For Quick Alerts
ALLOW NOTIFICATIONS  
For Daily Alerts

ಸ್ಟ್ರಾಬೆರಿಯಂಥ ಕೆನ್ನೆ ಪಡೆಯಲು ಕಷ್ಟವೇನಿಲ್ಲ

|
Strawberry for Skin Care
ಸ್ಟ್ರಾಬೆರಿ ತಿನ್ನಲು ಮಾತ್ರ ರುಚಿಯಾದ ಹಣ್ಣಲ್ಲ. ಅದರಲ್ಲಿ ಸೌಂದರ್ಯದ ಗುಟ್ಟೂ ಇದೆ. ಸ್ಟ್ರಾಬೆರಿಯಲ್ಲಿ ಹೆಚ್ಚಿರುವ ಆಲ್ಫಾ ಹೈಡ್ರಾಕ್ಸಿ ಆಸಿಡ್ ತ್ವಚೆಯಲ್ಲಿನ ಎಣ್ಣೆಯಂಶ ನಿವಾರಿಸಿ ತ್ವಚೆಗೆ ಗೌರವರ್ಣ ನೀಡುತ್ತೆ. ಆದ್ದರಿಂದ ಸ್ಟ್ರಾಬೆರಿಯನ್ನು ತ್ವಚೆಗೆ ಹೇಗೆ ಬಳಸಬಹುದು ಎಂದು ಇಲ್ಲಿ ತಿಳಿದುಕೊಳ್ಳಿ.

ತ್ವಚೆಗೆ ಸ್ಟ್ರಾಬೆರಿ ಬಳಕೆ ಹೇಗೆ?

* ಸ್ಟ್ರಾಬೆರಿ ಪೇಸ್ಟ್ : ಸ್ಟ್ರಾಬೆರಿ ಪೇಸ್ಟ್ ಲೇಪನ ತ್ವಚೆಗೆ ತುಂಬಾ ಉಪಯೋಗವನ್ನು ನೀಡುತ್ತದೆ. ಸ್ಟ್ರಾಬೆರಿಯನ್ನು ಚೆನ್ನಾಗಿ ಕಲೆಸಿ ಪೇಸ್ಟ್ ನಂತೆ ಮಾಡಿ ಹಚ್ಚಿಕೊಂಡು 15 ನಿಮಿಷ ಬಿಟ್ಟು ತಣ್ಣಗಿನ ನೀರಿನಿಂದ ತೊಳೆದುಕೊಂಡರೆ ತ್ವಚೆಗೆ ತಾಜಾತನ ಬರುತ್ತದೆ. ಹೊಳಪೂ ನೀಡುತ್ತದೆ.

* ಜೇನಿನೊಂದಿಗೆ ಸ್ಟ್ರಾಬೆರಿ: ಜೇನಿನಲ್ಲಿ ತ್ವಚೆಗೆ ಒಳಿತು ಮಾಡುವ ಅನೇಕ ಅಂಶಗಳಿವೆ. ಸ್ಟ್ರಾಬೆರಿಯನ್ನು ಪೇಸ್ಟ್ ನಂತೆ ಮಾಡಿ ಅದಕ್ಕೆ ಕೆಲವು ಹನಿ ಜೇನನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ ತ್ವಚೆಗೆ ಉಪಯೋಗವಿದೆ. ಎಣ್ಣೆ ಚರ್ಮವಿದ್ದವರು ಹಚ್ಚಿಕೊಳ್ಳುವ ಮುನ್ನ ಮುಖವನ್ನು ಚೆನ್ನಾಗಿ ತೊಳೆದುಕೊಂಡು ಲೇಪಿಸಿಕೊಳ್ಳಬೇಕು. 4-5 ನಿಮಿಷ ಮಸಾಜ್ ಮಾಡಿಕೊಂಡು 10 ನಿಮಿಷದ ನಂತರ ತೊಳೆದುಕೊಳ್ಳಬೇಕು.

* ನಿಂಬೆ ಮತ್ತು ಸ್ಟ್ರಾಬೆರಿ : ಸ್ಟ್ರಾಬೆರಿಯನ್ನು ಜೇನು ಮತ್ತು ನಿಂಬೆರಸ ಬೆರೆಸಿ ಪೇಸ್ಟ್ ನಂತೆ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ತ್ವಚೆಯಲ್ಲಿರುವ ಅಧಿಕ ಎಣ್ಣೆಯಂಶವನ್ನು ಹೀರಿಕೊಂಡು ತ್ವಚೆ ಹೊಳೆಯುವಂತೆ ಮಾಡುತ್ತದೆ.

* ಕೆನೆ ಮತ್ತು ಸ್ಟ್ರಾಬೆರಿ: ಸುಕ್ಕನ್ನು ತಡೆಗಟ್ಟಲು ಸ್ಟ್ರಾಬೆರಿಯೊಂದಿಗೆ ಹಾಲಿನ ಕೆನೆ ಬೆರೆಸಿ ಹಚ್ಚಿಕೊಂಡು ಮಸಾಜ್ ಮಾಡಿ 10 ನಿಮಿಷ ಬಿಟ್ಟು ತೊಳೆದುಕೊಂಡರೆ ಉತ್ತಮ ಫಲಿತಾಂಶವನ್ನು ನೀವೇ ನೋಡಬಹುದು.

English summary

Strawberry Homemade Face Pack | Strawberry for Skin Care | ಮನೆಯಲ್ಲೇ ಸ್ಟ್ರಾಬೆರಿ ಫೇಸ್ ಪ್ಯಾಕ್ | ತ್ವಚೆ ರಕ್ಷಣೆಗೆ ಸ್ಟ್ರಾಬೆರಿ

Strawberries are rich in alpha-hydroxy acid which helps clear acne and reduce oil from the skin. If you want to know the methods of applying strawberries on the face to feel fresh and get clear skin, here are few recipes to make strawberry face wash and scrubs at home.
Story first published: Friday, November 18, 2011, 10:31 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more