For Quick Alerts
ALLOW NOTIFICATIONS  
For Daily Alerts

ಮುಖದ ಕಂದು ಕಲೆಗಳನ್ನು ಹೋಗಲಾಡಿಸಬೇಕೆ?

By Super
|

ಬಹುತೇಕ ಮಂದಿಯ ಮುಖದ ಮೇಲೆ, ಕೈಯ ಮೇಲೆ ಮತ್ತು ಹೆಗಲ ಮೇಲೆ ಮೆಲಸ್ಮ ಮತ್ತು ಬಿಸಿಲಿನಿಂದ ಉಂಟಾದ ಕಲೆಗಳಂತಹ ಕಪ್ಪು ಕಲೆಗಳು ಕಂಡು ಬರುತ್ತವೆ. ಮುಖದ ಮೇಲೆ ಕಂದು ಕಲೆ ಬಂದರೆ ಆ ವ್ಯಕ್ತಿಯ ಇಡೀ ಸೌಂದರ್ಯವೇ ಇದರಿಂದಾಗಿ ಹಾಳಾಗುತ್ತದೆ.

ಅದರಲ್ಲಿಯೂ ಹೆಂಗಸರಿಗೆ ಇದು ತುಂಬಾ ಕಿರಿಕಿರಿಯುಂಟು ಮಾಡುವ ವಿಚಾರವಾಗಿರುತ್ತದೆ. ಈ ಕಂದು ಕಲೆಗಳಿಂದ ಮುಕ್ತಿ ಹೊಂದುವುದು ಸ್ವಲ್ಪ ಕಾಲ ವ್ಯಯವಾಗುವ ಕ್ರಿಯೆಯಾದರು, ಅಷ್ಟೇನು ಕಷ್ಟವಾಗುವುದಿಲ್ಲ.

ಇಂತಹ ಸಮಸ್ಯೆ ಎದುರಿಸುತ್ತಿರುವವರಿಗಾಗಿ ಅದ್ಭುತವಾದ ಮನೆ ಮದ್ದುಗಳ ಪಟ್ಟಿಯನ್ನು ನಾವು ನಿಮಗಾಗಿ ನೀಡುತ್ತಿದ್ದೇವೆ. ಇವುಗಳು ನಿಮ್ಮ ಮುಖದ ಮೇಲಿನ ಕಂದು ಕಲೆಗಳು, ಕಪ್ಪುಕಲೆಗಳನ್ನು ಪ್ರಾಕೃತಿಕವಾಗಿ ನಿರ್ಮೂಲನೆ ಮಾಡುತ್ತವೆ.

ವಯಸ್ಸಾದಂತೆ ಬರುವ ಸುಕ್ಕುಗಳು, ಪಿತ್ತ ಜನಕಾಂಗದ ಕಲೆಗಳು, ಬಿಸಿಲಿನಿಂದಾದ ಕಲೆಗಳು, ಪಿಗ್‍ಮೆಂಟೇಶನ್ ಮತ್ತು ತ್ವಚೆಯ ಬಣ್ಣಗುಂದುವಿಕೆ ಮುಂತಾದ ಸಮಸ್ಯೆಗಳನ್ನು ಈರುಳ್ಳಿ, ವಿನೇಗರ್ ಮತ್ತು ನಿಂಬೆ ರಸಗಳು ನಿವಾರಿಸುತ್ತವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮುಖದ ಕೂದಲನ್ನು ಶಾಶ್ವತವಾಗಿ ಹೋಗಲಾಡಿಸಬೇಕೆ?

ನಿಂಬೆ ರಸ

ನಿಂಬೆ ರಸ

1. ಮುಖದ ಮೇಲಿನ ಸುಕ್ಕು, ಮೆಲಸ್ಮ ಮತ್ತು ಕಲೆಗಳನ್ನು ನಿವಾರಿಸಲು ನಿಂಬೆರಸವು ಅತ್ಯುತ್ತಮ ಮನೆ ಮದ್ದಾಗಿದೆ. ಕಲೆ ಇರುವ ಜಾಗಕ್ಕೆ ಈ ರಸವನ್ನು ಹತ್ತಿಯ ಉಂಡೆಯಲ್ಲಿ ಅದ್ದಿಕೊಂಡು ಹಚ್ಚಿ, 15 ನಿಮಿಷ ಬಿಟ್ಟು ತೊಳೆಯಿರಿ. ಈ ರಸವು ಕಪ್ಪುಕಲೆಗಳನ್ನು ಮಾಸುವಂತೆ ಮಾಡುತ್ತವೆ ಮತ್ತು ಬಣ್ಣಗುಂದಿದ ತ್ವಚೆಗೆ ಸ್ವಲ್ಪ ಹೊಳಪನ್ನು ನೀಡುತ್ತದೆ.

ಟೊಮೆಟೊ ರಸ

ಟೊಮೆಟೊ ರಸ

2. ಮುಖದ ಮೇಲಿನ ಕಲೆಗಳು, ಕಪ್ಪು ಚರ್ಮ, ಕಲೆಗಳನ್ನು ಹೋಗಲಾಡಿಸಲು ನಿಂಬೆ ರಸ ಮತ್ತು ಟೊಮಾಟೊ ರಸಗಳ ಮಿಶ್ರಣವನ್ನು ಬಳಸಿ. ಈ ಮಿಶ್ರಣವು ಮುಖದ ಮೇಲಿನ ಕಲೆಗಳಿಂದ ನಿಮಗೆ ವಿಮುಕ್ತಿಯನ್ನು ನೀಡುತ್ತದೆ.

3.ಈರುಳ್ಳಿ ರಸ ಮತ್ತು ಜೇನು

3.ಈರುಳ್ಳಿ ರಸ ಮತ್ತು ಜೇನು

1 ಟೇಬಲ್ ಚಮಚ ಈರುಳ್ಳಿ ರಸ ಮತ್ತು 2 ಚಮಚ ಜೇನು ತುಪ್ಪದ ಮಿಶ್ರಣವನ್ನು ಕಲೆಗಳ ಮೇಲೆ ಹಚ್ಚಿ, 15 ನಿಮಿಷ ಬಿಟ್ಟು ತೊಳೆಯಿರಿ. ಇದು ಕಂದು ಕಲೆಗಳಿಂದ ಬೇಗನೆ ಮುಕ್ತಿಯನ್ನು ಒದಗಿಸುತ್ತದೆ.

4. ಹಾಲು ಮತ್ತು ಜೇನು

4. ಹಾಲು ಮತ್ತು ಜೇನು

ಕಂದು ಕಲೆಗಳಿಂದ ಮುಕ್ತಿ ಹೊಂದಲು ಹಾಲು, ಕೆನೆ ಮತ್ತು ಜೇನು ತುಪ್ಪಗಳನ್ನು ಸೇರಿಸಿ ಒಂದು ಮಾಸ್ಕ್ ತಯಾರಿಸಿ. ಈ ಮಾಸ್ಕನ್ನು ನಿಮ್ಮ ಮುಖ, ಕತ್ತು, ಕೈಗಳು ಮತ್ತು ಕಾಲುಗಳಿಗೆ ಹಚ್ಚಿ. ಕಂದು ಕಲೆಗಳಿಂದ ಪ್ರಾಕೃತಿಕವಾಗಿ ಮುಕ್ತಿ ಹೊಂದಲು ಇರುವ ಅತ್ಯುತ್ತಮ ಮಾರ್ಗ ಇದಾಗಿದೆ.

5. ಮೂಲಂಗಿಯ ರಸ

5. ಮೂಲಂಗಿಯ ರಸ

ಮುಖದ ಮೇಲಿನ ಕಂದು ಕಲೆಗಳ ಮೇಲೆ ಮೂಲಂಗಿಯ ರಸವನ್ನು ಹಚ್ಚುವುದು ಸಹ ಅತ್ಯುತ್ತಮ ಪರಿಹಾರವಾಗಿದೆ. ಪ್ರತಿದಿನವು ಈ ರಸವನ್ನು ಕಂದು ಕಲೆಗಳ ಮೇಲೆ ಹತ್ತು ನಿಮಿಷ ಹಚ್ಚುತ್ತ ಬಂದರೆ ಕಲೆಗಳು ತಮ್ಮಷ್ಟಕ್ಕೆ ತಾವೇ ಮಾಯವಾಗುತ್ತವೆ.

6. ಒಣ ದ್ರಾಕ್ಷಿ ರಸ ಮತ್ತು ಕಿತ್ತಳೆ ಹಣ್ಣಿನ ರಸ

6. ಒಣ ದ್ರಾಕ್ಷಿ ರಸ ಮತ್ತು ಕಿತ್ತಳೆ ಹಣ್ಣಿನ ರಸ

ನಿಂಬೆರಸ, ಒಣ ದ್ರಾಕ್ಷಿ ರಸ ಮತ್ತು ಕಿತ್ತಳೆ ಹಣ್ಣಿನ ರಸವನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಹತ್ತಿಯ ಉಂಡೆಗಳಲ್ಲಿ ತೆಗೆದುಕೊಂಡು ನಿಮ್ಮ ಮುಖದ ಮೇಲಿನ ಕಂದು ಕಲೆಗಳಿಗೆ ಹಚ್ಚಿ, 30 ನಿಮಿಷ ಬಿಟ್ಟು ತೊಳೆಯಿರಿ. ಮುಖದ ಮೇಲಿನ ಕಲೆಗಳನ್ನು, ಸುಕ್ಕುಗಳನ್ನು ನಿವಾರಿಸಲು ಇದು ಅತ್ಯುತ್ತಮವಾದ ಮನೆ ಮದ್ದಾಗಿದೆ.

7.ಹಳದಿ ಮತ್ತು ಸಾಸಿವೆಯ ಮಾಸ್ಕ್

7.ಹಳದಿ ಮತ್ತು ಸಾಸಿವೆಯ ಮಾಸ್ಕ್

ಹಳದಿ ಮತ್ತು ಸಾಸಿವೆಯನನ್ಉ ಕಪ್ಪುಕಲೆಗಳನ್ನು ತೊಲಗಿಸಲು ಇರುವ ಮತ್ತೊಂದು ಅತ್ಯುತ್ತಮ ಪರಿಹಾರವಾಗಿದೆ. ಇದಕ್ಕಾಗಿ ಹಳದಿ ಮತ್ತು ಸಾಸಿವೆ ಬೀಜಗಳನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ, ಪೇಸ್ಟ್ ರೀತಿ ಮಾಡಿ ಮಾಸ್ಕ್ ತಯಾರಿಸಿಕೊಳ್ಳಿ. ಈ ಮಾಸ್ಕನ್ನು ಕಂದು ಕಲೆಗಳ ಮೇಲೆ ಹಚ್ಚಿ. 20 ನಿಮಿಷದ ನಂತರ ಇದನ್ನು ತೊಳೆಯಿರಿ. ಮುಖದಲ್ಲಿರುವ ಕಲೆಗಳಿಂದ ಮುಕ್ತಿ ಹೊಂದಿ.

8. ಸ್ಟ್ರಾಬೆರಿ ಮತ್ತು ಅಪ್ರಿಕಾಟ್‍

8. ಸ್ಟ್ರಾಬೆರಿ ಮತ್ತು ಅಪ್ರಿಕಾಟ್‍

ಸ್ಟ್ರಾಬೆರಿ ಮತ್ತು ಅಪ್ರಿಕಾಟ್‍ಗಳನ್ನು ಒಟ್ಟಿಗೆ ಜಜ್ಜಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಮುಖದ ಮೇಲಿನ ಕಂದು ಮತ್ತು ಕೆಂಪು ಕಲೆಗಳ ಮೇಲೆ ಹಚ್ಚಿ. ಮುಖದ ಮೇಲಿನ ಕಲೆಗಳನ್ನು, ಸುಕ್ಕುಗಳನ್ನು ನಿವಾರಿಸಲು ಇದು ಸಹ ಮತ್ತೊಂದು ಅತ್ಯುತ್ತಮವಾದ ಮನೆ ಮದ್ದಾಗಿದೆ.

9. ಮನೆಯಲ್ಲಿಯೇ ತಯಾರಿಸಿದ ಸ್ಕ್ರಬ್

9. ಮನೆಯಲ್ಲಿಯೇ ತಯಾರಿಸಿದ ಸ್ಕ್ರಬ್

ಮುಖ, ಕುತ್ತಿಗೆ ಮತ್ತು ಕೈಗಳ ಮೇಲಿನ ಕಂದು ಕಲೆಗಳನ್ನು ನಿವಾರಿಸಲು ಮನೆಯಲ್ಲಿಯೇ ತಯಾರಿಸಿದಂತಹ ಸ್ಕ್ರಬ್ ಸಹ ಪ್ರಯೋಜನಕಾರಿಯಾಗುತ್ತದೆ. ಕೆಂಪು ಮತ್ತು ಬಿಳಿಯ ಗಂಧದ ಮರದ ಪುಡಿಯನ್ನು ಅರ್ಧ ಕಪ್ ಓಟ್‍ಮೀಲ್, ಸ್ವಲ್ಪ ಹಾಲು ಮತ್ತು ಪನ್ನೀರಿನ ಜೊತೆಗೆ ಬೆರೆಸಿ ಸ್ಕ್ರಬ್ ತಯಾರಿಸಿ. ಈ ಸ್ಕ್ರಬ್ಬನ್ನು ಕಲೆಗಳು ಇರುವ ಸ್ಥಳಕ್ಕೆ ವಾರಕ್ಕೆ ಮೂರು ಬಾರಿ ಹಚ್ಚಿ. ಇದರಿಂದ ಕಲೆಗಳು ನಿಧಾನವಾಗಿ ಮಾಯವಾಗುವುದನ್ನು ನೀವೆ ಗಮನಿಸುವಿರಿ.

10. ಟೊಮಾಟೊ ಮತ್ತು ಮಜ್ಜಿಗೆಯ ಮಿಶ್ರಣ

10. ಟೊಮಾಟೊ ಮತ್ತು ಮಜ್ಜಿಗೆಯ ಮಿಶ್ರಣ

ಮುಖದ ಮೇಲಿನ ಕಲೆಗಳು ಮತ್ತು ತ್ವಚೆಯ ಬಣ್ಣ ಗುಂದುವಿಕೆಗೆ ಟೊಮಾಟೊ ಮತ್ತು ಮಜ್ಜಿಗೆಯ ಮಿಶ್ರಣ ಸಹ ರಾಮಬಾಣದಂತೆ ಕೆಲಸ ಮಾಡುತ್ತದೆ. 2 ಚಮಚ ಟೊಮಾಟೊ ರಸಕ್ಕೆ 4 ಚಮಚ ಮಜ್ಜಿಗೆಯನ್ನು ಸೇರಿಸಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ. ನಂತರ ಅದನ್ನು ಕಂದು ಕಲೆ ಅಥವಾ ಸುಕ್ಕುಗಳಿರುವ ಭಾಗಕ್ಕೆ ಹಚ್ಚಿ.

11.ಈರುಳ್ಳಿ ರಸ ಮತ್ತು ಬೆಳ್ಳುಳ್ಳಿ ರಸ

11.ಈರುಳ್ಳಿ ರಸ ಮತ್ತು ಬೆಳ್ಳುಳ್ಳಿ ರಸ

1 ಚಮಚ ಈರುಳ್ಳಿ ರಸ ಮತ್ತು 1 ಚಮಚ ಬೆಳ್ಳುಳ್ಳಿ ರಸವನ್ನು ನಿಮ್ಮ ಮುಖದ ಮೇಲೆ ಇರುವ ಕಲೆಗಳಿಗೆ ಹಚ್ಚಿ 15 ನಿಮಿಷ ಬಿಡಿ. ಇದು ಸಹ ಕಲೆಗಳನ್ನು ಹೋಗಲಾಡಿಸಲು ಮತ್ತು ಚರ್ಮ ಕಳೆಗುಂದುವುದನ್ನು ತಪ್ಪಿಸಲು ಇರುವ ಉತ್ತಮ ಮಾರ್ಗವಾಗಿದೆ.

12. ಆಲೂಗಡ್ಡೆ

12. ಆಲೂಗಡ್ಡೆ

ಬೇಯಿಸದ ಆಲೂಗಡ್ಡೆಯ ರಸವು ಕಪ್ಪುಕಲೆಗಳನ್ನು ಹೋಗಲಾಡಿಸಲು ಸಹಕಾರಿ. ಆಲೂಗಡ್ಡೆ ರಸವನ್ನು ಕಲೆ ಇರುವ ಭಾಗಕ್ಕೆ ಲೇಪಿಸಿ 15 ರಿಂದ 20 ನಿಮಿಷ ಬಿಟ್ಟು ತೊಳೆಯಿರಿ. ಇದರಿಂದ ಕಲೆಗಳು ಸ್ವಾಭಾವಿಕವಾಗಿ ಹೊರಟು ಹೋಗುತ್ತವೆ.

13. ಲೋಳೆ ಸರ

13. ಲೋಳೆ ಸರ

ಕಂದು, ಕೆಂಪು ಮತ್ತು ಹಳದಿ ಕಲೆಗಳಿಂದ ಬೇಸತ್ತಿದ್ದೀರಾ? ಹಾಗಾದರೆ ನೀವೇಕೆ ಒಮ್ಮೆ ಲೋಳೆ ರಸವನ್ನು ಪ್ರಯತ್ನಿಸಬಾರದು. ಪ್ರತಿದಿನ ಲೋಳೆ ಸರವನ್ನು ಅಥವಾ ಲೋಳೆಯ ಜೆಲ್ ಅನ್ನು ನಿಮ್ಮ ಮುಖದ ಮೇಲಿನ ಕಪ್ಪು ಕಲೆಗಳ ಮೇಲೆ ಹಚ್ಚಿ. ಇದನ್ನು ನಿಮ್ಮಲ್ಲಿರುವ ಕಲೆಗಳು ಮಾಯುವವರೆಗು ಹಚ್ಚಿ. ಇದು ಭಾರೀ ಆರಾಮವನ್ನು ನೀಡುವ ಮತ್ತು ಅಷ್ಟೇ ಪರಿಣಾಮಕಾರಿಯಾದ ಪರಿಹಾರವಾಗಿದೆ.

14. ಗಂಧದ ಪುಡಿ

14. ಗಂಧದ ಪುಡಿ

ಮುಖದ ಮೇಲಿನ ಸುಕ್ಕು, ಕಲೆಗಳು ಮುಂತಾದ ಎಲ್ಲಾ ರೀತಿಯ ಕಿರಿಕಿರಿಗಳಿಂದ ವಿಮುಕ್ತಿ ಹೊಂದಲು ಗಂಧದ ಪುಡಿಯನ್ನು ನೀರಿನಲ್ಲಿ ಕಲೆಸಿ ಪೇಸ್ಟ್ ತಯಾರಿಸಿ ಹಚ್ಚಿ ಸಾಕು. ಕಲೆಗಳು ತಮ್ಮಷ್ಟಕ್ಕೆ ತಾವೇ ಕಡಿಮೆಯಾಗುತ್ತವೆ.

15.ವಿಟಮಿನ್ ಇ ಎಣ್ಣೆ

15.ವಿಟಮಿನ್ ಇ ಎಣ್ಣೆ

ನಿಮ್ಮ ಮುಖದ ಮೇಲಿನ ಕಪ್ಪು ಕಲೆಗಳಿಂದ ಮುಕ್ತಿ ಪಡೆಯಲು ಸ್ವಲ್ಪ ಪ್ರಮಾಣದ ವಿಟಮಿನ್ ಇ ಇರುವ ಎಣ್ಣೆಯನ್ನು ಹಚ್ಚಿ. ಇದರಿಂದ ಮಸಾಜ್ ಮಾಡಿದರೆ ಕಲೆಗಳು ಮಾಸುತ್ತವೆ. ಈ ಪ್ರಾಕೃತಿಕ ಚಿಕಿತ್ಸೆಯು ಮೊಡವೆಗಳಿಂದ ಉಂಟಾದ ಕಲೆಗಳನ್ನು, ಸುಕ್ಕುಗಳನ್ನು ಮತ್ತು ಕಂದು ಕಲೆಗಳನ್ನು ಹೋಗಲಾಡಿಸುತ್ತದೆ.

16. ಅಪಲ್ ಸಿಡೆರ್ ವಿನೆಗರ್

16. ಅಪಲ್ ಸಿಡೆರ್ ವಿನೆಗರ್

ನಿಮ್ಮ ಮುಖದಲ್ಲಿರುವ ಕಂದು ಕಲೆಗಳಿಂದ ಮುಕ್ತಿ ಹೊಂದಲು ಅಪಲ್ ಸಿಡೆರ್ ವಿನೆಗರ್ ಅನ್ನು ಸೇವಿಸಿ. ಇದು ಕಂದು ಕಲೆಗಳನ್ನು ಹೋಗಲಾಡಿಸಲು ಇರುವ ಅತ್ಯುತ್ತಮ ಪರಿಹಾರ ಮಾರ್ಗವಾಗಿದೆ. ಒಂದು ಲೋಟ ನೀರಿಗೆ ಎರಡು ಚಮಚದಷ್ಟು ಅಪಲ್ ಸಿಡೆರ್ ವಿನೆಗರ್ ಅನ್ನು ಮತ್ತು ಜೇನು ತುಪ್ಪವನ್ನು ಬೆರೆಸಿ ಸೇವಿಸಿ. ಕಲೆಗಳಿಂದ ಮುಕ್ತರಾಗಿ.

17. ನಿಂಬೆರಸ, ಲೋಳೆ ರಸ ಮತ್ತು ಅಪಲ್ ಸಿಡೆರ್ ವಿನೆಗರ್

17. ನಿಂಬೆರಸ, ಲೋಳೆ ರಸ ಮತ್ತು ಅಪಲ್ ಸಿಡೆರ್ ವಿನೆಗರ್

1 ಚಮಚ ನಿಂಬೆರಸ, ಲೋಳೆ ರಸ ಮತ್ತು ಅಪಲ್ ಸಿಡೆರ್ ವಿನೆಗರ್ ಹಾಗು ಕಾಲು ಕಪ್ ಯೋಗರ್ಟ್ ಅನ್ನು ಮಿಶ್ರಣ ಮಾಡಿ. ಅದನ್ನು ನಿಮ್ಮ ಮುಖದ ಮೇಲೆ ಇರುವ ಕಂದು ಕಲೆಗಳಿಗೆ ಹಚ್ಚಿ. 30 ನಿಮಿಷದ ನಂತರ ಇದನ್ನು ತೊಳೆಯಿರಿ. ಈ ಮಾಸ್ಕ್ ನಿಮ್ಮ ಮುಖದ ಮೇಲೆ ಇರುವ ಕಂದು ಕಲೆಗಳು ಮತ್ತು ಬಿಸಿಲಿನಿಂದ ಉಂಟಾದ ಕಲೆಗಳನ್ನು ತೆಳುವಾಗಿಸುತ್ತದೆ.

18. 6 ರಿಂದ 8 ಗ್ಲಾಸ್ ನೀರನ್ನು ಕುಡಿಯಿರಿ

18. 6 ರಿಂದ 8 ಗ್ಲಾಸ್ ನೀರನ್ನು ಕುಡಿಯಿರಿ

18. ಮುಖದ ಮೇಲೆ ಉಂಟಾಗುವ ಕಂದು ಕಲೆಗಳು, ಮೆಲಸ್ಮ ಮತ್ತು ಇನ್ನಿತರ ಕಲೆಗಳನ್ನು ಹೋಗಲಾಡಿಸಲು ನೀರು ಸೇವಿಸಿ. ನಿಜ ನೀರು ಈ ವಿಚಾರದಲ್ಲಿ ಅತ್ಯುತ್ತಮವಾದ ಪರಿಹಾರವಾಗಿದೆ. ಪ್ರತಿದಿನ 6 ರಿಂದ 8 ಗ್ಲಾಸ್ ನೀರನ್ನು ಸೇವಿಸಿ. ಇದರಿಂದ ದೇಹದಲ್ಲಿರುವ ಅಪಾಯಕಾರಿ ಕಲ್ಮಷಗಳೆಲ್ಲವು ದೇಹದಿಂದ ಹೊರದೂಡಲ್ಪಟ್ಟು, ನಿಮ್ಮ ತ್ವಚೆಯು ಎಲ್ಲ ವಿಧವಾದ ಕಲೆಗಳಿಂದ ಮುಕ್ತವಾಗಿ ನಳ ನಳಿಸುತ್ತಿರುತ್ತದೆ. ಮತ್ತೇಕೆ ತಡ ನೀರು ಕುಡಿಯಿರಿ.

19. ಇತರೆ ಟಿಪ್ಸ್

19. ಇತರೆ ಟಿಪ್ಸ್

ನಿಮ್ಮ ತ್ವಚೆಯಲ್ಲಿ ಉಂಟಾಗುವ ಸರ್ವ ಸಮಸ್ಯೆಗಳಿಗೆ ಮೂಲ ಸೂರ್ಯನ ಅತಿ ನೇರಳೆಯ ಕಿರಣಗಳು. ಹಾಗಾಗಿ ನಿಮ್ಮ ತ್ವಚೆಯನ್ನು ಈ ಅತಿ ನೇರಳೆಯ ಕಿರಣಗಳಿಂದ ರಕ್ಷಿಸಿ. ಅದಕ್ಕಾಗಿ ಬಿಸಿಲಿನಲ್ಲಿ ಹೊರಗೆ ಹೋಗುವಾಗ ಸನ್ ಸ್ಕ್ರೀನ್ ಲೋಷನ್ ಬಳಸಿ. ಅತಿ ನೇರಳೆಯ ಕಿರಣಗಳಿಂದ ನಿಮ್ಮ ತ್ವಚೆಯನ್ನು ರಕ್ಷಿಸಿ. ಇದೊಂದು ಪರಿಣಾಮಕಾರಿ ಪ್ರಾಕೃತಿಕ ಮೆಲಸ್ಮ ಚಿಕಿತ್ಸೆಯಾಗಿದೆ.

ಸಲಹೆ

ಸಲಹೆ

ಈ ಮನೆ ಔಷಧಿಗಳ ಫಲಿತಾಂಶವು ಬೇರೆ ಬೇರೆ ಆಗಿರಬಹುದು. ಆದರೆ ನೀವು ಈ ಔಷಧಿಗಳಿಗೆ ಸ್ವಲ್ಪ ಸಮಯಾವಕಾಶವನ್ನು ನೀಡಿದರೆ, ಅವುಗಳು ನಿಮ್ಮ ಮುಖದ ಮೇಲೆ ನಿಮಗೇ ಕಿರಿಕಿರಿಯನ್ನು ತಂದೊಡ್ಡುವ ಕಂದು ಕಲೆಗಳು, ಸುಕ್ಕುಗಳು,ಮತ್ತಿತರ ಕಲೆಗಳಿಂದ ನಿಮ್ಮನ್ನು ವಿಮುಕ್ತಿಗೊಳಿಸುತ್ತವೆ. ಈ ಪ್ರಾಕೃತಿಕ ಔಷಧಿಗಳು ಕೇವಲ ನಿಮ್ಮ ಕಲೆಗಳನ್ನು ಹೋಗಲಾಡಿಸುವುದಿಲ್ಲ. ಜೊತೆಗೆ ಇವು ನಿಮ್ಮ ತ್ವಚೆಯ ಆರೋಗ್ಯ, ಬಣ್ಣ ಮತ್ತು ಹೊಳಪನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತವೆ. ಇವುಗಳನ್ನೆಲ್ಲ ಪ್ರಯೋಗಿಸಿದ ಮೇಲು ನಿಮಗೆ ಈ ಕಲೆಗಳು ಕಾಡುತ್ತಿದ್ದರೆ, ಮೊದಲು ಚರ್ಮರೋಗ ತಙ್ಞರ ಬಳಿ ಹೋಗಿ ತಪಾಸಣೆ ಮಾಡಿಕೊಳ್ಳಿ. ಅವರು ನಿಮಗೆ ಸರಿಹೊಂದುವ ಚಿಕಿತ್ಸೆಯನ್ನು ಸೂಚಿಸಬಹುದು.

English summary

Best Home Remedies to Get Rid of Brown Spots on Face

Here are some amazing homemade remedies and skin care tips that will clear your brown spots on skin and dark patches on face naturally. Onion, vinegar, and lemon juice are best home remedies for removing age spots, liver spots, sunspots, melasma, pigmentation, and dark discoloration of skin.
X
Desktop Bottom Promotion