For Quick Alerts
ALLOW NOTIFICATIONS  
For Daily Alerts

ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಪುರುಷರಿಗೆ ಸಲಹೆಗಳು

By Hemanth P
|

ಕಣ್ಣಿನ ಸುತ್ತಲು ಉಂಟಾಗುವ ಡಾರ್ಕ್ ಸರ್ಕಲ್ ಮಹಿಳೆಯರು ಮಾತ್ರವಲ್ಲದೆ ಪುರುಷರಲ್ಲೂ ಕಂಡು ಬರುತ್ತದೆ. ಇದು ಮುಖದ ಅಂದವನ್ನೇ ಕೆಡಿಸುತ್ತದೆ. ಕೆಲವೊಂದು ಸಲ ಡಾರ್ಕ್ ಸರ್ಕಲ್ ಅನಾರೋಗ್ಯಕರ ಜೀವನಶೈಲಿಯಿಂದ ಬರುತ್ತದೆ.

ಕೆಲವು ಮಂದಿಯಲ್ಲಿ ಇದು ವಂಶವಾಹಿನಿಂದ ಬರಬಹುದು, ಮತ್ತೆ ಕೆಲವರಲ್ಲಿ ಕಣ್ಣಿನ ಸುತ್ತ ಯಾವಾಗಲೂ ಉಜ್ಜುತ್ತಿದ್ದರೆ, ಬಿಸಿಲಿಗೆ ಹೋಗುವುದರಿಂದ ಉಂಟಾಗುವ ಹೈಪರ್ಪಿಗ್ಮೆಂಟೇಶನ್, ಸರಿಯಾಗಿ ನಿದ್ರೆ ಬಾರದೆ ಇರುವುದು, ಜಲಸಂಚಯದ ಕೊರತೆ ಇತ್ಯಾದಿ ಡಾರ್ಕ್ ಸರ್ಕಲ್ ಗೆ ಕಾರಣಗಳಾಗಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹ್ಯಾಂಗ್ ಓವರ್ ಚರ್ಮ ಸರಿಪಡಿಸುವ ವಿಧಾನಗಳು

ಡಾರ್ಕ್ ಸರ್ಕಲ್ ಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಅದಕ್ಕೆ ಕಾರಣವೇನೆಂದು ಕಂಡುಕೊಳ್ಳುವುದು ತುಂಬಾ ಮುಖ್ಯ. ಕೆಲವೊಂದು ಸಲ ಅತಿಯಾದ ಒತ್ತಡ ಮತ್ತು ನಿದ್ರೆಯ ಕೊರತೆ ಇದಕ್ಕೆ ಕಾರಣವಾಗಬಹುದು. ಇಂತಹ ಸಂದರ್ಭಗಳಲ್ಲಿ ನಿಮ್ಮ ಜೀವನಶೈಲಿ ಬದಲಾಯಿಸಬೇಕು.

ಡಾರ್ಕ್ ಸರ್ಕಲ್‌ನ್ನು ನಿವಾರಿಸುವುದು ಹೇಗೆಂದು ಪುರುಷರಿಗೆ ಇಲ್ಲಿ ಕೆಲವೊಂದು ಟಿಪ್ಸ್ ನೀಡಲಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶೇವಿಂಗ್ ನಂತರ ಕಂಡುಬರುವ ಸಮಸ್ಯೆಗೆ ಸಲಹೆಗಳು

1. ಸೌತೆಕಾಯಿ

1. ಸೌತೆಕಾಯಿ

ಇದು ಡಾರ್ಕ್ ಸರ್ಕಲ್ ಚಿಕಿತ್ಸೆಗೆ ಅತ್ಯಂತ ಪರಿಣಾಮಕಾರಿ ವಿಧಾನ. ಇದು ಒಳ್ಳೆಯ ಸಂಕೋಚನ ಮತ್ತು ತ್ವಚೆಯ ಕಾಂತಿವರ್ಧಕ. ಸೌತೆಕಾಯಿಯನ್ನು ತುಂಡು ಮಾಡಿ ಅಥವಾ ತುರಿದು 10 ನಿಮಿಷಗಳು ಕಣ್ಣಿನ ಮೇಲಿಡಬೇಕು. ಇದನ್ನು ದಿನದಲ್ಲಿ ಹಲವು ಸಲ ಮಾಡಬೇಕು. ಇದು ಕಣ್ಣಿಗೆ ಆರಾಮ ನೀಡುವುದು ಮಾತ್ರವಲ್ಲದೆ ಡಾರ್ಕ್ ಸರ್ಕಲ್ ನ್ನು ನಿವಾರಿಸುತ್ತದೆ.

2. ನೀರು

2. ನೀರು

ಪ್ರತೀದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ನೀವು ಯಾವುದೇ ಮದ್ದಿಗಿಂತ ಪರಿಣಾಮಕಾರಿಯಾಗಿ ಡಾರ್ಕ್ ಸರ್ಕಲ್ ನ್ನು ನಿವಾರಿಸಬಹುದು. ಇದು ತುಂಬಾ ಸರಳ ಮದ್ದು. ಡಾರ್ಕ್ ಸರ್ಕಲ್ ನಿವಾರಣೆ ಮತ್ತು ಬರದಂತೆ ತಡೆಯುತ್ತದೆ. ಇದು ನಿಮ್ಮ ತ್ವಚೆಗೆ ತೇವಾಂಶ ನೀಡಿ ಡಾರ್ಕ್ ಸರ್ಕಲ್ ವಿರುದ್ಧ ಹೋರಾಡುತ್ತದೆ.

3. ನಿದ್ರೆ

3. ನಿದ್ರೆ

ದೀರ್ಘ ಸಮಯದವರೆಗೆ ನಿದ್ರೆ ಕಡಿಮೆಯಾದರೆ ಅದರ ಪರಿಣಾಮ ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ. ನಿದ್ರೆ ಕಡಿಮೆಯಾದ ಪರಿಣಾಮ ನಿಮ್ಮ ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಮೂಡುತ್ತದೆ. ಇದು ನಿಮ್ಮ ಕಣ್ಣಿನ ಸ್ನಾಯುಗಳು ಮತ್ತು ಅಂಗಾಂಶಗಳ ಮೇಲೆ ಉಂಟಾಗುವ ಒತ್ತಡದ ಪರಿಣಾಮವಾಗಿ ಡಾರ್ಕ್ ಸರ್ಕಲ್ ಗಳು ಉಂಟಾಗುತ್ತದೆ. ಆರೋಗ್ಯಕರ ಕಣ್ಣುಗಳನ್ನು ಮರಳಿ ಪಡೆಬೇಕಾದರೆ ಅದನ್ನು ಶಮನಗೊಳಿಸುವುದು ಮತ್ತು ಪುನರ್ಯೌವನಗೊಳಿಸುವುದು ಮುಖ್ಯ. ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್ ನ್ನು ನಿವಾರಿಸಲು ಒಳ್ಳೆಯ ವಿಧಾನವೆಂದರೆ ಬೇಗನೆ ಮಲಗಿ ಸರಿಯಾಗಿ ನಿದ್ರೆ ಮಾಡುವುದು.

4. ಟೀ ಬ್ಯಾಗ್

4. ಟೀ ಬ್ಯಾಗ್

ಡಾರ್ಕ್ ಸರ್ಕಲ್ ಹೋಗಲಾಡಿಸಲು ಇದು ಮತ್ತೊಂದು ಪರಿಣಾಮಕಾರಿ ವಿಧಾನ. ಬೆಳಗ್ಗಿನ ಟೀ ಕುಡಿದ ಬಳಿಕ ಟೀ ಬ್ಯಾಗ್ ನ್ನು ಉಪಯೋಗಿಸಲು ಅದನ್ನು ಪ್ರಿಡ್ಜ್ ನಲ್ಲಿಡಿ. ನಿಮಗೆ ಸಮಯ ಸಿಕ್ಕಿದಾಗ ಟೀ ಬ್ಯಾಗ್ ನ್ನು ಹೊರಗಿಡಿ, ಅದು ಕೋಣೆಯ ತಾಪಮಾನಕ್ಕೆ ಸರಿಹೊಂದಲಿ ಮತ್ತು ಇದರ ಬಳಿಕ ಅದನ್ನು ಕಣ್ಣಿನ ಮೇಲಿಡಿ.

5 ಟೊಮೆಟೊ

5 ಟೊಮೆಟೊ

ಟೊಮೆಟೊದಲ್ಲಿ ನಿಮ್ಮ ತ್ವಚೆಯ ಬಣ್ಣವನ್ನು ಲಘುವಾಗಿಸುವ ಗುಣವಿದೆ. ಒಂದು ಚಮಚದಷ್ಟು ಟೊಮೆಟೊ ಹಾಗೂ ನಿಂಬೆರಸರನ್ನು ಮಿಶ್ರಣ ಮಾಡಿ. ಡಾರ್ಕ್ ಸರ್ಕಲ್ ಗೆ ಇದನ್ನು ಹಚ್ಚಿ ಮತ್ತು ಹತ್ತು ನಿಮಿಷಗಳ ತನಕ ಹಾಗೆ ಇರಲಿ. ಅಂತಿಮವಾಗಿ ಶುದ್ದ ನೀರಿನಿಂದ ತೊಳೆಯಿರಿ. ಇದು ಕಣ್ಣಿನ ಸುತ್ತಲು ಇರುವ ಡಾರ್ಕ್ ಸರ್ಕಲ್ ನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿ ಬಳಸುವಂತಹ ಮದ್ದು.

6. ಬಾದಾಮಿ ಎಣ್ಣೆ

6. ಬಾದಾಮಿ ಎಣ್ಣೆ

ನೈಸರ್ಗಿಕ ಪದಾರ್ಥವಾಗಿರುವ ಬಾದಾಮಿ ಎಣ್ಣೆಯು ಕಣ್ಣಿನ ಸುತ್ತಲು ಇರುವ ಸೂಕ್ಷ್ಮ ಚರ್ಮಕ್ಕೆ ತುಂಬಾ ಲಾಭಕಾರಿ. ನಿಯಮಿತವಾಗಿ ಬಾದಾಮಿ ಎಣ್ಣೆ ಬಳಸುವುದರಿಂದ ಅದು ಕಣ್ಣಿನ ಸುತ್ತಲು ಇರುವ ಚರ್ಮದ ಬಣ್ಣವನ್ನು ಲಘುವಾಗಿಸುತ್ತದೆ. ಮಲಗುವ ಮೊದಲು ಬಾದಾಮಿ ಎಣ್ಣೆಯನ್ನು ನಿಮ್ಮ ಕಣ್ಣಿನ ಸುತ್ತ ಹಚ್ಚಿ ಲಘುವಾಗಿ ಮಸಾಜ್ ಮಾಡಬೇಕು. ರಾತ್ರಿಯಿಡಿ ಅದು ಹಾಗೆ ಇರಲಿ ಮತ್ತು ಬೆಳಿಗ್ಗೆ ಎದ್ದ ಬಳಿಕ ತಂಪಾದ ನೀರಿನಿಂದ ಅದನ್ನು ತೊಳೆಯಿರಿ. ನೀವು ಆಲೀವ್ ಎಣ್ಣೆ ಅಥವಾ ಆಲಿವ್ ಎಣ್ಣೆ ಮತ್ತು ಬಾದಾಮಿ ಎಣ್ಣೆಯ ಮಿಶ್ರಣವನ್ನು ಪರಿಣಾಮಕಾರಿ ಫಲಿತಾಂಶಕ್ಕೆ ಬಳಸಬಹುದು.

English summary

Reduce Dark Circles: Easy Tips For Men

Dark circles can be quite an unattractive sight, even in males. Most times, dark circles are a result of an unhealthy lifestyle. So here are few tips to remove the dark circles read on:
X
Desktop Bottom Promotion