For Quick Alerts
ALLOW NOTIFICATIONS  
For Daily Alerts

ಸೌಂದರ್ಯ ವೃದ್ಧಿಗೆ ಒಂದು ಚಮಚ ಕಾಫಿ ಪುಡಿ ಸಾಕು!

By manu
|

ಕಾಫಿಯ ಗುಣಗಳನ್ನು ಪಟ್ಟಿ ಮಾಡಿದರೆ ಇದನ್ನು ಪೇಯದ ರೂಪದಲ್ಲಿ ಸೇವಿಸಿದ ಬಳಿಕ ದೇಹ ಮತ್ತು ಮನಸ್ಸಿಗೆ ಆಗುವ ಲಾಭಗಳನ್ನೇ ಎಲ್ಲರೂ ಉಲ್ಲೇಖಿಸುತ್ತಾರೆ. ಬೆಳಗ್ಗಿನ ಉಪಾಹಾರದ ಬಳಿಕ ಕುಡಿಯುವ ಒಂದು ಲೋಟ ಕಾಫಿ ಕುಡಿದರೆ ಇಡಿಯ ದಿನ ಉಳಿಯುವ ಉಲ್ಲಾಸ, ಸ್ನೇಹಿತರ ಜೊತೆಗೆ ಒಂದು ಕಾಫಿಯ ನೆಪದಲ್ಲಿ ಕಳೆಯುವ ಉತ್ಸಾಹಕರ ಕ್ಷಣ ಮೊದಲಾದವು ಕಾಫಿಯ ಗುಣಗಳನ್ನು ತಿಳಿಸುತ್ತವೆ. ಆದರೆ ಸೌಂದರ್ಯವರ್ಧಕವಾಗಿಯೂ ಕಾಫಿ ಬಳಕೆಯಾಗಬಹುದು ಎಂದು ತಿಳಿದರೆ ಅಚ್ಚರಿಯಾಗದಿರುತ್ತದೆಯೇ? ಕಾಫಿಯಲ್ಲಿದೆ ಸೌಂದರ್ಯದ ನೂರೆಂಟು ಉಪಯೋಗ

ಹೌದು, ಒಂದು ವೇಳೆ ಹುರಿದ ಕಾಫಿಬೀಜಗಳನ್ನು ಪುಡಿಮಾಡಿ ಸೋಸಿದ ಬಳಿಕ ಉಳಿದ ಹೊಟ್ಟು ಸಹಾ ಸೌಂದರ್ಯ ಕಾಪಾಡಲು ಉಪಯುಕ್ತವೆಂದು ತಿಳಿದಿದ್ದರೆ ನೀವು ಇದನ್ನು ಎಂದೂ ಎಸೆಯುತ್ತಿರಲಿಲ್ಲ. ಈ ಹೊಟ್ಟಿನಲ್ಲಿ ಚರ್ಮ ಮತ್ತು ಕೂದಲಿಗೂ ಉತ್ತಮ ಆರೈಕೆ ನೀಡುವ ಗುಣಗಳಿವೆ. ಹೊಳಪಿನ ಮೈಗಾಗಿ ಕಾಫಿ ಬಾಡಿ ಸ್ಕ್ರಬ್

ವಾಸ್ತವವಾಗಿ ಕಾಫಿಯ ಕೆಫೀನ್ ದೇಹದೊಳಕ್ಕೆ ಮಾಡುವ ಉಪಕಾರಕ್ಕಿಂತಲೂ ದೇಹದ ಹೊರಗಿನಿಂದ ನೀಡುವ ಪೋಷಣೆಯೇ ಹೆಚ್ಚು ಉಪಯುಕ್ತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಈಗ ನೋಡೋಣ:

ಉಪಯೋಗ 1: ಕೂದಲ ಹೊಳಪು ಹೆಚ್ಚಿಸುತ್ತದೆ

ಉಪಯೋಗ 1: ಕೂದಲ ಹೊಳಪು ಹೆಚ್ಚಿಸುತ್ತದೆ

ಕಾಫಿಪುಡಿಯನ್ನು ಉಪಯೋಗಿಸಿ ಸಿದ್ಧಪಡಿಸಿದ ಲೇಪನವನ್ನು ಕೂದಲಿಗೆ ಹಚ್ಚಿಕೊಳ್ಳುವ ಮೂಲಕ ಕೂದಲ ಹೊಳಪು ಹೆಚ್ಚುವುದು ಮಾತ್ರವಲ್ಲದೇ ಕಾಫಿಯ ನವಿರು ಪರಿಮಳ ತಲೆಯನ್ನು ಸುವಾಸನೆಯಿಂದ ಕೂಡಿರುತ್ತದೆ.

ಉಪಯೋಗ 2: ಚರ್ಮದ ಸೆಳೆತ ಹೆಚ್ಚಿಸುತ್ತದೆ

ಉಪಯೋಗ 2: ಚರ್ಮದ ಸೆಳೆತ ಹೆಚ್ಚಿಸುತ್ತದೆ

ಹಳೆಯ ಕಾಫಿ ಬೀಜವನ್ನು ನುಣ್ಣಗೆ ಪುಡಿಮಾಡಿ ಟೀ ಟ್ರೀ ಎಣ್ಣೆಯಿಂದ ಮಿಶ್ರಣಮಾಡಿ ಚರ್ಮಕ್ಕೆ ನಿಯಮಿತವಾಗಿ ಹಚ್ಚಿಕೊಳ್ಳುವ ಮೂಲಕ ಚರ್ಮದ ಸೆಳೆತೆ ಹೆಚ್ಚುವುದು, ತನ್ಮೂಲಕ ಮುಪ್ಪು ದೂರಾಗುವುದು.

ಉಪಯೋಗ 3: ಚರ್ಮದ ಕಾಂತಿ ಹೆಚ್ಚುವುದು

ಉಪಯೋಗ 3: ಚರ್ಮದ ಕಾಂತಿ ಹೆಚ್ಚುವುದು

ಕಾಫಿಪುಡಿಯನ್ನು ನೀರಿನೊಂದಿಗೆ ಬೆರೆಸಿ ಚರ್ಮಕ್ಕೆ ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚುವುದು. ಇದೊಂದು ಉತ್ತಮವಾದ ಫೇಸ್ ಪ್ಯಾಕ್ ಆಗಿದೆ.

ಉಪಯೋಗ 4:ತಲೆಯ ಚರ್ಮವನ್ನು ಸ್ವಚ್ಛಗೊಳಿಸುವುದು

ಉಪಯೋಗ 4:ತಲೆಯ ಚರ್ಮವನ್ನು ಸ್ವಚ್ಛಗೊಳಿಸುವುದು

ಪ್ರತಿ ಹದಿನೈದು ದಿನಕ್ಕೊಮ್ಮೆ ಹಳೆಯ ಕಾಫಿ ಬೀಜಗಳ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ತಲೆಗೂದಲಿಗೆ ಹಚ್ಚಿಕೊಳ್ಳಿ. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ತಲೆಯನ್ನು ತೊಳೆದುಕೊಳ್ಳಿ. ಇದರಿಂದ ತಲೆಬುರುಡೆಯ ಚರ್ಮದಲ್ಲಿರುವ ಕೊಳೆ, ಹೊಟ್ಟು ಮತ್ತು ಇತರ ಕಲ್ಮಶಗಳು ನಿವಾರಣೆಯಾಗುತ್ತವೆ.

ಉಪಯೋಗ 5: ಉಬ್ಬಿದ ಕಣ್ಣುಗಳ ಕೆಳಭಾಗವನ್ನು ಕಡಿಮೆಗೊಳಿಸುತ್ತದೆ

ಉಪಯೋಗ 5: ಉಬ್ಬಿದ ಕಣ್ಣುಗಳ ಕೆಳಭಾಗವನ್ನು ಕಡಿಮೆಗೊಳಿಸುತ್ತದೆ

ಕಣ್ಣುಗಳ ಕೆಳಭಾಗ ಉಬ್ಬಿಕೊಂಡಿದ್ದರೆ ಇದಕ್ಕೆ ಕೆಫೀನ್ ಉತ್ತಮ ಪರಿಹಾರ ನೀಡುತ್ತದೆ. ಕಣ್ಣಿಗೆ ಆರೈಕೆ ನೀಡುವ ಕ್ರೀಂ ನಲ್ಲಿರುವ ಘಟಕಗಳನ್ನು ಗಮನಿಸಿ. ಅದರಲ್ಲಿ ಒಂದು ವೇಳೆ ಕೆಫೀನ್ ಇದ್ದರೆ ಉಬ್ಬಿದ ಕಣ್ಣುಗಳ ಕೆಳಭಾಗ ಶೀಘ್ರವೇ ಕಡಿಮೆಯಾಗುತ್ತದೆ.

ಉಪಯೋಗ 6: ಚರ್ಮದ ಸೌಮ್ಯತೆ ಹೆಚ್ಚುವುದು

ಉಪಯೋಗ 6: ಚರ್ಮದ ಸೌಮ್ಯತೆ ಹೆಚ್ಚುವುದು

ಕಾಫಿಪುಡಿಯನ್ನು ಲೇಪನದ ರೂಪದಲ್ಲಿ ಬಳಸುವುದರಿಂದ ಚರ್ಮದ ಸೆಳೆತ ಹೆಚ್ಚುವುದು ಮಾತ್ರವಲ್ಲದೇ ಕೋಮಲವೂ ಆಗುವುದು.

ಉಪಯೋಗ 7: ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ

ಉಪಯೋಗ 7: ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ

ಚರ್ಮದ ಹೊರಭಾಗದಲ್ಲಿ ಸಂಗ್ರಹವಾಗಿರುವ ಸತ್ತ ಜೀವಕೋಶಗಳನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಸೋಪು ಹಾಕಿ ಎಷ್ಟು ಉಜ್ಜಿದರೂ ಬಾರದ ಈ ಜೀವಕೋಶಗಳು ಹಳೆಯ ಕಾಫಿಬೀಜದ ಪುಡಿಯನ್ನು ಉಜ್ಜಿಕೊಳ್ಳುವ ಮೂಲಕ ಈ ಜೀವಕೋಶಗಳು ಸುಲಭವಾಗಿ ಹೊರಬರುತ್ತವೆ. ಇದಕ್ಕಾಗಿ ಹಳೆಯ ಕಾಫಿಬೀಜಗಳನ್ನು ನುಣ್ಣಗೆ ಪುಡಿಮಾಡಿ ನೀರಿನಲ್ಲಿ ನೆನೆಸಿ. ಬಿಸಿನೀರಿನ ಸ್ನಾನದ ಬಳಿಕ ಕಾಫಿಯ ಲೇಪನವನ್ನು ಇಡಿಯ ದೇಹಕ್ಕೆ ಹಚ್ಚಿ ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ನಂತರ ಮೈಯುಜ್ಜುವ ಬ್ರಶ್ ಉಪಯೋಗಿಸಿ ಉಜ್ಜಿಕೊಳ್ಳಿ. ಚರ್ಮದ ಕಾಂತಿ ಹೆಚ್ಚಿರುವುದನ್ನು ನೋಡಿ ದಂಗಾಗುತ್ತೀರಿ.

ಉಪಯೋಗ 8: ಕೂದಲ ಬೆಳವಣಿಗೆ ಹೆಚ್ಚಿಸುತ್ತದೆ

ಉಪಯೋಗ 8: ಕೂದಲ ಬೆಳವಣಿಗೆ ಹೆಚ್ಚಿಸುತ್ತದೆ

ಕಾಫಿಪುಡಿಯನ್ನು ಕೂದಲ ಬುಡಕ್ಕೆ ಹಚ್ಚಿಕೊಳ್ಳುವುದರಿಂದ ಕೂದಲ ಬೆಳವಣೆಗೆ ಹೆಚ್ಚುತ್ತದೆ.

ಉಪಯೋಗ 9: ಚರ್ಮದಲ್ಲಿ ಗುಳಿಬೀಳುವುದನ್ನು ತಪ್ಪಿಸುತ್ತದೆ

ಉಪಯೋಗ 9: ಚರ್ಮದಲ್ಲಿ ಗುಳಿಬೀಳುವುದನ್ನು ತಪ್ಪಿಸುತ್ತದೆ

ಕೆನ್ನೆಯಲ್ಲಿ ಗುಳಿಬಿದ್ದರೆ ಸೌಂದರ್ಯ ಹೆಚ್ಚುತ್ತದೆ. ಆದರೆ ಇಂತಹ ಚಿಕ್ಕಚಿಕ್ಕ ಗುಳಿಗಳು ಸೊಂಟದ ಸುತ್ತಮುತ್ತಲ ಭಾಗಗಳಲ್ಲಿ ಬಿದ್ದರೆ ಅದು ಅನಾರೋಗ್ಯದ ಲಕ್ಷಣವಾಗಿದೆ. ಸೆಲ್ಯೂಲೈಟ್ (cellulite) ಎಂಬ ಈ ಸ್ಥಿತಿಗೆ ಉತ್ತಮ ಪರಿಹಾರವನ್ನು ಕಾಫಿ ಬೀಜ ಒದಗಿಸುತ್ತದೆ.

ಚರ್ಮದಲ್ಲಿ ಗುಳಿಬೀಳುವುದನ್ನು ತಪ್ಪಿಸುತ್ತದೆ

ಚರ್ಮದಲ್ಲಿ ಗುಳಿಬೀಳುವುದನ್ನು ತಪ್ಪಿಸುತ್ತದೆ

ಇದಕ್ಕಾಗಿ ಹಳೆಯ ಕಾಫಿಬೀಜವನ್ನು ಕುಟ್ಟಿ ಪುಡಿ ಮಾಡಿ ಕೆಲವು ಹನಿ ಕೊಬ್ಬರಿ ಎಣ್ಣೆ ಸೇರಿಸಿ ಲೇಪನ ತಯಾರಿಸಿ.ಈ ಲೇಪನವನ್ನು ಗುಳಿಗಳಿರುವಲ್ಲೆಲ್ಲಾ ಲೇಪಿಸಿ. ಸುಮಾರು ಇಪ್ಪತ್ತು ನಿಮಿಷದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೊಂದು ಅಥವಾ ಎರಡು ಬಾರಿ ಈ ವಿಧಾನವನ್ನು ಅನುಸರಿಸುವುದರಿಂದ ಉತ್ತಮ ಪರಿಹಾರ ದೊರಕುತ್ತದೆ.

English summary

9 Beauty Benefits Of Coffee

You would start your day with coffee and unwind the day with coffee. You catch up your friends over a cup of coffee and you enjoy your first date over a coffee but have you ever tried coffee for beauty? Well, once you realise the benefits of coffee for beauty, you will never ever throw away used coffee grounds. Yes, it benefits both your skin and hair.Now, let us discuss more about how coffee is generally used for beauty purposes.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more