For Quick Alerts
ALLOW NOTIFICATIONS  
For Daily Alerts

ಸೌಂದರ್ಯ ದ್ವಿಗುಣಗೊಳಿಸುವಲ್ಲಿ ಆಲಿವ್ ಎಣ್ಣೆಯ ಪಾತ್ರ

By Deepak
|

ನಮ್ಮಲ್ಲಿ ಹೆಚ್ಚಿನವರಿಗೆ ಆಲಿವ್ ಎಣ್ಣೆಯ ಪ್ರಯೋಜನಗಳೇನೆಂಬುದು ಗೊತ್ತು. ಇದು ಜನಸಾಮಾನ್ಯರಿಗೆ ಎಟುಕುವ ಬೆಲೆಯಲ್ಲಿ ಲಭ್ಯವಿರುವ ಕಾರಣ ಇದನ್ನು ಅಡುಗೆಯ ಜೊತೆಜೊತೆಗೇ ಸೌಂದರ್ಯವೃದ್ದಿಗೂ ಬಳಸಲಾಗುತ್ತಿದೆ. ಚರ್ಮದ ಆರೈಕೆಗೂ ಇದು ಎತ್ತಿದ ಕೈ. ಈ ಎಣ್ಣೆಗೆ ವಾಸನೆ ಅತಿ ಕಡಿಮೆ ಇರುವ ಕಾರಣ ಚರ್ಮಕ್ಕೆ ಹಚ್ಚಿಕೊಂಡು ಹೊರಗೆ ಹೋಗಲೂ ತೊಂದರೆಯಿಲ್ಲ.

ಈ ಎಣ್ಣೆಯನ್ನು ಅಡುಗೆ ಎಣ್ಣೆಯ ರೂಪದಲ್ಲಿ ಸೇವಿಸುವುದರಿಂದಲೂ ಹಲವಾರು ಪ್ರಯೋಜನಗಳಿವೆ. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ, ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ, ಅವಶ್ಯಕ ವಿಟಮಿನ್ನುಗಳನ್ನು ಪೂರೈಸುತ್ತದೆ, ರಕ್ತದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಮೂಲಕ ಹೃದಯಕ್ಕೂ ಉತ್ತಮವಾಗಿದೆ. ಭಾರತದಲ್ಲಿ ಈ ಎಣ್ಣೆ ಇತ್ತೀಚೆಗೆ ಪರಿಚಯಿಸಲ್ಪಟ್ಟಿದ್ದರೂ ಹಲವಾರು ದೇಶಗಳಲ್ಲಿ ಈ ಎಣ್ಣೆಯನ್ನು ನೂರಾರು ವರ್ಷಗಳಿಂದ ಬಳಸಲಾಗುತ್ತಿದೆ. ಈ ಎಣ್ಣೆ ಚರ್ಮಕ್ಕೆ ಎಷ್ಟು ಉತ್ತಮವೋ ಅಂತೆಯೇ ಕೂದಲಿಗೂ ಉತ್ತಮವಾಗಿದೆ. ಬನ್ನಿ, ಆಲಿವ್ ಎಣ್ಣೆಯ ಪ್ರಯೋಜನಗಳ ಬಗ್ಗೆ ಅರಿಯೋಣ:

Amazing Beauty benefits of olive oil
 

1. ತ್ವಚೆಯನ್ನು ಮೊಯಿಶ್ಚರೈಸ್ ಮಾಡುವಲ್ಲಿ ಆಲಿವ್ ಎಣ್ಣೆಯ ಪಾತ್ರ; ಆಲಿವ್ ಎಣ್ಣೆಯಲ್ಲಿರುವ ಕರಗುವ ಮತ್ತು ಲೀನವಾಗುವ ಗುಣಗಳು ನಮ್ಮ ತ್ವಚೆಗೆ ಅಪರಿಮಿತ ಸಹಕಾರಿಯಾಗಿವೆ. ಈ ಗುಣದಿಂದಾಗಿ ಇದನ್ನು ಮುಖಕ್ಕೆ ಅಥವಾ ತ್ವಚೆಗೆ ಲೇಪಿಸಿಕೊಂಡಾಗ ಅದು ಚರ್ಮದೊಳಗೆ ಇಳಿದು, ಮೊಯಿಶ್ಚರೈಸ್ ಮಾಡುತ್ತದೆ. ಇದರಿಂದ ತ್ವಚೆಯು ತಾಜಾತನದಿಂದ ಕಂಗೊಳಿಸುತ್ತದೆ. ಇದನ್ನು ರಾತ್ರಿ ಅಥವಾ ಹಗಲು ಯಾವಾಗ ಬೇಕಾದರು ಹಚ್ಚಿ, ಒಣ ಚರ್ಮವನ್ನು ಸಹ ಜೀವ ಕಳೆಯಿಂದ ಮಿರುಗುವಂತೆ ಮಾಡಬಹುದು. ತ್ವಚೆಗೆ ಆಲಿವ್ ಎಣ್ಣೆ ಲೇಪಿಸುವುದರಿಂದ ಅಪರಿಮಿತ ಪ್ರಯೋಜನಗಳನ್ನು ನಮ್ಮದಾಗಿಸಿಕೊಳ್ಳಬಹುದು. ಹಾಗಾಗಿ ಸ್ವಾಭಾವಿಕ ಪರಿಹಾರಗಳನ್ನು ಪ್ರಯತ್ನಿಸುವುದರ ಜೊತೆಗೆ ಆಲಿವ್ ಎಣ್ಣೆಯನ್ನು ಕೊಳ್ಳಲು ಮರೆಯಬೇಡಿ.

2. ಒಣ ತ್ವಚೆಯನ್ನು ನಿವಾರಿಸುವಲ್ಲಿ ಆಲಿವ್ ಎಣ್ಣೆಯ ಪಾತ್ರ: ಒಣ ಅಥವಾ ನಿರ್ಜೀವ ತ್ವಚೆಯನ್ನು ನಿವಾರಿಸಲು ಆಲಿವ್ ಎಣ್ಣೆಯು ಹೇಳಿ ಮಾಡಿಸಿದ ಔಷಧಿಯಾಗಿದೆ. ಆಲಿವ್ ಎಣ್ಣೆಯ ಜೊತೆಗೆ ಸ್ವಲ್ಪ ಉಪ್ಪನ್ನು ಬೆರೆಸಿ, ಒಣ ಅಥವಾ ನಿರ್ಜೀವ ತ್ವಚೆ ಇರುವ ಭಾಗಕ್ಕೆ ಲೇಪಿಸಿದರೆ ಸಾಕು, ನಿಮ್ಮ ತ್ವಚೆಯು ತನ್ನ ಒಣ ಅಥವಾ ನಿರ್ಜೀವತೆಯನ್ನು ಕಳಚಿಕೊಂಡು ನಳನಳಿಸುತ್ತದೆ. ಆಲಿವ್ ಎಣ್ಣೆಯನ್ನು ಸ್ವಲ್ಪ ಲ್ಯಾವೆಂಡರ್ ಎಣ್ಣೆಯ ಜೊತೆಗೆ ಬೆರೆಸಿ ಸ್ನಾನ ಮಾಡಿದರೆ, ನಿಮಗೆ ಮತ್ತಷ್ಟು ಲವಲವಿಕೆಯು ದೊರೆಯುತ್ತದೆ. ಇದು ನಿಮ್ಮ ತ್ವಚೆಯನ್ನು ಮೊಯಿಶ್ಚರೈಸ್ ಮಾಡಿ ಮೃದುಗೊಳಿಸುತ್ತದೆ. ಜೊತೆಗೆ ದೇಹದಲ್ಲಿನ ಜೀವಕೋಶಗಳಿಗೆ ವಿಶ್ರಾಂತಿಯನ್ನು ಮತ್ತು ಲವಲವಿಕೆಯನ್ನುಂಟು ಮಾಡುತ್ತದೆ.

3. ಉಗುರು ಮತ್ತು ಉಗುರಿನ ಒಣ ತ್ವಚೆಯ ಆರೈಕೆಯಲ್ಲಿ ಆಲಿವ್ ಎಣ್ಣೆ; ಉಗುರು ಮತ್ತು ಉಗುರಿನ ಸುತ್ತ ಇರುವ ತ್ವಚೆಯು ಆಗಾಗ ಹಾಳಾಗುತ್ತಲೆ ಇರುತ್ತದೆ. ಇದಕ್ಕೆ ಕಠಿಣತರವಾದ ಪರಿಸರವು ಸಹ ಕಾರಣವಾಗಿರಬಹುದು. ಅದಕ್ಕಾಗಿ ಉಗುರು ಮತ್ತು ಅದರ ಸುತ್ತಲಿನ ತ್ವಚೆಯ ಬಗ್ಗೆ ವಿಶೇಷ ಕಾಳಜಿವಹಿಸಬೇಕಾದುದು ಅನಿವಾರ್ಯ. ಅತ್ಯಂತ ಪರಿಶುದ್ಧವಾದ ಎಕ್ಸ್‌ಟ್ರಾ ವರ್ಜಿನ್ ಆಲಿವ್ ಎಣ್ಣೆಯು ಇದಕ್ಕೆ ಹೇಳಿ ಮಾಡಿಸಿದ ಪರಿಹಾರವಾಗಿರುತ್ತದೆ. ಇದಕ್ಕಾಗಿ ಮಸಾಜ್ ಮಾಡುವ ಅಗತ್ಯವಿಲ್ಲ, ಸುಮ್ಮನೆ ನಿಮ್ಮ ಉಗುರು ಮತ್ತು ಅದರ ಸುತ್ತಲ ಚರ್ಮದ ಭಾಗಕ್ಕೆ ಆಲಿವ್ ಎಣ್ಣೆಯನ್ನು ಲೇಪಿಸಿ ಸಾಕು. ಅದರಿಂದ ಈ ಭಾಗಗಳಿಗೆ ಮೊಯಿಶ್ಚರೈಸ್ ದೊರೆತು, ಉಗುರು ಮತ್ತು ಅದರ ಸುತ್ತಲಿನ ಚರ್ಮವು ಆರೋಗ್ಯಯುತವಾಗಿ ಬೆಳೆಯುತ್ತವೆ.

 

4. ಕಣ್ಣಿನ ಮೇಕಪನ್ನು ತೆಗೆಯುವಲ್ಲಿ ಆಲಿವ್ ಎಣ್ಣೆಯ ಪಾತ್ರ; ನಮ್ಮ ದೇಹದಲ್ಲಿರುವ ಅತ್ಯಂತ ಸೂಕ್ಷ್ಮ ಅಂಗಗಳಲ್ಲಿ ಕಣ್ಣು ಸಹ ಒಂದು. ಇದಕ್ಕಾಗಿ ಬೇರೆ ಯಾವುದೇ ರೀತಿಯ ಉತ್ಪನ್ನವನ್ನು ಕಣ್ಣಿನ ಮೇಲೆ ಪ್ರಯೋಗಿಸಲು ಸಾಧ್ಯವಿಲ್ಲ. ಕಣ್ಣಿನ ಮೇಕಪನ್ನು ತೆಗೆಯಲು ಒಂದು ಅಥವಾ ಎರಡು ಹನಿ ಪರಿಶುದ್ಧವಾದ ಆಲಿವ್ ಎಣ್ಣೆಯನ್ನು ಕಣ್ಣಿನ ಮೇಕಪ್ ಭಾಗದಲ್ಲಿ ಹಾಕಿದರೆ ಸಾಕು, ಅದನ್ನು ಸುಲಭವಾಗಿ ತೆಗೆಯಬಹುದು. ಕಣ್ಣಿನ ಸೂಕ್ಷ್ಮ ಭಾಗಗಳಲ್ಲಿ ಇರುವ ಮೇಕಪನ್ನು ಆಲಿವ್ ಎಣ್ಣೆಯು ಅತ್ಯಂತ ನಾಜೂಕಾಗಿ ತೆಗೆಯುತ್ತದೆ. ಇದೇ ಅಭ್ಯಾಸವನ್ನು ನೀವು ನಿತ್ಯ ಮುಂದುವರಿಸಿದರೆ ಕಣ್ಣಿನ ಸುತ್ತ ಇರುವ ತ್ವಚೆ ಮೃದುವಾಗುವುದರ ಜೊತೆಗೆ, ಕಣ್ಣಿನ ಸುತ್ತ ಸುಕ್ಕು ಬರುವುದನ್ನು ಸಹ ನಿವಾರಿಸಬಹುದು.

5. ಆಲಿವ್ ಎಣ್ಣೆ ಮತ್ತು ಕೂದಲ ರಕ್ಷಣೆ ; ಆಲಿವ್ ಎಣ್ಣೆಯು ತನ್ನಲ್ಲಿರುವ ಕೇಶ ಸ್ನೇಹಿಗುಣಗಳಿಂದಾಗಿ ಭಾರೀ ಖ್ಯಾತಿಯನ್ನು ಪಡೆದಿದೆ. ಇದಕ್ಕೆ ಈ ಖ್ಯಾತಿ ಬರಲು ಇದರಲ್ಲಿರುವ ಕೂದಲನ್ನು ಹೊಳಪುಗೊಳಿಸುವ ಅಂಶಗಳೇ ಕಾರಣವಾಗಿವೆ. ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿದರೆ ತಲೆಹೊಟ್ಟು ಬರುವುದಿಲ್ಲ ಮತ್ತು ಇದು ಒಂದು ಅತ್ಯುತ್ತಮ ಡೀಪ್ ಕಂಡೀಶನರ್ ಆಗಿ ಸಹ ಕಾರ್ಯ ನಿರ್ವಹಿಸುತ್ತದೆ. ಇದಕ್ಕಾಗಿ ಶಾಂಪೂ ಹಾಕಿಕೊಂಡ ನಂತರ ಕೂದಲಿಗೆ ಆಲಿವ್ ಎಣ್ಣೆ ಮತ್ತು ನೀರನ್ನು ಬೆರೆಸಿ ಮಸಾಜ್ ಮಾಡಿ. ಇದನ್ನು ಹಾಗೆಯೇ 5 ನಿಮಿಷ ಬಿಟ್ಟು ನಂತರ ನೀರಿನಲ್ಲಿ ತೊಳೆಯಿರಿ. ಇದರಲ್ಲಿರುವ ಕಂಡೀಶನಿಂಗ್ ಗುಣಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆಯಲ್ಲದೆ, ನಿಮ್ಮ ಕೂದಲಿಗೆ ಹೆಚ್ಚಿನ ಆಕರ್ಷಣೆಯನ್ನು ಮತ್ತು ಆರೋಗ್ಯವನ್ನು ನೀಡುತ್ತದೆ.

English summary

Amazing Beauty benefits of olive oil

An oil which is of pure natural value, the benefits of olive oil are passed on from centuries. The origin of this highly beauty product is from west grounds, but the benefits and beauty secrets are spread all around the world.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more