For Quick Alerts
ALLOW NOTIFICATIONS  
For Daily Alerts

ಶ್..!ಇದು ಅಜ್ಜಿಯಿಂದ ಕಲಿತ ಸೌಂದರ್ಯ ರಹಸ್ಯ...

By Jaya subramanya
|

ಅಜ್ಜಿಯೊಂದಿಗಿನ ಅನುಬಂಧ ಮೊಮ್ಮಕ್ಕಳಿಗೆ ಅಪ್ಯಾಯಮಾನವಾದುದು. ತಾಯಿಯ ನಂತರ ಅಜ್ಜಿ ಎರಡನೇ ಅಮ್ಮನಿದ್ದಂತೆ. ಉತ್ತಮ ಸ್ನೇಹಿತೆಯಾಗಿ, ಬಂಧುವಾಗಿ, ಮುದ್ದುಮಾಡುವ ಅಮ್ಮನಾಗಿ, ಗುರುವಾಗಿ ಹಿತೈಷಿಯಾಗಿ ಹೀಗೆ ಅಜ್ಜಿಯ ಪಾತ್ರ ಹಿರಿದಾದುದು. ಅಮ್ಮನಿಂದ ಮುಚ್ಚಿಟ್ಟ ಎಷ್ಟೋ ವಿಷಯಗಳನ್ನು ಅಜ್ಜಿಯ ಬಳಿ ಬಿಚ್ಚಿಟ್ಟದ್ದೂ ಇದ್ದು ಆಕೆ ಎಷ್ಟು ನಮಗೆ ಪರಮಾಪ್ತಳು ಎಂಬುದನ್ನು ಅರಿತುಕೊಳ್ಳಬಹುದು.

ಮನೆಯ ಇತರ ಎಲ್ಲಾ ಸದಸ್ಯರುಗಳಿಗಿಂತಲೂ ಅಜ್ಜಿ ನಮಗೆ ಅಚ್ಚುಮೆಚ್ಚಿನವರಾಗಿತ್ತಾರೆ. ಅಪ್ಪ ಅಮ್ಮ ಎಷ್ಟೇ ಬೈದರೂ ಅವರ ಬಳಿ ನಮ್ಮ ಹಠ ಸಾಧಿಸಿದರೂ ಅಜ್ಜಿಯ ಬಳಿ ನಾವು ಕರಗಿ ಹೋಗುತ್ತೇವೆ. ಆಕೆ ಮುದ್ದು ಮಾಡುವ ಪರಿ ನಮ್ಮನ್ನು ಆಕೆಗೆ ಬಗ್ಗುವಂತೆ ಮಾಡುತ್ತದೆ. ಆಕೆಯ ಮಾತನ್ನು ಕೇಳುವಂತೆ ಮಾಡುತ್ತದೆ. ಆದ್ದರಿಂದಲೇ ಹಿರಿ ಜೀವ ಅಜ್ಜಿಯ ಆರೈಕೆ ಮೊಮ್ಮಕ್ಕಳಿಗೆ, ಮರಿಮಕ್ಕಳಿಗೆ ಬೇಕೇ ಬೇಕು. ಮನೆಯ ಊರುಗೋಲಿನಂತೆ ಅಜ್ಜಿ ಇದ್ದು ಆಕೆಯಿಂದ ನಾವು ಸಾಕಷ್ಟು ಜೀವನ ಪಾಠವನ್ನು ಕಲಿತುಕೊಳ್ಳಬಹುದಾಗಿದೆ. ರೋಗ ರುಜಿನಗಳ ಹೆಡೆಮುರಿ ಕಟ್ಟಿಹಾಕುವ ಅಜ್ಜಿ ಮಾಡಿದ ಮನೆಮದ್ದು!

ಅಜ್ಜಿಮದ್ದುಗಳು ಆಕೆಯಷ್ಟೇ ಪಕ್ವ ಮತ್ತು ಪರಿಣಾಮಕಾರಿಯಾಗಿರುತ್ತದೆ. ನಮ್ಮ ಎಷ್ಟೋ ಕಾಯಿಲೆಗಳನ್ನು ಆಕೆ ತಯಾರಿಸಿದ ಮದ್ದುಗಳು ಗುಣಪಡಿಸಿಬಿಟ್ಟಿವೆ. ಸೌಂದರ್ಯ ಗುಟ್ಟಾಗಿರಲಿ, ಅಡುಗೆಯ ವಿಷಯವೇ ಆಗಿರಲಿ ಇಲ್ಲಾ ಸಣ್ಣ ಪುಟ್ಟ ಔಷಧಗಳ ತಯಾರಿಯೇ ಆಗಲೀ ಅಜ್ಜಿಯ ಕೈ ಒಂದು ಮಂತ್ರದಂಡವಿದ್ದಂತೆ ಆ ಕೈ ಸೋಕಿದರೆ ಸಾಕು ನಮ್ಮ ಎಲ್ಲಾ ಬೇನೆಗಳೂ ಮಾಯವಾಗಿಬಿಡುತ್ತದೆ. ಅಜ್ಜಿ ಸೌಂದರ್ಯದ ಗಣಿ ಇದ್ದಂತೆ ನಮಗೆ ಎಷ್ಟೋ ಸಲ ಅನಿಸಿರಬಹುದು ಆಕೆ ನಮಗಿಂತಲೂ ಚೆನ್ನಾಗಿದ್ದಾಳೆ ತ್ವಚೆಯ ಹೊಳಪು ನಮಗಿಂತಲೂ ಇಮ್ಮಡಿಯಾಗಿದೆ. ಸುಂದರವಾದ ತ್ವಚೆ ಮತ್ತು ಕೇಶರಾಶಿಗೆ ಅಜ್ಜಿಯ ಸೌಂದರ್ಯ ಸಲಹೆ

ಕೂದಲಿನ ಸೊಗಸುತನ ನಮ್ಮ ಕೂದಲನ್ನು ಮೀರಿಸುವಂತಿದೆ ಇದರ ಗುಟ್ಟಾದರೂ ಏನು ಎಂಬುದು. ಮಾರುಕಟ್ಟೆಯಲ್ಲಿ ನಾವು ತೆರುವ ದುಬಾರಿ ಉತ್ಪನ್ನಗಳನ್ನು ಮೀರಿಸಿ ಅಜ್ಜಿಯ ರಹಸ್ಯ ಮನೆಮದ್ದುಗಳು ಸದ್ದಿಲ್ಲದೆ ಕೆಲಸ ಮಾಡುತ್ತಿರುತ್ತದೆ. ಆಕೆಯ ಸೌಂದರ್ಯದ ಗುಟ್ಟೇ ಇದು. ಇಂದಿನ ಲೇಖನದಲ್ಲಿ ಅಜ್ಜಿಯ ಬತ್ತಳಿಕೆಯಲ್ಲಿರುವ ಕೆಲವೊಂದು ಪರಿಣಾಮಕಾರಿ ಪ್ರಯೋಜನಗಳನ್ನು ನಿಮಗೆ ತಿಳಿಸುತ್ತಿದ್ದು ಆಕೆಯ ಸೌಂದರ್ಯ ರಹಸ್ಯಗಳನ್ನು ನಿಮಗೆ ತಿಳಿದುಕೊಂಡು ಅವುಗಳನ್ನು ಪ್ರಯೋಗಿಸಿಕೊಳ್ಳಬಹುದಾಗಿದೆ...

ಯುವತ್ವ ತ್ವಚೆ

ಯುವತ್ವ ತ್ವಚೆ

ದೀರ್ಘ ಸಮಯದವರೆಗೆ ನಿಮ್ಮ ತ್ವಚೆ ಯುವತ್ವದಿಂದ ಮಿಂಚಬೇಕು ಎಂದಾದಲ್ಲಿ, ಹಿಂದಕ್ಕೆ ಒರಗಿ ಮಲಗುವುದಾಗಿದೆ. ನಿಮ್ಮ ಹೊಟ್ಟೆಯ ಮೇಲೆ ಮಲಗುವುದನ್ನು ತಡೆಯುವುದರ ಮೂಲಕ ಸುಕ್ಕುಗಳುಂಟಾಗುವುದನ್ನು ತಡೆಯಬಹುದಾಗಿದೆ.

ಮೃದುವಾದ ಮಸಾಜ್ ಮಾಡಿಕೊಳ್ಳುವುದು

ಮೃದುವಾದ ಮಸಾಜ್ ಮಾಡಿಕೊಳ್ಳುವುದು

ಆಕ್ರಮಣಕಾರಿ ಉಜ್ಜುವಿಕೆ ಅಥವಾ ಮಸಾಜ್ ತ್ವಚೆ ಮತ್ತು ಕಣ್ಣುಗಳ ಅಡಿಭಾಗದಲ್ಲಿ ರಕ್ತನಾಳಗಳ ಒಡೆತಕ್ಕೆ ಕಾರಣವಾಗಬಹುದು ಎಂಬುದಾಗಿ ಅಜ್ಜಿ ಸೂಚಿಸುತ್ತಾರೆ. ಇದರ ಬದಲಿಗೆ ಮೃದುವಾಗಿ ನಿಮ್ಮ ಮೇಲ್ಮುಖವಾಗಿ ಮುಖವನ್ನು ಮಸಾಜ್ ಮಾಡುವುದರಿಂದ ತ್ವಚೆ ಸುಕ್ಕಾಗುವುದನ್ನು ತಡೆಗಟ್ಟಿ ವಯಸ್ಸಾಗುವಿಕೆಯನ್ನು ನಿರ್ಬಂಧಿಸಿಕೊಳ್ಳಬಹುದು.

ತೆಂಗಿನೆಣ್ಣೆಯ ಬಳಕೆ

ತೆಂಗಿನೆಣ್ಣೆಯ ಬಳಕೆ

ಕೂದಲಿನ ಬೆಳವರಣಿಗೆಯನ್ನು ಹೆಚ್ಚಿಸಲು ಮತ್ತು ಕೂದಲಿನ ಇತರ ಸಮಸ್ಯೆಗಳಿಂದ ಮುಕ್ತಿ ಪಡೆದುಕೊಳ್ಳಲು ತಲೆಬುರುಡೆಗೆ ತೆಂಗಿನೆಣ್ಣೆಯ ಮಸಾಜ್ ಮಾಡಿಕೊಳ್ಳಿ. ಇದು ಹೆಚ್ಚು ಪರಿಣಾಮಕಾರಿ ಸಾಮಾಗ್ರಿಯಾಗಿದ್ದು ಹೆಚ್ಚು ಪ್ರಯೋಜನಕಾರಿಯಾಗಿದೆ.

ನಿದ್ರಾಹೀನತೆ

ನಿದ್ರಾಹೀನತೆ

ನಿದ್ರಾಹೀನತೆ ಕೂಡ ಮುಖದ ಸೌಂದರ್ಯಕ್ಕೆ ಮಾರಕವಾಗಿದೆ ಎಂಬುದು ಅಜ್ಜಿಯ ಅಭಿಪ್ರಾಯವಾಗಿದೆ. ಸೂಕ್ತ ಪ್ರಮಾಣದ ನಿದ್ದೆಯನ್ನು ನೀವು ಮಾಡಿಲ್ಲ ಎಂದಾದಲ್ಲಿ ಸಣ್ಣ ವಯಸ್ಸಿನಲ್ಲಿಯೇ ವಯಸ್ಸಾದಂತೆ ನೀವು ಕಾಣುತ್ತೀರಿ ಮತ್ತು ಸೌಂದರ್ಯದ ವಿಷಯದಲ್ಲಿ ಕುಗ್ಗಿ ಹೋಗುತ್ತೀರಿ ಆದ್ದರಿಂದ ಸುಂದರವಾಗಿರಲು ಸಾಕಷ್ಟು ನಿದ್ದೆ ಮಾಡಿ ಎಂಬುದು ಅಜ್ಜಿಯ ಸಲಹೆಯಾಗಿದೆ.

ಆಹಾರ ಸೇವನೆ

ಆಹಾರ ಸೇವನೆ

ತರಕಾರಿಗಳು ಮತ್ತು ಹಣ್ಣುಗಳ ಸೇವನೆ ನಿಮ್ಮ ಹೃದಯ ಮತ್ತು ತ್ವಚೆಗೆ ಅತ್ಯುತ್ತಮವಾಗಿದೆ.ನೀವು ಸೇವಿಸುವ ಆಹಾರದಿಂದ ನಿಮ್ಮ ತ್ವಚೆ ವೃದ್ಧಿಗೊಳ್ಳುತ್ತದೆ ಎಂಬುದು ಆಕೆಯ ಸಲಹೆಯಾಗಿದೆ.

ಜಿಡ್ಡಿನಂಶ ನಿವಾರಣೆ

ಜಿಡ್ಡಿನಂಶ ನಿವಾರಣೆ

ತ್ವಚೆಯಲ್ಲಿನ ಜಿಡ್ಡಿನಂಶಗಳ ನಿವಾರಣೆಗೆ ಆ ಕಾಲದಲ್ಲಿ ಯಾವುದೇ ಕ್ರೀಮ್‎ಗಳು ಲಭ್ಯವಿರಲಿಲ್ಲ. ಆದರೂ ಅಜ್ಜಿ ಇವುಗಳ ನಿವಾರಣೆಗೆ ತಮ್ಮದೇ ವಿಧಾನವನ್ನು ಅನುಸರಿಸುತ್ತಿದ್ದರು. ಮೃದುವಾದ ಮೆತ್ತನೆಯ ಬಟ್ಟೆಯಿಂದ ಮುಖವನ್ನು ತೊಳೆದುಕೊಳ್ಳುವುದನ್ನು ಇವರು ಅನುಸರಿಸುತ್ತಿದ್ದರು.

ನಿಮ್ಮನ್ನು ನೀವು ಪ್ರೀತಿಸಿ

ನಿಮ್ಮನ್ನು ನೀವು ಪ್ರೀತಿಸಿ

ನಿಮ್ಮ ತ್ವಚೆಯನ್ನು ನೀವು ಪ್ರೀತಿಸಲು ಕಲಿತುಕೊಳ್ಳಬೇಕು. ಇದು ಅತ್ಯಗತ್ಯ ಪಾಠ ಎಂದೆನಿಸಿದೆ. ನಿಮ್ಮ ತ್ವಚೆಯನ್ನು ನೀವು ಪ್ರೀತಿಸಲು ಆರಂಭಿಸಿದಾಗ, ನಿಮಗೆ ಅದರ ಮೇಲೆ ಕಾಳಜಿಯುಂಟಾಗುತ್ತದೆ ಮತ್ತು ಇನ್ನಷ್ಟು ಅಗತ್ಯ ಆರೈಕೆಯನ್ನು ತ್ವಚೆಗಾಗಿ ನೀವು ಮಾಡುತ್ತೀರಿ.

Read more about: beauty tips
English summary

Hot Secrets To Steal From Your Grandma

Grandmothers, don't they have the best skin in the world? Not a pimple, not a scar, no blemishes and at times, the wrinkles on their face isn't that deep either.So, what is the secret behind our lovely grannies evergreen looks? Well, it surely is not the expensive beauty products or laser treatments.
X
Desktop Bottom Promotion