For Quick Alerts
ALLOW NOTIFICATIONS  
For Daily Alerts

ಕಾಲುಗಳ ಆರೋಗ್ಯದ ಕಡೆಗೂ ಇರಲಿ ಗಮನ

By Deepu
|

ನಮ್ಮ ದೇಹವೆಂಬುದು ಗುಡಿಯಿದ್ದಂತೆ ಆತ್ಮವು ಅಲ್ಲಿ ದೈವ ಸ್ವರೂಪಿಯಾಗಿರುವಂಥದ್ದು. ಆದ್ದರಿಂದ ದೇಹದ ಸರ್ವ ಅಂಗಗಳು ದೈನಂದಿನ ಕೆಲಸಗಳಿಗೆ ಹೇಗೆ ಪೂರಕವಾಗಿದೆಯೋ ಅಂತೆಯೇ ಅವುಗಳ ಆರೈಕೆಯನ್ನು ನಾವು ಮಾಡಬೇಕಾಗುತ್ತದೆ. ಒಂದು ವೇಳೆ ದೇಹದ ಒಂದು ಅಂಗ ಕಾರ್ಯನಿರ್ವಹಿಸುವುದನ್ನು ಬಿಟ್ಟರೂ ಕೂಡ ನಾವು ಧರಾಶಾಯಿಯಾಗುವುದು ಖಂಡಿತ. ನಮ್ಮ ಸರ್ವ ಅಂಗಗಳು ಚೆನ್ನಾಗಿ ಕಾರ್ಯನಿರ್ವಹಿಸಿದಲ್ಲಿ ಮಾತ್ರವೇ ನಾವು ಚಟುವಟಿಕೆಯಿಂದ ಕೂಡಿರಲು ಸಾಧ್ಯವಾಗುತ್ತದೆ. ನಿದ್ದೆ ಕೆಡಿಸುವ ಕಾಲುಗಳ ಸ್ನಾಯು ಸೆಳೆತಕ್ಕೆ ಸೂಕ್ತ ಮನೆಮದ್ದು

ಅಂತೆಯೇ ದೇಹದ ಆಧಾರ ಸ್ತಂಭಗಳು ಎಂದೆನಿಸಿರುವ ಕಾಲುಗಳ ಆರೈಕೆಗೆ ನಾವು ವಿಶೇಷ ಆರೈಕೆಯನ್ನು ಮಾಡಲೇಬೇಕಾಗುತ್ತದೆ. ದಿನವಿಡೀ ಶ್ರಮವಹಿಸಿ ದುಡಿಯುವ ಕಾಲುಗಳಿಗೆ ತಕ್ಕ ಮಟ್ಟಿಗಿನ ಆರೈಕೆಯನ್ನು ನಾವು ಮಾಡಬೇಕು. ಅದರಲ್ಲೂ ರಾತ್ರಿ ಮಲಗುವ ಮುನ್ನ ಕಾಲುಗಳು ಮತ್ತು ಪಾದಗಳಿಗೆ ಸೂಕ್ತ ಮಸಾಜ್ ಅನ್ನು ನಡೆಸಬೇಕು ಎಂಬುದಾಗಿ ವೈದ್ಯರು ಸಲಹೆ ನೀಡುತ್ತಾರೆ.

ತೆಂಗಿನೆಣ್ಣೆಯನ್ನು ಬಳಸಿ ಕಾಲುಗಳಿಗೆ ಉತ್ತಮ ರೀತಿಯ ಮಸಾಜ್ ಅನ್ನು ಮಾಡಬಹುದು, ಇದು ಕಾಲುಗಳಲ್ಲಿರುವ ಸ್ನಾಯುಗಳಿಗೆ ವಿಶ್ರಾಂತಿಯನ್ನು ನೀಡಿ ದೇಹದ ಒತ್ತಡವನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ, ಅಂತೆಯೇ ರಕ್ತ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಕಾಲುಗಳಿಗೆ ಮಸಾಜ್ ಮಾಡುವುದರಿಂದ ಉಂಟಾಗುವ ಪ್ರಯೋಜನಗಳನ್ನು ಕುರಿತು ಅರಿತುಕೊಳ್ಳೋಣ..

ರಕ್ತ ಸಂಚಾರ ವೃದ್ಧಿ

ರಕ್ತ ಸಂಚಾರ ವೃದ್ಧಿ

ದೇಹದಲ್ಲಿ ರಕ್ತ ಸಂಚಾರಕ್ಕೆ ಯಾವುದೇ ಅಡ್ಡಿಯುಂಟಾಗದಂತೆ ನಿಯಮಿತ ರೀತಿಯಲ್ಲಿ ಈ ಕ್ರಿಯೆ ನಡೆಯುತ್ತಿರಬೇಕು. ಹಾಗಾಗಿ ರಾತ್ರಿ ಮಲಗುವ ಮುನ್ನ ಕಾಲುಗಳಿಗೆ ಮಸಾಜ್ ಮಾಡುವುದರಿಂದ ಕಾಲುಗಳಿಗೆ ರಕ್ತ ಸಂಚಾರವನ್ನು ಪೂರೈಸುತ್ತದೆ. ಅಂತೆಯೇ ಹೃದಯ ರೋಗಗಳನ್ನು ನಿವಾರಿಸುವುದರೊಂದಿಗೆ, ಕಾಲುಗಳಲ್ಲಿ ಕಂಡುಬರುವ ಹಲವಾರು ದೋಷಗಳನ್ನು ನಿವಾರಿಸುವಲ್ಲಿ ಕೂಡ ಕಾಲುಗಳ ಮಸಾಜ್ ಅತ್ಯುತ್ತಮವಾದುದು.

ಕಾಲುಗಳ ಸಮಸ್ಯೆ ನಿವಾರಣೆ

ಕಾಲುಗಳ ಸಮಸ್ಯೆ ನಿವಾರಣೆ

ಉಗುರು ಬೆಚ್ಚಗಿನ ತೆಂಗಿನೆಣ್ಣೆಯನ್ನು ಬಳಸಿಕೊಂಡು ಕಾಲುಗಳ ಮಸಾಜ್ ಮಾಡುವುದರಿಂದ ನರಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ, ತಿಂಗಳಿಗೊಮ್ಮೆಯಾದರೂ ಕಾಲುಗಳ ಮಸಾಜ್ ಕ್ರಿಯೆಯನ್ನು ಅಭ್ಯಸಿಸಿ.

ಕಡಿಮೆ ರಕ್ತದೊತ್ತಡ

ಕಡಿಮೆ ರಕ್ತದೊತ್ತಡ

ಮಲಗುವ ಮುನ್ನ 10 ನಿಮಿಷಗಳಿಗೆ ಕಾಲುಗಳ ಮಸಾಜ್ ಮಾಡುವುದರಿಂದ ನಿಮ್ಮ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಆತಂಕವನ್ನು ಕಡಿಮೆಗೊಳಿಸುತ್ತದೆ ಹಾಗೂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಆಮ್ಲಗಳ ತ್ಯಜಿಸುವಿಕೆ

ಆಮ್ಲಗಳ ತ್ಯಜಿಸುವಿಕೆ

ಪ್ರತೀ ರಾತ್ರಿ 20 ನಿಮಿಷಗಳ ಕಾಲ ನಡೆಸುವ ದೇಹದ ಮಸಾಜ್ ಸ್ನಾಯು ಅಂಗಾಂಶಗಳಲ್ಲಿರುವ ಲ್ಯಾಕ್ಟಿಕ್ ಆಮ್ಲವನ್ನು ತೊಡೆದು ಹಾಕುತ್ತದೆ. ಈ ಲ್ಯಾಕ್ಟಿಕ್ ಆಮ್ಲವನ್ನು ನೀವು ಕಡೆಗಣಿಸುವುದು ಕಾಲುಗಳ ಹಲವಾರು ತೊಂದರೆಗಳಿಗೆ ಕಾರಣವಾಗಬಹುದು.

ಕೀಲುಗಳಲ್ಲಿರುವ ನೋವಿನ ಶಮನ

ಕೀಲುಗಳಲ್ಲಿರುವ ನೋವಿನ ಶಮನ

ದೇಹದಲ್ಲಿರುವ ಕೀಲು ನೋವು ಮತ್ತು ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರಮಾಡುವಲ್ಲಿ ಮಸಾಜ್ ಉತ್ತಮ ಕ್ರಿಯೆಯಾಗಿದೆ. ಮಸಾಜ್ ಅನ್ನು ಒತ್ತಡ ಪಾಯಿಂಟ್‌‌ಗಳಲ್ಲಿ ನಡೆಸುವುದರಿಂದ ಕೀಲುನೋವುಗಳನ್ನು ತೊಡೆದು ಹಾಕಲು ಇದು ಸಹಕಾರಿಯಾಗುತ್ತದೆ.

ತಲೆನೋವಿನ ಉಪಶಮನ

ತಲೆನೋವಿನ ಉಪಶಮನ

ನಿತ್ಯವೂ 15 ನಿಮಿಷಗಳು ಕಾಲಿನ ಮಸಾಜ್ ನಡೆಸುವುದು ಯಾವುದೇ ಬಗೆಯ ತಲೆಶೂಲೆಯನ್ನು ತಗ್ಗಿಸುತ್ತದೆ. ತಲೆನೋವನ್ನು ಉಂಟುಮಾಡುವ ಮೆದುಳಿನಲ್ಲಿರುವ ನರಗಳನ್ನು ಶಾಂತಗೊಳಿಸಲು ಸಹಕಾರಿ.

ಗರ್ಭಿಣಿ ಸ್ತ್ರೀಯರಿಗೆ

ಗರ್ಭಿಣಿ ಸ್ತ್ರೀಯರಿಗೆ

ಗರ್ಭಧಾರಣೆಯ ಅಂತಿಮ ತ್ರೈಮಾಸಿಕದಲ್ಲಿ ಕಾಲುಗಳ ಮಸಾಜ್ ಅನ್ನು ಗರ್ಭಿಣಿ ಸ್ತ್ರೀಯರು ಮಾಡಿಕೊಳ್ಳುವುದು ಉತ್ತಮ. ಊದಿಕೊಂಡಿರುವ ಕಾಲುಗಳಲ್ಲಿ ಸಂಗ್ರಹವಾಗಿರುವ ದ್ರವವು ಮರಳಿ ಮೂತ್ರಕೋಶಕ್ಕೆ ಮರಳುವುದನ್ನು ತಡೆದು ಅದನ್ನು ದೇಹದಿಂದ ಹೊರಹಾಕುವಲ್ಲಿ ಮಸಾಜ್ ಸಹಾಯ ಮಾಡುತ್ತದೆ.

English summary

Health Benefits Of Massaging Leg Before Bedtime

Our feet do a lot of work. And, most of us ignore our tiny toes at the end of the day. In fact, our feet are the least pampered parts of the body- do you agree? This little remedy helps keep the feet strong, flexible and also aids in keeping several health problems at bay. Foot massages are not new.
X
Desktop Bottom Promotion