, ನಿಸರ್ಗದ ಈ ಪರಿಕರಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನೋಡೋಣ: 

turmeric
 

ಅರಿಶಿನ ಪುಡಿ

ಕೊಂಚ ಹಳದಿ ಪುಡಿಯನ್ನು ಹಸಿಹಾಲಿನಲ್ಲಿ (ಕುದಿಸಿದಬಾರದು) ಬೆರೆಸಿ ದಪ್ಪನೆಯ ಲೇಪನ ತಯಾರಿಸಿ. ಈ ಲೇಪನವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖ, ಕುತ್ತಿಗೆಯ ಮೇಲೆ ತೆಳುವಾಗಿ ಹಚ್ಚಿ ಒಣಗಲು ಬಿಡಿ. ಬಳಿಕ ಕೇವಲ ಉಗುರುಬೆಚ್ಚನೆಯ ನೀರನ್ನು ಬಳಸಿ ಈ ಲೇಪನವನ್ನು ತೊಳೆದುಕೊಳ್ಳಿ. ಅರಿಶಿನ ಪುಡಿಯಲ್ಲಿ ಅಡಗಿದೆ ತ್ವಚೆಯ ಸೌಂದರ್ಯದ ರಹಸ್ಯ

ಅರಿಶಿನ ಪುಡಿಯನ್ನು ಶತಮಾನಗಳಿಂದ ಭಾರತದಲ್ಲಿ ಸೌಂದರ್ಯ ಪ್ರಸಾದನವಾಗಿ ಬಲಸಲ್ಪಡುತ್ತಾ ಬಂದಿದೆ. ಇದರ ಬ್ಯಾಕ್ಟೀರಿಯಾ ನಿವಾರಕ ಗುಣ ಚರ್ಮದ ಸೂಕ್ಷ್ಮರಂಧ್ರಗಳಲ್ಲಿದ್ದ ಕಲ್ಮಶ ಮತ್ತು ಕ್ರಿಮಿಗಳನ್ನು ನಿವಾರಿಸಿ ಚರ್ಮ ಸಹಜ ಸೌಂದರ್ಯ ಮತ್ತು ಸೌಮ್ಯತೆ ಪಡೆಯಲು ನೆರವಾಗುತ್ತದೆ. 

besan powder
 

ಕಡಲೆಹಿಟ್ಟು

ಕೊಂಚ ಕಡಲೆಹಿಟ್ಟು ಮತ್ತು ಕೊಂಚ ಗುಲಾಬಿ ನೀರನ್ನು ಬೆರೆಸಿ ದಪ್ಪನೆಯ ಲೇಪನ ತಯಾರಿಸಿ. ಈಲೇಪನವನ್ನು ಈಗತಾನೇ ತೊಳೆದುಕೊಂಡ ಮುಖ, ಕುತ್ತಿಗೆಯ ಮೇಲೆ ತೆಳುವಾಗಿ ಹಚ್ಚಿಕೊಂಡು ನಯವಾಗಿ ಉಜ್ಜಿಕೊಳ್ಳಿ. ಈ ಉಜ್ಜುವಿಕೆಯಿಂದ ಚರ್ಮದ ಸತ್ತ ಜೀವಕೋಶಗಳು ಸುಲಭವಾಗಿ ಸಡಿಲಗೊಂಡು ಹೊರಬರುತ್ತವೆ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಕ್ರಮ ಎಣ್ಣೆಚರ್ಮದವರಿಗೆ ಹೆಚ್ಚು ಅನುಕೂಲಕರವಾಗಿದೆ.   ಕಡಲೆ ಹಿಟ್ಟಿನ ಫೇಸ್‌ಪ್ಯಾಕ್‌ -ತ್ವಚೆಯ ಎಲ್ಲಾ ಸಮಸ್ಯೆಗೂ ಪರಿಹಾರ

Honey
 

ಜೇನು

ಪ್ರಕೃತಿಯ ಅದ್ಭುತ ಕೊಡುಗೆಯಾದ ಜೇನು ಒಂದು ಅತ್ಯುತ್ತಮ ಸಂರಕ್ಷಕವಾಗಿದೆ. ಇದರ ಅಪಾರ ಗುಣಗಳಲ್ಲಿ ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸುವ ಗುಣವೂ ಸೇರಿದೆ. ಇದಕ್ಕಾಗಿ ಜೇನನ್ನು ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ನಯವಾಗಿ ಉಜ್ಜಿಕೊಳ್ಳುವ ಮೂಲಕ ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಿ ಆರ್ದ್ರತೆ ನೀಡುವ ಮೂಲಕ ಚರ್ಮಕ್ಕೆ ಉತ್ತಮ ಪೋಷಣೆ ಮತ್ತು ತೇವವನ್ನು ನೀಡುತ್ತದೆ. 

milk
 

ಹಾಲು

ಹಸಿ ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲವೂ ಚರ್ಮದ ವರ್ಣವನ್ನು ಸಹಜವರ್ಣಕ್ಕೆ ತರಲು ನೆರವಾಗುತ್ತದೆ. ಸಾಮಾನ್ಯ ಚರ್ಮದವರಿಗೆ ಈ ವಿಧಾನ ಅತ್ಯಂತ ಸೂಕ್ತವಾಗಿದ್ದು ಯಾವುದೇ ಹಾನಿಯಿಲ್ಲದೇ ಚರ್ಮ ಸಹಜವರ್ಣ ಪಡೆಯಲು ನೆರವಾಗುತ್ತದೆ.

ಲಿಂಬೆರಸ

ಚರ್ಮವನ್ನು ಬಿಳಿಚಿಸುವಲ್ಲಿ ನಿಸರ್ಗ ನೀಡಿದ ಅತ್ಯಂತ ಪ್ರಬಲ ಮಾಧ್ಯಮವೆಂದರೆ ಲಿಂಬೆರಸ. ಇದರಲ್ಲಿರುವ ಸಿಟ್ರಿಕ್ ಆಮ್ಲ ಚರ್ಮದ ವರ್ಣವನ್ನು ಮತ್ತೆ ಸಹಜ ವರ್ಣದತ್ತ ತರಲು ಅತ್ಯುತ್ತಮವಾಗಿದೆ. ಆದರೆ ಈ ರಸ ಪ್ರಬಲವಾಗಿರುವ ಕಾರಣ ಕೊಂಚ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಬಿಸಿಲಿಗೆ ಕಪ್ಪಾಗಿದ್ದ ಭಾಗಗಳಿಗೆ ಹತ್ತಿಯುಂಡೆಯಿಂದ ಹಚ್ಚಿ ಒಣಗಲು ಬಿಡಿ. 

lime juice
 

ಕನಿಷ್ಠ ಹತ್ತು ನಿಮಿಷವಾದರೂ ಒಣಗಲಿ. ಈ ಸಮಯದಲ್ಲಿ ಚರ್ಮ ಕೊಂಚ ಉರಿ ಅನ್ನಿಸಬಹುದು, ಅನ್ನಿಸಬೇಕು ಕೂಡಾ. ಏಕೆಂದರೆ ಉರಿಯಾದರೆ ಲಿಂಬೆರಸ ಚರ್ಮದ ಆಳಕ್ಕೆ ಇಳಿಯುತ್ತಿದೆ ಎನ್ನುವ ಸೂಚನೆಯಾಗಿದ್ದು ಶೀಘ್ರವೇ ಚರ್ಮದ ಬಣ್ಣ ಸಹಜವರ್ಣದತ್ತ ತಿರುಗುತ್ತದೆ.

English summary

Best natural homemade winter face packs

We all face issues like tanning and dark skin that changes our skin tone to a shade or two shades darker than it naturally is. These kitchen ingredients to get fair skin, which we have listed below, will help you get back to your actual skin tone in no time at all, this winter. So, here are all the kitchen ingredients to get fair skin at home this winter. Take a look.
Story first published: Tuesday, January 10, 2017, 8:04 [IST]
Subscribe Newsletter