For Quick Alerts
ALLOW NOTIFICATIONS  
For Daily Alerts

ಸಾಸಿವೆ ಎಣ್ಣೆ- ಆರೋಗ್ಯಕ್ಕೂ ಸೈ, ಸೌಂದರ್ಯಕ್ಕೂ ಜೈ!

ಸಾಸಿವೆ ಎಣ್ಣೆಯಿಂದ ಆರೋಗ್ಯ ಲಾಭಗಳು ಇವೆ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ ಇದರಲ್ಲಿ ಅಡಗಿರುವಂತಹ ಸೌಂದರ್ಯವರ್ಧಕ ಗುಣಗಳು ಈಗಲೂ ಹೆಚ್ಚಿನವರಿಗೆ ತಿಳಿದಿಲ್ಲ, ಅಲ್ಲವೇ? ಹಾಗಾದರೆ ಈ ಲೇಖನ ಓದಿ....

By Hemanth
|

ಸೌಂದರ್ಯ ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರತಿಯೊಬ್ಬರಿಗೂ ಸುಂದರವಾಗಿರಬೇಕೆಂಬ ಬಯಕೆ ಇದ್ದೇ ಇರುತ್ತದೆ. ಅದಕ್ಕಾಗಿ ಶ್ರಮ ಕೂಡ ವಹಿಸುತ್ತಾ ಇರುತ್ತೇವೆ. ಆದರೆ ಬದಲಾಗುವ ಹವಾಮಾನದಲ್ಲಿ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರ. ಅಡುಗೆಮನೆಯ ಸಾಸಿವೆ ಎಣ್ಣೆ- ಅದೇನು ಮಾಯೆ, ಅದೇನು ಜಾದೂ!

ಅದರಲ್ಲೂ ಚಳಿಗಾಲ ಬಂತೆಂದರೆ ಅದರಿಂದ ದೊಡ್ಡ ಸಮಸ್ಯೆ ಕಾಡಲು ಆರಂಭಿಸುತ್ತದೆ. ತ್ವಚೆಯ ಆರೈಕೆ ಮಾಡುವುದು ಚಳಿಗಾಲದಲ್ಲಿ ತುಂಬಾ ಕಠಿಣವೆನ್ನಬಹುದು. ಭಾರತೀಯರು ಹಿಂದಿನಿಂದಲೂ ಪ್ರಕೃತಿಯಲ್ಲಿ ಸಿಗುವಂತಹ ಸಾಮಗ್ರಿಗಳನ್ನು ಬಳಸಿಕೊಂಡೇ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಕೂದಲು ಮತ್ತು ತ್ವಚೆ ಸೌಂದರ್ಯಕ್ಕೆ-ಸಾಸಿವೆ ಎಣ್ಣೆ

ಅದರಲ್ಲೂ ಸಾಸಿವೆ ಎಣ್ಣೆ ದೇಹದ ಸೌಂದರ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಕೇವಲ ತ್ವಚೆ ಮಾತ್ರವಲ್ಲದೆ ಕೂದಲಿನ ಆರೈಕೆಯಲ್ಲೂ ಬಳಸಬಹುದು. ಸಾಸಿವೆ ಎಣ್ಣೆಯನ್ನು ಸೌಂದರ್ಯಕ್ಕಾಗಿ ಬಳಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೂದಲಿನ ಆರೈಕೆಗೆ

ಕೂದಲಿನ ಆರೈಕೆಗೆ

ಚಳಿಗಾಲದಲ್ಲಿ ಹೊರಗಡೆ ಹೋಗುವಾಗ ನಾವು ತ್ವಚೆ ಹಾಗೂ ಕೂದಲಿನ ಬಗ್ಗೆ ಹೆಚ್ಚಿನ ಗಮನಹರಿಸ ಬೇಕಾಗುತ್ತದೆ. ಅದಕ್ಕಾಗಿ ಸಾಸಿವೆ ಎಣ್ಣೆಯನ್ನು ಬಳಸಬೇಕು. ಸಾಸಿವೆ ಎಣ್ಣೆಯಿಂದ ತಲೆಬುರುಡೆಗೆ ಮಸಾಜ್ ಮಾಡಿಕೊಳ್ಳುವುದರಿಂದ ತುರಿಕೆ, ತಲೆಹೊಟ್ಟು ಮತ್ತು ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿಕೊಂಡು ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿಕೊಂಡು ಬಳಿಕ ಶಾಂಪೂವಿನಿಂದ ತೊಳೆಯಿರಿ. ಇದರಿಂದ ಆರೋಗ್ಯಕರ ಹಾಗೂ ಕಾಂತಿಯುತ ಕೂದಲು ನಿಮ್ಮದಾಗುವುದು. ನಂಬಲೇಬೇಕು 'ಸಾಸಿವೆ ಎಣ್ಣೆ' ಕೂದಲಿಗೆ ಬಹಳ ಒಳ್ಳೆಯದು....

ಕೂದಲು ಬಿಳಿಯಾಗುವುದನ್ನು ತಡೆಯುವುದು

ಕೂದಲು ಬಿಳಿಯಾಗುವುದನ್ನು ತಡೆಯುವುದು

ಸಾಸಿವೆ ಎಣ್ಣೆಯ ಅತೀ ಮುಖ್ಯ ಉಪಯೋಗವೆಂದರೆ ಅದು ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಇದು ನೈಸರ್ಗಿಕವಾಗಿ ಕೂದಲನ್ನು ಕಪ್ಪಗೆ ಮಾಡುತ್ತದೆ. 20ರ ಹರೆಯದಲ್ಲೇ ಸಾಸಿವೆ ಎಣ್ಣೆಯನ್ನು ಕೂದಲಿಗೆ ಬಳಸಲು ಆರಂಭಿಸಿದರೆ ವಯಸ್ಸಾಗುತ್ತಿರುವಂತೆ ಕೂದಲು ಬಿಳಿಯಾಗುವುದನ್ನು ತಡೆಯಬಹುದು.

ತುಟಿಗಳ ರಕ್ಷಣೆಗೆ

ತುಟಿಗಳ ರಕ್ಷಣೆಗೆ

ಮುಖದ ಸೌಂದರ್ಯ ಎದ್ದು ಕಾಣಬೇಕೆಂದರೆ ತುಟಿಗಳು ಸುಂದರವಾಗಿರಬೇಕು. ಒಡೆದ ತುಟಿಗಳು ನಿಮ್ಮ ಸೌಂದರ್ಯವನ್ನು ಕೆಡಿಸುವುದರಲ್ಲಿ ಸಂಶಯವೇ ಇಲ್ಲ. ಕೆಲವು ಹನಿ ಸಾಸಿವೆ ಎಣ್ಣೆಯನ್ನು ತುಟಿಗೆ ಹಚ್ಚುವುದರಿಂದ ಒಡೆದ ತುಟಿಯ ಸಮಸ್ಯೆ ನಿವಾರಣೆಯಾಗುವುದು ಮತ್ತು ಇದು ಮಲಾಮ್ ಗಿಂತ ಒಳ್ಳೆಯದು. ಕೆಲವು ಹನಿ ಸಾಸಿವೆ ಎಣ್ಣೆಯನ್ನು ಹಚ್ಚಿಕೊಂಡು ಮಲಗುವುದರಿಂದ ಮೃಧುವಾದ ತುಟಿಯನ್ನು ಪಡೆಯಬಹುದು ಎಂದು ಹಿಂದಿನವರು ಹೇಳುತ್ತಾರೆ.

ತ್ವಚೆಯ ಕಾಂತಿ ಹೆಚ್ಚಿಸುವುದು

ತ್ವಚೆಯ ಕಾಂತಿ ಹೆಚ್ಚಿಸುವುದು

ಭಾರತೀಯರು ಸಾವಿರಾರು ವರ್ಷಗಳಿಂದಲೂ ದೇಹಕ್ಕೆ ಸಾಸಿವೆ ಎಣ್ಣೆಯನ್ನು ಹಚ್ಚಿಕೊಂಡು ಮಸಾಜ್ ಮಾಡಿಕೊಂಡು ಬಳಿಕ ಸ್ನಾನ ಮಾಡಿಕೊಳ್ಳುತ್ತಾ ಇದ್ದರು. ಸ್ನಾನಕ್ಕೆ ಮೊದಲು ಸಾಸಿವೆ ಎಣ್ಣೆಯನ್ನು ದೇಹದ ಒಣಗಿದ ಭಾಗಗಳಿಗೆ ಹಚ್ಚಿಕೊಳ್ಳಬೇಕು. ಕಲೆ ತೆಗೆದುಹಾಕಲು ಸಾಸಿವೆ ಎಣ್ಣೆಯನ್ನು ಕಡಲೆಹಿಟ್ಟು, ಮೊಸರು, ಲಿಂಬೆರಸದೊಂದಿಗೆ ಬೆರೆಸಿಕೊಂಡು ಪೇಸ್ಟ್ ಮಾಡಿಕೊಂಡು ದೇಹಕ್ಕೆ ಹಚ್ಚಿಕೊಳ್ಳಬೇಕು.

ಒಡೆದ ತುಟಿಗಳಿಗೆ

ಒಡೆದ ತುಟಿಗಳಿಗೆ

ಚಳಿಗಾಲದಲ್ಲಿ ದೇಹದ ಪ್ರತಿಯೊಂದು ಭಾಗವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ತುಟಿಗಳು ಒಡೆಯುವುದು ಚಳಿಗಾಲದಲ್ಲಿ ಸಾಮಾನ್ಯ. ಇದಕ್ಕಾಗಿ ಕೆಲವು ಹನಿ ಸಾಸಿವೆ ಎಣ್ಣೆಯನ್ನು ತುಟಿಗಳಿಗೆ ಹಚ್ಚಿಕೊಳ್ಳಿ. ಇದು ಮಲಾಮ್ ಗಿಂತ ಒಳ್ಳೆಯದು. ರಾತ್ರಿ ಮಲಗುವಾಗ ತುಟಿಗೆ ಕೆಲವು ಹನಿ ಸಾಸಿವೆ ಎಣ್ಣೆಯನ್ನು ಹಚ್ಚಿಕೊಂಡು ಮಲಗಿದರೆ ಬೆಳಿಗ್ಗೆ ಏಳುವಾಗ ತುಟಿಗಳು ಮಗುವಿನಷ್ಟೇ ಮೃದುವಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ.

English summary

Beauty usage of which you haven't heard of!

Winter is here and we are all set to welcome it with much galore, celebration and festivals. Naturally, these end-of-year events call for stepping it up a notch and looking extra special; while this may sound a bit exhausting, look no further than your kitchen shelves and rediscover the benefits of our own humble Mustard Oil....
X
Desktop Bottom Promotion