For Quick Alerts
ALLOW NOTIFICATIONS  
For Daily Alerts

ಕೆಂಪು ವೈನ್: ಅದೇನು ಮಾಯೆ, ಅದೇನು ಜಾದೂ..!

By Arshad
|

ಕೆಂಪು ವೈನ್ ಬಹುತೇಕ ಜನರ ಪ್ರಿಯವಾದ ಪೇಯವಾಗಿದೆ. ಆದರೆ ಇದು ಕೇವಲ ಪೇಯಕ್ಕಿಂತ ಹೆಚ್ಚಾಗಿ ಚರ್ಮದ ಆರೈಕೆಯ ಔಷಧಿಯಂತೆ ಕೆಲಸಮಾಡುವುದು ಹೆಚ್ಚಿನವರಿಗೆ ತಿಳಿದಿರದು. ನಿಯಮಿತ ಸೇವನೆಯಿಂದ ಚರ್ಮದ ಕಪ್ಪು ಕಲೆಗಳು ಮತ್ತು ಇತರ ಚರ್ಮದ ತೊಂದರೆಗಳು ನಿವಾರಣೆಯಾಗಿರುವುದು ಕೆಲವು ಸಂಶೋಧನೆಗಳಿಂದ ಕಂಡುಬಂದಿದೆ.

ಇದರಲ್ಲಿರುವ ಕೆಲವು ಪೋಷಕಾಂಶಗಳು ಚರ್ಮಕ್ಕೆ ಅಗತ್ಯವಾದ ಪೋಷಣೆಯನ್ನು ನೀಡುವ ಜೊತೆಗೇ ಕಾಂತಿಯುತ, ಕಲೆರಹಿತ ಮತ್ತು ನೆರಿಗೆಗಳಿಲ್ಲದ ಚರ್ಮವನ್ನು ಹೊಂದಲೂ ನೆರವಾಗುತ್ತದೆ. ಮೊಡವೆಗಳನ್ನು ದೂರವಾಗಿಸಿ ಬೇಡದ ಕೂದಲುಗಳನ್ನು ನಿವಾರಿಸಲೂ ನೆರವಾಗುತ್ತದೆ. ವೈನ್ ನಿಂದ ತ್ವಚೆ ಫೈನ್ ; ಸುಕೋಮಲೆಯರಿಗೆ ಮಾತ್ರ

ಇದರ ಇನ್ನೊಂದು ವಿಶೇಷ ಗುಣವೆಂದರೆ ತಿಂಗಳಿಗೊಂದು ಬಾರಿ ಕೆಂಪು ವೈನ್ ಬೆರೆಸಿದ ನೀರಿನಿಂದ ಸ್ನಾನ ಮಾಡುವುದರಿಂದ ಮಹಿಳೆಯರ ಚರ್ಮ ಅತಿ ಹೆಚ್ಚಿನ ಪೋಷಣೆಯನ್ನು ಪಡೆಯುತ್ತದೆ. ಇದರ ಸುವಾಸನೆ ಮನಸ್ಸಿನ ಒತ್ತಡವನ್ನೂ ನಿವಾರಿಸುತ್ತದೆ. ಇದಕ್ಕೆ ಅಗತ್ಯವಿರುವುದು ಕೇವಲ ಒಂದು ಬಾಟಲಿ ಕೆಂಪು ವೈನ್ ಮಾತ್ರ. ಇದನ್ನು ನಿಮ್ಮ ಸ್ನಾನದ ತೊಟ್ಟಿ ಅಥವಾ ಬಕೆಟ್‌ನಲ್ಲಿ ಮಿಶ್ರಣ ಮಾಡಿ ಸ್ನಾನ ಮಾಡಿ. ಇದಕ್ಕೂ ಹೊರತಾದ ಕೆಲವು ಸೌಂದರ್ಯದ ಗುಟ್ಟುಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ಹೆರಿಗೆಯ ಸೆಳೆತದ ಗುರುತುಗಳನ್ನು ನಿವಾರಿಸುತ್ತದೆ

ಹೆರಿಗೆಯ ಸೆಳೆತದ ಗುರುತುಗಳನ್ನು ನಿವಾರಿಸುತ್ತದೆ

ಪ್ರಥಮ ಪ್ರಸವದ ಬಳಿಕ ಮಹಿಳೆಯರು ತಮ್ಮ ಉಡುಗೆಗಳನ್ನು ಬದಲಿಸಲು ಅವರ ಸೊಂಟದ ಸುತ್ತಲ ಚರ್ಮದಲ್ಲಿ ಹೆರಿಗೆಯ ಸೆಳೆತದ ಗುರುತುಗಳು ಮೂಡುವುದೇ ಕಾರಣ. ವಾರಕ್ಕೊಮ್ಮೆ ನಿಯಮಿತವಾಗಿ ಕೆಂಪು ವೈನ್ ನಿಂದ ಹೊಟ್ಟೆಯ ಭಾಗವನ್ನು ಮಸಾಜ್ ಮಾಡುವ ಈ ಕಲೆಗಳು ನಿಧಾನವಾಗಿ ಕಡಿಮೆಯಾಗುತ್ತಾ ಬಹುತೇಕ ನಿರ್ಮೂಲನೆಯೂ ಆಗುತ್ತವೆ.

ದೇಹದ ಇತರ ಭಾಗದ ಬೊಕ್ಕೆಗಳನ್ನು ನಿವಾರಿಸುತ್ತದೆ

ದೇಹದ ಇತರ ಭಾಗದ ಬೊಕ್ಕೆಗಳನ್ನು ನಿವಾರಿಸುತ್ತದೆ

ಮುಖದ ಮೇಲೆ ಮೂಡುವ ಮೊಡವೆಗಳಂತೆಯೇ ದೇಹದ ಇತರ ಭಾಗಗಳಲ್ಲಿಯೂ ಮೊಡವೆಗಳಂತಹ ಬೊಕ್ಕೆಗಳು ಮೂಡುತ್ತವೆ. ಇದಕ್ಕೆ ನಮ್ಮ ಆಹಾರದಲ್ಲಿನ ಎಣ್ಣೆ ಮತ್ತು ಪ್ರದೂಷಣೆ ಪ್ರಮುಖ ಕಾರಣವಾಗಿವೆ. ಇದಕ್ಕಾಗಿ ಒಂದು ಹತ್ತಿಯುಂಡೆಯನ್ನು ಕೆಂಪು ವೈನ್‌ನಲ್ಲಿ ಮುಳುಗಿಸಿ ಬೊಕ್ಕೆ ಇರುವ ಸ್ಥಳದ ಮೇಲೆ ನಿಧಾನವಾಗಿ ಒರೆಸಿಕೊಳ್ಳಿ. ದಿನಕ್ಕೆರಡು ಬಾರಿ ಬೊಕ್ಕೆಗಳ ಮೇಲೆ ಒರೆಸಿಕೊಳ್ಳುವ ಮೂಲಕ ನಿಧಾನವಾಗಿ ಈ ಬೊಕ್ಕೆಗಳು ನಿವಾರಣೆಯಾಗುತ್ತವೆ.

ಹಳೆಯ ಕಲೆಗಳನ್ನು ನಿವಾರಿಸುತ್ತದೆ

ಹಳೆಯ ಕಲೆಗಳನ್ನು ನಿವಾರಿಸುತ್ತದೆ

ಗಾಯಗಳು ಅಥವಾ ಮೊಡವೆಗಳು ಒಣಗಿದ ಬಳಿಕ ಕಪ್ಪನೆಯ ಕಲೆಗಳನ್ನು ಶಾಶ್ವತವಾಗಿ ಉಳಿಸುತ್ತದೆ. ಆದರೆ ಒಂದು ವೇಳೆ ಕೆಂಪು ವೈನ್ ನ ಆರೈಕೆ ಸಿಕ್ಕರೆ ಏಳೇ ದಿನದಲ್ಲಿ ಈ ಕಲೆಗಳು ಬಹುತೇಕವಾಗಿ ಮಾಯವಾಗುತ್ತವೆ. ಇದಕ್ಕಾಗಿ ಕೆಂಪು ವೈನ್ ಬೆರೆಸಿದ ನೀರನಿಂದ ದಿನಕ್ಕೆರಡು ಬಾರಿ ಸ್ನಾನ ಮಾಡಿ. ಆದರೆ ಸ್ನಾನದ ಬಳಿಕ ಯಾವುದೇ ಲೋಶನ್ ಅಥವಾ ದ್ರಾವಣಗಳನ್ನು ಬಳಸಬೇಡಿ.

ಅನಗತ್ಯ ಕೂದಲುಗಳಿಂದ ಮುಕ್ತಿ ಪಡೆಯಿರಿ

ಅನಗತ್ಯ ಕೂದಲುಗಳಿಂದ ಮುಕ್ತಿ ಪಡೆಯಿರಿ

ಅನಗತ್ಯ ಕೂದಲುಗಳ ನಿವಾರಣೆಗೆ ವ್ಯಾಕ್ಸ್ ಅಥವಾ ಶೇವ್ ಮಾಡುವ ವಿಧಾನಗಳಿಂದ ಬೇಸತ್ತಿದ್ದರೆ ಈಗ ಕೆಂಪು ವೈನ್ ಬಳಸಿ ಮಸಾಜ್ ಮಾಡಿ. ಇದು ಅನಗತ್ಯ ಕೂದಲುಗಳ ಬುಡವನ್ನು ನಿಷ್ಪಲಗೊಳಿಸಿ ಸುಲಭವಾಗಿ ಉದುರಲು ಸಾಧ್ಯವಾಗುತ್ತದೆ. ಇದು ಕಾಲುಗಳ ಮತ್ತು ಕೈಗಳ ಅನಗತ್ಯ ರೋಮವನ್ನು ನಿವಾರಿಸಲು ನೆರವಾಗುತ್ತದೆ.

ಕಪ್ಪು ಕಲೆಗಳನ್ನು ನಿವಾರಿಸುತ್ತದೆ

ಕಪ್ಪು ಕಲೆಗಳನ್ನು ನಿವಾರಿಸುತ್ತದೆ

ಕೆಲವು ಕಪ್ಪು ಮಚ್ಚೆ ಅಥವಾ ಅತಿ ಗಾಢವಾಗಿರುವ ಕಲೆಗಳು ಸೌಂದರ್ಯಕ್ಕೆ ಮಾರಕವಾಗಿವೆ. ಇದನ್ನು ನಿವಾರಿಸಲು ಒಂದು ಲಿಂಬೆಯ ಹಣ್ಣಿನ ರಸವನ್ನು ಒಂದು ಲೋಟ ಕೆಂಪು ವೈನ್ ಗೆ ಸೇರಿಸಿ ಕಪ್ಪು ಕಲೆಗಳ ಮೇಲೆ ಹತ್ತಿಯುಂಡೆಯನ್ನು ಉಪಯೋಗಿಸಿ ಹಚ್ಚಿ. ಕೊಂಚ ಉರಿ ಅನ್ನಿಸಬಹುದು, ಆದರೆ ಹದಿನೈದು ನಿಮಿಷಗಳವರೆಗೆ ತಡೆದುಕೊಳ್ಳಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

English summary

MUST READ: Blood Red Wine Nourishes Your Skin!

Red wine it is indeed one of my favourite drinks.... It is also one of my favourite ingredients that I usually use on my skin to get rid of all those nasty looking dark spots and other skin problems. Though it is an expensive skin care ingredient, the chemicals which are present in red wine will help to nourish your skin thus helping you to look stunning, flawless and keeps your skin away from problems like acne and unwanted hair too.
X
Desktop Bottom Promotion