For Quick Alerts
ALLOW NOTIFICATIONS  
For Daily Alerts

ಚರ್ಮದ ಕಲೆ ನಿವಾರಣೆಗೆ ಹಣ್ಣಿನ ಜ್ಯೂಸ್

By Hemanth P
|

ಕಲೆಗಳು ನಮ್ಮ ದೇಹದಲ್ಲಿ ಬೇಡದ, ಕಿರಿಕಿರಿಯುಂಟು ಮಾಡುವ ಭಾಗ. ಮೊದಲು ಯಾವುದೇ ಗಾಯ ಅಥವಾ ಚರ್ಮದ ಸುಟ್ಟಿದ್ದರೆ ಗಾಯದ ಗುರುತುಗಳು ಮೂಡುತ್ತದೆ. ಅಪಘಾತ, ಸೋಂಕು ಅಥವಾ ಮೊಡವೆಯಿಂದ ಗಾಯವಾದ ಜಾಗದಲ್ಲಿ ಮೂಡುವ ಬದಲಿ ಚರ್ಮವೇ ಕಲೆಗಳು. ಬದಲಿ ಚರ್ಮವು ವಿಭಿನ್ನ ಪ್ರೋಟೀನ್ ಸಂಯೋಜನೆಯನ್ನು ಹೊಂದಿರುವ ಕಾರಣ ಇದು ಸ್ವಲ್ಪ ಕಪ್ಪು ಹಾಗೂ ಒರಟಾಗಿ ಕಾಣಿಸುತ್ತದೆ.

ಈ ಕಲೆಗಳು ಕೆಲವು ಸಮಯದ ಬಳಿಕ ಬಣ್ಣ ಕಳಕೊಳ್ಳುತ್ತದೆ. ಇದು ಸಮಯದೊಂದಿಗೆ ಸರಿಯಾಗದಿದ್ದರೆ ಆಗ ಚಿಕಿತ್ಸೆ ಅತ್ಯಗತ್ಯ. ಕಲೆಗಳ ನಿವಾರಣೆಗೆ ರಾಸಾಯನಿಕಗಳುಳ್ಳ ಹಲವಾರು ರೀತಿಯ ಕ್ರೀಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಸ್ವಲ್ಪ ಸಮಯ ಮಾತ್ರ ಫಲಿತಾಂಶ ಬೀರುವ ಇವುಗಳಿಂದ ಅಡ್ಡ ಪರಿಣಾಮಗಳು ಇವೆ. ಇದರಿಂದ ಯಾವುದೇ ತ್ವಚೆಯ ಸಮಸ್ಯೆಗೆ ನೈಸರ್ಗಿಕ ಚಿಕಿತ್ಸೆ ಬಳಸುವುದು ತುಂಬಾ ಲಾಭಕಾರಿ.

ಕೆಲವೊಂದು ಗಿಡಮೂಲಿಕೆಗಳು, ತರಕಾರಿ ಮತ್ತು ಹಣ್ಣುಗಳನ್ನು ಉಪಯೋಗಿಸಿಕೊಂಡು ನಾವು ಮಚ್ಛೆಗಳನ್ನು ನೈಸರ್ಗಿಕ ರೀತಿಯಲ್ಲಿ ನಿವಾರಿಸಬಹುದು. ಕಲೆ ನಿವಾರಣೆಗೆ ನಾವು ಕೆಲವೊಂದು ಹಣ್ಣಿನ ಜ್ಯೂಸ್ ಗಳ ಬಗ್ಗೆ ಚರ್ಚಿಸುವ. ಹಣ್ಣುಗಳು ತ್ವಚೆಗೆ ತುಂಬಾ ಆರೋಗ್ಯಕಾರಿ ಮತ್ತು ತ್ವಚೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಇದು ಉಪಯೋಗಿ. ಹಣ್ಣಿನ ಜ್ಯೂಸ್ ಗಳು ತುಂಬಾ ಆರೋಗ್ಯಕಾರಿ ಮತ್ತು ಇದನ್ನು ಕಲೆ ನಿವಾರಣೆಗೆ ಬಳಸಬಹುದು. ಕಲೆ ನಿವಾರಣೆಗೆ ನೆರವಾಗುವಂತಹ ಕೆಲವೊಂದು ಹಣ್ಣುಗಳ ಜ್ಯೂಸ್ ನ ಲಾಭವನ್ನು ಇಲ್ಲಿ ನೀಡಲಾಗಿದೆ.

1. ಟೊಮೆಟೊ

1. ಟೊಮೆಟೊ

ಕಲೆ ನಿವಾರಣೆ ಚಿಕಿತ್ಸೆಗೆ ಕೆಂಪು ಮತ್ತು ರಸ ಹೊಂದಿರುವ ಈ ಹಣ್ಣು ತುಂಬಾ ಉಪಯೋಗಿ. ಟೊಮೆಟೊದ ಜ್ಯೂಸ್ ತೆಗೆದು ಅದನ್ನು ಕಲೆ ಮೇಲೆ ಹಚ್ಚಬೇಕು. ಇದನ್ನು 10-15 ನಿಮಿಷ ಹಾಗೆ ಬಿಟ್ಟು ಬಳಿಕ ನೀರಿನಲ್ಲಿ ತೊಳೆಯಿರಿ. ಟೊಮೆಟೊದಲ್ಲಿ ಕಲೆಗಳನ್ನು ನಿವಾರಿಸುವಂತಹ ನೈಸರ್ಗಿಕ ಗುಣಗಳಿವೆ. ಟೊಮೆಟೊವನ್ನು ನಿಯಮಿತವಾಗಿ ಬಳಸುವುದು ತ್ವಚೆಗೆ ಒಳ್ಳೆಯದು. ಟೊಮೆಟೊ ಕೇವಲ ಮಚ್ಛೆ ನಿವಾರಿಸುವುದು ಮಾತ್ರವಲ್ಲದೆ, ಚರ್ಮವು ಆರೋಗ್ಯಕರ ಮತ್ತು ಸುಂದರವಾಗಿ ಕಾಣುವಂತೆ ಮಾಡುತ್ತದೆ.

2. ನಿಂಬೆ

2. ನಿಂಬೆ

ನಿಂಬೆ ಆರೋಗ್ಯ ಮತ್ತು ದೇಹದ ಹಲವಾರು ಸಮಸ್ಯೆಗಳಿಗೆ ಒಂದು ಒಳ್ಳೆಯ ಮದ್ದು. ಇದು ಕಲೆ ನಿವಾರಣೆಗೆ ಒಂದು ಒಳ್ಳೆಯ ಹಣ್ಣು. ನಿಂಬೆಯಲ್ಲಿರುವ ನೈಸರ್ಗಿಕ ಬ್ಲೀಚ್ ಗುಣವು ಕಲೆ ಮಾಸುವಂತೆ ಮಾಡುತ್ತದೆ. ಇದರಿಂದ ಚರ್ಮವು ಹೊಳೆಯುವಂತಾಗುತ್ತದೆ. ನಿಂಬೆ ರಸ ನೇರವಾಗಿ ಬಳಸಬಹುದು ಅಥವಾ ಯಾವುದೇ ಫೇಸ್ ಪೇಕ್ ಅಥವಾ ಫೇಸ್ ಮಾಸ್ಕ್ ಜತೆಗೆ ಉಪಯೋಗಿಸಬಹುದು. ನಿಂಬೆಯಲ್ಲಿ ಆ್ಯಸಿಡಿಕ್ ಗುಣವಿದೆ ಮತ್ತು ಇದನ್ನು ಬಳಸುವ ಮೊದಲು ನಿಮ್ಮ ಚರ್ಮದ ಮೇಲೆ ಒಮ್ಮೆ ಸ್ವಲ್ಪ ಹಾಕಿ ನೋಡಿ.

3. ಕಿತ್ತಳೆ

3. ಕಿತ್ತಳೆ

ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಗಳು ಚರ್ಮಕ್ಕೆ ತುಂಬಾ ಉಪಯೋಗಿ. ಕಲೆಗಳ ಮೇಲೆ ಕಿತ್ತಳೆ ಜ್ಯೂಸ್ ನ್ನು ಹಚ್ಚಿದಾಗ ಅದು ಆ ಪ್ರದೇಶದಲ್ಲಿ ಚರ್ಮವನ್ನು ಪುನರುಜ್ಜೀವನಗೊಳಿಸಿ, ಮತ್ತೆ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಚರ್ಮದ ಮೇಲೆ ಕಿತ್ತಳೆ ಹಣ್ಣಿನ ಜ್ಯೂಸ್ ಹಚ್ಚಿ 10-15 ನಿಮಿಷ ಹಾಗೆ ಬಿಡಿ, ಇದರ ಬಳಿಕ ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಅದನ್ನು ತೊಳೆಯಿರಿ.

4. ಸ್ಟ್ರಾಬೆರಿ

4. ಸ್ಟ್ರಾಬೆರಿ

ಕಲೆಯ ಸುತ್ತಲು ಇರುವ ಚರ್ಮದ ತೇಪೆಯನ್ನು ತೆಗೆಯಲು ಸ್ಟ್ರಾಬೆರಿ ಜ್ಯೂಸ್ ನ್ನು ಸ್ಕ್ರಬ್ ಆಗಿ ಬಳಸಬಹುದು. ಇತರ ಹಣ್ಣುಗಳಿಗೆ ಹೋಲಿಸಿದರೆ ಇದರ ಪರಿಣಾಮ ಸ್ವಲ್ಪ ಕಡಿಮೆ. ಆದರೂ ಸ್ಟ್ರಾಬೆರಿ ಜ್ಯೂಸ್ ಗಾಯದ ಕಲೆಗಳಿಗೆ ಪರಿಣಾಮಕಾರಿ. ಸ್ಟ್ರಾಬೆರಿ ಜ್ಯೂಸ್ ನ್ನು ಚರ್ಮದ ಮೇಲೆ ಉಜ್ಜಿದಾಗ ಕಲೆಗಳನ್ನು ನಿವಾರಿಸಿ ಚರ್ಮವನ್ನು ಮೃದು ಮತ್ತು ಸುಂದರವಾಗಿಸುತ್ತದೆ.

5. ಕಲ್ಲಂಗಡಿ

5. ಕಲ್ಲಂಗಡಿ

ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ದೇಹ ತಂಪಾಗಿಡುವುದಲ್ಲದೆ, ಚರ್ಮ ಸಂಬಂಧಿ ಕಾಯಿಲೆಗಳಿಗೆ ಇದು ತುಂಬಾ ಪರಿಣಾಮಕಾರಿ. ಕಲ್ಲಂಗಡಿ ಹಣ್ಣಿನಲ್ಲಿ ನೀರಿನಾಂಶ ಹೆಚ್ಚಿದ್ದು, ಇದನ್ನು ನೇರವಾಗಿ ಚರ್ಮದ ಮೇಲೆ ಹಚ್ಚಿ ಕೆಲವು ನಿಮಿಷ ಹಾಗೆ ಬಿಡಬೇಕು. ಕಲ್ಲಂಗಡಿ ಜ್ಯೂಸ್ ಕಲೆ ಕಡಿಮೆ ಮಾಡಲು ಮತ್ತು ನಿವಾರಿಸಲು ತುಂಬಾ ಉಪಯೋಗಿ

6. ಕಲೆಯನ್ನು ನೈಸರ್ಗಿಕವಾಗಿ ನಿವಾರಿಸುತ್ತದೆ

6. ಕಲೆಯನ್ನು ನೈಸರ್ಗಿಕವಾಗಿ ನಿವಾರಿಸುತ್ತದೆ

ಗಾಯದ ಕಲೆ ನಿವಾರಣೆ ಮತ್ತು ಚಿಕಿತ್ಸೆಗೆ ಇದು ಕೆಲವೊಂದು ಹಣ್ಣಿನ ಜ್ಯೂಸ್ ಗಳು. ಶುಂಠಿ, ಈರುಳ್ಳಿ, ಬಟಾಟೆ ಮತ್ತು ಇತರ ಕೆಲವು ಕೂಡ ತ್ವಚೆಗೆ ಒಳ್ಳೆಯದು. ಕಲೆಗಳು ತುಂಬಾ ಕಿರಿಕಿರಿಯುಂಟು ಮಾಡುತ್ತದೆ ಮತ್ತು ನಿಮ್ಮಲ್ಲಿ ಕೀಳು ಭಾವನೆ ಮೂಡಿಸಬಹುದು. ಆದರೆ ಸ್ವಲ್ಪ ತಾಳ್ಮೆ ಮತ್ತು ಬದ್ಧತೆಯೊಂದಿಗೆ ಇದನ್ನು ಪರಿಣಾಮಕಾರಿಯಾಗಿ ತೆಗೆಯಬಹುದು.

English summary

Fruit juice for scar removal

Scars are the most embarrassing and unwanted part in our body. Scars are formed anywhere on the body which had a wound or injury previously.
Story first published: Saturday, December 7, 2013, 12:59 [IST]
X
Desktop Bottom Promotion