For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿಯೆ ವ್ಯಾಕ್ಸ್ ಡಬಲ್ ಬೆನಿಫಿಟ್

|
Waxing
ಹೆಣ್ಣು ಮಕ್ಕಳಿಗೆ ಕೈ ಕಾಲಿನಲ್ಲಿ ಅಧಿಕ ರೋಮವಿದ್ದರೆ ನೋಡಲು ಅಷ್ಟಾಗಿ ಚಂದ ಕಾಣುವುದಿಲ್ಲ.ಬ್ಯೂಟಿ ಪಾರ್ಲರ್ ನಲ್ಲಿ ವ್ಯಾಕ್ಸ್ ಮಾಡಿಸಿದರೆ ಕೆಮಿಕಲ್ ಇರುವ ವ್ಯಾಕ್ಸ್ ಕ್ರೀಮುಗಳಿಂದ ಚರ್ಮ ಅಲರ್ಜಿ ಉಂಟಾಗುತ್ತದೆ.

ವ್ಯಾಕ್ಸ್ ಮನೆಯಲ್ಲಿಯೆ ಮಾಡುವುದರಿಂದ ಚರ್ಮಕ್ಕೂ ಒಳ್ಳೆಯದು ಹಣವು ಉಳಿಯುತ್ತದೆ.

ಸಕ್ಕರೆಯಿಂದ ವ್ಯಾಕ್ಸ್:

1.ಸಕ್ಕರೆ, ನಿಂಬೆ ರಸ ಮತ್ತು ನೀರನ್ನು ಬಾಣಲೆಗೆ ಹಾಕಿ ಕುದಿಸಿ.

2. ಅದನ್ನು ರೂಮಿನ ಉಷ್ಣತೆಯಲ್ಲಿ ಆರಲು ಬಿಡಿ, ನಂತರ ಅದನ್ನು ಫ್ರಿಜ್ ನಲ್ಲಿಡಿ.

3. ವ್ಯಾಕ್ಸ್ ಮಾಡಬೇಕೆಂದಾಗ ಅದನ್ನು ಮೈಕ್ರೋವೇವ್ ನಲ್ಲಿ ಬಿಸಿ ಮಾಡಿ ನಂತರ ಅದನ್ನು ಚರ್ಮದ ಮೇಲೆ ಹಚ್ಚಿಕೊಳ್ಳಿ.

4. ಇದರಲ್ಲಿ 2 ಡ್ರಾಪ್ ವಿನಿಗರ್ ಬೇಕಾದರೆ ಬಳಸಬಹುದು.

5. ಕಾಟನ್ ಸ್ಟ್ರಿಪ್ಸ್ ಬಳಸಿ ಕೂದಲನ್ನು ತೆಗೆಯಿರಿ.

6. ವ್ಯಾಕ್ಸ್ ಮಾಡಿದಾಗ ಚರ್ಮ ಕೆಂಪಾಗುವುದರಿಂದ ಆಲಿವ್ ಎಣ್ಣೆ ಹಚ್ಚಿ.

ಸ್ಟ್ರಾಬರಿ ವ್ಯಾಕ್ಸ್

ಸ್ಟ್ರಾಬರಿ, ಜೇನಿನ ಮೇಣ, ಜೇನು, ಮೊಟ್ಟೆಯ ಬಿಳಿಯನ್ನು ಬಳಸಿ ಸ್ಟ್ರಾಬರಿ ವ್ಯಾಕ್ಸ್ ತಯಾರಿಸಬಹುದು.

1. ಜೇನಿನ ಮೇಣವನ್ನು ಪ್ರತ್ಯೇಕವಾಗಿ ಕರಗಿಸಿ.

2. ಸ್ಟ್ರಾಬರಿ, ಜೇನು, ಮೊಟ್ಟೆಯನ್ನು ಬೆರೆಸಿ ಆ ಮಿಶ್ರಣಬವನ್ನು ಮೇಣದ ಮಿಶ್ರಣದ ಜೊತೆ ಸೇರಿಸಿ.

3. ಈ ಮಿಶ್ರಣವನ್ನು ಚರ್ಮದ ಮೇಲೆ ಹಚ್ಚಿ ಕೈ ಮತ್ತು ಕಾಲಿನ ರೋಮದ ಮೇಲೆ ಹಚ್ಚಿ ವ್ಯಾಕ್ಸ್ ಮಾಡಬಹುದು.


ಜೇನಿನ ವ್ಯಾಕ್ಸ್:

1.ಸಕ್ಕರೆಯನ್ನು ಬಾಣಲೆಗೆ ಹಾಕಿ ಬಿಸಿ ಮಾಡಿ.

2. ಅದು ಹಳದಿ ಬಣ್ಣಕ್ಕೆ ಬರುವಾಗ ಜೇನು ಮತ್ತು ನಿಂಬೆಹಣ್ಣು ಸೇರಿಸಿ, ಆ ಮಿಶ್ರಣ ಅಂಟುವಂತೆ ಆದಾಗ ತಣ್ಣಗೆ ಮಾಡಿ.

3. ನಂತರ ಅದನ್ನು ಚರ್ಮದ ಮೇಲೆ ಹಚ್ಚಿ ವ್ಯಾಕ್ಸ್ ಮಾಡಿ.

ಈ ರೀತಿ ವ್ಯಾಕ್ಸ್ ಮಾಡುವುದರಿಂದ ಚರ್ಮ ಮೃದುವಾಗಿ ಸುಂದರವಾಗಿ ಕಾಣುವುದು.

English summary

Homemade Wax For Hair Removal | Hair Removal Tips | ಮನೆಯಲ್ಲಿ ತಯಾರಿಸಬಹುದಾದ ವ್ಯಾಕ್ಸ್ | ಕೈ ಮತ್ತು ಕಾಲಿನ ರೋಮ ತೆಗೆಯಲು ಸಲಹೆಗಳು

If you want to stay safe and free from all types of skin allergies then it is better to opt for homemade wax remedies. There are three best types of wax recipes for hair removal. Take a look.
Story first published: Wednesday, October 5, 2011, 15:02 [IST]
X
Desktop Bottom Promotion