For Quick Alerts
ALLOW NOTIFICATIONS  
For Daily Alerts

ಅಂದ ಹೆಚ್ಚಿಸಲು ಆರ್ಯುವೇದದಲ್ಲಿದೆ ಸಪ್ತ ಮಾರ್ಗ

By Super
|

ಹಿಂದಿನ ಕಾಲದಲ್ಲಿ ಕಾಯಿಲೆಗಳನ್ನು ಗುಣಪಡಿಸಲು ಉಪಯೋಗಿಸುತ್ತಿದ್ದ ಆರ್ಯುವೇದ ಔಷಧಿಗಳು ಆಲೋಪತಿ ಬಂದ ಮೇಲೂ ತನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ಇದಕ್ಕೆ ಕಾರಣವಿಷ್ಟೆ ಈ ಮದ್ದುಗಳಿಂದ ಯಾವುದೇ ಅಡ್ಡಪರಿಣಾಮವಿಲ್ಲ ಮತ್ತು ಕಾಯಿಲೆ, ಸಮಸ್ಯೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿರುವುದು.  ಆರ್ಯುವೇದದ 7 ಬ್ಯೂಟಿ ಸೀಕ್ರೆಟ್ ಇಲ್ಲಿದೆ

ಸೌಂದರ್ಯ ಹೆಚ್ಚಿಸಲು ಅಥವಾ ಸೌಂದರ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ನಾವು ಆರ್ಯುವೇದಗಳಿಂದ ಪರಿಹಾರ ಕಂಡುಕೊಳ್ಳಬಹುದು. ತ್ವಚೆ ಸಮಸ್ಯೆ ನಿವಾರಿಸಲು ಹೆಚ್ಚಿನವರು ಆರ್ಯುವೇದ ಪದ್ಧತಿ ಅನುಸರಿಸಲು ಇಷ್ಟಪಡುತ್ತವೆ.   ಪುರಾತನ ಸೌಂದರ್ಯ ಪದ್ಧತಿ, ಇಂದಿಗೂ ನಂ.1.. 

ಇಲ್ಲಿದೆ ನೋಡಿ ತ್ವಚೆ ರಕ್ಷಣೆಗೆ ಕೆಲ ಸರಳ ಉಪಾಯ:

ಅಕಾಲಿಕ ನೆರಿಗೆ ತಪ್ಪಿಸಲು

ಅಕಾಲಿಕ ನೆರಿಗೆ ತಪ್ಪಿಸಲು

ದಿನಾವೂ ಹರಳಣ್ಣೆಯನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಮುಖ ತೊಳೆದರೆ ಮುಖದಲ್ಲಿ ಯೌವನದ ಕಳೆ ತುಂಬಾ ಕಾಲದವರೆಗೆ ಇರುತ್ತದೆ. ಅಕಾಲಿಕ ನೆರಿಗೆ ಸಮಸ್ಯೆ ಉಂಟಾಗುವುದಿಲ್ಲ.

ಕಲೆರಹಿತ ತ್ವಚೆ

ಕಲೆರಹಿತ ತ್ವಚೆ

ಕಲೆರಹಿತ ತ್ವಚೆಗಾಗಿ ದಿನಾ ಹಾಲಿನಲ್ಲಿ ಹತ್ತಿಯನ್ನು ಮುಳುಗಿಸಿ ಅದರಿಂದ ಮುಖವನ್ನು ಕ್ಲೆನ್ಸ್ ಮಾಡಬೇಕು.ಈ ರೀತಿ ಮಾಡಿದರೆ ಕಲೆ ರಹಿತ ತ್ವಚೆ ನಿಮ್ಮದಾಗುವುದು.

ಮಾಯಿಶ್ಚರೈಸರ್

ಮಾಯಿಶ್ಚರೈಸರ್

ಮೊಟ್ಟೆಯ ಬಿಳಿ, ನಿಂಬೆ ಮತ್ತು ಕಿತ್ತಳೆ ರಸ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಡಬೇಕು. ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಬೇಕು.

ಸ್ಕಿನ್ ಕಂಡೀಷನರ್

ಸ್ಕಿನ್ ಕಂಡೀಷನರ್

2 ಚಮಚ ಕೆನೆಗೆ 1/2 ಚಮಚ ಜೇನು ಸೇರಿಸಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಡಬೇಕು. ನಂತರ ಟವಲ್ ನೆನೆಸಿ ಅದರಿಂದ ಮುಖವನ್ನು ಉಜ್ಜಬೇಕು.

ಕಪ್ಪು ಚುಕ್ಕಿಗಳು

ಕಪ್ಪು ಚುಕ್ಕಿಗಳು

ಹಸಿ ಆಲೂಗೆಡ್ಡೆ ದಿನವೂ ಮುಖಕ್ಕೆ 10 ನಿಮಿಷ ಉಜ್ಜಿದರೆ ಮುಖದಲ್ಲಿರುವ ಕಪ್ಪು ಕಲೆಗಳು ಕಡಿಮೆಯಾಗುತ್ತದೆ.

ಮೃದುವಾದ ತ್ವಚೆ

ಮೃದುವಾದ ತ್ವಚೆ

ದಿನಾವೂ 10 ನಿಮಿಷ ಕಿತ್ತಳೆ ರಸವನ್ನು ಮುಖಕ್ಕೆ ಹಚ್ಚುತ್ತಿದ್ದರೆ ತ್ವಚೆ ಮೃದುವಾಗುತ್ತದೆ.

ಮುಖದಲ್ಲಿರುವ ಬೇಡದ ಕೂದಲನ್ನು ಹೋಗಲಾಡಿಸಲು

ಮುಖದಲ್ಲಿರುವ ಬೇಡದ ಕೂದಲನ್ನು ಹೋಗಲಾಡಿಸಲು

ಸಾಸಿವೆ ಎಣ್ಣೆ, ಅರಿಶಿಣ ಮತ್ತು ಗೋಧಿ ಹಿಟ್ಟು ಈ ವಸ್ತುಗಳನ್ನು ಮಿಶ್ರ ಮಾಡಿ ಮುಖಕ್ಕೆ ತಿಕ್ಕಿದರೆ ಬೇಡದ ಕೂದಲನ್ನು ಹೋಗಲಾಡಿಸಬಹುದು.

 

English summary

Ayurveda Beauty Tips Foe Skin Care | Tips For Beauty | ತ್ವಚೆ ರಕ್ಷಣೆಗೆ ಆರ್ಯುವೇದ ವಿಧಾನ | ಸೌಂದರ್ಯಕ್ಕಾಗಿ ಕೆಲ ಸಲಹೆ.

Each one have there own skin problem. So here there are few Ayurveda medicine to cure your skin problem. Take a look.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more