ಎಣ್ಣೆ ಮತ್ತು ಸೂಕ್ಷ್ಮ ತ್ವಚೆಗಾಗಿ ಫೇಶಿಯಲ್ ಆಯಿಲ್

By: Manohar.V
Subscribe to Boldsky

ನಿಮ್ಮ ಎಣ್ಣೆ ಚರ್ಮದಿಂದ ಬೇಸರ ಹೊಂದಿರುವಿರಾ? ನಿಮ್ಮ ಈ ಬಗೆಯ ಸಮಸ್ಯೆಯನ್ನು ಪರಿಹರಿಸಲು ಹೊಸತಾದ ವಿಧಾನವನ್ನೊಂದನ್ನು ಅನುಸರಿಸುವ ಕಾಲ ಒದಗಿಬಂದಿದೆ. ನಿಮ್ಮ ಚರ್ಮ ಎಣ್ಣೆ ಅಂಶದಿಂದ ಕೂಡಿದ್ದರೆ ಎಣ್ಣೆ ಅಂಶದ ಕ್ರೀಂ ಅಥವಾ ಯಾವುದೇ ಉತ್ಪನ್ನವನ್ನು ಬಳಸಬಾರದೆಂದು ಜನರು ಹೇಳುವುದನ್ನು ಕೇಳಿರುವಿರಿ. ಆದರೆ ತಜ್ಞರ ಪ್ರಕಾರ ಫೇಶಿಯಲ್ ಎಣ್ಣೆ ಬಳಸಿ ಈ ಬಗೆಯ ಸಮಸ್ಯೆಯಿಂದ ಮುಕ್ತಿ ಹೊಂದಬಹುದೆಂಬ ಅಂಶ ತಿಳಿದು ಬಂದಿದೆ.

ಬೋಲ್ಡ್‌ಸ್ಕೈ ಇಂದು ನಿಮಗಾಗಿ ಇಂತಹ ಕೆಲವೊಂದು ಫೇಶಿಯಲ್ ಎಣ್ಣೆಗಳನ್ನು ಕುರಿತು ತಿಳಿಯಪಡಿಸುತ್ತಿದೆ. ಈ ಎಣ್ಣೆಯನ್ನು ಬಳಸಿಕೊಂಡು ಚರ್ಮದ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು, ಅಲ್ಲದೆ ಸೂಕ್ಷ್ಮ ತ್ವಚೆಯನ್ನು ಹೊಂದಿರುವವರು ಸಹ ಇದೆ ಬಳಕೆಯನ್ನು ಮಾಡಬಹುದು.

ಗಿಡಗಳು, ಬಳ್ಳಿಗಳು, ಹೂಗಳಿಂದ ಹೊರತೆಗೆಯಲಾಗುವ ಎಣ್ಣೆಯು ನಿಮ್ಮ ತ್ವಚೆಯ ಸಮಸ್ಯೆಯನ್ನು ಹೋಗಲಾಡಿಸಿ ಅದನ್ನು ಸುಂದರ ಮತ್ತು ಸುಕೋಮಲಗೊಳಿಸುತ್ತದೆ.

1.ಜೊಜೋಬಾ ಎಣ್ಣೆ

1.ಜೊಜೋಬಾ ಎಣ್ಣೆ

ಉತ್ತಮವಾದ ಫೇಶಿಯಲ್ ಎಣ್ಣೆ ಇದಾಗಿದೆ. ನೀವು ಮಾಡಬೇಕಾಗಿರುವುದು ಇಷ್ಟೇ. ಹತ್ತಿ ಉಂಡೆಯನ್ನು ತೆಗೆದುಕೊಂಡು ಅದನ್ನು ಎಣ್ಣೆಗೆ ಮುಳುಗಿಸಿ ವೃತ್ತಾಕಾರವಾಗಿ ನಿಮ್ಮ ಮುಖಕ್ಕೆ ಮಸಾಜ್ ಮಾಡಿ. ಉತ್ತಮ ಫಲಿತಾಂಶವನ್ನು ಪಡೆಯಲು ವಾರಕ್ಕೆ ಒಂದು ಬಾರಿ ಇದನ್ನು ಮಾಡಿ.

2.ಸೂರ್ಯಕಾಂತಿ ಎಣ್ಣೆ

2.ಸೂರ್ಯಕಾಂತಿ ಎಣ್ಣೆ

ಸೂಕ್ಷ್ಮ ತ್ವಚೆಗೆ ಸೂರ್ಯಕಾಂತಿ ಎಣ್ಣೆ ಉತ್ತಮವಾದುದು. ಮುಖದಿಂದ ಎಣ್ಣೆಯ ಸಾರವನ್ನು ಹೊರತೆಗೆದು ಮುಖವನ್ನು ಶುಭ್ರಗೊಳಿಸುತ್ತದೆ. ಕಳೆಗುಂದಿದ ಮುಖಕ್ಕೆ ಹೊಸ ಪ್ರಖರತೆಯನ್ನು ನೀಡುತ್ತದೆ. ವಾರದಲ್ಲಿ ಮೂರು ದಿನಗಳಿಗೊಮ್ಮೆ ಸೂರ್ಯಕಾಂತಿ ಎಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿ.

3.ಬಾದಾಮಿ ಎಣ್ಣೆ

3.ಬಾದಾಮಿ ಎಣ್ಣೆ

ಎಣ್ಣೆ ಅಂಶದ ಮತ್ತು ಸೂಕ್ಷ್ಮ ಚರ್ಮಕ್ಕಾಗಿ ಒಂದು ಉತ್ತಮ ಫೇಶಿಯಲ್ ಬಾದಾಮಿ ಎಣ್ಣೆಯಾಗಿದೆ. ಇದು ಕೂದಲಿಗೂ ಉತ್ತಮ ಎಂದು ಹಲವಾರು ಜನರು ಅಭಿಪ್ರಾಯಪಡುತ್ತಾರೆ. ಇದು ತ್ವಚೆಗೂ ಉತ್ತಮ. ನೀವು ಮಾಡಬೇಕಾಗಿರುವುದು ಇಷ್ಟೇ, ಬಾದಾಮಿ ಎಣ್ಣೆಯ 2,3 ಹನಿಗಳನ್ನು ತೆಗೆದುಕೊಂಡು ನಿಮ್ಮ ಮುಖಕ್ಕೆ ಮಸಾಜ್ ಮಾಡಿ ಒಂದು ಗಂಟೆಯ ನಂತರ ಮುಖವನ್ನು ತೊಳೆದುಕೊಳ್ಳಿ. ವಾರಕ್ಕೊಮ್ಮೆ ಹೀಗೆ ಮಾಡಿ.

4.ರೋಸ್‌ಮೇರಿ ಎಣ್ಣೆ

4.ರೋಸ್‌ಮೇರಿ ಎಣ್ಣೆ

ನಿಮ್ಮ ಎಣ್ಣೆ ಅಂಶದ ಚರ್ಮ ಮತ್ತು ಸೂಕ್ಷ್ಮ ತ್ವಚೆಗಾಗಿ ಉತ್ತಮ ಫೇಶಿಯಲ್ ರೋಸ್‌ಮೇರಿ ಆಗಿದೆ. ನಿಮ್ಮ ತ್ವಚೆಯ ಉತ್ತಮ ಕಂಡೀಷನ್ ಅನ್ನು ಚೆನ್ನಾಗಿ ಮಾಡುವ ರೋಸ್‌ಮೇರಿ ಎಣ್ಣೆ ಸ್ವಲ್ಪ ವೆಚ್ಚದಾಯಕ.

5.ಗೇರುಬೀಜದೆಣ್ಣೆ

5.ಗೇರುಬೀಜದೆಣ್ಣೆ

ಇನ್ನೊಂದು ಉತ್ತಮ ಎಣ್ಣೆ ಇದಾಗಿದ್ದು ನಿಮ್ಮ ತ್ವಚೆಯ ರಿಪೇರಿಯನ್ನು ಚೆನ್ನಾಗಿ ಮಾಡುತ್ತದೆ. ಈ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಂಡು ಅದಕ್ಕೆ ಅರ್ಧ ನಿಂಬೆಯ ರಸವನ್ನು ಹಿಂಡಿ ನಂತರ ನಿಮ್ಮ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಎಣ್ಣೆಯನ್ನು ಮಸಾಜ್ ಮಾಡಿ. ಉತ್ತಮ ಫಲಿತಾಂಶಗಳಿಗಾಗಿ ತಿಂಗಳಿಗೊಮ್ಮೆ ಈ ಫೇಶಿಯಲ್ ಎಣ್ಣೆಯನ್ನು ಬಳಸಿ.

6.ಹರಳೆಣ್ಣೆ

6.ಹರಳೆಣ್ಣೆ

ಹೊಟ್ಟೆಯ ಉಪಚಾರವನ್ನು ಈ ಎಣ್ಣೆ ಬಳಸಿಕೊಂಡು ಮಾಡಲಾಗುತ್ತದೆ, ಅದೇ ರೀತಿ ನಿಮ್ಮ ತ್ವಚೆಯನ್ನು ಈ ಎಣ್ಣೆ ಬಳಸಿಕೊಂಡು ಸುಂದರಗೊಳಿಸಲಾಗುತ್ತದೆ. ಎರಡು ಸ್ಪೂನ್ ಹರಳೆಣ್ಣೆ ಮತ್ತು ಸ್ವಲ್ಪ ಉಪ್ಪು ತೆಗೆದುಕೊಂಡು ಮಿಶ್ರ ಮಾಡಿ ನಿಮ್ಮ ಮುಖಕ್ಕೆ ಮಸಾಜ್ ಮಾಡಿ. ಎಣ್ಣೆ ಅಂಶದಿಂದ ಕೂಡಿರುವ ಚರ್ಮ ಮತ್ತು ಸೂಕ್ಷ್ಮ ತ್ವಚೆಗಾಗಿ ಈ ಎಣ್ಣೆಯನ್ನು ಬಳಸಿ.

7.ಲ್ಯಾವೆಂಡರ್ ಎಣ್ಣೆ

7.ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆಯ ತಾಜಾ ಪರಿಮಳವು ನಿಮ್ಮ ಸೂಕ್ಷ್ಮ ತ್ವಚೆಗಾಗಿ ತುಂಬಾ ಒಳ್ಳೆಯದು. ನಿಮ್ಮ ಮೊಡವೆ ಸಮಸ್ಯೆಗೆ ಈ ಎಣ್ಣೆ ಉತ್ತಮ ಉಪಚಾರವನ್ನು ಮಾಡುತ್ತದೆ.

8.ವೆಜಿಟೇಬಲ್ ಎಣ್ಣೆ

8.ವೆಜಿಟೇಬಲ್ ಎಣ್ಣೆ

ವೆಜಿಟೇಬಲ್ ಎಣ್ಣೆ ನಿಮ್ಮತ್ವಚೆಯನ್ನು ಸುಂದರ ಮತ್ತು ನಯಗೊಳಿಸುತ್ತದೆ. ಈ ಎಣ್ಣೆಗೆ ಸ್ವಲ್ಪ ನೀರನ್ನು ತೆಗೆದುಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಒಂದು ಗಂಟೆಯ ನಂತರ ನಿಮ್ಮ ಮುಖವನ್ನು ತೊಳೆದುಕೊಳ್ಳಿ.

9.ತೆಂಗಿನೆಣ್ಣೆ

9.ತೆಂಗಿನೆಣ್ಣೆ

ಎಣ್ಣೆ ಅಂಶದ ಚರ್ಮ ಮತ್ತು ಸೂಕ್ಷ್ಮ ತ್ವಚೆಗಾಗಿ ತೆಂಗಿನ ಎಣ್ಣೆ ತುಂಬಾ ಒಳ್ಳೆಯದು. ಒಂದು ಟೇಬಲ್ ಸ್ಪೂನ್ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ವಾರಕ್ಕೊಮ್ಮೆ ಈ ಎಣ್ಣೆಯನ್ನು ಬಳಸಿ.

10.ರೋಸ್ ಎಣ್ಣೆ

10.ರೋಸ್ ಎಣ್ಣೆ

ನಿಮ್ಮ ತ್ವಚೆಯ ಸಮಸ್ಯೆಯನ್ನು ಹೋಗಲಾಡಿಸಲು ಒಂದು ಉತ್ತಮ ಎಣ್ಣೆ ಇದಾಗಿದೆ. ನಿಮ್ಮ ಸುಂದರ ತ್ವಚೆಗಾಗಿ ನೀವು ಬಹಳಷ್ಟು ಖರ್ಚು ಮಾಡಬೇಕಾಗುತ್ತದೆ, ಇದು ಸ್ವಲ್ಪ ದುಬಾರಿಯಾಗಿರುವುದರಿಂದ ಜನರು ಇದನ್ನು ಕಡಿಮೆ ಬಳಸುತ್ತಾರೆ. ಆದರೆ ಫಲಿತಾಂಶ ಅದ್ಭುತವಾಗಿರುತ್ತದೆ.

English summary

Facial Oils For Oily & Sensitive Skin

Tired of your oily skin? If yes, then it is time for you to try out a new method which will help to abandon your oily skin for good. You might have heard from a lot of people that one should never use an oil-based cream or any product on your skin if your skin is naturally oily. However, today experts believe
Subscribe Newsletter