For Quick Alerts
ALLOW NOTIFICATIONS  
For Daily Alerts

ನೋ ಶೇವ್ ನವೆಂಬರ್ 2019: ಸ್ಟೈಲಿಶ್ ಆಗಿ ಗಡ್ಡವನ್ನು ಕಾಪಾಡಲು ಇಲ್ಲಿದೆ ಟಿಪ್ಸ್

|

ಗಡ್ಡ ಮೀಸೆ ತೆಗೆಯದೆ ಹಾಗೆ ಸನ್ಯಾಸಿಯಂತೆ ಇದ್ದು ಬಿಡಲು ಇಂದಿನ ದಿನಗಳಲ್ಲಿ ಆಗಲ್ಲ, ಯಾಕೆಂದರೆ ಕಚೇರಿಗಳಿಗೆ ಹೋಗುವ ವೇಳೆ ಒಂದು ಶಿಸ್ತು ಪಾಲಿಸಿಕೊಂಡು ಹೋಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಗಡ್ಡಮೀಸೆ ಟ್ರಿಮ್ ಮಾಡಿಕೊಳ್ಳಲೇಬೇಕು. ಆದರೆ ನವೆಂಬರ್ ತಿಂಗಳಲ್ಲಿ ಗಡ್ಡ ಮೀಸೆ ಕ್ಷೌರ ಮಾಡದೆ ಇರುವ ತಿಂಗಳಲಾಗಿದೆ. ಇದೇನು ಹೊಸತು ಎಂದು ನಿಮಗೆ ಖಂಡಿತವಾಗಿಯೂ ಅನಿಸುವುದು. ಆದರೆ ನವೆಂಬರ್ ನಲ್ಲಿ ಗಡ್ಡಮೀಸೆ ಬೋಳಿಸದೆ ಅದನ್ನು ಸ್ಟೈಲಿಶ್ ಆಗಿ ಕಾಪಾಡಿಕೊಳ್ಳುವುದು ಹೇಗೆ? ನವೆಂಬರ್ ನ ಈ ಅಭಿಯಾನ ಏನು ಹಾಗೂ ಏಕೆ ಎನ್ನುವ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿಯುವ.

ನೋ ಶೇವ್ ನವೆಂಬರ್ 2019

ನೋ ಶೇವ್ ನವೆಂಬರ್ 2019

ನೋ ಶೇವ್ ನವೆಂಬರ್ ಅಭಿಯಾನದಲ್ಲಿ ಇತ್ತೀಚೆಗೆ ಹೆಚ್ಚಿನ ಜನರು ಭಾಗಿಯಾಗಲು ಇಚ್ಚಿಸುತ್ತಿದ್ದಾರೆ. ಕ್ಯಾನ್ಸರ್ ತಡೆ ಅಭಿಯಾನದ ಅಂಗವಾಗಿ ಮುಖದ ಮೇಲಿನ ಕೂದಲನ್ನು ಬೆಳೆಸುವುದು ಇದರ ಮುಖ್ಯ ಉದ್ದೇಶವಾಗಿ. ಕ್ಯಾನ್ಸರ್ ರೋಗಿಗಳು ಕಳೆದುಕೊಳ್ಳುವಂತಹ ಕೂದಲಿನ ಬಗ್ಗೆ ಮುಜುಗರ ಪಡದಂತೆ ಮಾಡುವಂತಹ ಈ ಅಭಿಯಾನವೇ'ನೋ ಶೇವ್ ನವೆಂಬರ್' ಅನ್ನು ಆರಂಭಿಸಲಾಗಿದೆ.

ಒಂದು ತಿಂಗಳ ಕಾಲ ನಡೆಯಲಿರುವ ಈ ಅಭಿಯಾನ ಏನು, ಇದರ ಎಲ್ಲಾ ಮಾಹಿತಿ ಮತ್ತು ಪಾಲಿಸಬೇಕಾದ ನಿಯಮಗಳು, ಸ್ಟೈಲ್ ಮತ್ತು ತಿಂಗಳ ಕಾಲ ಗಡ್ಡ ಬೆಳೆಸಿ ನಿರ್ವಹಣೆ ಮಾಡುವುದು ಹೇಗೆ ಎಂದು ನೀವು ಮೊದಲು ತಿಳಿಯಬೇಕು.

ಕ್ಯಾನ್ಸರ್ ತಡೆ ಅಭಿಯಾನ

ಕ್ಯಾನ್ಸರ್ ತಡೆ ಅಭಿಯಾನ

ಒಂದು ತಿಂಗಳ ಕಾಲ ನೀವು ಶೇವಿಂಗ್ ಮಾಡದೆ ಹಾಗೆ ಇದ್ದುಬಿಡಬೇಕು. ಬ್ಲೇಡ್, ಕತ್ತರಿ ಮತ್ತು ಟ್ರಿಮ್ಮರ್ ಗೆ ವಿಶ್ರಾಂತಿ ನೀಡಬೇಕು. ಅದರಿಂದ ಉಳಿತಾಯವಾದ ಹಣವನ್ನು ಕ್ಯಾನ್ಸರ್ ತಡೆ ಸಂಸ್ಥೆಗಳಿಗೆ ನೀಡಬೇಕು. ಗಡ್ಡ ಬೆಳೆಸುವುದಕ್ಕೆ ಯಾವುದೇ ನಿಷೇಧವಿಲ್ಲದೆ ಇರುವ ಕಾರಣದಿಂದಾಗಿ ನೀವು ಯಾವುದೇ ರೀತಿಯ ಸೌಂದರ್ಯವರ್ಧಕ ಉತ್ಪನ್ನಗಳನ್ನು ಬಳಸಿಕೊಳ್ಳಬಹುದು.

ಟ್ರೆಂಡ್ ಬಂದು ಹೋಗುತ್ತಲಿರುತ್ತದೆ. ಆದರೆ ಇಂದಿಗೂ ಪುರುಷರ ಮುಖದ ಮೇಲಿನ ಕೂದಲಿನ ಟ್ರೆಂಡ್ ಬದಲಾಗುತ್ತಲೇ ಇದೆ ಮತ್ತು ಅದು ಕೆಲವೊಂದು ಸಲ ಮತ್ತೆ ಮತ್ತೆ ಮರಳುತ್ತಿರುತ್ತದೆ. ನವೆಂಬರ್ ತಿಂಗಳಲ್ಲಿ ನೀವು ಮುಖದ ಮೇಲಿನ ಕೂದಲನ್ನು ಬೆಳೆಸಲು ಬಯಸಿದ್ದರೆ ಹೇಗೆಲ್ಲಾ ಸ್ಟೈಲಿಶ್ ಆಗಿ ಗಡ್ಡವನ್ನು ಬೆಳೆಸಬಹುದು, ಅದನ್ನು ಹೇಗೆ ಕಾಪಾಡಬೇಕು ಎಂದು ತಿಳಿಯಲು ಮುಂದೆ ಓದಿ.

1. ಗಡ್ಡದ ಮೇಣ

1. ಗಡ್ಡದ ಮೇಣ

ನೀವು ಯಾವುದೇ ಪಾರ್ಟಿ ಅಥವಾ ಕಚೇರಿಗೆ ಹೋಗುತ್ತಲಿದ್ದರೂ ಮುಖದ ಮೇಲಿನ ಕೂದಲಿಗೆ ನೀವು ಮೇಣ ಬಳಸಿಕೊಳ್ಳಬೇಕು. ಇದು ತುಂಬಾ ಕಾಂತಿ ನೀಡುವುದು. ಗಡ್ಡ ವಿನ್ಯಾಸಗೊಳಿಸುವ ಕೆಲವು ಕಂಪೆನಿಯ ಮೇಣದಲ್ಲಿ ಸಾರಭೂತ ತೈಲ ಮತ್ತು ಶೀಯಾ ಬೆಣ್ಣೆ, ಜೇನಿನ ಮೇಣ ಮತ್ತು ಇತರ ಕೆಲವೊಂದು ಅಂಶಗಳು ಇರುವಂತೆ ನೋಡಿಕೊಳ್ಳಿ. ಗಡ್ಡವನ್ನು ತುಂಬಾ ನಯ ಮತ್ತು ಸರಿಯಾಗಿ ವಿನ್ಯಾಸ ಮಾಡುವುದನ್ನು ಮರೆಯಬೇಡಿ. ಕೆಲವು ಸುಗಂಧವನ್ನು ಸೂಸುವ ಪ್ರಾಡಕ್ಟ್ ಗಳು ಸಹ ಲಭ್ಯವಿದೆ.

2. ಗಡ್ಡ ಮತ್ತು ಫೇಸ್ ವಾಶ್

2. ಗಡ್ಡ ಮತ್ತು ಫೇಸ್ ವಾಶ್

ನಮ್ಮ ಹೊರಗೆ ಸುತ್ತಲು ಕಲುಷಿತ ವಾತಾವರಣ ಇರುವ ಕಾರಣದಿಂದಾಗಿ ಗಡ್ಡವನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಅತೀ ಅಗತ್ಯವಾಗಿರುವುದು. ಪುರುಷರಿಗಾಗಿಯೇ ಹಲವಾರು ಉತ್ಪನ್ನಗಳನ್ನು ಮಾರುಕಟ್ಟೆಗೆ ಇವೆ. ಇದರಲ್ಲಿ ಗಡ್ಡ+ಕೂದಲು+ಮುಖಕ್ಕೆ ಸಹ ಬಳಸಬಹುದಾದ, ಮೂರು ಒಂದರಲ್ಲೇ ಇರುವಂತಹ ಫೇಸ್ ವಾಶ್ ಲಭ್ಯವಿದೆ. ಇವಗ ಬಳಕೆಯಿಂದ ನಿಮ್ಮ ಗಡ್ಡದ ಅಂದವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು.

3. ಗಡ್ಡದ ಎಣ್ಣೆ

3. ಗಡ್ಡದ ಎಣ್ಣೆ

ಹೆಚ್ಚಿನ ಪುರುಷರಿಗೆ ಗಡ್ಡ ಬೆಳೆಯುವುದು ತುಂಬಾ ಕಷ್ಟವಾಗಿರುವುದು. ಇದು ನಿಜವಾದ ಸಂಕಷ್ಟವಾಗಿರುವ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಗಡ್ಡಕ್ಕಾಗಿ ಹಲವಾರು ರೀತಿಯ ಎಣ್ಣೆಗಳು ಲಭ್ಯವಿದೆ ಮತ್ತು ಇದು ಕೂದಲನ್ನು ತುಂಬಾ ಚೆನ್ನಾಗಿ ಬೆಳೆಯುವಂತೆ ಮಾಡುವುದು. ಕೆಲವು ಕಂಪನಿಯ ನೈಸರ್ಗಿಕ ಎಣ್ಣೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಬುಡ ಹಾಗೂ ತುದಿಯ ತನಕ ಕೂದಲ ಬೆಳವಣಿಗೆಯಲ್ಲಿ ನೆರವಾಗುವುದು.

4. ಗಡ್ಡ ನಯವಾಗಿಸುವುದು

4. ಗಡ್ಡ ನಯವಾಗಿಸುವುದು

ಗಡ್ಡವು ನೋಡಲು ಮಾತ್ರ ಸುಂದರವಾಗಿ ಕಾಣಿಸುವುದು ಮಾತ್ರವಲ್ಲದೆ, ಅದನ್ನು ಮುಟ್ಟಿದಾಗಲು ಉತ್ತಮ ಭಾವನೆ ಬರಬೇಕು. ಗಡ್ಡದಲ್ಲಿ ತುರಿಕೆ ಕಾಣಿಸದಂತೆ ನೋಡಿಕೊಳ್ಳಿ ಮತ್ತು ಅಲರ್ಜಿ ಮುಕ್ತವಾಗಿ ಇರಲು ನೀವು ಗಡ್ಡ ನಯಗೊಳಿಸುವ ಉತ್ಪನ್ನಗಳನ್ನು ಬಳಸಬಹುದು. ಇದರಲ್ಲಿ ಹರಳೆಣ್ಣೆಯು ಅತ್ಯುತ್ತಮ ಎಣ್ಣೆ. ಇದು ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಸಹ ಹೊಂದಿದೆ.

5. ಗಡ್ಡ ಬಾಚುವುದು

5. ಗಡ್ಡ ಬಾಚುವುದು

ಗಡ್ಡದ ಕಡೆ ಗಮನಹರಿಸಬೇಕು, ಆದರೆ ಅದರ ಮೇಲೆ ಒತ್ತಡ ಹಾಕುವುದಲ್ಲ. ಗಡ್ಡ ಬಾಚಲು ಎಂದೇ ತಯಾರಿಸಿರುವಂತಹ ಬಾಚಣಿಗೆಗಳು ಸಿಗುವುದು. ಇದು ಗಡ್ಡದ ಧೂಳನ್ನು ದೂರ ಮಾಡುವುದು ಮತ್ತು ತಲೆಹೊಟ್ಟು ನಿವಾರಿಸುವುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಇಂತಹ ಬಾಚಣಿಗೆಗಳನ್ನು ಬಳಸಿ ಗಡ್ಡ ಚೆಂದವಾಗಿ ಕಾಣುವಂತೆ ನೋಡಿಕೊಳ್ಳಿ.

ನೋ ಶೇವ್ ನವೆಂಬರ್ 2019 ಒಂದು ಉತ್ತಮ ಕಾಳಜಿಯುಳ್ಳ ಅಭಿಯಾನ ಮತ್ತು ಅದೇ ರೀತಿಯಾಗಿ ನೀವು ಈ ಮೇಲಿನ ವಿಧಾನಗಳಿಂದ ಗಡ್ಡವನ್ನು ಸ್ಟೈಲಿಶ್ ಆಗಿ ಇಟ್ಟುಕೊಳ್ಳಬಹುದು.

English summary

No Shave November 2019: Tips For a Great Looking Beard

Here we are discussing about no shave november 2019. tips to style your beard. take a look. It’s the time of the year again to put your razors, scissors and trimmers on rest for a month and grow your facial hair for cancer prevention. The goal of NO-SHAVE NOVEMBER is to spread awareness by embracing men’s facial hair which many cancer patients lose and letting it grow throughout the month.
Story first published: Monday, November 4, 2019, 12:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more