For Quick Alerts
ALLOW NOTIFICATIONS  
For Daily Alerts

ಏನು ರುಚಿ ಕಣ್ರೀ.. ಈ ಪತ್ರೊಡೆ ಪಾಯಸ

Posted By:
|

ಓಲ್ಡ್ ಈಸ್ ಗೋಲ್ಡ್ ಅನ್ನೋ ಮಾತಿದೆ. ಅದು ಆಹಾರಕ್ಕೂ ಕೂಡ ಅನ್ವಯಿಸುತ್ತದೆ. ಕೆಲವು ತಿಂಡಿಗಳು ಹಿಂದಿನವರಿಗೆ ಸುಲಭವೆನಿಸುತ್ತಿತ್ತು. ಅದೇ ತಿಂಡಿಗಳು ಈಗಿನವರಿಗೆ ಸಮಯ ಹಿಡಿಯುತ್ತದೆ ಎನಿಸುತ್ತದೆ. ಜಟಾಪಟ್ ಆಹಾರ ತಯಾರಿಕೆಗೆ ಈಗಿನವರು ಒತ್ತು ನೀಡಿದರೆ, ಹಿಂದಿನವರು ಪೌಷ್ಠಿಕ ಆಹಾರ ತಯಾರಿಕೆಗೆ ಒತ್ತು ನೀಡಿದ್ದರು.

ಇಷ್ಟೆಲ್ಲಾ ನಾವು ಯಾಕೆ ಹೇಳುತ್ತಿದ್ದೇವೆಂದರೆ ಇಂದು ನಾವು ನಿಮಗೆ ತಿಳಿಸಲು ಹೊರಟಿರುವ ಆಹಾರ ಬಹಳ ಹಿಂದಿನ ಕಾಲದಲ್ಲಿ ಬೆಳಗಿನ ಉಪಹಾರಕ್ಕೆಂದು ತಯಾರು ಮಾಡಿತ್ತಿದ್ದ ಅಡುಗೆ. ಇತ್ತೀಚೆಗೆ ಇವತ್ ನಾವು ತಿಂಡಿಗೆ ಪತ್ರೊಡೆ ಪಾಯಸ ಮಾಡಿದ್ದೀವಿ ಎಂದು ಹೇಳಿದವರನ್ನು ಕೇಳಿಯೇ ಇಲ್ಲ. ಪತ್ರೊಡೆ ಪಾಯಸ ಎಂದು ಹೇಳುವ ಈ ರೆಸಿಪಿಯನ್ನು ಪತ್ರೊಡೆ ಪಳ್ದ್ಯ ಎಂದೂ ಕೂಡ ಕರೆಯಲಾಗುತ್ತದೆ.

Pathrode Payasam

ಹೊಟ್ಟೆಗೆ ದೃಢ ಆಗುತ್ತೆ ಮಗಾ ಪತ್ರೋಡೆ ಪಾಯಸ ಮಾಡು ಎಂದು ಅಜ್ಜಿ ಹೇಳುತ್ತಿದ್ದ ಮಾತನ್ನ ಮೊನ್ನೆಯಷ್ಟೇ ಅಮ್ಮ ನೆನಪಿಸಿಕೊಂಡರು. ನೆನಪಿಸಿಕೊಂಡದ್ದೇ ತಡ ಹಾಗಾದ್ರೆ ಮಾಡಿಯೇ ಬಿಡಮ್ಮ ಎಂದು ಪತ್ರೋಡೆ ಪಾಯಸ ಮಾಡಿಯೂ ಆಯ್ತು. ಅದೇ ರೆಸಿಪಿಯನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ.
Pathrode Payasam,ಪತ್ರೊಡೆ ಪಾಯಸ
Pathrode Payasam,ಪತ್ರೊಡೆ ಪಾಯಸ
Prep Time
45 Mins
Cook Time
45M
Total Time
1 Hours30 Mins

Recipe By: Sushma Chatra

Recipe Type: Payasam

Serves: 4

Ingredients
  • ಬೇಕಾಗುವ ಸಾಮಗ್ರಿಗಳು

    ಅಕ್ಕಿ - 1ವರೆ ಪಾವು+1 ಪಾವು

    ಉದ್ದಿನ ಬೇಳೆ- ಅರ್ಧಪಾವು+ 4 ಚಮಚ

    ತೆಂಗಿನ ತುರಿ- ಒಂದು ಬೌಲ್ + ಕಾಲ್ ಬೌಲ್

    ಬೆಲ್ಲ- ಅರ್ಧ ಕೆಜಿ+ ಒಂದೆರಡು ಗೋಲಿ ಗಾತ್ರ

    ಕೆಸುವಿನ ಸೊಪ್ಪು- 5 ಎಲೆಗಳು

    ಮಜ್ಜಿಗೆ- ಮುಕ್ಕಾಲು ಲೀಟರ್

    ಕೆಂಪು ಮೆಣಸು- 5

    ಜೀರಿಗೆ- ಒಂದು ಸ್ಪೂನ್

    ಹುಣಸೆಹಣ್ಣು- ಎರಡರಿಂದ ಮೂರು ಗೋಲಿ ಗಾತ್ರ

    ಉಪ್ಪು- ರುಚಿಗೆ ತಕ್ಕಷ್ಟು

    ಕೊತ್ತಂಬರಿ ಜೀಜ- ಎರಡು ಸ್ಪೂನ್

    ಅರಿಶಿನದ ಎಲೆ- ಎರಡು

    ಮೆಂತ್ಯೆ- ಅರ್ಧ ಸ್ಪೂನ್

    ಅರಿಶಿನದ ಪುಡಿ - ಚಿಟಿಕೆ

Red Rice Kanda Poha
How to Prepare
  • ಮಾಡುವ ವಿಧಾನ-

    *ಒಂದು ಪಾವು ಅಕ್ಕಿಯನ್ನು ಹುರಿದುಕೊಳ್ಳಿ. ಅದನ್ನು ಮಿಕ್ಸಿ ಪಾತ್ರೆಗೆ ಹಾಕಿಕೊಳ್ಳಿ.

    * ಇನ್ನೊಂದು ಪಾತ್ರೆಯಲ್ಲಿ ಮೆಂತ್ಯೆಯನ್ನು ಮೊದಲು ಹುರಿದುಕೊಂಡು ಅದಕ್ಕೆ ಜೀರಿಗೆ,ಕೊತ್ತುಂಬರಿ,ನಾಲ್ಕು ಚಮಚ ಉದ್ದಿನ ಬೇಳೆ ಹಾಕಿ ಹುರಿಯಿರಿ.

    *ನಂತರ ಕೆಂಪು ಮೆಣಸನ್ನು ಸೇರಿಸಿ ಹುರಿಯಿರಿ.

    * ಹುರಿದ ಎಲ್ಲಾ ಮಿಶ್ರಣವನ್ನು ಮೇಲಿನ ಮಿಕ್ಸಿ ಜಾರಿಗೆ ಸೇರಿಸಿ. ಅದಕ್ಕೆ ಹುಣಸೆಹಣ್ಣು, ಒಂದೆರಡು ಗೋಲಿ ಗಾತ್ರದಷ್ಟು ಬೆಲ್ಲ ಸೇರಿಸಿ ಅರಿಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಕಾಲು ಬೌಲ್ ನಷ್ಟು ತೆಂಗಿನ ತುರಿಯನ್ನು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ.

    . ರುಬ್ಬಿದ ಈ ಮಿಶ್ರಣವನ್ನು ಕೆಸುವಿನ ಎಲೆಯ ಹಿಂಭಾಗಕ್ಕೆ ಅಂಟಿಸಿ ಎಲೆಯನ್ನು ರೋಲ್ ಮಾಡಿ.

    . ರೋಲ್ ಮಾಡಿದ ಎಲೆಯನ್ನು ಹಬೆಯಲ್ಲಿ ಸುಮಾರು 30 ನಿಮಿಷ ಬೇಯಿಸಿಕೊಳ್ಳಿ.

    . ಇದಿಷ್ಟು ಪತ್ರೊಡೆ ತಯಾರಿಸುವ ವಿಧಾನ.

    . ಒಂದು ವರೆ ಪಾವು ಅಕ್ಕಿಯನ್ನು ಕೆಂಪಗೆ ಹುರಿದು ರವೆ ಮಾಡಿಕೊಂಡು ಕುದಿಯುವ ನೀರಿಗೆ ಹಾಕಿ ಬೇಯಿಸಿ.

    . ರವೆ ಬೆಂದ ಮೇಲೆ ಬೆಲ್ಲ ಹಾಕಿ ಕುದಿಸಿ.

    . ಅರ್ಧಪಾವು ಉದ್ದಿನಬೇಳೆಯನ್ನು ಹುರಿದು ಅದಕ್ಕೆ ಒಂದು ಬೌಲ್ ಕಾಯಿ ಹಾಕಿ ಮಿಕ್ಸಿ ಮಾಡಿಕೊಳ್ಳಿ.

    .ಮಿಕ್ಸಿ ಮಾಡಿದ ಈ ಮಿಶ್ರಣವನ್ನು ಬೆಂದ ರವೆಗೆ ಹಾಕಿ ಕಾಲ್ ಗಂಟೆ ಕುದಿಸಿ.

    . ನಂತರ ಈ ಮಿಶ್ರಣಕ್ಕೆ ಮಜ್ಜಿಗೆ( ಹುಳಿ ಮಜ್ಜಿಗೆ ಇದ್ದರೆ ಒಳ್ಳೆಯದು) ಸೇರಿಸಿ 10 ನಿಮಿಷ ಬೇಯಿಸಿ.

    .ಇದು ಬಿಸಿಬಿಸಿ ಇರುವಾಗ ಒಂದು ಅರಿಶಿಣದ ಎಲೆಯನ್ನು ಇದರಲ್ಲಿ ಮುಳುಗಿಸಿ ಇಡಿ. ಆಗ ಈ ಸಿಹಿಗೆ ಅರಿರಿಶಿನದೆಲೆಯ ಫ್ಲೇವರ್ ವಿಶೇಷ ಸವಿ ನೀಡುತ್ತದೆ.

    .ಬೇಯಿಸಿದ ಈ ಸಿಹಿ ಮಿಶ್ರಣಕ್ಕೆ ಅಟ್ಟದಲ್ಲಿ ಬೇಯಿಸಿದ ಪತ್ರೊಡೆಯನ್ನು ವೃತ್ತಾಕಾರದಲ್ಲಿ ಕತ್ತರಿಸಿ ಸೇರಿಸಿ.

    . ಸ್ವಲ್ಪ ತಣಿದ ನಂತರ ಸವಿಯಲು ನೀಡಿ.

Instructions
  • ಹೆಚ್ಚು ಕ್ಯಾಲೋರಿ ಇರುವ ಆಹಾರ ಇದು. ಹಾಗಾಗಿ ಜೀರ್ಣಕ್ರಿಯೆ ನಿಧಾನವಾಗುತ್ತದೆ.
Nutritional Information
  • ಸರ್ವ್‌ - 4
  • ಕ್ಯಾಲೋರಿ: - 35
  • ಕೊಬ್ಬಿನಾಂಶ: - 1 ಗ್ರಾಂಗಿಂತಲೂ ಕಡಿಮೆ
  • ಪ್ರೋಟೀನ್: - 4 ಗ್ರಾಂಗಳು
  • ಕಾರ್ಬೋಹೈಡ್ರೇಟ್ಸ್: - 6 ಗ್ರಾಂಗಳು
  • ಫೈಬರ್: - 3 ಗ್ರಾಂಗಳು
[ 4 of 5 - 38 Users]
X
Desktop Bottom Promotion