ಸೌಂದರ್ಯ ಟಿಪ್ಸ್: 'ಹಲಸಿನ ಹಣ್ಣಿನ' ಫೇಸ್ ಪ್ಯಾಕ್

By: suma
Subscribe to Boldsky

ಸೌಂದರ್ಯ ಪ್ರತಿ ಮಹಿಳೆಯ ಕನಸು. ಆಕೆ ಸೌಂದರ್ಯವತಿಯಾಗಿರಬೇಕು ಅಂದರೆ ಕೇವಲ ಆಕೆ ತೆಗೆದುಕೊಳ್ಳುವ ಆಹಾರ ಕ್ರಮದಿಂದ ಮಾತ್ರ ಸಾಧ್ಯವಲ್ಲ. ಸ್ವಲ್ಪ ಆಕೆಯ ಬಗ್ಗೆ ಸ್ವಯಂ ಕಾಳಜಿ ತೆಗೆದುಕೊಂಡಾಗ ಮಾತ್ರ ಇನ್ನಷ್ಟು ಬ್ಯೂಟಿಫುಲ್ ಆಗಿ ಕಾಣಲು ಸಾಧ್ಯವಾಗುತ್ತೆ.

ಆ ನಿಟ್ಟಿನಲ್ಲಿ ನಮ್ಮ ಪ್ರಕೃತಿ ಆಯಾ ಕಾಲಕ್ಕೆ ನೀಡುವ ಕೊಡುಗೆಗಳನ್ನೇ ಬಳಸಿಕೊಳ್ಳಬಹುದು. ಆದ್ರೆ ಹಾಗೆ ಬಳಸಿಕೊಂಡು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಬಗೆ ಹೆಚ್ಚಿನ ಮಹಿಳೆಯರಿಗೆ ತಿಳಿದಿರೋದಿಲ್ಲ. ಹಣ್ಣುಗಳು ಯಾವಾಗಲೂ ಕೂಡ ಸೌಂದರ್ಯ ವರ್ಧಕಗಳೇ. ಆ ನಿಟ್ಟಿನಲ್ಲಿ ಹಲಸಿನ ಹಣ್ಣಿನ ಕೊಡುಗೆ ಕೂಡ ಅಪಾರ.. ಸಂಪದ್ಭರಿತವಾದ ಹಲಸಿನ-ಹಣ್ಣಿನಲ್ಲಿದೆ ಆರೋಗ್ಯದ ಕಮಾಲು

ಅದರಲ್ಲೂ ಮಾರ್ಚ್, ಏಪ್ರಿಲ್, ಮೇ, ತಿಂಗಳು ಬಂತೆಂದರೆ, ಸಾಕು ಮಾರುಕಟ್ಟೆಗಳಲ್ಲಿ ಹಲಸಿನ ಹಣ್ಣುಗಳದ್ದೇ ಕಾರುಬಾರು. ಇದರ ಸುವಾಸನೆಯ ಭರಿತ ಪರಿಮಳ ಎಂತವರನ್ನೂ ಕೂಡ ತನ್ನ ಬಳಿ ಆಕರ್ಷಿಸುತ್ತದೆ. ಅರೇ, ಕೇವಲ ಹಲಸಿನ ಹಣ್ಣಿನ ವಾಸನೆಯನ್ನು ಮಾತ್ರ ಸವಿದರೆ ಸಾಕೇ..? ಅದರಲ್ಲೂ ಕೆಲವರಂತೂ ಹಲಸಿನ ಹಣ್ಣು ಅಂದ ಕೂಡಲೇ ಬಾಯಲ್ಲಿ ಕೆಲವರಿಗೆ ನೀರೂರುತ್ತೆ. ಹಾಗಂತ ಬಾಯಲ್ಲಿ ನೀರೂರಿಸಿ, ತಿನ್ನಲು ಮಾತ್ರ ರುಚಿಯಾಗಿರುವ ಹಣ್ಣು ಹಲಸು ಅಂತ ಅಂದುಕೊಳ್ಳಬೇಡಿ.. ಬದಲಾಗಿ ಹಲಸು ನಿಮ್ಮ ಸೌಂದರ್ಯ ವರ್ಧಕ ಕೂಡ ಹೌದು..  ಹಲಸಿನ ಪಾಯಸದ ರುಚಿ ಮರೆಯುವಂತಿಲ್ಲ

ಅದರಲ್ಲೂ ಇನ್ನೊಂದು ಸಂಗತಿ ನಿಮಗೆ ಹೇಳಲೇ ಬೇಕು, ಹಲಸು ಎಷ್ಟು ಉಪಕಾರಿಯೋ ಅಷ್ಟೇ ಹಲಸಿನ ಬೀಜವೂ ಕೂಡ ಸೌಂದರ್ಯ ವಿಷಯದಲ್ಲಿ ಎತ್ತಿದ ಕೈ...! ಬನ್ನಿ ಈ ಹಲಸಿನ ಹಣ್ಣನ್ನು ಬಳಸಿ ಹೇಗೆ ನಿಮ್ಮ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು ಅನ್ನೋದನ್ನು ನಾವು ನಿಮಗೆ ಸಿಂಪಲ್ ಆಗಿ ನಿಮಗೆ ತಿಳಿಸುತ್ತಿದ್ದೇವೆ ಮುಂದೆ ಓದಿ..   

ಮೊಡವೆ ಸಮಸ್ಯೆಯಿದ್ದರೆ

ಮೊಡವೆ ಸಮಸ್ಯೆಯಿದ್ದರೆ

ಕೆಲವು ಹಲಸಿನ ಹಣ್ಣಿನ ಸೊಳೆಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಗ್ರೈಂಡ್ ಮಾಡ್ಕೊಳ್ಳಿ, ತದನಂತರ ಈ ಪೇಸ್ಟ್ ಅನ್ನು ಮೊಡವೆಯ ಭಾಗಕ್ಕೆ ಹಚ್ಚಿ. 15 ನಿಮಿಷಗಳ ಕಾಲ ಹಾಗೆಯೇ ಒಣಗಲು ಬಿಡಿ. ನಂತರ ತಂಪು ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಮುಖದ ನೆರಿಗೆಗಳಿಂದ ದೂರವಾಗಲು

ಮುಖದ ನೆರಿಗೆಗಳಿಂದ ದೂರವಾಗಲು

ನೆರಿಗೆಗಳಿಂದ ದೂರಾಗಲು, ಹಣ್ಣಿನಿಂದ ಪೇಸ್ಟ್ ತಯಾರಿಸಿಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಬಹುದಾಗಿದೆ. ಈ ಪೇಸ್ಟ್‎ಗೆ ಒಂದು ಚಮಚ ಹಾಲನ್ನು ಸೇರಿಸಿಕೊಳ್ಳಿ ನಂತರ ಇದನ್ನು ಮಿಶ್ರಮಾಡಿಕೊಂಡು ನೆರಿಗೆಗಳ ಭಾಗಕ್ಕೆ ಹಚ್ಚಿಕೊಳ್ಳಿ. ನಂತರ 10 ನಿಮಿಷಗಳ ತರುವಾಯ ಅದನ್ನು ತೆಗೆಯಿರಿ. ಮುಖವನ್ನು ತಣ್ಣಗಿನ ನೀರಿನಿಂದ ತೊಳೆದುಕೊಂಡು ಐಸ್‎ನಿಂದ ಮುಖಕ್ಕೆ ಮಾಲೀಸು ಮಾಡಿಕೊಳ್ಳಿ.

ತುಟಿಯ ಸುತ್ತಲಿನ ಕಪ್ಪು ಕಲೆಗಳಿಗೆ..

ತುಟಿಯ ಸುತ್ತಲಿನ ಕಪ್ಪು ಕಲೆಗಳಿಗೆ..

ಹಲಸಿನ ಹಣ್ಣು ನಿಮ್ಮ ತುಟಿಗಳಿಗೆ ಬೆಸ್ಟ್ ಲಿಪ್ ಕೇರ್ ಆಗಲಿದೆ..ಈಗಿನ ಶುಷ್ಕ ವಾತಾವರಣದ ಪರಿಣಾಮವಾಗಿ ತುಟಿಗಳಲ್ಲಿ ಸೀಳು ಕಾಣಿಸಿಕೊಳ್ಳೋದು, ಒಡೆದು ರಕ್ತ ಸೋರುವ ಹಂತಕ್ಕೂ ಹೋಗಬಹುದು. ನಂತ್ರ ಅದು ತುಟಿಯ ಸುತ್ತ ಕಪ್ಪು ಕಲೆಗಳಿಗೆ ಕಾರಣವಾಗುತ್ತೆ. ಇನ್ನು ಕೆಲವರಿಗೆ ರಾತ್ರಿ ಮಲಗಿದ ಸಂದರ್ಬದಲ್ಲಿ ಜೊಲ್ಲು ಸೋರಿ, ಕಪ್ಪು ಕಲೆಗಳಾಗುವ ಸಾಧ್ಯತೆ ಇರುತ್ತೆ. ಅಂತವರು ಕೆಲವು ಹಲಸಿನ ಹಣ್ಣುಗಳನ್ನು ತುಟಿಗಳಿಗೆ ತಿಕ್ಕಿಕೊಳ್ಳೋದ್ರಿಂದ ಉತ್ತಮ ಪರಿಣಾಮವನ್ನು ಪಡೆದು ಕೊಳ್ಳಬಹುದು..ನೆನಪಿಡಿ ಹಲಸಿನ ಹಣ್ಣಿನ ತಿರುಳನ್ನು ನೀಟಾಗಿ ತೆಗೆದುಕೊಳ್ಳಿ. ಇಲ್ಲದೇ ಇದ್ರೆ ತುಟಿಗಳಿಗೆ ಅಂಟಿಕೊಳ್ಳುವ ಸಾಧ್ಯತೆಗಳಿರುತ್ತೆ.

ಕಣ್ಣಿನ ಸುತ್ತಲಿನ ನೆರಿಗೆಯ ನಿವಾರಣೆಗೆ

ಕಣ್ಣಿನ ಸುತ್ತಲಿನ ನೆರಿಗೆಯ ನಿವಾರಣೆಗೆ

ಇದರಿಂದ ಕಣ್ಣಿಗೆ ತಂಪು ಫೀಲಿಂಗ್ ಆಗೋದು ಮಾತ್ರವಲ್ಲ, ಕಣ್ಣಿನ ಸುತ್ತಲಿನ ಕಪ್ಪು ವರ್ತುಲವನ್ನು ನಿವಾರಿಸಿ, ಕೆಲವೇ ದಿನಗಳಲ್ಲಿ ಕಣ್ಣಿನ ಸುತ್ತಲಿನ ನೆರಿಗೆಗಳು ಕೂಡ ನಂತರ ತಣ್ಣೀರಿನಿಂದ ತೊಳೆಯಿರಿ

ಹಲಸಿನ ಬೀಜದ ಉಪಯೋಗಗಳು

ಹಲಸಿನ ಬೀಜದ ಉಪಯೋಗಗಳು

ಹಲಸಿನ ಬೀಜವನ್ನು ಸುಟ್ಟು ತಿನ್ನಬಹುದು ಅಥವಾ ಸಾರಿನಲ್ಲಿ ಬೇಯಿಸಿಯೂ ಸೇವಿಸಬಹುದು. ಹಲಸಿನ ಬೀಜದ ಮುಖಲೇಪದಿಂದ ಸೌಂದರ್ಯವೂ ವೃದ್ಧಿಸುವುದು.ಇದಕ್ಕಾಗಿ ಹಲಸಿನ ಹಸಿ ಬೀಜವೊಂದನ್ನು ಕಲ್ಲಿನ ಮೇಲೆ ಉಜ್ಜಿ ನಯವಾಗಿ ಅರೆದು ಸಮಪ್ರಮಾಣದಲ್ಲಿ ಜೇನು ಮತ್ತು ಹಾಲನ್ನು ಸೇರಿಸಿ ಮುಖಕ್ಕೆಹಚ್ಚಿ ಅರ್ಧ ಗಂಟೆಯ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುವುದು ಮತ್ತು ನೆರಿಗೆಗಳಾಗುವುದನ್ನೂ ತಪ್ಪಿಸಬಹುದು. ಹಲಸಿನ ಹಣ್ಣಿನ ಬೀಜ ಎಸೆಯುವ ಮುನ್ನ ಎರಡು ಬಾರಿ ಆಲೋಚಿಸಿ!

 
English summary

Beauty Benefits of Jackfruit You Might Not Know

Jackfruit is the second king of fruits and it is indeed one of the best fruits you should eat for the summer. In this article, you will get to know about how favorable this fruit is to you. After reading this, you will get to know jackfruit beauty benefits and will never skip any chance to have this nutritious fruit.
Subscribe Newsletter