For Quick Alerts
ALLOW NOTIFICATIONS  
For Daily Alerts

ದುಂಡು ಮುಖಕ್ಕಾಗಿ ಸುಂದರ ಐ ಮೇಕಪ್

|

ದುಂಡುಮುಖ ಆಕರ್ಷಣೆಯನ್ನು, ಜೀವಂತಿಕೆಯನ್ನು, ಚೈತನ್ಯವನ್ನು ಉಂಟುಮಾಡುವುದರಿಂದ ದುಂಡು ಮುಖವು ಎಲ್ಲರ ಪ್ರೀತಿಯನ್ನು ಗಳಿಸುತ್ತದೆ. ದುಂಡುಮುಖದ ನಾರಿಯರ ಕಣ್ಣುಗಳು ಅದ್ಭುತ ಸೌಂದರ್ಯವನ್ನು ಪ್ರಕಾಶಿಸುತ್ತವೆ. ದೊಡ್ಡದಾಗಿರುವ ಮೀನ ನೇತ್ರಗಳು ಮುಖದ ಸ್ನಾಯುಗಳಿಗೆ ಹೊಸ ಹೊಳಪನ್ನು ನೀಡುತ್ತವೆ.

ಕಣ್ಣುಗಳು ಪ್ರತಿಯೊಬ್ಬರ ಉಸಿರನ್ನು ಬಿಗಿ ಹಿಡಿಯುವ ಜೀವಂತ ಕಲಾಕೃತಿಗಳು. ಆದ್ದರಿಂದಲೇ ದುಂಡು ಮುಖಕ್ಕೆ ಮಾಡುವ ಕಣ್ಣಿನ ಅಲಂಕಾರ ಮುಖದ ಸೌಂದರ್ಯವನ್ನು ಹೊರಸೂಸುವಂತೆ ಇರಬೇಕು ಹಾಗೂ ಆಕರ್ಷಕವಾಗಿರಬೇಕು. ಈ ಲೇಖನದಲ್ಲಿ, ದುಂಡು ಮುಖದವರು ಯಾವ ರೀತಿಯ ಕಣ್ಣಿನ ಅಲಂಕಾರವನ್ನು ಮಾಡಿಕೊಳ್ಳಬೇಕೆಂಬುದನ್ನು ತಿಳಿಸುತ್ತಿದ್ದೇವೆ. ಇದರಿಂದ ನಿಮ್ಮ ಕಣ್ಣಿಗೆ ಹೊಸ ಸೌಂದರ್ಯ ಬಂದು ಮುಖದ ತೇಜಸ್ಸು ಹೆಚ್ಚಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮನೆಯಲ್ಲೇ ಸಿಗುವ 5 ಮೇಕಪ್ ರಿಮೂವರ್ !

ಕಣ್ಣ ಕೆಳಗಿನ ಮೇಕಪ್:

ಕಣ್ಣ ಕೆಳಗಿನ ಮೇಕಪ್:

ಕಣ್ಣಿನ ಮೇಕಪ್ ಕೇವಲ ಕಣ್ಣಿಗೆ ಮಾತ್ರ ಸೀಮಿತವಾಗಿರದೇ ಕಣ್ಣನ್ನು ಸುಂದರವಾಗಿಸುವ ಅಕ್ಕಪಕ್ಕದ ಪ್ರದೇಶವನ್ನು ಒಳಗೊಂಡಿರುತ್ತದೆ. ಆದ್ದರಿಂದ ಕಣ್ಣಿನ ಕೆಳಗಿನ ಕಪ್ಪು ವರ್ತುಲಗಳನ್ನು ನಿವಾರಿಸಲು ನೀವು ಕೋನ್ಸಿಲರ್ ಅಥವಾ ಫೌಂಡೇಶನ್ ಅನ್ನು ಬಳಸಬೇಕು. ಕಣ್ಣ ಕೆಳಗಿನ ಕಪ್ಪು ಕಲೆಗಳು ಕಣ್ಣನ್ನು ಕಳಾಹೀನವನ್ನಾಗಿಸಬಹುದು. ಆದ್ದರಿಂದ ನಿಮ್ಮ ಕಣ್ಣ ಕೆಳಗಿನ ಕಪ್ಪು ವರ್ತುಲಗಳನ್ನು ಕಣ್ಣಿನ ಸೌಂದರ್ಯವನ್ನು ನೀಸ್ಥೇಜವಾಗಿಸುವ ಕಪ್ಪು ಕಲೆಗಳನ್ನು ನಿವಾರಿಸುವ ಮೇಕಪ್ ಅನ್ನು ನೀವು ಮಾಡಿಕೊಳ್ಳಬೇಕು.

ಹುಬ್ಬುಗಳು:

ಹುಬ್ಬುಗಳು:

ಮೊದಲೇ ಹೇಳಿದಂತೆ ಕಣ್ಣುಗಳ ಸುತ್ತಮುತ್ತಲಿನ ಜಾಗಗಳನ್ನು ಸುಂದರವಾಗಿಸುವುದು ಕಣ್ಣಿನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ದುಂಡು ಮುಖಕ್ಕಾಗಿ ನಿಮ್ಮ ಹುಬ್ಬುಗಳ ವಿನ್ಯಾಸ ತುಸು ನೇರವಾಗಿ ಅಂಚು ಬಾಗಿರಬೇಕು. ಈ ವಿನ್ಯಾಸ ನಿಮ್ಮ ಮುಖವನ್ನು ಸುಂದರಗೊಳಿಸಿ ಕಣ್ಣುಗಳನ್ನು ದೊಡ್ಡದು ಹಾಗೂ ಆಕರ್ಷಕವನ್ನಾಗಿಸುತ್ತದೆ. ಹುಬ್ಬುಗಳನ್ನು ಚೆನ್ನಾಗಿ ಟ್ರಿಮ್ ಮಾಡಿಕೊಳ್ಳಿ. ನೀವು ತೆಳ್ಳಗಿನ ಹುಬ್ಬುಗಳನ್ನು ಹೊಂದಿದ್ದರೆ ಅಥವಾ ಹುಬ್ಬುಗಳ ಆಕಾರ ಸರಿಯಾಗಿರದಿದ್ದರೆ ಐ ಲೈನರ್, ಐ ಪೆನ್ಸಿಲ್ ಅಥವಾ ಐ ಜೆಲ್ ಅನ್ನು ಬಳಸಿ ಹುಬ್ಬಿಗೆ ಆಕಾರ ಹಾಗೂ ಗಾತ್ರವನ್ನು ನೀಡಿ. ದುಂಡು ಮುಖಕ್ಕಾಗಿ ಇದೊಂದು ಸರಳವಾದ ಕಣ್ಣಿನ ಮೇಕಪ್ ಆಗಿದೆ.

ಕಣ್ಣುಗಳನ್ನು ಹೈಲೈಟ್ ಮಾಡಿ:

ಕಣ್ಣುಗಳನ್ನು ಹೈಲೈಟ್ ಮಾಡಿ:

ನಿಮ್ಮ ಮುಖದ ಉತ್ತಮ ವೈಶಿಷ್ಟ್ಯಗಳನ್ನು ಎದ್ದು ತೋರಿಸಲು ನಿಮಗೆ ಯಾವುದು ಚೆನ್ನಾಗಿ ತೋರುತ್ತದೆ ಎಂಬುದು ನಿಮಗೆ ತಿಳಿದಿರಬೇಕು. ನಿಮ್ಮ ಮುಖಕ್ಕೆ ಹೊಂದುವಂತಹ ಐ ಮೇಕಪ್ ಅನ್ನು ಆಯ್ದುಕೊಳ್ಳಿ. ನಿಮ್ಮ ಧಿರಿಸಿಗೆ ಸರಿ ಸುಮಾರು ಹೊಂದಿಕೊಳ್ಳುವ ಐ ಮೇಕಪ್ ನೀವು ಮಾಡಿದ್ದರೆ ತುಂಬಾ ಉತ್ತಮ. ಕಾಜಲ್ ಅಥವಾ ಐ ಲೈನರ್ ಅನ್ನು ಬಳಸಿಕೊಂಡು ಈ ಮೇಕಪ್ ಅನ್ನು ನಿಮಗೆ ಮಾಡಿಕೊಳ್ಳಬಹುದು. ನಿಮ್ಮ ಲ್ಯಾಶಸ್‌ನ ಕೆಳಗಿನ ಭಾಗ ಮತ್ತು ಮೇಲ್ಬಾಗಕ್ಕೆ ಒಂದೇ ರೀತಿಯ ಐ ಮೇಕಪ್ ಅನ್ನು ಜಾಗ್ರತೆಯಿಂದ ಮಾಡಿಕೊಳ್ಳಿ. ಜೆಟ್ ಕಪ್ಪು ಬಣ್ಣವನ್ನು ಇದಕ್ಕಾಗಿ ಬಳಸಿ. ಟಿಶ್ಯೂ ಬಳಸಿಕೊಂಡು ನಿಮಗೆ ಬೇಡವಾದ ಐ ಲೈನರ್ ಅನ್ನು ತೆಗೆಯಿರಿ.

ಮಸ್ಕರಾ ಮತ್ತು ಕಣ್ಣಿನ ಬಣ್ಣ:

ಮಸ್ಕರಾ ಮತ್ತು ಕಣ್ಣಿನ ಬಣ್ಣ:

ನಿಮ್ಮ ಐ ಲ್ಯಾಶಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಮಸ್ಕರಾವನ್ನು ಬಳಸಲಾಗುತ್ತದೆ. ದುಂಡು ಮುಖದ ಕಣ್ಣಿನ ಮೇಕಪ್‌ನ ಫಿನಿಶಿಂಗ್ ಟಚ್ ನೀಡಲು ಇದು ಸಹಕಾರಿ. ಗಾಢವಾದ ಕಣ್ಣಿನ ಬಣ್ಣಗಳು ನಿಮ್ಮ ಕಣ್ಣಿನ ಹೊಳಪನ್ನು ಇನ್ನಷ್ಟು ಹೆಚ್ಚಿಸುತ್ತವೆ. ಮಸ್ಕರಾ ಮತ್ತು ಬಣ್ಣವನ್ನು ಬಳಸಿಕೊಂಡು ಕಣ್ಣನ್ನು ಅದ್ಭುತಗೊಳಿಸಿ. ನೀವು ಧರಿಸಿದ ಡ್ರೆಸ್‌ಗೆ ಸರಿಯಾಗಿ ನಿಮ್ಮ ಕಣ್ಣ ಕಲರ್ ಇರಬೇಕು. ಇವಿಷ್ಟು ಕೆಲವೊಂದು ದುಂಡು ಮುಖದ ಕಣ್ಣಿನ ಮೇಕಪ್ ಸಲಹೆಗಳಾಗಿವೆ.

English summary

Eye Makeup Tips For Round Face

A round face was quite loved back in the time because a round face depicts liveliness, enthusiasm and charisma. The eyes of a round face woman are exceptionally stunning. The eyes are big and fish shaped which suit the generous cheekbones.
X
Desktop Bottom Promotion