For Quick Alerts
ALLOW NOTIFICATIONS  
For Daily Alerts

ಅಡುಗೆ ಮನೆಯಲ್ಲಿಯೇ ಇದೆ, ಸೌಂದರ್ಯಕ್ಕೆ ಪರಿಹಾರ!

By Deepu
|

ನಮ್ಮ ಸೌಂದರ್ಯವನ್ನು ವೃದ್ಧಿಸಲು ನಾವು ಎಷ್ಟೆಲ್ಲಾ ಹಣ ಖರ್ಚು ಮಾಡುತ್ತೇವೆ, ನಮ್ಮ ಖರ್ಚಿನ ಪಟ್ಟಿಯನ್ನು ಲೆಕ್ಕಹಾಕುತ್ತಾ ಹೋದರೆ, ಇದರ ಬಗ್ಗೆ ಪುಸ್ತಕವನ್ನೇ ಬರೆದು ಬಿಡಬಹುದು ಅಲ್ಲವೇ...? ಅದರಲ್ಲೂ ಹೊಸ ಮಾದರಿಯ ಸೌಂದರ್ಯ ಉತ್ಪನ್ನವೊಂದು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದೆ ಎಂದರೆ ಸಾಕು, ಅದರ ಕುರಿತಾಗಿ ವಿಮರ್ಶೆಯನ್ನು ತಿಳಿಯಲು ಖಾತರರಾಗಿರುತ್ತೇವೆ.

ಒಂದು ವೇಳೆ ಅದು ಚೆನ್ನಾಗಿದೆ ಎಂದು ತಿಳಿದರೆ ಸಾಕು ಹಣ ಎಷ್ಟು ಖರ್ಚಾದರೂ ಪರವಾಗಿಲ್ಲ, ಖರೀದಿಸುತ್ತೇವೆ, ಕೆಲವೊಮ್ಮೆ ಇದರಿಂದ ಯಾವುದೇ ಬದಲಾವಣೆಗಳು ಕಂಡು ಬರದಿದ್ದಾಗ, ನಮಗೆ ಬೇಕಾದ ಫಲಿತಾಂಶಕ್ಕಾಗಿ ಮತ್ತೊಂದು ಉತ್ಪನ್ನವನ್ನು ಅವಲಂಬಿಸುತ್ತೇವೆ. ಹೀಗೆ ಸೌಂದರ್ಯ ಸಲಹೆಗಳನ್ನು ಪಾಲಿಸಿ ನಾವು ಹೆಚ್ಚು ಸುಂದರವತಿಯಾಗಿ ಕಾಣಿಸುವ ಯಾವುದೇ ಅವಕಾಶವನ್ನು ನಾವು ಬಿಟ್ಟುಕೊಡುವುದಿಲ್ಲ. ಗೌರವರ್ಣ ತ್ವಚೆಗಾಗಿ ನೈಸರ್ಗಿಕ ಮನೆಮದ್ದು

ಆದರೆ ಇದನ್ನೆಲ್ಲವನ್ನೂ ಪ್ರಯೋಗಿಸುವ ಮೊದಲು ಇವುಗಳಿಂದ ನಮಗೆಷ್ಟು ಪ್ರಯೋಜನ ಲಭಿಸಬಹುದು ಎಂಬುದನ್ನು ಕುರಿತು ನೀವು ಆಲೋಚಿಸುವುದು ಮುಖ್ಯ. ಈ ವಸ್ತುಗಳು ರಾಸಾಯನಿಕಗಳಿಂದ ಕೂಡಿದ್ದು, ಮೇಲ್ನೋಟಕ್ಕೆ ಚರ್ಮವನ್ನು ಸುಂದರಗೊಳಿಸಿದರೆ ಇನ್ನೊಂದೆಡೆ ಶಿಥಿಲಗೊಳಿಸುತ್ತದೆ ಎಂಬುದು ಇವುಗಳ ಹಿಂದಿರುವ ಕಟು ಸತ್ಯ. ಹಾಗಿದ್ದರೆ ರಾಸಾಯನಿಕಗಳ ಬಳಕೆಯನ್ನು ಮಾಡದೆಯೇ ನೂರಾರು ವರ್ಷಗಳಿಂದ ಫಲಪ್ರದವೆಂದು ಸಾಬೀತುಪಡಿಸಿರುವ, ಯಾವುದೇ ಅಡ್ಡ ಪರಿಣಾಮವಿಲ್ಲದ, ನಿಧಾನವಾಗಿಯಾದರೂ ಉತ್ತಮ ಫಲಿತಾಂಶವನ್ನೇ ನೀಡುವ ಮನೆಮದ್ದುಗಳ ಮೊರೆ ಹೋಗುವುದೇ ಜಾಣತನ ಅಲ್ಲವೇ..?

ಅದರಲ್ಲೂ ಕೆಲವೊಂದು, ಸೌಂದರ್ಯದ ಉತ್ಪನ್ನಗಳು ನಮ್ಮ ದಿನ ನಿತ್ಯ ಅಡುಗೆ ಮನೆಯಲ್ಲಿ ಬಳಸುವಂತಹ ಉತ್ಪನ್ನಗಳಾಗಿರುತ್ತವೆ. ಹಾಗಾಗಿ ಇದಕ್ಕಾಗಿ ಹೆಚ್ಚಿಗೆ ನೀವು ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ. ಆದರೆ ಇದನ್ನು ಬಳಸುವ ಮೊದಲು ಆ ಉತ್ಪನ್ನಗಳ ಸೌಂದರ್ಯದ ಪ್ರಯೋಜನಗಳನ್ನು ತಿಳಿದುಕೊಳ್ಳುವುದು ಅಗತ್ಯ! ಈ ಲೇಖನದಲ್ಲಿ ನಾವು ನಿಮಗಾಗಿ ಅದರಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿ ಸೌಂದರ್ಯದ ಪ್ರಯೋಜನವನ್ನು ನೀಡುವ ಅಡುಗೆ ಮನೆಯ ಪದಾರ್ಥಗಳ ಕುರಿತು ತಿಳಿಸಿಕೊಡುತ್ತೇವೆ. ಅವುಗಳು ಯಾವುವು ಮತ್ತು ಅವುಗಳಿಂದ ದೊರೆಯುವ ಪ್ರಯೋಜನಗಳು ಏನು ಎಂಬುದನ್ನು ತಿಳಿಯಲು ಮುಂದೆ ಓದಿ...

ಚಾಮೋಮೈಲ್ ಟೀ ಬ್ಯಾಗ್‌ಗಳು

ಚಾಮೋಮೈಲ್ ಟೀ ಬ್ಯಾಗ್‌ಗಳು

ನಿಮ್ಮ ಕಣ್ಣುಗಳ ಸುತ್ತ ಕಾಣಿಸಿಕೊಳ್ಳುವ ಆ ಕಪ್ಪು ಕಲೆಗಳಿಂದ ನೀವು ಭಾರೀ ತೊಂದರೆಯನ್ನು ಅನುಭವಿಸುತ್ತಿದ್ದೀರಿ ಅಲ್ಲವೇ? ಹಾಗಾದರೆ ಅದಕ್ಕಾಗಿ ಈ ಪರಿಹಾರವನ್ನು ಮಾಡಿ! 2 ಚಾಮೋಮೈಲ್ ಟೀ ಬ್ಯಾಗ್‌ಗಳನ್ನು ಬಿಸಿ ನೀರಿನಲ್ಲಿ ಅದ್ದಿ, ಸ್ವಲ್ಪ ಹೊತ್ತು ಫ್ರಿಡ್ಜ್‌ನಲ್ಲಿಡಿ. ನಂತರ ಅದನ್ನು ಕಣ್ಣಿನ ಸುತ್ತ ಇರುವ ಪ್ರದೇಶದ ಮೇಲೆ ಇರಿಸಿ. ಇದರಲ್ಲಿರುವ ನೋವು ನಿವಾರಕ ಬಾವು ನಿರೋಧಕದ ಗುಣಗಳು, ಕೆಫಿನ್ ಮತ್ತು ಟನ್ನಿನ್‌ಗಳು ನಿಮ್ಮ ಕಣ್ಣುಗಳ ಊತವನ್ನು ಕಡಿಮೆ ಮಾಡುತ್ತವೆ. ಇದರ ಜೊತೆಗೆ ನಿಮಗೆ ಬೇಕಾದಲ್ಲಿ ತುಳಸಿ ಎಲೆಗಳನ್ನು ಸಹ ಸೇರಿಸಿಕೊಳ್ಳಬಹುದು ಅವುಗಳಿಂದ ನಿಮ್ಮ ಕಣ್ಣುಗಳಿಗೆ ಮತ್ತಷ್ಟು ಒಳ್ಳೆಯ ಪರಿಹಾರ ದೊರೆಯುತ್ತದೆ.

ತುಳಸಿ ಎಲೆಗಳು

ತುಳಸಿ ಎಲೆಗಳು

ಬಹುತೇಕ ಮಂದಿ ಇದನ್ನು ಊಟ ತಯಾರಿಸುವಾಗ ಸೇರಿಸಲು ಇಷ್ಟಪಡುತ್ತಾರೆ. ಆದರೂ ಇದರಲ್ಲಿರುವ ಅದ್ಭುತ ಔಷಧೀಯ ಗುಣಗಳಿಂದಾಗಿ ಇದನ್ನು ಬಹುತೇಕ ಸಮಯದಲ್ಲಿ ಔಷಧಿಯಾಗಿ ನಾನಾ ರೋಗಗಳಿಗೆ ಬಳಸುತ್ತೇವೆ. ಇದರಲ್ಲಿ ಅದ್ಭುತ ಸೌಂದರ್ಯವರ್ಧಕ ಗುಣಗಳು ಸಹ ಇವೆ. ಆ ಗುಣಗಳು ನಿಮ್ಮ ಕೂದಲು ಮತ್ತು ತ್ವಚೆಗೆ ಒಳ್ಳೆಯ ಆರೈಕೆಯನ್ನು ನೀಡುತ್ತದೆ. ತುಳಸಿ ಎಲೆಗಳನ್ನು ಜಜ್ಜಿ, ನೀರಿನಲ್ಲಿ ಬೆರೆಸಿ ನಿಮ್ಮ ಕೂದಲ ಬುಡಕ್ಕೆ ಲೇಪಿಸಿ. ನಂತರ ಬೆಚ್ಚಗಿನ ನೀರಿನಲ್ಲಿ ಇದನ್ನು ತೊಳೆಯಿರಿ. ನಂತರ ಅದರ ಫಲಿತಾಂಶವನ್ನು ನೀವೇ ನೋಡುತ್ತಿರಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ವಾಸನೆ ಅಧಿಕವಾಗಿರಬಹುದು. ಆದರೆ ಅದರಲ್ಲಿ ಮೊಡವೆಗಳನ್ನು ನಿವಾರಿಸುವ ಗುಣಗಳು ಇರುತ್ತವೆ ಎಂಬುದನ್ನು ಮರೆಯಬೇಡಿ. ಈ ಬೆಳ್ಳುಳ್ಳಿಯಲ್ಲಿ ಆಂಟಿ ಆಕ್ಸಿಡೆಂಟ್ ಗುಣಗಳು ಅಧಿಕವಾಗಿ ಇವೆ. ಇವು ಮೊಡವೆ, ಉರಿಬಾವು ಇತ್ಯಾದಿಗಳನ್ನು ನಿವಾರಿಸುತ್ತದೆ. ಇದಕ್ಕಾಗಿ ನೀವು ಮಾಡಬೇಕಾದುದು ಇಷ್ಟೇ. ಬೆಳ್ಳುಳ್ಳಿಯನ್ನು ಜಜ್ಜಿ, ಅದನ್ನು ಮೊಡವೆಗಳ ಮೇಲೆ ಇರಿಸಿ ಸಾಕು, ಮೊಡವೆಗಳು ನಿಮ್ಮ ಮುಖದಿಂದ ಮಾಯವಾಗುತ್ತವೆ. ಜೊತೆಗೆ ಕಲೆಗಳು ಸಹ ಇರುವುದಿಲ್ಲ!

ಮೊಟ್ಟೆಯ ಬಿಳಿ ಭಾಗ

ಮೊಟ್ಟೆಯ ಬಿಳಿ ಭಾಗ

ಮೊಟ್ಟೆಯ ಬಿಳಿ ಭಾಗವನ್ನು ದೇಹದ ಯಾವ ಭಾಗಕ್ಕಾದರು ಬಳಸಬಹುದು! ಅಂತಹ ಒಂದು ಅದ್ಭುತ ಸೌಂದರ್ಯ ವರ್ಧಕ ಉತ್ಪನ್ನ ಅದು. ಕೂದಲಿಗೆ ಮಾಸ್ಕ್ ಮಾಡಲು, ಮುಖಕ್ಕೆ ಮಾಸ್ಕ್ ಮಾಡಲು, ತ್ವಚೆಯನ್ನು ಕೋಮಲಗೊಳಿಸಲು ಹೀಗೆ ನಾನಾ ಪ್ರಯೋಜನಗಳಿಗಾಗಿ ಮೊಟ್ಟೆಯ ಬಿಳಿ ಭಾಗವನ್ನು ಬಳಸಲಾಗುತ್ತದೆ. ಇದರ ಜೊತೆಗೆ ಕೂದಲಿಗೆ ಹೊಳಪನ್ನು ನೀಡಲು ಮತ್ತು ತ್ವಚೆಯನ್ನು ಬಿಗಿಗೊಳಿಸಲು ಸಹ ಮೊಟ್ಟೆಯನ್ನು ಬಳಸುತ್ತಾರೆ. ಮೊಟ್ಟೆಯ ಬಿಳಿಭಾಗವನ್ನು ನಿಮ್ಮ ಮುಖದಲ್ಲಿರುವ ಸುಕ್ಕುಗಳಿಗೆ ಲೇಪಿಸಿ, ಅದರಿಂದ ಮುಕ್ತವಾಗಿ.

ಬಾಳೆ ಹಣ್ಣಿನ ಪ್ಯಾಕ್

ಬಾಳೆ ಹಣ್ಣಿನ ಪ್ಯಾಕ್

ಕಳಿತ ಬಾಳೆಹಣ್ಣೊ೦ದನ್ನು ಚೆನ್ನಾಗಿ ಜಜ್ಜಿರಿ. ವಿಟಮಿನ್ E ಯ ಕ್ಯಾಪ್ಸೂಲ್ ಗಳಿ೦ದ ತೈಲವನ್ನು ಪಡೆದುಕೊಳ್ಳಿರಿ. ಈಗ ಜಜ್ಜಿಟ್ಟಿರುವ ಬಾಳೆಹಣ್ಣು, ವಿಟಮಿನ್ E ಯುಳ್ಳ ತೈಲ, ಹಾಗೂ ಒ೦ದು ಟೀ ಚಮಚದಷ್ಟು ಜೇನು ಇವೆಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಈ ಪ್ಯಾಕ್ ಅನ್ನು ಈಗ ಮುಖದ ಮೇಲೆ ಲೇಪಿಸಿಕೊ೦ಡು ಹದಿನೈದು ನಿಮಿಷಗಳ ಕಾಲ ಹಾಗೆಯೇ ಮುಖದ ಮೇಲೆ ಇರಗೊಡಿರಿ. ಈ ಫೇಸ್ ಪ್ಯಾಕ್, ನಿಮ್ಮ ತ್ವಚೆಯನ್ನು ಆರೋಗ್ಯಕರವನ್ನಾಗಿ, ಕಾ೦ತಿಯುಕ್ತವಾಗಿ ಹೊಳೆಯುವ೦ತೆ ಮಾಡುವುದರ ಜೊತೆಗೆ ತ್ವಚೆಯನ್ನು ತಾರುಣ್ಯಪೂರ್ಣವಾಗಿಸುತ್ತದೆ. ಶುಷ್ಕ ತ್ವಚೆಯ ಸಮಸ್ಯೆಯುಳ್ಳವರ ಪಾಲಿಗೆ ಇದೊ೦ದು ಅತ್ಯುತ್ತಮವಾದ ಫೇಸ್ ಪ್ಯಾಕ್ ಆಗಿದೆ.

English summary

Surprising Beauty Products From Kitchen

We often spend a lot of money in buying many beauty products. When there is a new product launch, we have to try it out, and when the result is negative, we crib and buy another product. Most of 
 
 the times, we do see that there are hardly any changes that we see on our skin. Why spend so much of money and not get the desired results you are looking for? For best results, always opt for some kitchen ingredients instead that are easily available. These beauty products are cheap yet quite effective, and the result is a flawless beautiful skin.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more