For Quick Alerts
ALLOW NOTIFICATIONS  
For Daily Alerts

ಊಹೆಗೂ ನಿಲುಕದ ಪಪ್ಪಾಯಿಯ ಪವರ್‌ಗೆ ಬೆರಗಾಗಲೇಬೇಕು!

By Super
|

ಪಪ್ಪಾಯಿ ಹಣ್ಣಿನಲ್ಲಿರುವ ಸುವಾಸನೆಯ ರುಚಿ, ಮೃದು ಬೆಣ್ಣೆಯಂತಿರುವ ಸಾಂದ್ರತೆ ಮತ್ತು ಉತ್ಕೃಷ್ಟ ರಚನೆ ಇವುಗಳನ್ನು ಕಂಡುಕೊಂಡ ಕ್ರಿಸ್ಟೋಫರ್ ಕೊಲಂಬಸ್ ಈ ಹಣ್ಣಿಗೆ "ದೇವತೆಗಳ ಹಣ್ಣು - ಫ್ರೂಟ್ಸ್ ಆಫ್ ಏಂಜೆಲ್ಸ್" ಎಂದು ಅಡ್ಡ ಹೆಸರಿಟ್ಟನು. ಪಪ್ಪಾಯಿಹಣ್ಣು ಒಳ್ಳೆಯ ಕಾರಣಕ್ಕಾಗಿ ಪ್ರಪಂಚಾದ್ಯಂತ ಅತ್ಯಂತ ಜನಪ್ರಿಯವಾಗಿದೆ.

ಈ ಉಷ್ಣವಲಯದಲ್ಲಿ ಬೆಳೆಯುವ ಹಣ್ಣಿನಲ್ಲಿ ಅಧಿಕವಾಗಿ ವಿಟಮಿನ್ ಎ, ಸಿ, ಇ ಮತ್ತು ಕೆ ಇವೆ ಹಾಗೂ ಉತ್ಕರ್ಷಣ ನಿರೋಧಕ ಗುಣಗಳು ಇವೆ. ಹಾಗೂ ಇದರಲ್ಲಿ ಮೆಗ್ನೀಸಿಯುಂ, ಪೊಟಾಸ್ಸಿಯುಂ, ನಿಯಾಸಿನ್, ಕ್ಯಾರೋಟೀನ್, ಪ್ರೋಟೀನ್, ನಾರಿನಾಂಶ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಪಪೈನ್ ಎಂಬ ಕಿಣ್ವವಿರುತ್ತವೆ. ಪಪ್ಪಾಯಿಹಣ್ಣು ಭಾಗವಲ್ಲದೆ, ಅದರ ಬೀಜದಲ್ಲಿಯೂ ಕೂಡ ಹಲವು ಆರೋಗ್ಯ ಲಾಭಗಳಿವೆ.

ಪಪ್ಪಾಯಿ ಹಣ್ಣಿನಲ್ಲಿ ನಿಮ್ಮ ಚರ್ಮ ಹಾಗೂ ತಲೆಗೂದಲುಗಳಿಗೆ ಹೆಚ್ಚು ಉಪಯೋಗವಾಗುವ ಹಲವಾರು ಅಂಶಗಳಿವೆ. ಆದ್ದರಿಂದಲೇ ಈ ಹಣ್ಣು ಹಲವಾರು ಸೌಂದರ್ಯವರ್ಧಕಗಳು, ಸೌಂದರ್ಯ ಮತ್ತು ತಲೆಗೂದಲ ರಕ್ಷಣೆಯ ಉತ್ಪನ್ನಗಳಿಗೆ ಬಳಸಲಾಗುತ್ತಿದೆ. ಇವುಗಳಲ್ಲಿ ಪಪ್ಪಾಯಿ ಹಣ್ಣಿನ ಅತ್ಯುನ್ನತ ಸೌಂದರ್ಯ ಹೆಚ್ಚಿಸುವ ವಿಧಾನಗಳನ್ನು ನಿಮ್ಮ ಮುಂದಿಟ್ಟಿದ್ದೇವೆ.

Top Beauty Benefits of Papaya

ಚರ್ಮದ ಸಹಜ ವರ್ಣವನ್ನು ಬೆಳಗುವುದು
ನಿಮ್ಮ ಚರ್ಮದ ಸಹಜ ಬಣ್ಣವನ್ನು ಬೆಳಗುವುಂತೆಮಾಡುವುದು ಪಪ್ಪಾಯಿಹಣ್ಣಿನ ಅತ್ಯಂತ ಪರಿಣಾಮಕಾರಿ ಸೌಂದರ್ಯವರ್ಧಕ ಪ್ರಯೋಜನಗಳಲ್ಲಿ ಒಂದಾಗಿದೆ. ಅದರಲ್ಲಿ ನೈಸರ್ಗಿಕವಾಗಿ ಬಿಳಿಚಿಸುವ ಗುಣಗಳಿವೆ. ಜೊತೆಗೆ, ಅದರ ಶುದ್ಧೀಕರಣ ಗುಣಗಳಿಂದ ನಿಮ್ಮ ಚರ್ಮದಲ್ಲಿರುವ ಕಲ್ಮಶಗಳನ್ನು ತೆರವುಗೊಳಿಸಲು ಸಹಾಯಮಾಡುತ್ತದೆ. ಅದರಲ್ಲಿರುವ ವಿಟಮಿನ್ ಸಿ ಚರ್ಮದ ಜೀವಕೋಶಗಳನ್ನು ಬಿಸಿಲಿನ ಹೊಡೆತದಿಂದ ರಕ್ಷಿಸುತ್ತದೆ.
*ಹಣ್ಣಿನ ಒಂದು ಸಣ್ಣ ಭಾಗವನ್ನು ತೆಗೆದುಕೊಂಡು ನಿಮ್ಮ ಮುಖ, ಕತ್ತು, ಕೈ ಮತ್ತು ಕಾಲುಗಳ ಮೇಲೆ ಉಜ್ಜಿ. ಹಾಗೆಯೇ ಒಣಗಲು ಬಿಡಿ. ನಂತರ ತಣ್ಣಗಿರುವ ನೀರಿನಿಂದ ತೊಳೆದುಕೊಳ್ಳಿ. ವಾರದಲ್ಲಿ 3 ಅಥವಾ 4 ಸಲ ಮಾಡಬೇಕು.
*ಮತ್ತೊಂದು ವಿಧಾನವೆಂದರೆ, ಅರ್ಧ ಕಪ್ ಮಾಗಿದ ಮತ್ತು ಹಿಸುಕಿದ ಹಣ್ಣಿನ ಜೊತೆ ಒಂದು ನಿಂಬೆಹಣ್ಣಿನ ರಸವನ್ನು ಸೇರಿಸಿ ಒಂದು ಫೇಸ್ ಪ್ಯಾಕ್ ತಯಾರಿಸಿ. ಈ ಮಿಶ್ರಣವನ್ನು ನಿಮ್ಮ ಮುಖದ ಎಲ್ಲಾ ಭಾಗ ಮತ್ತು ಕುತ್ತಿಗೆಗೆ ಹಚ್ಚಿ ಮಸಾಜ್ ಮಾಡಿ. 30 ನಿಮಿಷಗಳ ಸಮಯ ಹಾಗೆಯೇ ಬಿಟ್ಟು ತಣ್ಣಗಿರುವ ನೀರಿನಿಂದ ತೊಳೆದುಕೊಳ್ಳಿ. ಹೀಗೆ ವಾರಕೊಮ್ಮೆ ಮಾಡಿಕೊಳ್ಳಿ.
*ಇದಲ್ಲದೆ, ನೀವು ಒಂದು ಕಪ್ ಹಸಿರು ಪಪ್ಪಾಯಿ ಕಾಯಿ ಮತ್ತು ಒಂದೊಂದು ಟೀ ಚಮಚ ವಿಟಮಿನ್ ಇ ಎಣ್ಣೆ, ಜೇನುತುಪ್ಪ ಮತ್ತು ಸಾದಾ ಮೊಸರು ಎಲ್ಲವನ್ನೂ ಸೇರಿಸಿ ಪೇಸ್ಟ್ ಮಾಡಿ. ನಿಧಾನವಾಗಿ ಮೆತ್ತಗೆ ನಿಮ್ಮ ಚರ್ಮದ ಮೇಲೆ ಈ ಪೇಸ್ಟ್ ಹಚ್ಚಿ ಮಸಾಜ್ ಮಾಡಿ. 10 ರಿಂದ 15 ನಿಮಿಷಗಳ ಸಮಯ ಬಿಟ್ಟನಂತರ ತಣ್ಣಗಿರುವ ನೀರಿನಿಂದ ತೊಳೆದುಕೊಳ್ಳಿ. ಸೌಂದರ್ಯದ ಮಾಂತ್ರಿಕ ಶಕ್ತಿ ಪರಂಗಿಯಲ್ಲಿದೆ

ಚರ್ಮವನ್ನು ನಿರ್ಜಲೀಕರಿಸುತ್ತದೆ
ಪಪ್ಪಾಯಿ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಸೇರಿರುವುದರಿಂದ ಅದರ ಸಹಾಯದಿಂದ ನಿಮ್ಮ ಚರ್ಮವನ್ನು ಮೆದು, ಮೃದು ಮತ್ತು ತೇವಾಂಶಭರಿತವಾಗಿಡಲು ಸಹಾಯಕಾರಿಯಾಗಿದೆ.
*ಅರ್ಧ ಕಪ್ ಮಾಗಿದ ಪಪ್ಪಾಯಿ ಹಣ್ಣನ್ನು ಪೇಸ್ಟ್ ಆಗುವ ಹಾಗೆ ಹದಗೂಡಿಸಿ. ಜೊತೆಗೆ ಸ್ವಲ್ಪ ಕಚ್ಚಾ ಜೇನುತುಪ್ಪವನ್ನು ಸೇರಿಸಬಹುದು. ಇದನ್ನು ಚೆನ್ನಾಗಿ ಹದಮಾಡಿ ನಿಮ್ಮ ಮುಖದ ಎಲ್ಲಾ ಭಾಗ ಮತ್ತು ಕತ್ತಿನ ಮೇಲೆ ಲೇಪಿಸಿ. 15 ನಿಮಿಷಗಳ ಸಮಯ ಬಿಟ್ಟ ನಂತರ ಎಚ್ಚರಿಕೆಯಿಂದ ತಣ್ಣೀರು ಬಳಸಿ ತೊಳೆದುಕೊಂಡು ಚರ್ಮದ ಮೇಲ್ಭಾಗವನ್ನು ಮೆಲ್ಲ ಮೆಲ್ಲಗೆ ತಟ್ಟಿಕೊಳ್ಳಿ.
*ಈ ಮಿಶ್ರಣವನ್ನು ಸರಿಯಾಗಿ ಹದಮಾಡಿದ್ದರೆ ನಿಮ್ಮ ಮುಖದ ಚರ್ಮವನ್ನು ನಿರ್ಜಲೀಸಿಕೊಳ್ಳಲು ಒಂದು ಅತ್ಯುತ್ತಮ ಫೇಸ್ ಮಾಸ್ಕ್ ಆಗಿ ಬಳಸಬಹುದು. ಪಪ್ಪಾಯಿ ಹಣ್ಣನ್ನು ನಿಮ್ಮ ಆಹಾರದ ಜೊತೆ ಬಳಸಿ.

*ಈ ಹಣ್ಣನ್ನು ಇತರ ನಿರ್ಜಲೀಸುವ ಆಹಾರಗಳಾದ ಕಲ್ಲಂಗಡಿ ಹಣ್ಣು ಮತ್ತು ಸೌತೆಕಾಯಿ ಇವುಗಳ ಜೊತೆ ಸೇರಿಸಿಕೊಂಡು ಸೇವಿಸಿದರೆ ಅವುಗಳ ರುಚಿಯನ್ನು ಅನುಭವಿಸಬಹುದು. ಪಪ್ಪಾಯಿ ಹಣ್ಣಿನಿಂದ ನಿಮ್ಮ ಸೌಂದರ್ಯವನ್ನು ವರ್ಧಿಸಿಕೊಳ್ಳಿ

ವಯಸ್ಸು ಕಾಣುವ ಚಿಹ್ನೆಗಳಿಂದ ದೂರವಿಡುತ್ತದೆ
ಪಪ್ಪಾಯಿ ಹಣ್ಣಿನಲ್ಲಿರುವ ವಿಟಮಿನ್ ಎ ಚರ್ಮದೊಳಗಿರುವ ಸತ್ತ ಜೀವಕೋಶಗಳನ್ನು ನಿವಾರಣೆ ಮಾಡಲು ಸಹಾಯಕಾರಿ ಮತ್ತು ಚರ್ಮವನ್ನು ಮೃದು ಮತ್ತು ಮೆದುವಾಗಿ ಇಡುತ್ತದೆ.
*ಹಣ್ಣಿನಲ್ಲಿರುವ ಆಲ್ಫಾ ಹೈಡ್ರಾಕ್ಸಿಲ್ ಆಮ್ಲಗಳು ವಯಸ್ಸಾಗುವ ಚಿಹ್ನೆಗಳನ್ನು, ಉದಾಹರಣೆಗೆ ಚರ್ಮದ ಸುಕ್ಕುಗಳು ಮತ್ತು ಗೆರೆಗಳು ಇವುಗಳನ್ನು ತಡೆಯಲು ಸತ್ತ ಚರ್ಮದ ಜೀವಕೋಶಗಳನ್ನು ಕರಗಿಸಲು ಸಹಾಯಮಾಡುತ್ತದೆ.
*ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಇ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿ ನವತಾರುಣ್ಯದ ಚರ್ಮವನ್ನು ಅನುಭವಿಸಲು ಸಹಾಯಕಾರಿಯಾಗಿದೆ.


*ಅರ್ಧ ಕಪ್ ಸಂಪೂರ್ಣವಾಗಿ ಹಣ್ಣಾಗಿರುವ ಪಪ್ಪಾಯಿ ಹಣ್ಣನ್ನು ಚೆನ್ನಾಗಿ ಹಿಸುಕಿಕೊಳ್ಳಿ.
*ಇದನ್ನು ಕಚ್ಚಾ ಜೇನಿನ ಕೆಲವು ಹನಿ ಮತ್ತು 1 ಟೇಬಲ್ ಚಮಚ ಹಾಲು ಹಣ್ಣಿನ ಜೊತೆ ಮಿಶ್ರಣ ಮಾಡಿ.
*ನಿಮ್ಮ ಮುಖ ಮತ್ತು ಕತ್ತುಗಳ ಮೇಲೆ ಲೇಪಿಸಿ. 15 ನಿಮಿಷಗಳ ಸಮಯ ಹಾಗೆಯೇ ಬಿಟ್ಟ ನಂತರ ತಣ್ಣಗಿರುವ ನೀರಿನಿಂದ ನೆನೆಸಿ ತೊಳೆದುಕೊಳ್ಳಿ.
*ಈ ಮಿಶ್ರಣವನ್ನು ವಾರದಲ್ಲಿ ಒಂದು ಅಥವಾ ಎರಡು ಬಾರಿ ಫೇಸ್ ಮಾಸ್ಕ್ ಮಾಡಿಕೊಳ್ಳಿ. ಹಾಗೂ, ಪ್ರತಿ ದಿನವೂ ವಯಸ್ಸಾದ ಚಿಹ್ನೆಗಳನ್ನು ವಿಳಂಬಿಸಲು ಪಪ್ಪಾಯಿಹಣ್ಣನ್ನು ತಿನ್ನಿ.
English summary

Top Beauty Benefits of Papaya

Papaya has several components that are great for your skin as well as hair. This is why this fruit enzymes are found in many cosmetic, beauty and hair care products. Here are the top beauty benefits of papaya...
X
Desktop Bottom Promotion