For Quick Alerts
ALLOW NOTIFICATIONS  
For Daily Alerts

ಮೊಡವೆಗಳ ಸಮಸ್ಯೆಗೆ ಜೇನು-ಲ್ಯಾವೆಂಡರ್ ಎಣ್ಣೆಯ ಫೇಸ್ ಮಾಸ್ಕ್!

By Super
|

ಮೊಡವೆಗಳು ಎಂದರೆ ಸಾಕು ನಮ್ಮ ಯುವ ಜನತೆ ಇರಲಿ, ವಯಸ್ಕರು ಸಹ ಬೆಚ್ಚಿ ಬೀಳುತ್ತಾರೆ. ಬಂಪ್‌ಗಳು, ಬ್ಲಾಕ್ ಹೆಡ್‌ಗಳು ಅಥವಾ ಮೊಡವೆಗಳು ಎಲ್ಲವೂ ಒಂದೇ ಪ್ಯಾಕೇಜ್‌‍ನಂತೆ ಒಟ್ಟಿಗೆ ಬರುತ್ತವೆ. ಇದು ಬಂದಿತೆಂದರೆ ಮುಗಿಯಿತು ನಿಮ್ಮ ಲುಕ್ ಬಗ್ಗೆ ನೀವೇ ಅಸಹ್ಯ ಪಡುವ ಮಟ್ಟಿಗೆ ಇವು ನಿಮ್ಮ ಮುಖವನ್ನು ಹಾಳು ಮಾಡುತ್ತವೆ. ಮುಖದ ತ್ವಚೆಯಲ್ಲಿ ಕಟ್ಟಿಕೊಂಡ ರಂಧ್ರಗಳು, ನಿರ್ಜೀವ ಕೋಶಗಳು ಅಥವಾ ಕೆಲವೊಮ್ಮೆ

ಬ್ಯಾಕ್ಟೀರಿಯಗಳು ಮೊಡವೆಗಳಿಗೆ ಮೂಲ ಕಾರಣವಾಗಿರುತ್ತವೆ. ಕೆಲವೊಮ್ಮೆ ಒತ್ತಡ ಮತ್ತು ಹಾರ್ಮೋನುಗಳ ಅಸಮತೋಲನವು ಸಹ ಇದಕ್ಕೆ ಕಾರಣವಾಗುತದೆ. ಹೀಗೆ ಮೊಡವೆಗಳು ಕಾಣಿಸಿಕೊಳ್ಳಲು ಹಲವಾರು ಕಾರಣಗಳು ಇರುತ್ತವೆ. ಮನೆಮದ್ದಿನ ಮಾಯಾ ಜಾದೂಗೆ ಮೊಡವೆ ಮಂಗಮಾಯ!

ಮೊಡವೆಗಳು ಮತ್ತು ಕಲೆಗಳಿಂದ ನಿಮ್ಮ ಮುಖವನ್ನು ನೀವು ಸುರಕ್ಷಿತವಾಗಿ ಇರಿಸಿಕೊಳ್ಳಲು, ಮೊಡವೆಗಳು ನಿಮ್ಮ ಮುಖದಲ್ಲಿ ಉತ್ಪತ್ತಿಯಾಗುವಂತ ವಾತಾವರಣವನ್ನು ತಡೆಯಬೇಕಾಗುತ್ತದೆ. ಸ್ವಲ್ಪ ಪ್ರಯತ್ನಪಟ್ಟರೆ ಇದನ್ನು ನೀವು ಸಾಧಿಸಬಹುದು. ಅದರಲ್ಲೂ ಪ್ರಾಕೃತಿಕ ಪದಾರ್ಥಗಳು ನಿಮಗೆ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ. ಈ ಪದಾರ್ಥಗಳು ಅಗ್ಗ, ಸುರಕ್ಷಿತ ಮತ್ತು ನಂಬಿಕೆಗೆ ಪಾತ್ರವಾದ ಪದಾರ್ಥಗಳಾಗಿರುತ್ತವೆ.

DIY Vitamin C, Honey And Lavender Oil Face Mask To Prevent Acne

ಇಂದು ಬೋಲ್ಡ್‌ಸ್ಕೈ ನಿಮಗಾಗಿ ಮೊಡವೆಗಳನ್ನು ನಿವಾರಿಸಿಕೊಳ್ಳಲು ಇರುವ ಮಾಸ್ಕ್ ಕುರಿತಾಗಿ ತಿಳಿಸುತ್ತದೆ. ಈ ಮಾಸ್ಕ್ ತಯಾರಿಸಲು ವಿಟಮಿನ್ ಸಿ ಪೌಡರ್ ಅಥವಾ ಕಿತ್ತಳೆ ಹಣ್ಣಿನ ಸಿಪ್ಪೆ, ಜೇನು ಮತ್ತು ಲ್ಯಾವೆಂಡರ್ ಎಣ್ಣೆಯ ಫೇಸ್ ಮಾಸ್ಕ್ ಪೌಡರ್ ಬೇಕಾಗುತ್ತದೆ. ವಿಟಮಿನ್ ಸಿ ಪೌಡರ್ ತ್ವಚೆಯಲ್ಲಿ ಪಿಎಚ್ ಸಮತೋಲನವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಮತ್ತೊಂದು ಬಗೆಯಲ್ಲಿ ಜೇನು ತುಪ್ಪವು ಈ ಮಾಸ್ಕ್‌ಗೆ ಆಂಟಿಸೆಪ್ಟಿಕ್, ಆಂಟಿ ಆಕ್ಸಿಡೆಂಟ್ ಮತ್ತು ಆಂಟಿಬ್ಯಾಕ್ಟೀರಿಯಲ್ ಅಂಶಗಳನ್ನು ಒದಗಿಸುತ್ತದೆ.

ಇನ್ನು ಕೊನೆಯ ಪದಾರ್ಥ, ಲ್ಯಾವೆಂಡರ್ ಎಣ್ಣೆ. ಇದು ಒಂದು ಉತ್ತಮ ಎಸೆನ್ಶಿಯಲ್ ಆಯಿಲ್ ಆಗಿದ್ದು, ಇದು ತ್ವಚೆಯ ಮೇಲೆ ಗುಳ್ಳೆಗಳು ಇತ್ಯಾದಿ ಕಾಣಿಸಿಕೊಳ್ಳದಂತೆ ತಡೆಯುತ್ತದೆ. ಬನ್ನಿಇನ್ನು ತಡಮಾಡದೆ ಈ ಮಾಸ್ಕ್ ತಯಾರಿಸುವ ವಿಧಾನವನ್ನು ತಿಳಿದುಕೊಳ್ಳೋಣ.

ಪದಾರ್ಥಗಳು:
*1 ಟೀ ಸ್ಪೂನ್ ವಿಟಮಿನ್ ಸಿ ಪುಡಿ ಅಥವಾ ಕಿತ್ತಳೆ ಹಣ್ಣಿನ ಸಿಪ್ಪೆ
*1 ಟೀ ಸ್ಪೂನ್ ಕಚ್ಛಾ ಜೇನು ತುಪ್ಪ
*2-3 ಹನಿ ಲ್ಯಾವೆಂಡರ್ ಎಣ್ಣೆ

ಬಳಸುವುದು ಹೇಗೆ?
*ಈ ಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿಕೊಳ್ಳಿ. ಅದನ್ನು ಮೃದುವಾಗಿ ಮುಖ ಮತ್ತು ಕುತ್ತಿಗೆ ಮೇಲೆ ಲೇಪಿಸಿ.
*15-20 ನಿಮಿಷ ಬಿಟ್ಟು ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
*ಈ ಚಿಕಿತ್ಸೆಯನ್ನು ವಾರಕ್ಕೆ ಎರಡು ಬಾರಿ ಮಾಡಿ.

English summary

DIY Vitamin C, Honey And Lavender Oil Face Mask To Prevent Acne

Today at Boldsky, we will be sharing with you an easy-to-prepare DIY mask to prevent acne from occurring. For this DIY mask, you will need vitamin C powder or orange peel powder, honey and lavender oil. Vitamin C powder helps in restoring the pH balance of the skin. On the other hand, honey is an excellent remedy packed with antiseptic, antioxidant and antibacterial properties. So, read on to know more about the ingredients required and how to use this effective anti-acne face mask.
X
Desktop Bottom Promotion