For Quick Alerts
ALLOW NOTIFICATIONS  
For Daily Alerts

ನವ ತಾರುಣ್ಯದ ತ್ವಚೆಗಾಗಿ ಸ್ಟ್ರಾಬೆರಿ ಹಣ್ಣಿನ ಫೇಸ್ ಪ್ಯಾಕ್

By Arshad
|

ಸ್ಟ್ರಾಬೆರಿ ಹಣ್ಣುಗಳ ವಿಶೇಷತೆ ಏನು? ಹುಳಿ ಸಿಹಿ ಇರುವ ಈ ಹಣ್ಣಿನ ಬೀಜಗಳು ಇದರ ಹೊರಗಿರುತ್ತವೆ ಎಂಬುದೊಂದು ವಿಶೇಷವಾದರೆ ಹಣ್ಣನ್ನು ಸೇವಿಸುವ ಹೊರತಾಗಿ ತ್ವಚೆಯ ಆರೋಗ್ಯ ಮತ್ತು ಕಾಂತಿ ವೃದ್ಧಿಸುವ ಪ್ರಸಾಧನವಾಗಿಯೂ ಬಳಸಬಹುದು ಎಂಬುದು ಇನ್ನೊಂದು ವಿಷಯವಾಗಿದೆ.

Strawberry

ಸ್ಟ್ರಾಬೆರಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಚರ್ಮಕ್ಕೆ ಆರ್ದ್ರತೆ ನೀಡುವ ಮೂಲಕ ಚರ್ಮದ ಆರೋಗ್ಯ ವೃದ್ಧಿಸುತ್ತದೆ ಮತ್ತು ಒಳಗಿನಿಂದ ಉತ್ತಮ ಆರೈಕೆ ನೀಡುತ್ತದೆ. ವಿಶೇಷವಾಗಿ ಸೂಕ್ಷ್ಮಸಂವೇದಿ ತ್ವಚೆ ಇರುವವರಿಗೆ ಸ್ಟ್ರಾಬೆರಿ ಹಣ್ಣಿನ ಮುಖಲೇಪ ವರದಾನವಾಗಿದೆ. ಸ್ಟ್ರಾಬೆರಿಯಲ್ಲಿದೆ ಟಾಪ್ 10 ಆರೋಗ್ಯಕರ ಗುಣಗಳು

ಇತರ ಪ್ರಸಾಧನ ಅಥವಾ ಗಾಳಿಯಲ್ಲಿನ ಸೂಕ್ಷ್ಮಕಣಗಳು ಸೂಕ್ಷ್ಮಸಂವೇದಿ ತ್ವಚೆಯಲ್ಲಿ ಉರಿ ತರಿಸುತ್ತವೆ. ಈ ಉರಿಯನ್ನು ಸ್ಟ್ರಾಬೆರಿ ಹಣ್ಣಿನ ಮುಖಲೇಪ ಸಮರ್ಥವಾಗಿ ಇಲ್ಲವಾಗಿಸುತ್ತದೆ. ಸ್ಟ್ರಾಬೆರಿ ಹಣ್ಣಿನ ನಿತ್ಯದ ಸೇವನೆಯಿಂದ ಚರ್ಮದ ಜೊತೆಗೇ ಇಡಿಯ ದೇಹಕ್ಕೆ ಪೋಷಣೆ ನೀಡುತ್ತದೆ.

ಮುಖದ ತ್ವಚೆಗೆ ಆರೈಕೆ ನೀಡಲು ಸುಲಭವಾದ ಮುಖಲೇಪವನ್ನು ಮನೆಯಲ್ಲಿಯೇ ತಯಾರಿಸಬಹುದು. ಇಂದೇ ಕೊಂಚ ಸ್ಟ್ರಾಬೆರಿಹಣ್ಣುಗಳನ್ನು ಮಾರುಕಟ್ಟೆಯಿಂದ ತನ್ನಿ ಮತ್ತು ಕೆಳಗೆ ವಿವರಿಸಲಾದ ವಿಧಾನವನ್ನು ಅನುಸರಿಸಿ ನಿಮ್ಮ ಮುಖದ ಅಂದ ಮತ್ತು ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.

ಒಣಚರ್ಮಕ್ಕಾಗಿ
ಈ ವಿಧಾನ ಒಣಚರ್ಮದವರಿಗೆ ಸೂಕ್ತವಾಗಿದೆ. ಸ್ಟ್ರಾಬೆರಿಯಲ್ಲಿರುವ ವಿಟಮಿನ್ ಇ ಒಣಚರ್ಮಕ್ಕೆ ಅಗತ್ಯವಾಗಿರುವ ಆರ್ದ್ರತೆಯನ್ನು ನೀಡುವ ಮೂಲಕ ಒಣಚರ್ಮ ಪೋಷಣೆ ಪಡೆಯಲು ನೆರವಾಗುತ್ತದೆ. ಇದರೊಂದಿಗೆ ಕೊಂಚ ಮಾವಿನಹಣ್ಣನ್ನು ಬೆರೆಸಿದರೆ ಇದರಲ್ಲಿರುವ ವಿಟಮಿನ್ ಸಿ ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ. ಮೃದುವಾದ ತ್ವಚೆಗಾಗಿ ಸ್ಟ್ರಾಬರಿ ಫೇಸ್ ಮಾಸ್ಕ್

ಮುಖಲೇಪ ತಯಾರಿಸುವ ವಿಧಾನ
*ಸುಮಾರು ಐದರಿಂದ ಆರು ಚೆನ್ನಾಗಿ ಹಣ್ಣದ ಸ್ಟ್ರಾಬೆರಿ ಹಣ್ಣುಗಳನ್ನು ಚೆನ್ನಾಗಿ ಕಿವುಚಿ ಇದಕ್ಕೆ ಎರಡು ದೊಡ್ಡಚಮಚ ಜೇನು ಬೆರೆಸಿ
*ಈ ಮಿಶ್ರಣಕ್ಕೆ ಒಂದು ಮಧ್ಯಮ ಗಾತ್ರದ ಮಾವಿನ ಹಣ್ಣಿನ ತಿರುಳನ್ನು ಬೆರೆಸಿ. ಜೊತೆಗೇ ಒಂದು ದೊಡ್ಡಚಮಚ
*ಆಲಿವ್ ಎಣ್ಣೆ ಹಾಕಿ ಎಲ್ಲವನ್ನೂ ನಯವಾದ ಲೇಪನವಾಗುವಂತೆ ಮಿಶ್ರಣ ಮಾಡಿ.
*ಈ ಮಿಶ್ರಣವನ್ನು ನಿಮ್ಮ ಮುಖ, ಕುತ್ತಿಗೆ, ಕೈಗಳಿಗೆ ತೆಳುವಾಗಿ ಹಚ್ಚಿ ಒಣಗಲು ಬಿಡಿ. ಸುಮಾರು ಹದಿನೈದು ನಿಮಿಷಗಳ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸಬೇಡಿ.

ಸಾಮಾನ್ಯ/ಎಣ್ಣೆ ಚರ್ಮಕ್ಕಾಗಿ
*ಈ ವಿಧಾನವನ್ನು ಒಣಚರ್ಮದ ಹೊರತಾಗಿ ಇತರರೆಲ್ಲರೂ ಅನುಸರಿಸಬಹುದು. ಇದರಲ್ಲಿರುವ ಲೋಳೆಸರ ವಿಶೇಷವಾಗಿ ಮೊಡವೆಗಳಿದ್ದರೆ ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಎಣ್ಣೆಪಸೆಯನ್ನು ಹೀರಿ ಹೆಚ್ಚು ಹೊತ್ತು ಎಣ್ಣೆಯಿಲ್ಲದ ಚರ್ಮ ಹೊಂದಲೂ ಸಾಧ್ಯವಾಗುತ್ತದೆ.
*ಸುಮಾರು ಐದು ಸ್ಟ್ರಾಬೆರಿ ಹಣ್ಣುಗಳನ್ನು ಒಂದು ದೊಡ್ಡಚಮಚ ಲೋಳೆಸರದ ರಸದೊಂದಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ.
*ಆದರೆ ಕಣ್ಣುಗಳಿಗೆ ಇದರ ರಸ ಹೋಗದಂತೆ ಎಚ್ಚರ ವಹಿಸಿ. ಇದನ್ನು ಸುಮಾರು ಹದಿನೈದು ನಿಮಿಷ ಒಣಗಲು ಬಿಟ್ಟು ಬಳಿಕ ಬೆಚ್ಚಗಾಗಿಸಿದ ಒಣ ಟವೆಲ್‌ನಿಂದ ಒರೆಸಿಕೊಳ್ಳಿ.

English summary

Strawberry face masks for normal, dry and combination skin

You are already well-versed with the many benefits of eating strawberries. But did you know that slathering the fruit on your skin can help you get glowing skin? The antioxidants in strawberries keep your skin hydrated and lend your skin a healthy radiance from within. In fact, they are ideal for sensitive skin as they can soothe irritation
X
Desktop Bottom Promotion