For Quick Alerts
ALLOW NOTIFICATIONS  
For Daily Alerts

ಟೊಮೇಟೊ ರಸದಿಂದ ಚರ್ಮ ರಕ್ಷಣೆ

By Manohar.V
|

ಚಳಿಗಾಲದಲ್ಲಿ ಚರ್ಮ ಒಣಗುವುದು ಸಾಮಾನ್ಯ ಇದಕ್ಕಾಗಿ ಮಾಯಿಶ್ಚರೈಸರ್ ಅಥವಾ ಎಣ್ಣೆಯನ್ನು ನೀವು ತ್ವಚೆಗೆ ಹಚ್ಚಿದರೆ, ತ್ವಚೆಯು ಎಣ್ಣೆಯುಕ್ತವಾಗಿ ಕಾಣಿಸಿಕೊಳ್ಳುತ್ತದೆ. ಕೆಲವರು ಎಣ್ಣೆ ಚರ್ಮವನ್ನು ಹೊಂದಿರುತ್ತಾರೆ ಅಂತಹವರಿಗೆ ಇದು ಖಂಡಿತ ಸಾಧ್ಯವಲ್ಲದ ಮಾತು. ಎಣ್ಣೆ ತ್ವಚೆಯನ್ನು ಉಪಚರಿಸಲು ನೈಸರ್ಗಿಕವಾದ ಮನೆಯಲ್ಲೇ ತಯಾರಿಸಬಹುದಾದ ಪರಿಹಾರಗಳನ್ನು ಪ್ರಯತ್ನಿಸಿ.

ಎಣ್ಣೆಯುಕ್ತ ತ್ವಚೆಯನ್ನು ಆರೈಕೆ ಮಾಡಲು ಹಲವಾರು ನೈಸರ್ಗಿಕ ಸಾಮಾಗ್ರಿಗಳಿವೆ. ಉದಾಹರಣೆಗೆ, ಎಣ್ಣೆ ತ್ವಚೆಯ ಆರೈಕೆಗೆ ಹೆಚ್ಚು ಪರಿಣಾಮಕಾರಿಯಾದ ಸಾಮಾಗ್ರಿಯೆಂದರೆ ಟೊಮೇಟೊ ಆಗಿದೆ. ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುಬರುವ ತರಕಾರಿ ಟೊಮೇಟೊ. ಟೊಮೇಟೊವನ್ನು ಅಡುಗೆಗೆ ಬಳಸುವುದನ್ನು ಹೊರತುಪಡಿಸಿ ಅದರಿಂದ ನಾವು ಪಡೆಯಬಹುದಾದ ಸೌಂದರ್ಯ ಪ್ರಯೋಜನಗಳನ್ನು ಅರಿತುಕೊಳ್ಳಿ. ಮನೆಯಲ್ಲೇ ತಯಾರಿಸಬಹುದಾದ ಹಲವಾರು ಬಗೆಯ ಫೇಸ್‌ಪ್ಯಾಕ್‌ಗಳನ್ನು ಟೊಮೇಟೊದಿಂದ ತಯಾರಿಸಲಾಗುತ್ತದೆ.

ನಿಮ್ಮ ತ್ವಚೆಯ ಸೂಕ್ಷ್ಮ ರಂಧ್ರಗಳನ್ನು ನಿವಾರಿಸುವಲ್ಲಿ ಟೊಮೇಟೊ ಸಹಕಾರಿ. ಟೊಮೇಟೊದಲ್ಲಿ ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿದ್ದು ನಿಮ್ಮ ತ್ವಚೆಯನ್ನು ತಾರುಣ್ಯಭರಿತವಾಗಿ ಮತ್ತು ದೀರ್ಘಕಾಲದವರೆಗೆ ಸ್ವಚ್ಚವಾಗಿ ಕಾಣುವಂತೆ ಮಾಡುತ್ತದೆ.

ಟೊಮೇಟೊವನ್ನು ನೀವು ಹಾಗೆಯೇ ಇಡಿಯಾಗಿ ಕೂಡ ಹಚ್ಚಿಕೊಳ್ಳಬಹುದು ಅಥವಾ ಅದರ ರಸವನ್ನು ತೆಗೆದು ಕೂಡ ಮುಖಕ್ಕೆ ಲೇಪಿಸಿಕೊಳ್ಳಬಹುದು. ಟೊಮೇಟೊ ಮಾತ್ರವಲ್ಲದೆ ಅದರ ರಸ ಕೂಡ ತ್ವಚೆಗೆ ತುಂಬಾ ಉತ್ತಮ. ಮುಖದಲ್ಲಿರುವ ರಂಧ್ರಗಳು, ಮೊಡವೆ ಹಾಗೂ ಕಪ್ಪುಕಲೆಗಳನ್ನು ಕೂಡ ನಿವಾರಿಸುತ್ತದೆ. ಮುಖ್ಯವಾಗಿ ಎಣ್ಣೆಯುಕ್ತ ತ್ವಚೆಯನ್ನು ಆರೈಕೆ ಮಾಡಲು ಟೊಮೇಟೊ ರಸ ರಾಮಬಾಣವಾಗಿದೆ. ಟೊಮೇಟೊ ರಸವನ್ನು ಬಳಸಿಕೊಂಡು ಮನೆಯಲ್ಲೇ ತಯಾರಿಸಬಹುದಾದ ಪರಿಹಾರಗಳು ಇಲ್ಲಿವೆ.

1. ರಂಧ್ರಗಳನ್ನು ಕುಗ್ಗಿಸುತ್ತದೆ

1. ರಂಧ್ರಗಳನ್ನು ಕುಗ್ಗಿಸುತ್ತದೆ

ಈ ರಂಧ್ರಗಳು ಮಲಿನತೆಗೆ ತೆರೆದುಕೊಳ್ಳುತ್ತದೆ ಮತ್ತು ಹೆಚ್ಚು ಕೆಟ್ಟ ಪ್ರಭಾವಕ್ಕೊಳಗಾಗುವ ಸ್ಥಳವಾಗಿದೆ. ಟೊಮೇಟೊ ರಸವನ್ನು ಈ ಭಾಗದಲ್ಲಿ ಹಚ್ಚಿಕೊಳ್ಳುವುದರಿಂದ ರಂಧ್ರಗಳು ಕುಗ್ಗುತ್ತವೆ. ಟೊಮೇಟೊ ರಸವನ್ನು ನಿಂಬೆ ಹಣ್ಣಿನ ರಸದೊಂದಿಗೆ ಮಿಶ್ರ ಮಾಡಿಕೊಂಡು ಹತ್ತಿ ಉಂಡೆಯನ್ನು ಮುಳುಗಿಸಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.

2.ಮೊಡವೆಗಳನ್ನು ತಗ್ಗಿಸುತ್ತದೆ

2.ಮೊಡವೆಗಳನ್ನು ತಗ್ಗಿಸುತ್ತದೆ

ಟೊಮೇಟೊ ರಸವನ್ನು ಬಳಸಿಕೊಂಡು ಉಪಶಮನ ಮಾಡುವ ಸಾಮಾನ್ಯ ತ್ವಚೆಯ ಸಮಸ್ಯೆ ಮೊಡವೆಯಾಗಿದೆ. ಟೊಮೇಟೊದಲ್ಲಿರುವ ನೈಸರ್ಗಿಕ ಏಸಿಡ್‌ಗಳು ಮತ್ತು ವಿಟಮಿನ್‌ಗಳು ಮೊಡವೆಯನ್ನು ನಿವಾರಿಸುತ್ತದೆ. ಟೊಮೇಟೊದಿಂದ ರಸವನ್ನು ಹೊರತೆಗೆದು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷಗಳವರೆಗೆ ಹಾಗೆಯೇ ಬಿಡಿ ಮತ್ತು ಸ್ವಚ್ಛ ನೀರಿನಿಂದ ಮುಖ ತೊಳೆದುಕೊಳ್ಳಿ.

3.ಎಣ್ಣೆಯುಕ್ತ ತ್ವಚೆಯನ್ನು ಆರೈಕೆ ಮಾಡುತ್ತದೆ

3.ಎಣ್ಣೆಯುಕ್ತ ತ್ವಚೆಯನ್ನು ಆರೈಕೆ ಮಾಡುತ್ತದೆ

ಎಣ್ಣೆಯುಕ್ತ ತ್ವಚೆ ನಿಜವಾಗಿಯೂ ಮುಜುಗರವನ್ನುಂಟು ಮಾಡುತ್ತದೆ. ಆದ್ದರಿಂದ ಟೊಮೇಟೊ ರಸದಿಂದ ಮುಖವನ್ನು ಮಸಾಜ್ ಮಾಡಿ. ಟೊಮೇಟೊ ರಸವನ್ನು ನಿಂಬೆ ಹಣ್ಣಿನ ರಸದೊಂದಿಗೆ ಮಿಶ್ರ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ 15-20 ನಿಮಿಷಗಳವರೆಗೆ ಹಾಗೆಯೇ ಬಿಡಿ ನೀರಿನಿಂದ ತೊಳೆದುಕೊಳ್ಳಿ.

4.ಬೇಸಿಗೆ ಧಗೆಯನ್ನು ಕಡಿಮೆ ಮಾಡುತ್ತದೆ

4.ಬೇಸಿಗೆ ಧಗೆಯನ್ನು ಕಡಿಮೆ ಮಾಡುತ್ತದೆ

ಬೇಸಿಗೆಯಲ್ಲಿ ಸೂರ್ಯನ ಪ್ರಖರವಾದ ಕಿರಣಗಳು ಮುಖವನ್ನು ಧಹಿಸುವಂತೆ ಮಾಡುತ್ತದೆ. ಈ ಸಮಯದಲ್ಲಿ ಟೊಮೇಟೊ ರಸವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ತಂಪು ಉಂಟಾಗಿ ಬಾಡಿದ ಮುಖವು ಹೊಳೆಯುತ್ತದೆ.

5.ಸೂರ್ಯನ ಧಗೆಯನ್ನು ಹೋಗಲಾಡಿಸುತ್ತದೆ

5.ಸೂರ್ಯನ ಧಗೆಯನ್ನು ಹೋಗಲಾಡಿಸುತ್ತದೆ

ಸೂರ್ಯನ ಹೆಚ್ಚುವರಿ ಧಗೆಯು ತ್ವಚೆಯ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಟೊಮೇಟೊ ರಸವು ಸೂರ್ಯನ ಧಗೆಯನ್ನು ಕಡಿಮೆ ಮಾಡಿ, ತ್ವಚೆಯ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ.

6.ನೈಸರ್ಗಿಕ ಪೋಷಕಾಂಶಗಳು

6.ನೈಸರ್ಗಿಕ ಪೋಷಕಾಂಶಗಳು

ಟೊಮೇಟೊ ಹಣ್ಣಿನಲ್ಲಿ ಪೋಷಕಾಂಶಗಳು ಹೆಚ್ಚಾಗಿದ್ದು ವಿಟಮಿನ್ 'ಸಿ' ಇದರಲ್ಲಿ ಹೆಚ್ಚು ಇದೆ. ತ್ವಚೆಯಿಂದ ಎಣ್ಣೆಯನ್ನು ಹೋಗಲಾಡಿಸುವುದಲ್ಲದೆ ಚರ್ಮವನ್ನು ಸ್ವಚ್ಛಗೊಳಿಸುತ್ತದೆ.

7.ಹೊಳೆಯುವ ತ್ವಚೆ

7.ಹೊಳೆಯುವ ತ್ವಚೆ

ಹೊಳೆಯುವ ಮತ್ತು ಸುಂದರವಾದ ತ್ವಚೆಯನ್ನು ಪಡೆಯಲು, ಟೊಮೇಟೊ ರಸವನ್ನು ಶ್ರೀಗಂಧದ ಹುಡಿ ಮತ್ತು ರೋಸ್ ವಾಟರ್‌ನೊಂದಿಗೆ ಮಿಶ್ರ ಮಾಡಿಕೊಳ್ಳಿ. ಕಳೆಗುಂದಿದ ತ್ವಚೆಗೆ ಸೂಕ್ತ ಆರೈಕೆಯನ್ನು ಮಾಡಿ ಅದರ ಹೊಳಪನ್ನು ಹೆಚ್ಚಿಸುತ್ತದೆ.

English summary

Tomato Juice Skin Benefits

During winters, the skin becomes dry. When you apply a moisturiser or oil on the face, it becomes too oily and greasy. There are many people who naturally have oily skin and applying such products just worsen the situation. This is where you need to try some home remedies to treat oily skin naturally.
X
Desktop Bottom Promotion