For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಒಣ ಚರ್ಮಕ್ಕೆ ಫೇಸ್ ಪ್ಯಾಕ್

|

ಚರ್ಮದ ಆರೈಕೆಗೆ ಫೇಸ್ ಪ್ಯಾಕ್ ಹಾಕಿಕೊಳ್ಳುವುದು ಸಾಂಪ್ರದಾಯಿಕ ವಿಧಾನ. ನಿಮ್ಮ ಚರ್ಮವು ಹವಾಮಾನಕ್ಕೆ ತಕ್ಕಂತೆ ಬದಲಾಗುತ್ತದೆ. ಚಳಿಗಾಲದಲ್ಲಿ ಕೂಡ ಚರ್ಮವು ಬದಲಾಗುತ್ತದೆ. ಚಳಿಗಾಲದಲ್ಲಿ ಬಹಳಷ್ಟು ಮಹಿಳೆಯರು ಒಣಚರ್ಮದ ಸಮಸ್ಯೆಯಿಂದ ಬಳಲುತ್ತಾರೆ. ಏಕೆಂದರೆ ಚಳಿಗಾಲವು ಚರ್ಮದಲ್ಲಿನ ತೇವಾಂಶವನ್ನು ಹೀರಿಬಿಡುತ್ತದೆ.

ಆದ್ದರಿಂದ ಕೆಲವು ರೀತಿಯ ಚರ್ಮಗಳಿಗೆ ಕೆಲವು ರೀತಿಯ ಫೇಸ್ ಪ್ಯಾಕ್ ಗಳನ್ನು ಬಳಸಬಹುದು. ಚಳಿಗಾಲದಲ್ಲಿ ಚರ್ಮದ ಆರೈಕೆ ಮಾಡುವುದು ಅತ್ಯಂತ ಕಷ್ಟಕರವಾದ ಸಂಗತಿ, ಮುಖದ ಮೇಲೆ ಒಣಗಿದ ಕಲೆಗಳು, ಬಿರುಕು ಮತ್ತು ಒರಟು ಚರ್ಮ ಇವೆಲ್ಲವು ಅಂದವನ್ನು ಹಾಳುಗೆಡವುತ್ತವೆ.

ನಿಮಗೆ ಸಮಯದ ಅಭಾವವಿದ್ದರೆ 2-3 ನಿಮಿಷ ಮುಖವನ್ನು ಹಾಲಿನಿಂದ ಮಸಾಜ್ ಮಾಡುವುದು ಉತ್ತಮ. ಇದು ಚರ್ಮಕ್ಕೆ ತೇವಾಂಶ ಒದಗಿಸುವುದಲ್ಲದೆ ಹೊಳಪನ್ನು ತಂದು ಕೊಡುತ್ತದೆ. ಇಲ್ಲಿ ಕೆಲವು ಮನೆಯಲ್ಲಿ ಮಾಡಬಹುದಾದ ಫೇಸ್ ಪ್ಯಾಕ್ ಗಳನ್ನು ನೀಡಲಾಗಿದೆ.

ಚಳಿಗಾಲಕ್ಕೆ ಒಣಚರ್ಮಕ್ಕೆ ಫೇಸ್ ಪ್ಯಾಕ್ ಗಳು:

ಅವಕ್ಯಾಡೊ ಫೇಸ್ ಪ್ಯಾಕ್

ಅವಕ್ಯಾಡೊ ಫೇಸ್ ಪ್ಯಾಕ್

ಚಳಿಗಾಲದಲ್ಲಿ ಅವಕ್ಯಾಡೊವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಒಳ್ಳೆಯದು. ಅವಕ್ಯಾಡೊದ ತಿರುಳನ್ನು ಚೆನ್ನಾಗಿ ಕದಡಿ ಆಲಿವ್ ಎಣ್ಣೆಯೊಂದಿಗೆ ಬೆರೆಸಿ. ಇದನ್ನು ಒದ್ದೆ ಮುಖದ ಮೇಲೆ ಹಚ್ಚಿ 10 ನಿಮಿಷಗಳ ನಂತರ ತೊಳೆಯಿರಿ.

ಹಾಲು ಮತ್ತು ಜೇನು

ಹಾಲು ಮತ್ತು ಜೇನು

ಇದೊಂದು ಸರಳವಾದ ಫೇಸ್ ಪ್ಯಾಕ್. ಇದು ಒಣ ಚರ್ಮಕ್ಕೆ ಉತ್ತಮವಾದ ಪರಿಹಾರ. ಹಾಲು ಮತ್ತು ಜೇನನ್ನು ಕಲಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ 3-4 ನಿಮಿಷಗಳ ನಂತರ ತಣ್ಣಗಿನ ನೀರಿನಲ್ಲಿ ತೊಳೆಯಿರಿ.

ಮೊಟ್ಟೆಯ ಬಿಳಿಭಾಗದ ಪ್ಯಾಕ್

ಮೊಟ್ಟೆಯ ಬಿಳಿಭಾಗದ ಪ್ಯಾಕ್

ಮೊಟ್ಟೆಯನ್ನು ಒಡೆದು ಅದರ ಬಿಳಿಭಾಗವನ್ನು ಪೇಸ್ಟನಂತೆ ಮಾಡಿಕೊಂಡು 5-6 ನಿಮಿಷ ಮಸಾಜ್ ಮಾಡಿ 25 ನಿಮಿಷಗಳ ನಂತರ ತಣ್ಣಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಚರ್ಮವು ಮೃದುವಾಗಿ, ತೇವಾಂಶವನ್ನು ಉಳಿಸಿಕೊಳ್ಳುತ್ತದೆ.

ಬಾಳೆಹಣ್ಣಿನ ಪ್ಯಾಕ್

ಬಾಳೆಹಣ್ಣಿನ ಪ್ಯಾಕ್

ಬಾಳೆಹಣ್ಣು ಚರ್ಮಕ್ಕೆ ಆರೈಕೆ ಮಾಡುವ ಮೂಲಕ ಬಿಗಿಗೊಳಿಸುತ್ತದೆ. ಒಣ ಚರ್ಮವನ್ನು ಮಾಯ್ಸಿಶ್ಚುರೈಸ್ ಮಾಡಲು ಬಾಳೆಹಣ್ಣಿನ ಫೇಸ್ ಪ್ಯಾಕ್ ಬಳಸಬಹುದು. ಬಾಳೆಹಣ್ಣನ್ನು ಕಿವುಚಿ ಮೊಸರು ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ.

ಓಟ್ ಮೀಲ್ ಫೇಸ್ ಪ್ಯಾಕ್

ಓಟ್ ಮೀಲ್ ಫೇಸ್ ಪ್ಯಾಕ್

ಓಟ್ ಮೀಲ್ ಫೇಸ್ ಪ್ಯಾಕ್ ಸ್ಕರ್ಬರ್ ನ ಹಾಗೆ ವರ್ತಿಸುತ್ತದೆ. ಇದನ್ನು ಜೇನು ಮತ್ತು ಮೊಸರಿನೊಂದಿಗೆ ಬೆರೆಸಿ. ಕೆಲವು ಹನಿ ಗ್ಲಿಸರಿನ್ ಸೇರಿಸಿ ಇದನ್ನು ತಯಾರಿಸಿ. ಇದನ್ನು ಮುಖದ ಮೇಲೆ ಹಚ್ಚಿ 10 ನಿಮಿಷದ ನಂತರ ತೊಳೆಯಿರಿ.

ಪರಂಗಿ ಹಣ್ಣು

ಪರಂಗಿ ಹಣ್ಣು

ಪರಂಗಿಯಲ್ಲಿ ಹಲವು ಚರ್ಮಕ್ಕೆ ನೆರವಾಗುವ ಗುಣಗಳಿವೆ. ಇದು ಚರ್ಮಕ್ಕೆ ಒಳ್ಳೆಯ ಮಾಯ್ಸಿಶ್ಚುರೈಸರ್ ಮತ್ತು ಚರ್ಮವನ್ನು ಬಿಗಿಮಾಡುತ್ತದೆ. ಪರಂಗಿಹಣ್ಣನ್ನು ಹಿಸುಕಿ ಹಾಲನ್ನು ಬೆರೆಸಿ. ಇದನ್ನು ಮುಖಕ್ಕೆ ಹಚ್ಚಿ 10 ನಿಮಿಷದವರೆಗೆ ಮಸಾಜ್ ಮಾಡಿ. ಸ್ವಲ್ಪ ಹೊತ್ತಿನ ನಂತರ ತೊಳೆಯಿರಿ.

ಗ್ಲಿಸರಿನ್

ಗ್ಲಿಸರಿನ್

ಗ್ಲಿಸರಿನ್ ಅನ್ನು ಫೇಸ್ ಪ್ಯಾಕ್ ನೊಂದಿಗೆ ಸೇರಿಸಿ ಬಳಸುವುದರಿಂದ ಚರ್ಮಕ್ಕೆ ಒಳ್ಳೆಯ ಮಾಯ್ಸಿಶ್ಚರೈಸ್ ಆಗುತ್ತದೆ. ಇದಲ್ಲದೆ ಗ್ಲಿಸರಿನ್ ಅನ್ನು ರೋಸ್ ವಾಟರ್ ನೊಂದಿಗೆ ಬಳಸುವುದರಿಂದ ಸಹಜ ಟೋನರ್ ಆಗಿ ಇದು ವರ್ತಿಸುತ್ತದೆ.

ಕಿತ್ತಳೆ ಮತ್ತು ಜೇನುತುಪ್ಪ

ಕಿತ್ತಳೆ ಮತ್ತು ಜೇನುತುಪ್ಪ

ಕಿತ್ತಳೆಯ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿಟ್ಟುಕೊಳ್ಳಿ. ಇದಕ್ಕೆ ಹಾಲು ಮತ್ತು ಜೇನುತುಪ್ಪ ಸೇರಿಸಿ. ಇದು ಹಲವು ರೀತಿಯಲ್ಲಿ ಚರ್ಮಕ್ಕೆ ಲಾಭದಾಯಕ.

ಹಾಲಿನಪುಡಿ ಮತ್ತು ಬಾದಾಮಿ ಎಣ್ಣೆ

ಹಾಲಿನಪುಡಿ ಮತ್ತು ಬಾದಾಮಿ ಎಣ್ಣೆ

ಹಾಲಿನ ಪುಡಿ ಮತ್ತು ಬಾದಾಮಿ ಎಣ್ಣೆಯನ್ನು ರೋಸ್ ವಾಟರ್ ನೊಂದಿಗೆ ಬೆರೆಸಿ ಫೇಸ್ ಪ್ಯಾಕ್ ಆಗಿ ಬಳಸಿ. ಇದು ಒಣ ಚರ್ಮಕ್ಕೆ ಆರೈಕೆ ನೀಡುತ್ತದೆ ಮತ್ತು ಮುಖಕ್ಕೆ ಹೊಳಪನ್ನು ನೀಡುತ್ತದೆ.

ಕಡಲೆಹಿಟ್ಟು ಮತ್ತು ಮೊಸರು

ಕಡಲೆಹಿಟ್ಟು ಮತ್ತು ಮೊಸರು

ಇದೊಂದು ಪ್ರಸಿದ್ಧವಾದ ಹೋಂಮೇಡ್ ಫೇಸ್ ಪ್ಯಾಕ್. ಇದಕ್ಕೆ ನಿಂಬೆ ರಸವನ್ನು ಸೇರಿಸಬೇಡಿ ಏಕೆಂದರೆ ಇದು ಚರ್ಮವನ್ನು ಮತ್ತಷ್ಟು ಒಣಗಿಸುತ್ತದೆ. ಬದಲಿಗೆ ಇದಕ್ಕೆ ಜೇನುತುಪ್ಪ ಬೆರೆಸುವುದರಿಂದ ಚರ್ಮಕ್ಕೆ ಒಳ್ಳೆಯ ಮಾಯ್ಸುಶ್ಚುರೈಸರ್ ಆಗಿ ವರ್ತಿಸುತ್ತದೆ.

ರೋಸ್ ಫೇಸ್ ಪ್ಯಾಕ್

ರೋಸ್ ಫೇಸ್ ಪ್ಯಾಕ್

ರೋಸ್ ಬಳಲಿದ ಚರ್ಮಕ್ಕೆ ಚೈತನ್ಯವನ್ನು ತಂದುಕೊಡುತ್ತದೆ. ನೀವು ರೋಸ್ ವಾಟರ್ ಅನ್ನು ಜೇನುತುಪ್ಪದೊಂದಿಗೆ ಬೆರೆಸಿ ಚಳಿಗಾಲದಲ್ಲಿ ಹಚ್ಚಬಹುದು. ಇದರಿಂದ ಚರ್ಮ ಮೃದುವಾಗಿರುತ್ತದೆ.

ಕೊಕೊ ಪೌಡರ್ ಮತ್ತು ಜೇನುತುಪ್ಪ

ಕೊಕೊ ಪೌಡರ್ ಮತ್ತು ಜೇನುತುಪ್ಪ

ಕೊಕೊ ಪೌಡರ್ ಚರ್ಮವನ್ನು ಮಾಯ್ಸಿಶ್ಚುರೈಸ್ ಮಾಡುವುದಲ್ಲದೆ ಅದನ್ನು ಮೃದುಗೊಳಿಸುತ್ತದೆ. ಇದನ್ನು ಜೇನುತುಪ್ಪದೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ. 5-10 ನಿಮಿಷದ ನಂತರ ತಣ್ಣನೆಯ ನೀರಿನಲ್ಲಿ ಮುಖ ತೊಳೆಯಿರಿ.

English summary

Treat Dry Skin In Winter: Face Packs

Applying face packs is a traditional method to ensure skin care. Your skin changes as per weather conditions. As winter is coming closer, you will see some changes in your skin. Most of the women tend to suffer from dry skin during winters.
Story first published: Thursday, December 12, 2013, 10:24 [IST]
X
Desktop Bottom Promotion