For Quick Alerts
ALLOW NOTIFICATIONS  
For Daily Alerts

ಪುರುಷರೇ, ಸುಂದರವಾಗಿ ಕಾಣಬೇಕೇ? ಈ ಟ್ರಿಕ್ಸ್ ಅನುಸರಿಸಿ

By Deepu
|

ಮಹಿಳೆಯರು ಮಾತ್ರ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು. ಪುರುಷರು ತಮ್ಮ ಸೌಂದರ್ಯ ಕಡೆಗಣಿಸುತ್ತಾರೆ ಎಂದರೆ ತಪ್ಪಲ್ಲ. ಪುರುಷರಲ್ಲಿ ರೂಪದರ್ಶಿಗಳು ಹಾಗೂ ಇತರ ಕೆಲವು ಮಂದಿ ಮಾತ್ರ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವರು. ಇತರ ಪುರುಷರು ತಮ್ಮ ಕೆಲಸದಲ್ಲಿ ಹೆಚ್ಚು ವ್ಯಸ್ತರಾಗುವ ಕಾರಣ ಅವರಿಗೆ ಸಮಯ ಕೂಡ ಸಿಗದು. ಆದರೆ ಪುರುಷರ ಮುಖದಲ್ಲಿ ಒಂದು ಮೊಡವೆ ಅಥವಾ ಬೊಕ್ಕೆ ಕಾಣಿಸಿಕೊಂಡರೆ ಆಗ ಅವರು ತಳಮಳಗೊಳ್ಳುವರು.

ಈ ಸರಳ ಟಿಪ್ಸ್ ಅನುಸರಿಸಿದರೆ ಸಾಕು, ಮೀಸೆ-ಗಡ್ಡ ಚೆನ್ನಾಗಿ ಬೆಳೆಯುತ್ತದೆ!

ಇಂತಹ ಪರಿಸ್ಥಿತಿ ಬರುವ ಮೊದಲು ಪುರುಷರು ತಮ್ಮ ಮುಖದ ಆರೈಕೆ ಮಾಡಿಕೊಳ್ಳಬೇಕು. ಮುಖದ ಆರೈಕೆಯೆಂದರೆ ಕೇವಲ ಒಂದು ದಿನದ ಕೆಲಸವಲ್ಲ. ಇದು ದಿನನಿತ್ಯ ಮಾಡುವಂತದ್ದಾಗಿದೆ. ದಿನನಿತ್ಯವು ನಾವು ತ್ವಚೆಯ ಆರೈಕೆ ಮಾಡಿದರೆ ಮಾತ್ರ ಚರ್ಮವು ಆರೋಗ್ಯವಾಗಿರುವುದು.

ತ್ವಚೆಯ ಆರೈಕೆಯೆಂದರೆ ಅದಕ್ಕೆ ಸರಿಯಾದ ರೀತಿಯಲ್ಲಿ ಪೋಷಕಾಂಶಗಳನ್ನು ನೀಡುವುದು. ಪುರುಷರು ಈ ಸಲಹೆಗಳನ್ನು ಪಾಲಿಸಿಕೊಂಡು ಹೋದರೆ ಅವರ ಮುಖದ ಸೌಂದರ್ಯವು ಚೆನ್ನಾಗಿರುವುದು. ಆ ಸಲಹೆಗಳು ಯಾವುದು ಎಂದು ತಿಳಿಯಲು ಮುಂದೆ ಓದಿ...

ಸರಿಯಾದ ಮುಖದ ಉತ್ಪನ್ನ ಆಯ್ಕೆ

ಸರಿಯಾದ ಮುಖದ ಉತ್ಪನ್ನ ಆಯ್ಕೆ

ಪುರುಷರು ಮುಖದ ಆರೈಕೆಗೆ ಕ್ಲೆನ್ಸರ್, ಸ್ಕ್ರಬರ್ ಮತ್ತು ಮಾಯಿಶ್ಚರೈಸ್ ಹೀಗೆ ಹಲವಾರು ವಿಧದ ಉತ್ಪನ್ನಗಳನ್ನು ಬಳಸಬಹುದು. ಆದರೆ ಇಂತಹ ಉತ್ಪನ್ನಗಳಲ್ಲಿ ಆಲ್ಕೋಹಾಲ್, ಡೈ ಅಥವಾ ಸುವಾಸನೆಯಂತಹ ಹಲವಾರು ರೀತಿಯ ವಿಷಕಾರಿಗಳು ಇರುವುದು. ಈ ಮೇಲಿನ ಅಂಶಗಳು ಇಲ್ಲದೆ ಇರುವಂತಹ ಮುಖದ ಉತ್ಪನ್ನಗಳನ್ನು ಬಳಸಬೇಕು. ಪುರುಷರು ಹೆಚ್ಚಾಗಿ ಬಳಸುವ ಎರಡು ಉತ್ಪನ್ನಗಳೆಂದರೆ ಆಫ್ಟರ್ ಶೇವ್ ಮತ್ತು ಫಾಮ್ ಶೇವಿಂಗ್ ಕ್ರೀಮ್. ಆಫ್ಟರ್ ಶೇವ್ ನಲ್ಲಿ ಅತಿಯಾದ ಸುಗಂಧವಿರುವುದು ಮತ್ತು ಫಾಮ್ ಚರ್ಮದ ಮೇಲಿನ ಪದರವು ಒಣಗುವಂತೆ ಮಾಡುವುದು. ವಿಷಕಾರಿ ಅಂಶಗಳು ಇಲ್ಲದೆ ಇರುವ ಉತ್ಪನ್ನಗಳನ್ನು ಪುರುಷರು ಬಳಸಬೇಕು. ಆಫ್ಟರ್ ಶೇವ್ ಮತ್ತು ಶೇವಿಂಗ್ ಕ್ರೀಮ್ ನ್ನು ಆದಷ್ಟು ಕಡೆಗಣಿಸಿದರೆ ಒಳ್ಳೆಯದು.

ಪುರುಷರ ಕ್ರೀಮ್‌ಗಳನ್ನು ಬಳಸಿ

ಪುರುಷರ ಕ್ರೀಮ್‌ಗಳನ್ನು ಬಳಸಿ

ಹೆಚ್ಚಾಗಿ ಪುರುಷರು ತಮ್ಮ ಮುಖಕ್ಕೆ ಮಹಿಳೆಯರಿಗಾಗಿ ಮಾಡಿರುವಂತಹ ಕ್ರೀಮ್, ಟೋನರ್ ಮತ್ತು ಮೊಶ್ಚಿರೈಸರ್ ಬಳಸಿಕೊಳ್ಳುವರು.ಇದು ಚರ್ಮದ ಮೇಲೆ ಪರಿಣಾಮ ಬೀರುವುದು. ಪ್ರತಿನಿತ್ಯದ ಬಳಕೆಗೆ ಪುರುಷರು ತಮಗಾಗಿ ಮಾಡಿರುವಂತಹ ಕ್ರೀಮ್ ಹಾಗೂ ಇತರ ಉತ್ಪನ್ನಗಳನ್ನು ಬಳಸಿದರೆ ಒಳ್ಳೆಯದು. ಮಹಿಳೆಯರಿಗಾಗಿ ಮಾಡಿರುವಂತಹ ಕ್ರೀಮ್ ಅಥವಾ ಬೇರೆ ಉತ್ಪನ್ನಗಳನ್ನು ಬಳಸಿದರೆ ಅದು ಪುರುಷರ ಚರ್ಮಕ್ಕೆ ಅಲರ್ಜಿಯಾಗಬಹುದು ಅಥವಾ ವ್ಯತಿರಿಕ್ತ ಪರಿಣಾಮ ಬೀರಬಹುದು.

ಪುರುಷರು ಆಕರ್ಷವಾಗಿ ಕಾಣಲು ಕೆಲ ಸಲಹೆಗಳು

ಗ್ಲೈಕೊಲಿಕ್ ಆಮ್ಲದಿಂದ ತೊಳೆಯುವುದು

ಗ್ಲೈಕೊಲಿಕ್ ಆಮ್ಲದಿಂದ ತೊಳೆಯುವುದು

ಚರ್ಮದ ಆರೈಕೆ ಮಾಡುವಂತಹ ಪುರುಷರು ಮಲಗುವ ಮೊದಲು ಮತ್ತು ಬೆಳಗ್ಗೆ ಮುಖ ತೊಳೆದುಕೊಳ್ಳುವರು. ಇದು ಪುರುಷರಿಗೆ ಒಳ್ಳೆಯ ಕ್ರಮ. ಕೇವಲ ನೀರಿನಿಂದ ತೊಳೆಯುವ ಬದಲು ಗ್ಲೈಕೊಲಿಕ್ ಆಮ್ಲ ಬಳಸಿದರೆ ಒಳ್ಳೆಯದು. ಇದು ತುಂಬಾ ಆರೋಗ್ಯಕಾರಿ. ನೇರವಾಗಿ ಗ್ಲೈಕೊಲಿಕ್ ಆಮ್ಲ ಬಳಸಲು ಹಿಂಜರಿಕೆ ಇದ್ದರೆ ಗ್ಲೈಕೊಲಿಕ್ ಆಮ್ಲವಿರುವಂತಹ ಫೇಸ್ ಕ್ಲೀನರ್ ಬಳಸಿಕೊಳ್ಳಿ.

ಮುಖ ಮತ್ತು ಚರ್ಮವು ಭಿನ್ನ

ಮುಖ ಮತ್ತು ಚರ್ಮವು ಭಿನ್ನ

ನಿಮ್ಮ ಮುಖಕ್ಕೆ ಬೇಕಾಗಿರುವುದು ಚರ್ಮಕ್ಕೆ ಬೇಕಿಲ್ಲ. ಅದೇ ರೀತಿ ನಿಮ್ಮ ಚರ್ಮಕ್ಕೆ ಬೇಕಿರುವುದು ಮುಖಕ್ಕೆ ಬೇಕಾಗಿರಲ್ಲ. ನೀವು ಬಳಸುವಂತಹ ಬಾಡಿ ಲೋಷನ್ ಮುಖದಲ್ಲಿ ರಂಧ್ರಗಳನ್ನು ಮುಚ್ಚಬಹುದು. ನೀವು ಬಳಸುವ ಬಾಡಿ ಲೋಷನ್ ಅಥವಾ ಮೊಶ್ಚಿರೈಸರ್ ನ್ನು ಕುತ್ತಿಗೆ ತನಕ ಮಾತ್ರ ಬಳಸಿ. ದೇಹದ ಉಳಿದ ಭಾಗಕ್ಕೆ ಬಾಡಿ ಲೋಷನ್ ಬಳಸಿ. ದೇಹದ ಎಲ್ಲಾ ಭಾಗಕ್ಕೆ ಒಂದೇ ರೀತಿಯ ಲೋಷನ್ ಅಥವಾ ಕ್ರೀಮ್ ಬಳಸುವುದು ಸರಿಯಾದ ಕ್ರಮವಲ್ಲ.

ಮುಖಕ್ಕೆ ಮಾಯಿಶ್ಚರೈಸರ್ ನೀಡಿ

ಮುಖಕ್ಕೆ ಮಾಯಿಶ್ಚರೈಸರ್ ನೀಡಿ

ಮುಖವನ್ನು ಎಷ್ಟು ಸಲ ತೊಳೆದರೂ ಮತ್ತು ಕ್ರೀಮ್ ಹಚ್ಚಿಕೊಂಡರೂ ಮುಖವು ತುಂಬಾ ಒಣ ಹಾಗೂ ಗಡುಸಾಗಿರುವುದು. ಮುಖಕ್ಕೆ ಸರಿಯಾಗಿ ಮೊಶ್ಚಿರೈಸರ್ ಸಿಗದೆ ಇರುವುದೇ ಇದಕ್ಕೆ ಕಾರಣವಾಗಿದೆ. ನೇರವಾಗಿ ಮುಖದ ಮೇಲೆ ಮಾಯಿಶ್ಚರೈಸರ್ ಹಾಕಿಕೊಳ್ಳುವುದು ಸರಿಯಲ್ಲ. ಸ್ವಲ್ಪ ಒದ್ದೆಯಾಗಿರುವ ಮುಖದ ಮೇಲೆ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ. ಇದರಿಂದ ಮಾಯಿಶ್ಚರೈಸರ್ ದೀರ್ಘಕಾಲದ ತನಕ ಉಳಿಯುವುದು. ಕೇವಲ ಒಣ ಚರ್ಮದ ಮೇಲೆ ಮಾಯಿಶ್ಚರೈಸರ್ ಹಚ್ಚಿಕೊಂಡರೆ ಅದರಿಂದ ಯಾವುದೇ ರೀತಿಯ ಪ್ರಯೋಜವಿಲ್ಲ.

English summary

face care tips only for men

Exactly like women, men also need to take care of their face. However, often men find spending time on the face to be a very time consuming procedure and often neglect it. It is again the same men who go crazy when a single pimple or boil appears on the face. Well, face care is not a one-day process, where you all of a sudden pamper your face when it reacts. Face care is an everyday process that every man must follow in order to maintain a glowing, healthy skin.
X
Desktop Bottom Promotion