For Quick Alerts
ALLOW NOTIFICATIONS  
For Daily Alerts

ಶೇವಿಂಗ್ ಬಳಿಕ ಬಳಸಬಹುದಾದ ಫೇಸ್ ಪ್ಯಾಕ್

By Hemanth P
|

ಶೇವಿಂಗ್ ಬಳಿಕ ಪುರುಷರಿಗೆ ಶ್ರೇಷ್ಠ ಭಾವನೆಯಾಗಿ ಅವರ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಇದು ಯಾವುದೇ ಮೀಟಿಂಗ್ ಅಥವಾ ಡೇಟಿಂಗ್ ಆಗಿರಲಿ, ಶೇವಿಂಗ್ ಮಾಡಿಸಿಕೊಂಡರೆ ಆಗ ನೀವು ತುಂಬಾ ಮೃದು ಮತ್ತು ಜಂಟಲ್ ಮ್ಯಾನ್ ಆಗಿ ಕಾಣಿಸಿಕೊಳ್ಳುವುದು ತುಂಬಾ ಮುಖ್ಯ. ಶೇವಿಂಗ್ ಬಳಿಕ ಜರ್ಜರಿತವಾಗುವ ಚರ್ಮಕ್ಕೆ ಒಳ್ಳೆಯ ಫೇಶಿಯಲ್ ಪ್ಯಾಕ್ ನ್ನು ಹಾಕುವುದು ಅತ್ಯಗತ್ಯ. ಶೇವಿಂಗ್ ಬಳಿಕ ಮುಖದ ಚರ್ಮವನ್ನು ಸ್ವಲ್ಪ ಆರೈಕೆ ಮಾಡಬೇಕಾಗುತ್ತದೆ. ಶೇವಿಂಗ್ ಮಾಡುವ ವೇಳೆ ಚರ್ಮದ ಒಂದು ಅಥವಾ ಎರಡು ಪದರಗಳು ಜರ್ಜರಿತವಾಗಿರುತ್ತದೆ.

ಎಷ್ಟೇ ಜಾಗೃತೆ ವಹಿಸಿ ಅಥವಾ ಇದಕ್ಕೆ ತಯಾರಿ ನಡೆಸಿದರೂ ನಿಮ್ಮ ಕಣ್ಣಿಗೆ ಕಾಣದಂತಹ ಕೆಲವೊಂದು ಗಾಯ ಮತ್ತು ಗೆರೆಗಳು ಇದ್ದೇ ಇರುತ್ತದೆ. ಫೇಸ್ ಪ್ಯಾಕ್ ಬಳಸುವ ಮೊದಲು ನೀವು ಟೀ ಟ್ರೀ ಎಣ್ಣೆ ಅಥವಾ ಇತರ ಆ್ಯಂಟಿಸೆಪ್ಟಿಕ್ ಗಳನ್ನು ಬಳಸುವುದು ತುಂಬಾ ಮುಖ್ಯ. ಇದು ಜರ್ಜರಿತ ಚರ್ಮವನ್ನು ಪುನರ್ಚೇತನಗೊಳಿಸಿ, ತೇವಾಂಶ ನೀಡಿ ಅದನ್ನು ಮೃದುವಾಗಿಸುತ್ತದೆ. ಪುರುಷರಾಗಿ ಫೇಶಿಯಲ್ ಪ್ಯಾಕ್ ಹಾಕಿಸಿಕೊಳ್ಳುತ್ತಿದ್ದೇವೆಂದು ಮುಜುಗರ ಪಡಬಾರದು. ಅಧ್ಯಯನಗಳು ಹೇಳುವ ಪ್ರಕಾರ ಮಹಿಳೆಯರು ಮೃದು ಹಾಗೂ ಚೆನ್ನಾಗಿ ಶೇವಿಂಗ್ ಮಾಡಿದ ಪುರುಷರನ್ನು ಇಷ್ಟಪಡುತ್ತಾರೆ.

ಶೇವಿಂಗ್ ಬಳಿಕ ಫೇಶಿಯಲ್ ಬಳಸುವುದರಿಂದ ನಿಮ್ಮ ಚರ್ಮಕ್ಕೆ ಪೋಷಕಾಂಶಗಳು ಸಿಗುತ್ತದೆ. ಅದು ನಿಮ್ಮ ಚರ್ಮಕ್ಕೆ ತೇವಾಂಶ ನೀಡಿ ಪುನರ್ಚೇತನಗೊಳಿಸುತ್ತದೆ. ಇದು ನಿಮ್ಮ ಮುಖದ ಚರ್ಮಕ್ಕೆ ಬೇಕಾಗಿರುವ ಪೋಷಕಾಂಶ ನೀಡುತ್ತದೆ. ಗರಿಷ್ಠ ಮಟ್ಟದ ಲಾಭ ಪಡೆಯಲು ನೀವು ನೈಸರ್ಗಿಕ ಹಾಗೂ ಗಿಡಮೂಲಿಕೆಯ ಮಿಶ್ರಣದ ಫೇಶಿಯಲ್ ಪ್ಯಾಕ್ ಬಳಸಿ. ಮುಳ್ಳುಸೌತೆ, ಪಪ್ಪಾಯಿ, ಜೇನು, ಅರಿಶಿನ ಶೇವಿಂಗ್ ಬಳಿಕ ಬಳಸುವಂತಹ ಕೆಲವೊಂದು ಫೇಸ್ ಪ್ಯಾಕ್ ಗಳು.

1. ಮುಳ್ಳುಸೌತೆ

1. ಮುಳ್ಳುಸೌತೆ

ಮುಖವನ್ನು ನೈಸರ್ಗಿಕವಾಗಿ ತಂಪಾಗಿಸಲು ಮುಳ್ಳುಸೌತೆಕಾಯಿ, ಓಟ್ ಮೀಲ್ ಮತ್ತು ಮೊಸರನ್ನು ಬಳಸುತ್ತಾರೆ. ಶೇವಿಂಗ್ ಬಳಿಕ ಈ ಎಲ್ಲಾ ವಸ್ತುಗಳನ್ನು ಹಾಕಿ ಮಾಡುವ ಪೇಸ್ಟ್ ನ್ನು ಮುಖಕ್ಕೆ ಹಚ್ಚಿದರೆ ಅದು ಚರ್ಮಕ್ಕೆ ತಂಪು ಹಾಗೂ ಹಿತವಾದ ಅನುಭವ ನೀಡುತ್ತದೆ. ಸುಮಾರು 30 ನಿಮಿಷಗಳ ಕಾಲ ಈ ಫೇಶಿಯಲ್ ಪ್ಯಾಕ್ ನ್ನು ಬಳಸಿದರೆ ಒಳ್ಳೆಯ ಪರಿಣಾಮ ಕಾಣಬಹುದು.

2. ಅರಿಶಿನ ಮಾಸ್ಕ್

2. ಅರಿಶಿನ ಮಾಸ್ಕ್

ನೈಸರ್ಗಿಕ ಆ್ಯಂಟಿಸೆಪ್ಟಿಕ್ ಗುಣ ಹೊಂದಿರುವ ಅರಿಶಿನವನ್ನು ಭಾರತದಲ್ಲಿ ಶತಮಾನಗಳಿಂದ ಔಷಧಿ ಹಾಗೂ ಅಡುಗೆಯಲ್ಲಿ ಬಳಸುತ್ತಾರೆ. ಕಡಲೆ ಹಿಟ್ಟು, ಬಾದಾಮಿ ಎಣ್ಣೆಯೊಂದಿಗೆ ಅರಿಶಿನದ ಪೇಸ್ಟ್ ನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಶೇವಿಂಗ್ ವೇಳೆ ಆಗಿರುವ ಎಲ್ಲಾ ಗಾಯಗಳು ಮಾಯವಾಗಿ ಮುಖದ ಚರ್ಮಕ್ಕೆ ತೇವಾಂಶ ಮತ್ತು ಆರೈಕೆ ನೀಡುತ್ತದೆ.

3. ಜೇನು

3. ಜೇನು

ನಿಯಮಿತವಾಗಿ ಶೇವಿಂಗ್ ಮಾಡಿದ ಬಳಿಕ ಜೇನನ್ನು ಪ್ರಮುಖ ಮೊಶ್ಚಿರೈಸರ್ ಆಗಿ ಬಳಸಬಹುದಾಗಿದೆ. ಕೇವಲ ಜೇನು ಮಾತ್ರ ಬಳಸಿ ಫೇಸ್ ಪ್ಯಾಕ್ ಮಾಡಬಹುದು. ಶೇವಿಂಗ್ ಬಳಿಕ ನಿಮ್ಮ ಮುಖಕ್ಕೆ ಜೇನನ್ನು ಹಚ್ಚಿ ಮತ್ತು 20-30 ನಿಮಿಷ ಹಾಗೆ ಬಿಟ್ಟು ಬಳಿಕ ಬಿಸಿ ನೀರಿನಲ್ಲಿ ಅದನ್ನು ತೊಳೆಯಿರಿ. ಇದರ ಬಳಿಕ ಮುಖಕ್ಕೆ ತಂಪು ನೀರನ್ನು ಹಾಕಿದರೆ ಮುಖದ ಚರ್ಮಕ್ಕೆ ಪೋಷಕಾಂಶಗಳು ಸಿಗುತ್ತದೆ.

4. ಬಾಳೆಹಣ್ಣು

4. ಬಾಳೆಹಣ್ಣು

ಒಣ ಚರ್ಮ ಹೊಂದಿರುವ ಪುರುಷರಿಗೆ ಬಾಳೆಹಣ್ಣಿನ ಫೇಸ್ ಬುಕ್ ತುಂಬಾ ಒಳ್ಳೆಯದು. ಬಾಳೆಹಣ್ಣು, ಮೊಸರು ಮತ್ತು ಜೇನಿನ ಮಿಶ್ರಣದೊಂದಿಗೆ ನೀವು ಸುಲಭವಾಗಿ ಫೇಸ್ ಪ್ಯಾಕ್ ಮಾಡಬಹುದು ಮತ್ತು ಇದನ್ನು ದಪ್ಪಗಿನ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಬಹುದು. ಶೇವ್ ಮಾಡಿದ ಬಳಿಕ ಮುಖಕ್ಕೆ ಇದನ್ನು ಹಚ್ಚಿ ಮತ್ತು ಚರ್ಮವನ್ನು ಪುನರ್ಚೇತಗೊಳಿಸಲು 10-20 ನಿಮಿಷ ಹಾಗೆ ಬಿಡಿ.

5. ಮಣ್ಣಿನ ಮಾಸ್ಕ್

5. ಮಣ್ಣಿನ ಮಾಸ್ಕ್

ಇದು ಕಚ್ಚಾ ಮತ್ತು ಭೂಮಿಯಿಂದ ಸಿಗುವ ಮಾಸ್ಕ್. ನಿಮ್ಮ ಚರ್ಮದ ಮಾದರಿಗೆ ಅನುಗುಣವಾಗಿ ಮಣ್ಣನ್ನು ಆಯ್ಕೆ ಮಾಡಿ. ಹೂ ಅಥವಾ ಹಣ್ಣಿನ ನೀರಿನೊಂದಿಗೆ ಮಣ್ಣಿನ ದಪ್ಪಗಿನ ಪೇಸ್ಟ್ ಮಾಡಿ. ಈ ಪೇಸ್ಟ್ ನ್ನು ನಿಮ್ಮ ಚರ್ಮಕ್ಕೆ ಹಚ್ಚಿ ಮತ್ತು 20 ನಿಮಿಷ ಅದನ್ನು ಒಣಗಲು ಬಿಡಿ.

6. ಪಪ್ಪಾಯ

6. ಪಪ್ಪಾಯ

ಪಪ್ಪಾಯದಲ್ಲಿ ಪಾಪೈನ್ ಎನ್ನುವ ಕಿಣ್ವವಿದ್ದು, ಇದು ಸತ್ತ ಜೀವಕೋಶಗಳನ್ನು ತೆಗೆದು ಚರ್ಮದ ಕಲ್ಮಶವನ್ನು ಗುಣಪಡಿಸುತ್ತದೆ. ಇದು ಶಮನಕಾರಿ ಕಿಣ್ವವಾಗಿದ್ದು, ಇದನ್ನು ಸುಟ್ಟ ಚರ್ಮ ಅಥವಾ ಜರ್ಜರಿತವಾಗಿರುವ ಚರ್ಮದ ಚಿಕಿತ್ಸೆಗೆ ಬಳಸಲಾಗುತ್ತದೆ. ಚರ್ಮದ ಕಲೆಗಳನ್ನು ನಿವಾರಿಸಿ ಚರ್ಮಕ್ಕೆ ಹೊಳಪನ್ನು ನೀಡುತ್ತದೆ.

English summary

Face packs to use after shaving

It is a great feeling for any man to get a perfect shave. It gives you a great feeling and immensely boosts your confidence. Be it for a important meeting or an important date you need to look sharp and smooth to have a lasting gentleman impression.
X
Desktop Bottom Promotion