For Quick Alerts
ALLOW NOTIFICATIONS  
For Daily Alerts

ಹಣೆಯ ಮೇಲಿನ ಮೊಡವೆಗೆ ಪವರ್ ಫುಲ್ ಮನೆಮದ್ದು

By Manu
|

ಮೊಡವೆ ಎಂಬುದು ಬರಿಯ ನಿಮ್ಮ ಮುಖದಲ್ಲಿ ಮಾತ್ರವೇ ಉಂಟಾಗಬೇಕು ಎಂದೇನಿಲ್ಲ. ದೇಹದ ಇತರೆ ಭಾಗಗಳಲ್ಲಿ ಕೂಡ ಇದು ಕಾಣಿಸಿಕೊಳ್ಳಬಹುದಾಗಿದ್ದು ಹೆಚ್ಚಾಗಿ ನೆತ್ತಿಯಲ್ಲೂ ಮೊಡವೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ನೆತ್ತಿಯಲ್ಲೂ ಮೊಡವೆಗಳುಂಟಾಗುತ್ತದೆಯೇ ಎಂಬುದು ನಿಮಗೆ ಆಶ್ಚರ್ಯವನ್ನುಂಟು ಮಾಡಬಹುದು. ಆದರೆ ನಮ್ಮ ದೇಹದ ಇತರೆ ಭಾಗಗಳಂತೆ ನೆತ್ತಿ ಕೂಡ ರಹಸ್ಯ ಎಣ್ಣೆಯನ್ನು ಹೊರಹಾಕುತ್ತದೆ ಈ ಸಂದರ್ಭದಲ್ಲಿ ಕೂದಲಿನಲ್ಲಿರುವ ಕೊಳೆ ಈ ಎಣ್ಣೆಯೊಂದಿಗೆ ಮಿಶ್ರಗೊಂಡು ನೆತ್ತಿಯ ಮೊಡವೆಗೆ ಕಾರಣವಾಗುತ್ತದೆ. ಮೊಡವೆಯ ಕಲೆಗೆ ಚಿಟಿಕೆಯಷ್ಟು ಅಡುಗೆ ಸೋಡಾ ಸಾಕು...

ಹಾರ್ಮೋನ್ ಅಸಮತೋಲನ, ಅನಾರೋಗ್ಯಕರ ಡಯಟ್, ದುರ್ಬಲ ಹೈಜೀನ್, ಅಲರ್ಜಿ ಪ್ರತಿಕ್ರಿಯೆ ಹೀಗೆ ಮುಂತಾದ ಅಂಶಗಳು ಕೂಡ ನೆತ್ತಿಯ ಮೊಡವೆಗೆ ಕಾರಣಗಳಾಗಿವೆ. ಇನ್ನು ನೆತ್ತಿಯ ಮೇಲಿನ ಈ ಮೊಡವೆಗಳ ಬೆಳವಣಿಗೆ ಅಧಿಕವಾಯಿತು ಎಂದಾದಲ್ಲಿ ಅದನ್ನು ನಿಯಂತ್ರಣಕ್ಕೆ ತರುವುದೇ ಕಷ್ಟ. ಹಾಗಿದ್ದರೆ ಇದಕ್ಕೆ ಪರಿಹಾರಗಳೇನು ಎಂದು ಚಿಂತಿಸದಿರಿ. ಓ ಮೊಡವೆ ಕಲೆಗಳೇ, ನೀ ಹೀಗೇಕೆ ಕಾಡುತ್ತಿರುವೆ?

ಇಂದಿನ ಲೇಖನದಲ್ಲಿ ಈ ಮೊಡವೆಗಳಿಂದ ಪರಿಹಾರವನ್ನು ಕಂಡುಕೊಳ್ಳುವ ವಿಧಾನಗಳನ್ನೇ ನಾವು ತಿಳಿಸುತ್ತಿದ್ದು ಇವುಗಳನ್ನು ಅನುಸರಿಸುವುದರ ಮೂಲಕ ನೈಸರ್ಗಿಕವಾಗಿ ಮೊಡವೆಗಳಿಂದ ಸಂರಕ್ಷಣೆಯನ್ನು ಪಡೆದುಕೊಳ್ಳಬಹುದು ಅಂತೆಯೇ ಅದರ ಪರಿಣಾಮಗಳಿಂದ ಸಹ. ಹಾಗಿದ್ದರೆ ತಡ ಮಾಡದೇ ಲೇಖನದಲ್ಲಿ ನಾವು ನೀಡಿರುವ ನೈಸರ್ಗಿಕ ಪರಿಹಾರೋಪಾಯಗಳನ್ನು ಅರಿತುಕೊಂಡು ನಿಮ್ಮ ನೆತ್ತಿಯ ಮೊಡವೆಯ ಸಂರಕ್ಷಣೆಯನ್ನು ಮಾಡಿಕೊಂಡು ಫಲ ಪಡೆದುಕೊಳ್ಳಿ...

ಟಿ ಟ್ರೀ ಆಯಿಲ್

ಟಿ ಟ್ರೀ ಆಯಿಲ್

ಮೊಡವೆ ಮತ್ತು ನೆತ್ತಿಯ ಇತರೆ ಸಮಸ್ಯೆಗಳನ್ನು ನಿವಾರಿಸಲು ಟಿ ಟ್ರೀ ಆಯಿಲ್ ಅತ್ಯುತ್ತಮ ಎಂದೆನಿಸಿದೆ. ನಂಜುನಿವಾರಕ ಮತ್ತು ಸೋಂಕು ನಿವಾರಕದಂತೆ ವರ್ತಿಸಿ ಮೊಡವೆಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಸಮಪ್ರಮಾಣದಲ್ಲಿ ಟಿ ಟ್ರೀ ಆಯಿಲ್ ಮತ್ತು ಆಲೀವ್ ಆಯಿಲ್ ಅನ್ನು ಮಿಶ್ರ ಮಾಡಿಕೊಂಡು ನಂತರ ನೆತ್ತಿಗೆ ಹಚ್ಚಿಕೊಳ್ಳಿ.

ಆಪಲ್ ಸೀಡರ್ ವಿನೇಗರ್

ಆಪಲ್ ಸೀಡರ್ ವಿನೇಗರ್

ಬ್ಯಾಕ್ಟೀರಿಯಾ ನಿರೋಧಕ ಮತ್ತು ಔಷಧೀಯ ಗುಣಗಳನ್ನು ಹೊಂದಿರುವ ಆಪಲ್ ಸೀಡರ್ ವಿನೇಗರ್ ಬ್ಯಾಕ್ಟೀರಿಯಾಗಳಿಂದ ಕಿರು ಚೀಲಗಳನ್ನು ಮತ್ತು ಮೊಡವೆಯನ್ನುಂಟು ಮಾಡುವ ತೈಲವನ್ನು ತೆರವುಗೊಳಿಸುತ್ತದೆ. ವಿನೇಗರ್ ಮತ್ತು ನೀರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಈ ಮಿಶ್ರಣವನ್ನು ನೆತ್ತಿಗೆ ಹಚ್ಚಿಕೊಳ್ಳಿ 20 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ.

ಅರಿಶಿನ

ಅರಿಶಿನ

ನೆತ್ತಿತ ಮೊಡವೆಗಳಿಂದ ರಕ್ಷಣೆ ಪಡೆಯಲು ಅರಶಿನ ಕೂಡ ಉಪಕಾರಿ ಎಂದೆನಿಸಿದೆ. ಅರಿಶಿನಕ್ಕೆ 1:4 ಪ್ರಮಾಣದಲ್ಲಿ ತೆಂಗಿನೆಣ್ಣೆಯನ್ನು ಮಿಶ್ರ ಮಾಡಿ ನಂತರ ಸೋಂಕಿತ ಪ್ರದೇಶಕ್ಕೆ ಇದನ್ನು ಹಚ್ಚಿ ನಂತರ ಉಗುರು ಬೆಚ್ಚಗಿನ ನೀರಿನಿಂದ ನೆತ್ತಿಯನ್ನು ತೊಳೆದುಕೊಳ್ಳಿ.

ಅಲೋವೆರಾ

ಅಲೋವೆರಾ

ಈ ನೈಸರ್ಗಿಕ ಉತ್ಪನ್ನದ ಬಹಳಷ್ಟು ಪ್ರಯೋಜನಗಳನ್ನು ನಾವು ಅರಿತಿದ್ದರೂ ಇದು ಕಮಾಲನ್ನೇ ಮಾಡಲಿದೆ ಎಂಬುದು ನಿಮಗೆ ಗೊತ್ತೇ? ನೀವು ನೇರವಾಗಿ ಅಲೋವೆರಾ ಜೆಲ್ ಅನ್ನು ನೆತ್ತಿಗೆ ಹಚ್ಚಿಕೊಳ್ಳಬಹುದು ನಂತರ ಒಣಗಲು ಬಿಡಿ. ದಿನದಲ್ಲಿ ಎರಡು ಬಾರಿ ಈ ಕ್ರಿಯೆಯನ್ನು ಮಾಡಿ. ಅತಿ ಕಡಿಮೆ ಸಮಯದಲ್ಲೇ ನೆತ್ತಿಯ ಮೊಡವೆಗಳಿಂದ ನಿಮಗೆ ಪರಿಹಾರವನ್ನು ನೀಡಲು ಇದು ಶಕ್ತವಾಗಿದೆ.

ಬೇವು

ಬೇವು

ಭಾರತೀಯ ನೀಲಕ ಎಂಬ ಹೆಸರಿನಿಂದ ಖ್ಯಾತಿಗೊಂಡಿರುವ ಬೇವು ನೆತ್ತಿಯ ಮೊಡವೆಯನ್ನು ಉಪಚರಿಸುವಲ್ಲಿ ಅದ್ಭುತವನ್ನೇ ಮಾಡುತ್ತದೆ. ಮೊಡವೆಯನ್ನು ತ್ವರಿತವಾಗಿ ಒಣಗಿಸುವಂತಹ ನಂಜು ನಿರೋಧಕ ಮತ್ತು ಪ್ರತಿಜೀವಕ ಅಂಶಗಳನ್ನು ಇದು ಒಳಗೊಂಡಿದೆ. ಬೇವಿನೆಲೆಗಳನ್ನು ನೀರಿನಲ್ಲಿ ಕುದಿಸಿಕೊಳ್ಳಿ ನಂತರ ಅದನ್ನು ನುಣ್ಣಗೆ ಪೇಸ್ಟ್‌ನಂತೆ ಮಾಡಿಕೊಂಡು ನೆತ್ತಿಯ ಮೊಡವೆಗೆ ಹಚ್ಚಿ. ಇದು ಮೊಡವೆಯನ್ನು ಕೂಡಲೇ ಒಣಗಿಸುತ್ತದೆ.

ಟೊಮೇಟೋ ರಸ

ಟೊಮೇಟೋ ರಸ

ಟೊಮೇಟೋವು ಸಿಲಿಸಿಲಿಕ್ ಆಸಿಡ್ ಅನ್ನು ಒಳಗೊಂಡಿರುವುದರಿಂದ ಮೊಡವೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನೆತ್ತಿಯ ಭಾಗಕ್ಕೆ ಟೊಮೇಟೋ ರಸವನ್ನು ಹಚ್ಚಿಕೊಳ್ಳಿ 10 ನಿಮಿಷಗಳ ನಂತರ ತೊಳೆದುಕೊಳ್ಳಿ ಅಂತೆಯೇ ಟೊಮೇಟೋ ರಸ ಹೆಚ್ಚು ಸಮಯ ತ್ವಚೆಯಲ್ಲಿ ಇರದಂತೆ ನೋಡಿಕೊಳ್ಳಿ.

ಜೇನು

ಜೇನು

ನೆತ್ತತಿ ಮೊಡವೆಗೆ ಕಾರಣವಾಗಿರುವ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಜೇನು ತಡೆಯುತ್ತದೆ. ನೆತ್ತಿಗೆ ನೇರವಾಗಿ ಜೇನನ್ನು ಹಚ್ಚಿಕೊಳ್ಳಿ ನಂತರ 10 ನಿಮಿಷ ಬಿಟ್ಟು ತಣ್ಣಗಿನ ನೀರಿನಲ್ಲಿ ನೆತ್ತಿಯನ್ನು ತೊಳೆದುಕೊಳ್ಳಿ. ದಿನಕ್ಕೆ ಒಂದು ಬಾರಿ ಈ ಕ್ರಿಯೆಯನ್ನು ಮಾಡಿ.

English summary

Get Rid Of Scalp Acne Instantly

Acne is just not restricted to your face or body. It can occur at any part of the body, including your scalp. This problem is quite annoying to treat for most of them. In this article, we are here to guide you with a few tips on how to get rid of the scalp acne instantly. If you're wondering how, then keep reading.
Story first published: Tuesday, March 29, 2016, 20:17 [IST]
X
Desktop Bottom Promotion