Just In
- 12 hrs ago
ವಾರ ಭವಿಷ್ಯ- ಡಿಸೆಂಬರ್ 8ರಿಂದ ಡಿಸೆಂಬರ್ 13ರ ತನಕ
- 14 hrs ago
ಭಾನುವಾರದ ದಿನ ಭವಿಷ್ಯ (08-12-2019)
- 1 day ago
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- 1 day ago
ಶನಿವಾರದ ದಿನ ಭವಿಷ್ಯ (07-12-2019)
Don't Miss
- News
ದೆಹಲಿ ಅಗ್ನಿ ಅವಘಡ; ನಿವಾದ ಹಿರೋ ಆಗಿದ್ದು ರಾಜೇಶ್ ಶುಕ್ಲಾ!
- Sports
ಎರಡನೇ ಟಿ20 ಪಂದ್ಯ: ಟಾಸ್ ಗೆದ್ದ ವೆಸ್ಟ್ಇಂಡೀಸ್ ಬೌಲಿಂಗ್ ಆಯ್ಕೆ
- Finance
ಭಾರತದ ವಿದೇಶ ವಿನಿಮಯ ಸಂಗ್ರಹ ನ. 29ಕ್ಕೆ $ 451.08 ಬಿಲಿಯನ್
- Technology
ಏರ್ಟೆಲ್ V/S ಜಿಯೋ : ಯಾವುದು ಬೆಸ್ಟ್..? ಹೊಸ ಪ್ಲಾನ್ಗಳಲ್ಲಿ ಏನೇನಿದೆ..?
- Movies
ರಕ್ಷಿತ್-ಶಾನ್ವಿ ನಡುವೆ ಏನೋ ನಡೀತಾ ಇದೆಯಂತೆ, ನಿಜಾನಾ..?
- Automobiles
ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಗಡ್ಡಕ್ಕೆ ಆಕರ್ಷಕ ಲುಕ್ ನೀಡುತ್ತೆ ಬಿಯರ್ಡ್ ಬಾಮ್
ನೀವು ಗಡ್ಡ ಪ್ರಿಯರೇ, ಹಾಗಾದರೆ ಗಡ್ಡದ ಸ್ಟೈಲ್ನಲ್ಲಿ ಆಕರ್ಷಕವಾಗಿ ಕಾಣಬೇಕೆಂದರೆ ನೀವು ಕೆಲವೊಂದು ಬ್ಯೂಟಿ ಟಿಪ್ಸ್ ಪಾಲಿಸಲೇಬೇಕು. ಸಾಮಾನ್ಯವಾಗಿ ಪುರುಷರಿಗೆ ಹೆಚ್ಚಿನ ಸೌಂದರ್ಯವರ್ಧಕಗಳ ಅಗ್ಯತವಿಲ್ಲ ಎಂದೇ ಹೆಚ್ಚಿನವರು ಭಾವಿಸುತ್ತಾರೆ, ಇನ್ನು ಗಡ್ಡ ಬಿಡುವುದಾದರೆ ಅದರ ಬಗ್ಗೆ ಆರೈಕೆ ಮಾಡದಿದ್ದರೂ ಚೆನ್ನಾಗಿ ಕಾಣುತ್ತದೆ ಎಂದು ನೀವು ಅಂದುಕೊಂಡಿದ್ದರೆ ತಪ್ಪು.
ನೀವು ಸ್ಯಾಂಡಲ್ವುಡ್ನಲ್ಲಿ ರಕ್ಷಿತ್ ಶೆಟ್ಟಿ, ಬಾಲಿವುಡ್ನಲ್ಲಿ ರಣವೀರ್ ಸಿಂಗ್ ಇವರೆನ್ನೆಲ್ಲಾ ನೋಡಿ, ಗಡ್ಡವೇ ಅವರ ಮುಖಕ್ಕೆ ಹೆಚ್ಚಿನ ಮೆರಗು ತಂದಿದೆ ಎಂದರೆ ತಪ್ಪಾಗಲಾರದು. ಆದರೆ ಗಡ್ಡದಲ್ಲಿ ಆಕರ್ಷಕವಾಗಿ ಕಾಣಬೇಕೆಂದರೆ ಅದರ ಆರೈಕೆ ಕಡೆ ಗಮನ ಕೊಡಲೇಬೇಕು.
ಗಡ್ಡದಲ್ಲಿ ಗಮನ ಸೆಳೆಯಬೇಕೆಂದರೆ ನೋಡಿದ ತಕ್ಷಣ ಆಕರ್ಷಕವಾಗಿ ಕಾಣಬೇಕು, ಗಡ್ಡ ಒಣಗಿದಂತೆ ಕಂಡರೆ ಚೆನ್ನಾಗಿ ಕಾಣುವುದಿಲ್ಲ, ನಿಮ್ಮ ಗಡ್ಡಕ್ಕೆ ಆಕರ್ಷಕ ಲುಕ್ ನೀಡುವಲ್ಲಿ ಬಿಯರ್ಡ್ ಬಾಮ್(ಗಡ್ಡದ ಬಾಮ್) ತುಂಬಾ ಸಹಕಾರಿಯಾಗಿದೆ. ಇಲ್ಲಿ ನಾವು ಬಿಯರ್ಡ್ ಬಾಮ್ ಪ್ರಯೋಜನಗಳು ಹಾಗೂ ಬಳಸುವುದು ಹೇಗೆ ಎಂಬ ಟಿಪ್ಸ್ ನೀಡಿದ್ದೇವೆ ನೋಡಿ.
ಬಿಯರ್ಡ್ ಬಾಮ್ನಿಂದ ದೊರೆಯುವ ಪ್ರಯೋಜನಗಳು
ಬಿಯರ್ಡ್ ಬಾಮ್ ಬಳಸುವುದರಿಂದ ಗಡ್ಡ ಮೃದುವಾಗುವುದು
* ತುರಿಕೆ ಮುಂತಾದ ಸಮಸ್ಯೆ ಉಂಟಾಗುವುದಿಲ್ಲ
* ಗಡ್ಡ ಒಣಗದಂತೆ ಕಾಪಾಡುತ್ತದೆ, ಹಾಗೂ ಗಡ್ಡದ ಹೊಳಪು ಹೆಚ್ಚುವುದು
* ಗಡ್ಡ ಮಂದವಾಗಿ ಕಾಣುವಂತೆ ಮಾಡುತ್ತದೆ.
* ಈ ಬಾಮ್ನಲ್ಲಿ ಶಿಯಾ ಬಟರ್ ಇರುವುದರಿಂದ ಗಡ್ಡದ ಬೆಳವಣಿಗೆಗೆ ಸಹಕಾರಿಯಾಗಿದೆ.
ಬಿಯರ್ಡ್ ಬಾಮ್ ಬಳಸುವುದು ಹೇಗೆ?
ಬಿಯರ್ಡ್ ಬಾಮ್ ಬಳಸಲು ಹೆಚ್ಚಿನ ಟ್ರಿಕ್ಸ್ ಏನೂ ಬೇಕಾಗಿಲ್ಲ, ಆದರೆ ಗಡ್ಡಕ್ಕೆ ಎಣ್ಣೆ ಹಚ್ಚಿದಂತೆ ಬಳಸಲು ಸಾಧ್ಯವಿಲ್ಲ, ನಿಮ್ಮ ಗಡ್ಡದ ಉದ್ದಕ್ಕೆ ತಕ್ಕಂತೆ ಬಾಮ್ ತೆಗೆದು ಹಚ್ಚಿದರೆ ಸಾಕು, ಇದನ್ನು ಹಚ್ಚಲು ಈ ಕೆಳಗಿನ ಟಿಪ್ಸ್ ಬಳಸಿ.
* ಮೊದಲು ನಿಮ್ಮ ಗಡ್ಡವನ್ನು ತೊಳೆದು ಸ್ವಚ್ಛಗೊಳಿಸಿ
* ನಂತರ ಟವಲ್ ಅನ್ನು ಅದ್ದಿ ಅದರ ಒದ್ದೆ ತೆಗೆಯಿರಿ.
* ಈಗ ಗಡ್ಡವನ್ನು ಬಾಚಿ.
* ಈಗ ಬಾಮ್ ತೆಗೆದು ಅದನ್ನು ನಿಮ್ಮ ಅಂಗೈಗೆ ಹಾಕಿ ಉಜ್ಜಿ, ಆಗ ಅದು ಎಣ್ನೆ ರೀತಿಯಾಗುತ್ತದೆ, ಈಗ ಮೆಲ್ಲನೆ ಗಡ್ಡದ ಮೇಲೆ ಸವರಿ. ಇದನ್ನು ಹಚ್ಚುವಾಗ ಗಡ್ಡದ ತುದಿಯಿಂದ ಪ್ರಾರಂಭಿಸಿ, ಬುಡಕ್ಕೆ ಬನ್ನಿ.
* ಕೊನೆಗೆ ಗಡ್ಡವನ್ನು ಮತ್ತೊಮ್ಮೆ ಬಾಚಿ, ಹೀಗೆ ಮಾಡಿದರೆ ಗಡ್ಡ ತುಂಬಾ ಆಕರ್ಷಕವಾಗಿ ಕಾಣುವುದು ನೋಡಿ.
ಎಷ್ಟು ಬಾಮ್ ಬಳಸಬೇಕು?
ಗಡ್ಡಕ್ಕೆ ಬಾಮ್ ಹಚ್ಚುವಾಗ ಸ್ವಲ್ಪವೇ-ಸ್ವಲ್ಪ ತೆಗೆದುಕೊಳ್ಳಿ, ಬಾಮ್ ತೆಗೆಯಲು ತೋರು ಬೆರಳು ಬಳಸಿದರೆ ಸಾಕು. ನಂತರ ಅದನ್ನು ಅಂಗೈಯಲ್ಲಿ ಹಾಕಿ ಉಜ್ಜಿ, ನಂತರ ಗಡ್ಡಕ್ಕೆ ಹಚ್ಚಿ, ಬಾಮ್ ಹೆಚ್ಚು ಹಚ್ಚಿದರೆ ಗಡ್ಡ ಎಣ್ಣೆ-ಎಣ್ಣೆಯಾಗಿ ಕಾಣುವುದು, ಆದ್ದರಿಂದ ಸ್ವಲ್ಪವೇ ಸ್ವಲ್ಪ ತೆಗೆದು ಹಚ್ಚಿ.
ಬಾಮ್ ಅನ್ನು ಎಷ್ಟು ಬಾರಿ ಹಚ್ಚಬಹುದು?
ದಿನದಲ್ಲಿ ಮೊದಲು ಬಾಮ್ ಹಚ್ಚುವಾಗ ತೊಳೆದು ಸ್ವಚ್ಛಗೊಳಿಸಿ, ಒಣಗಿಸಿ ಬಾಚಿ ಹಚ್ಚಬೇಕು, ಮಧ್ಯದಲ್ಲಿ ಗಡ್ಡ ಒಣಗಿದಂತೆ ಅನಿಸಿದರೆ ಸ್ವಲ್ಪ ಬಾಮ್ ಬಳಸಬಹುದು. ಬಾಮ್ ನಿಮ್ಮ ಗಡ್ಡವನ್ನು ಆಕರ್ಷಕವಾಗಿ ಕಾಣುವಂತೆ ಮಾಡುವುದರಿಂದ ಗಡ್ಡದಲ್ಲಿ ನೀವು ಸ್ಮಾರ್ಟ್ ಆಗಿ ಕಾಣುವಿರಿ.