For Quick Alerts
ALLOW NOTIFICATIONS  
For Daily Alerts

ತ್ವಚೆಯ ಕಾಂತಿಯನ್ನು ಹೆಚ್ಚಿಸುವ ಮನೆಮದ್ದುಗಳು!

|

ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳಲು, ನಾವು ಮಾರುಕಟ್ಟೆಯಲ್ಲಿ ದೊರೆಯುವ ಅನೇಕ ರೀತಿಯ ಸೌಂದರ್ಯವರ್ಧಕ ವಸ್ತುಗಳಿಗೆ ಮೊರೆ ಹೋಗುವುದು ಸಾಮಾನ್ಯವಾಗಿದೆ. ಇದರಿಂದ ನಮ್ಮ ಚರ್ಮ ಕಾಂತಿಯನ್ನು ಕಳೆದುಕೊಳ್ಳುವುದರ ಜೊತೆಗೆ ಉಲ್ಲಾಸವನ್ನು ಕಳೆದುಕೊಳ್ಳುತ್ತದೆ. ತ್ವಚೆ ಮೊದಲಿನಂತೆ ಉಳಿಯುವುದಿಲ್ಲ. ತೀವ್ರ ಅಥವಾ ಹಾಗೇ ಉಳಿಯುವುದಿಲ್ಲ ಆಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಂಬೆ ಫೇಸ್ ಪ್ಯಾಕ್‌ನ ಮಹತ್ವವೇನು ?

ವಯಸ್ಸು ಸಹ ಸುಕ್ಕುಗಳು, ಕಪ್ಪು ವತ್ರುಲಗಳು, ಮತ್ತು ಸೂಕ್ಷ್ಮ ರೇಖೆಗಳಿಗೆ ಕಾರಣವಾಗುತ್ತದೆ. ಮಹಿಳೆಯರು ಇವುಗಳಿಂದ ತಮಗೆ ವಯಸ್ಸಾಗಿದೆ ಎಂಬ ಭ್ರಮೆಯನ್ನು ಹೊಂದಿರುತ್ತಾರೆ. ಅವರು ವಿಶೇಷವಾಗಿ ಸುಕ್ಕುಗಟ್ಟಿದಂತಹ ಚಿಹ್ನೆಗಳನ್ನು ಮರೆಮಾಚಲು ಕ್ರೀಮ್ ಮತ್ತು ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಾರೆ. ಸೂಕ್ಷ್ಮ ರೇಖೆಗಳು ಮತ್ತು ಸುರುಳಿಗಟ್ಟಿದ ಚರ್ಮಕ್ಕೆ ಅನೇಕ ಮುಲಾಮುಗಳು ಕೂಡ ಇವೆ.

ಅನೇಕ ಮಹಿಳೆಯರಲ್ಲಿ ಸುಕ್ಕಿನ ಸಮಸ್ಯೆಗಳನ್ನು ಹೋಗಲಾಡಿಸಿ ಅವರ ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುವ ಉಪಯುಕ್ತ ಮನೆಯಲ್ಲಿ ತಯಾರಿಸಲಾಗುವ ಕ್ರೀಮ್‌ಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪಪ್ಪಾಯಿ ಹಣ್ಣಿನಿಂದ ನಿಮ್ಮ ಸೌಂದರ್ಯವನ್ನು ವರ್ಧಿಸಿಕೊಳ್ಳಿ

ಮೊಟ್ಟೆಯಲ್ಲಿನ ಲೋಳೆ ಅಂಶ:

ಮೊಟ್ಟೆಯಲ್ಲಿನ ಲೋಳೆ ಅಂಶ:

ಮೊಟ್ಟೆಯಲ್ಲಿನ ಲೋಳೆ ಅಂಶ ವಯಸ್ಸಾದ ಚಿಹ್ನೆಗಳನ್ನು ಹೋಗಲಾಡಿಸುವ ಗುಣಗಳನ್ನು ಹೊಂದಿದೆ. ಕ್ರೀಮ್, ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡಲು ಅತ್ಯಗತ್ಯ. ಈ ಮಾಸ್ಕ್ ನ್ನು ಒಂದು ಮೊಟ್ಟೆ ಮತ್ತು ಅರ್ಧ ಬೌಲ್ ಕ್ರೀಮ್ ಮಿಶ್ರಣ ಮಾಡಿ ತಯಾರಿಸಿ. ಈ ಮಿಶ್ರಣಕ್ಕೆ ಲಿಂಬೆ ಹನಿಗಳನ್ನು ಸೇರಿಸಿ. ಈ ಮಾಸ್ಕ್ ನ್ನು ತ್ವಚೆಗೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ. ನಂತರ ತಣ್ಣಗಿನ ನೀರಿನಲ್ಲಿ ತೊಳೆಯಿರಿ. ಈ ಪೇಸ್ ಪ್ಯಾಕ್ ನಿಯಮಿತವಾಗಿ ಬಳಸುವುದರಿಂದ ಸಾಕಷ್ಟು ಪರಿಣಾಮಕಾರಿಯಾಗಿದೆ.

ಬಾಳೆಹಣ್ಣು ಮತ್ತು ಕ್ಯಾರೇಟ್ ಮಾಸ್ಕ್:

ಬಾಳೆಹಣ್ಣು ಮತ್ತು ಕ್ಯಾರೇಟ್ ಮಾಸ್ಕ್:

ಈ ಸಂಯೋಜನೆಯು ಸ್ವಲ್ಪ ವಿಲಕ್ಷಣದಂತೆ ಕಂಡರೂ ತ್ವಚೆಯ ಮೇಲೆ ಪವಾಡವನ್ನುಂಟು ಮಾಡುತ್ತದೆ. ಬಾಳೆಹಣ್ಣು ಮತ್ತು ಕ್ಯಾರೆಟ್ ಎರಡೂ ಚರ್ಮದ ಬಿಗಿಗೊಳಿಸುವ ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಈ ಪ್ಯಾಕ್ ನ್ನು ಒಂದು ಬಾಳೆಹಣ್ಣು ಮತ್ತು ಒಂದು ಕ್ಯಾರೆಟ್ ಪೇಸ್ಟ್ ಮಾಡಿ ತಯಾರಿಸಿ. ಈ ಪೇಸ್ಟ್ ನ್ನು ಚೆನ್ನಾಗಿ ಮಿಶ್ರಣಮಾಡಿ ಮುಖಕ್ಕೆ ಹಚ್ಚಿ. 15 ನಿಮಿಷವರೆಗೆ ಹಾಗೆಯೇ ಇಟ್ಟು ನಂತರ ತುಸು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಮೊಸರಿನ ಮಾಸ್ಕ್:

ಮೊಸರಿನ ಮಾಸ್ಕ್:

ಮೊಸರು ಚರ್ಮದ ಅಂಗಾಂಶಗಳನ್ನು ಮತ್ತು ಜೀವಕೋಶಗಳನ್ನು ದುರಸ್ತಿ ಮತ್ತು ಪುನರ್ ನಿರ್ಮಿಸಲು ಅಗತ್ಯ ಜೀವಸತ್ವಗಳನ್ನು ಒದಗಿಸುತ್ತದೆ. ಮೊಸರನ್ನು ಪ್ರತಿದಿನ ಸೇವಿಸುವುದರಿಂದಲೂ ಸಹ ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಮೊಸರಿನ ಮಾಸ್ಕ್‌ನ್ನು ಮೊಸರಿನೊಂದಿಗೆ ನಿಂಬೆ ಹನಿಗಳನ್ನು ಮಿಶ್ರಣ ಮಾಡಿ ತಯಾರಿಸಲಾಗುತ್ತದೆ. ನಿಂಬೆ ಮುಖವನ್ನು ಸ್ವಚ್ಛಗೊಳಿಸುತ್ತದೆ ಮತ್ತು ಮೊಸರು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಈ ಪ್ಯಾಕ್‌ನ್ನು ಹಚ್ಚಿ 20 ನಿಮಿಷಗಳ ಕಾಲ ಬಿಡಿ. ಆನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಆಲೂ ಸ್ಕ್ರಬ್:

ಆಲೂ ಸ್ಕ್ರಬ್:

ಆಲೂಗಡ್ಡೆ ತ್ವಚೆಗೆ ಅತ್ಯುತ್ತಮ ಬ್ಲೀಚಿಂಗ್ ಮತ್ತು ವಯಸ್ಸಾದ ಚಿಹ್ನೆಗಳನ್ನು ಕಡಿಮೆಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ಪ್ರತಿ ದಿನ ನಿಮ್ಮ ಮುಖಕ್ಕೆ ಆಲೂಗಡ್ಡೆ ಸ್ಲೈಸ್ ಬಳಸಿಕೊಂಡು ಮಸಾಜ್ ಮಾಡಿದರೆ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆಲೂಗಡ್ಡೆಉಅನ್ನು ಮಾಸ್ಕ್ ಆಗಿಯೂ ಬಳಸಬಹುದು.

English summary

Home made remdees for skincare

The skin becomes lose and does not remain stiff or intact. Agreeing also causes wrinkles, dark circles and fine lines. Women get nightmares of having aging signs.
Story first published: Saturday, March 15, 2014, 12:22 [IST]
X
Desktop Bottom Promotion