For Quick Alerts
ALLOW NOTIFICATIONS  
For Daily Alerts

ಬೇವಿನ ಸೌಂದರ್ಯವರ್ಧಕ ಗುಣಗಳು ಒಂದೇ, ಎರಡೇ?

By Arshad
|

ಸೌಂದರ್ಯವರ್ಧಕವಾಗಿ ಬೇವಿನ ಎಲೆ, ಎಣ್ಣೆ ಮತ್ತು ಪುಡಿಯನ್ನು ಸಾವಿರಾರು ವರ್ಷಗಳಿಂದ ಭಾರತದಲ್ಲಿ ಬಳಸುತ್ತಾ ಬರಲಾಗಿದೆ. ಇದು ಆರೋಗ್ಯಕ್ಕೆ ಹೇಗೆ ಉತ್ತಮವೂ ಅಂತೆಯೇ ಚರ್ಮ ಮತ್ತು ಕೂದಲಿನ ಪೋಷಣೆಗೂ ಅಷ್ಟೇ ಉತ್ತಮವಾಗಿದೆ. ಆಯುರ್ವೇದದಲ್ಲಂತೂ ಬೇವಿಗೆ ಅತಿ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಚರ್ಮದ ವಿವಿಧ ವ್ಯಾಧಿ, ತುರಿಕೆ ಮತ್ತು ಇಸಬುಗಳಿಗೆ ಬೇವಿನ ಆರೈಕೆಯಿಂದ ಶೀಘ್ರ ಪರಿಹಾರ ದೊರಕುತ್ತದೆ.

ಇದರ ಬ್ಯಾಕ್ಟೀರಿಯಾ ನಿವಾರಕ ಗುಣ, ಶಿಲೀಂಧ್ರ ನಿವಾರಕ ಗುಣ ಮತ್ತು ಉರಿಯೂತ ನಿವಾರಕ ಗುಣಗಳು ದೇಹಕ್ಕೆ ಹಲವು ರೀತಿಯಿಂದ ಪೋಷಣೆ ನೀಡುತ್ತವೆ. ಅಲ್ಲದೇ ಸೊಳ್ಳೆ ಮೊದಲಾದ ಕೀಟಗಳನ್ನು ದೂರವಿಡಲು ನೆರವಾಗುವ ಮೂಲಕ ಸಾಂಕ್ರಾಮಿಕ ರೋಗಗಳು ಹರಡದಂತೆಯೂ ತಡೆಯುತ್ತವೆ. ಹಳ್ಳಿ ಮದ್ದು ಬೇವಿನ ಲೇಪನ-ಸೌಂದರ್ಯದ ಕೀಲಿ ಕೈ

ಒಂದು ವೇಳೆ ನೀವು ನಿಮ್ಮ ಸೌಂದರ್ಯದ ಬಗ್ಗೆ ಕಾಳಜಿ ಹೊಂದಿರುವಿರಾದರೆ ಬೇವನ್ನು ಪರಿಗಣಿಸದೇ ಬಿಡುವ ಹಾಗೆಯೇ ಇಲ್ಲ. ಏಕೆಂದರೆ ಇದರಲ್ಲಿರುವ ವಿಟಮಿನ್ ಸಿ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೇ ಮುಖದ ಸೌಂದರ್ಯವನ್ನು ಕುಗ್ಗಿಸುವ ಬ್ಲಾಕ್ ಹೆಡ್, ಬಿಳಿ ಚುಕ್ಕೆ, ನೆರಿಗೆ ಮತ್ತು ಮಂಕಾಗಿರುವ ಚರ್ಮಕ್ಕೆ ಆರೈಕೆ ನೀಡುವ ಮೂಲಕ ನವ ಚೈತನ್ಯ ನೀಡುತ್ತದೆ. ಇಂದು ಬೋಲ್ಡ್ ಸ್ಕೈ ತಂಡ ಬೇವಿನ ಈ ಅದ್ಭುತ ಗುಣಗಳಲ್ಲಿ ಪ್ರಮುಖವಾದ ಆರು ಗುಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲು ಹೆಮ್ಮೆಪಡುತ್ತದೆ...

ಆರೋಗ್ಯಕರ ಕೂದಲಿಗೆ ನೆರವಾಗುತ್ತದೆ

ಆರೋಗ್ಯಕರ ಕೂದಲಿಗೆ ನೆರವಾಗುತ್ತದೆ

ನಿಯಮಿತವಾಗಿ ಬೇವಿನೆಣ್ಣೆಯನ್ನು ತಲೆಗೂದಲಿಗೆ ಹಚ್ಚಿಕೊಳ್ಳುತ್ತಾ ಬರುವ ಮೂಲಕ ಆರೋಗ್ಯಕರ ಮತ್ತು ಸೊಂಪಾದ ಕೂದಲನ್ನು ಪಡೆಯಲು ಸಾಧ್ಯವಿದೆ. ನಿಯಮಿತವಾಗಿ ಕೂದಲ ಬುಡಕ್ಕೆ ಮಸಾಜ್ ಮಾಡುವ ಮೂಲಕ ಕೂದಲ ಬುಡಗಳು ದೃಢಗೊಂಡು ಕೂದಲು ಉದುರುವ ಪ್ರಮಾಣ ಕಡಿಮೆಯಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಆರೋಗ್ಯಕರ ಕೂದಲಿಗೆ ನೆರವಾಗುತ್ತದೆ

ಆರೋಗ್ಯಕರ ಕೂದಲಿಗೆ ನೆರವಾಗುತ್ತದೆ

ಅದರಲ್ಲೂ ರಾತ್ರಿ ಮಲಗುವ ಮುನ್ನ ಕೊಂಚ ಬೇವಿನೆಣ್ಣೆಯಿಂದ ತಲೆಗೂದಲ ಬುಡಕ್ಕೆ ಮಸಾಜ್ ಮಾಡಿ ಮಲಗಿ ಬೆಳಿಗ್ಗೆ ಎದ್ದ ಬಳಿಕ ತೊಳೆದುಕೊಳ್ಳುವುದರಿಂದ ಕೂದಲು ಉದುರುವುದು ನಿಲ್ಲುವ ಜೊತೆಗೇ ಕೂದಲಿಗೆ ಕಾಂತಿಯೂ ದೊರಕುತ್ತದೆ. ಇದರೊಂದಿಗೆ ಇತರ ಅವಶ್ಯಕ ತೈಲಳಾದ ಬಾದಾಮಿ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಸೇರಿಸಿಕೊಳ್ಳುವ ಮೂಲಕ ಅತ್ಯುತ್ತಮ ಪರಿಣಾಮ ಪಡೆಯಬಹುದು.

 ತಲೆಹೊಟ್ಟನ್ನು ನಿವಾರಿಸುತ್ತದೆ

ತಲೆಹೊಟ್ಟನ್ನು ನಿವಾರಿಸುತ್ತದೆ

ತಲೆಯಲ್ಲಿ ಹೊಟ್ಟಿನ ತೊಂದರೆ ಬಾಧಿಸುತ್ತಿದ್ದರೆ ಬೇವಿನ ಎಣ್ಣೆಯನ್ನು ಒಣತಲೆಗೆ ಹಚ್ಚಿ ನಯವಾಗಿ ಮಸಾಜ್ ಮಾಡಿ ಬಳಿಕ ಸ್ನಾನ ಮಾಡಿಕೊಳ್ಳುವ ಮೂಲಕ ತಲೆಹೊಟ್ಟು ನಿವಾರಣೆಯಾಗುತ್ತದೆ. ಅಲ್ಲದೇ ತಲೆಯ ಚರ್ಮದ ಪಿ.ಎಚ್ ಮಟ್ಟ (ಆಮ್ಲ-ಪ್ರತ್ಯಾಮ್ಲದ ಮಟ್ಟ) ವನ್ನು ಆರೋಗ್ಯಕರ ಮಟ್ಟದಲ್ಲಿರಿಸಲು ನೆರವಾಗುತ್ತದೆ.

ತುದಿಯಲ್ಲಿ ಬಿರುಕುಬಿಟ್ಟ ಕೂದಲುಗಳನ್ನು ಸರಿಪಡಿಸುತ್ತದೆ

ತುದಿಯಲ್ಲಿ ಬಿರುಕುಬಿಟ್ಟ ಕೂದಲುಗಳನ್ನು ಸರಿಪಡಿಸುತ್ತದೆ

ಅನಾರೋಗ್ಯಕರ ಕೂದಲ ಒಂದು ಲಕ್ಷಣವೆಂದರೆ ಸೀಳಿದ ತುದಿಗಳು. ಬೇವಿನ ಎಣ್ಣೆಯಲ್ಲಿ ಘಾಸಿಗೊಂಡ ಕೂದಲನ್ನು ಸರಿಪಡಿಸುವ ಗುಣವಿದೆ. ಬೇವಿನ ಎಣ್ಣೆಯನ್ನು ಸತತವಾಗಿ ಒಂದು ವಾರದ ಕಾಲ ಉಪಯೋಗಿಸುವ ಮೂಲಕ ತುದಿ ಸೀಳಿದ ಕೂದಲ ಸಹಿತ ಇತರ ರೂಪದಲ್ಲಿ ಘಾಸಿಗೊಂಡ ಕೂದಲನ್ನು ಸರಿಪಡಿಸಲು ಸಾಧ್ಯವಾಗುತ್ತದೆ.

ಒಣ ಚರ್ಮಕ್ಕೆ ಆರೈಕೆ ನೀಡುತ್ತದೆ

ಒಣ ಚರ್ಮಕ್ಕೆ ಆರೈಕೆ ನೀಡುತ್ತದೆ

ಬೇವಿನ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವ ಮೂಲಕ ಚರ್ಮದ ಒಳಭಾಗಕ್ಕೂ ಉತ್ತಮ ಪೋಷಣೆ ಮತ್ತು ಆರ್ದ್ರತೆ ದೊರಕುತ್ತದೆ ಹಾಗೂ ಒಣಚರ್ಮದ ತೊಂದರೆ ನಿವಾರಣೆಯಾಗುತ್ತದೆ. ಪರ್ಯಾಯವಾಗಿ ಸಮಪ್ರಮಾಣದಲ್ಲಿ ಬೇವಿನ ಪುಡಿಯನ್ನು ಗುಲಾಬಿ ನೀರಿನಲ್ಲಿ ಬೆರೆಸಿ ಒಣಚರ್ಮದ ಮೇಲೆ ತೆಳುವಾಗಿ ಲೇಪಿಸಿ ಕೆಲವು ನಿಮಿಷದ ಬಳಿಕ ತೊಳೆದುಕೊಳ್ಳುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು.

ಚರ್ಮದ ಕಲೆಗಳನ್ನು ತೊಲಗಿಸುತ್ತದೆ

ಚರ್ಮದ ಕಲೆಗಳನ್ನು ತೊಲಗಿಸುತ್ತದೆ

ಚರ್ಮದ ಕಪ್ಪು ಕಲೆಗಳಿಗೆ ಚರ್ಮದಡಿಯಲ್ಲಿರುವ ಮೆಲನಿನ್ ಎಂಬ ವರ್ಣದ್ರವ್ಯದ ದಟ್ಟತೆ ಹೆಚ್ಚುವುದು ಕಾರಣವಾಗಿದೆ. ಬೇವಿನ ಎಣ್ಣೆಯನ್ನು ಕಲೆಗಳ ಮೇಲೆ ಹಚ್ಚಿಕೊಳ್ಳುವ ಮೂಲಕ ಹೆಚ್ಚಿನ ಮೆಲನಿನ್ ಪ್ರಮಾಣವನ್ನು ಸ್ರವಿಸುವುದನ್ನು ತಡೆಯುವ ಮೂಲಕ ಕಪ್ಪನೆಯ ಕಲೆಯನ್ನು ನಿವಾರಿಸಲು ನೆರವಾಗುತ್ತದೆ.

 ಮೊಡವೆಗಳ ವಿರುದ್ಧ ಹೋರಾಡುತ್ತದೆ

ಮೊಡವೆಗಳ ವಿರುದ್ಧ ಹೋರಾಡುತ್ತದೆ

ಬೇವಿನ ಎಣ್ಣೆಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಮತ್ತು ಶಿಲೀಂಧ್ರ ನಿವಾರಕ ಗುಣ ಚರ್ಮದ ಅಡಿಯಲ್ಲಿಯೂ ತನ್ನ ಪರಿಣಾಮವನ್ನು ಬೀರಿ ಮೊಡವೆಗಳಿಗೆ ಮೂಲದಿಂದ ಆರೈಕೆ ನೀಡುತ್ತದೆ. ಇದರಿಂದ ಮೊಡವೆಗಳು ನಿವಾರಣೆಯಾಗುವ ಜೊತೆಗೇ ಹೊಸ ಮೊಡವೆಗಳು ಮೂಡುವ ಸಂಭವಗಳೂ ಕಡಿಮೆಯಾಗುತ್ತವೆ. ಜೊತೆಗೇ ಎದುರಾಗಬಹುದಾಗಿದ್ದ ಚರ್ಮದ ಇತರ ತೊಂದರೆಗಳಿಂದಲೂ ಮುಕ್ತಿ ದೊರಕುತ್ತದೆ.

English summary

Amazing Beauty Benefits Of Neem Oil

Neem is a miraculous herb used as an essential component in many cosmetics and hair oils. Apart from its health benefits, neem oil also has plethora of beauty benefits. It has a great prominence in Ayurveda. Neem can treat various skin disorders from acne to eczema. Neem is antibacterial, anti-fungal, anti-inflammatory and anti-parasitic in nature.
Story first published: Thursday, September 24, 2015, 11:12 [IST]
X
Desktop Bottom Promotion