For Quick Alerts
ALLOW NOTIFICATIONS  
For Daily Alerts

ಸೌಂದರ್ಯ ಹೆಣ್ಣಿಗೆ ಮಾತ್ರವಲ್ಲ, ಪುರುಷರಿಗೂ ಬೇಕು!

By Jaya Subramanya
|

ಸೌಂದರ್ಯವೆಂಬುದು ಹೆಣ್ಣೆಗೆ ಎಷ್ಟು ಪ್ರಧಾನವೋ ಗಂಡಿಗೂ ಅಷ್ಟೇ ಪ್ರಧಾನವಾದುದಾಗಿದೆ. ಸುತ್ತಲಿನ ವಾತಾವರಣದಿಂದ ಪುರುಷರ ತ್ವಚೆಯೂ ಕಳೆಗುಂದುತ್ತದೆ. ಮಹಿಳೆಯರು ತಮ್ಮ ತ್ವಚೆಯ ಕಾಳಜಿಗಾಗಿ ಎಷ್ಟು ಮಹತ್ವವವನ್ನು ನೀಡುತ್ತಾರೋ ಹಾಗೆಯೇ ಪುರುಷರೂ ತಮ್ಮ ಸೌಂದರ್ಯದ ಆರೈಕೆಯನ್ನು ಮಾಡಬೇಕಾಗುತ್ತದೆ. ಪುರುಷರ ಉದ್ದ ಕೂದಲಿನ ಆರೈಕೆ- ಇಲ್ಲಿದೆ ಸರಳ ಟಿಪ್ಸ್

ಪುರುಷರ ತ್ವಚೆಯು ಮಹಿಳೆಯರ ತ್ವಚೆಗಿಂತ ದೊರಗಾಗಿದ್ದರೂ ಕೊಳೆ ಮತ್ತು ಧೂಳಿಗೆ ಈ ತ್ವಚೆಯು ಬೇಗನೇ ಹಾನಿಗೊಳಗಾಗುತ್ತದೆ. ನಿತ್ಯವೂ ಮುಖವನ್ನು ತೊಳೆದು ಸ್ವಚ್ಛವಾಗಿರಿಸುವುದರ ಜೊತೆಗೆ ಕೆಲವೊಂದು ಫೇಸ್‌ಪ್ಯಾಕ್‌ಗಳನ್ನು ಪುರುಷರು ಅನುಸರಿಬೇಕಾಗುತ್ತದೆ. ಪುರುಷರ ಮುಖದ ಅಂದ ಚೆಂದಕ್ಕೆ ಒಂದಿಷ್ಟು ಟಿಪ್ಸ್

ಇಂದಿನ ಲೇಖನದಲ್ಲಿ ನಾವು ವಿಶೇಷವಾಗಿ ಪುರುಷರ ಸೌಂದರ್ಯಕ್ಕಾಗಿ ಲಿಂಬೆಯ ಫೇಸ್‌ಪ್ಯಾಕ್ ಅನ್ನು ತಿಳಿಸಿದ್ದೇವೆ.... ಇದರಲ್ಲಿರುವ ವಿಟಮಿನ್ ಸಿ ಅಂಶವು ಕೊಲೆಗಾನ್ ಅನ್ನು ವೃದ್ಧಿಸಲಿದ್ದು, ಸಿಟ್ರಿಕ್ ಆಸಿಡ್, ಪೊಟಾಶಿಯಂ ಅಂಶವು ತ್ವಚೆಯನ್ನು ಹೈಡ್ರೇಟ್ ಮಾಡಲಿದ್ದು ತ್ವಚೆಗೆ ಹಾನಿಕಾರಕವಾಗಿರುವ ಮುಕ್ತ ರಾಡಿಕಲ್‌ಗಳೊಂದಿಗೆ ಹೋರಾಡಲಿದೆ. ಬನ್ನಿ ಹಾಗಿದ್ದರೆ ಈ ಫೇಸ್‌ಪ್ಯಾಕ್ ಅನ್ನು ತಯಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಹಂತ ಹಂತವಾಗಿ ತಿಳಿದುಕೊಳ್ಳೋಣ.

ಹಂತ 1

ಹಂತ 1

ಒಂದು ಕಪ್‌ನಷ್ಟು ನೀರನ್ನು ಕುದಿಸಿಕೊಳ್ಳಿ, ಇದಕ್ಕೆ ಗ್ರೀನ್ ಟಿ ಎಲೆಗಳನ್ನು ಸೇರಿಸಿ. ಇದು 5 ನಿಮಿಷಗಳ ಕಾಲ ಕುದಿಯಲಿ. ಬಿಸಿಯನ್ನು ಆರಿಸಿಕೊಂಡು 5 ನಿಮಿಷಗಳ ಕಾಲ ತಣಿಯಲು ಬಿಡಿ. ಗ್ರೀನ್ ಟಿ ಹೆಚ್ಚು ಪ್ರಮಾಣದ ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದ್ದು ಮೊಡವೆಯನ್ನುಂಟು ಮಾಡುವ ಬ್ಯಾಕ್ಟೀರಿಯಾವನ್ನು ತಡೆಗಟ್ಟಿ ನೆರಿಗೆಗಳನ್ನು ಹೋಗಲಾಡಿಸಲಿದೆ.

ಹಂತ 2

ಹಂತ 2

ಅರ್ಧ ಟೊಮೇಟೊವನ್ನು ಕತ್ತರಿಸಿಕೊಂಡು ರಸವನ್ನು ಹಿಂಡಿಕೊಳ್ಳಿ. ಪೇಸ್ಟ್‌ನಲ್ಲಿ ಯಾವುದೇ ಗಂಟುಗಳಿಲ್ಲ ಎಂಬುದನ್ನು ಖಾತ್ರಿಪಡಿಸಿ. ಟೊಮೇಟೊದಲ್ಲಿ ಬೀಟಾ ಕ್ಯಾರೊಟಿನ್ ಇದ್ದು ಇದು ತ್ವಚೆಯ ಟ್ಯಾನ್ ಅನ್ನು ಹೋಗಲಾಡಿಸಿ ಕಲೆಗಳನ್ನು ತಿಳಿಯಾಗಿಸಲಿದೆ.

ಹಂತ 3

ಹಂತ 3

ಈ ಮಾಸ್ಕ್‌ಗೆ ಅಕ್ಕಿ ಹುಡಿಯನ್ನು ಸೇರಿಸಿ. ಇದರಲ್ಲಿರುವ ಗಡುಸಾದ ಅಕ್ಕಿಯ ಕಣಗಳು ಸ್ಕಿನ್ ಅನ್ನು ಎಕ್ಸ್‌ಫೋಲಿಯೇಟ್ ಮಾಡಲಿದೆ, ಮತ್ತು ಮೃತ ಕೋಶಗಳ ಪದರಗಳನ್ನು ಹೋಗಲಾಡಿಸಲಿದೆ.

ಹಂತ 4

ಹಂತ 4

ಮಾಸ್ಕ್‌ಗೆ ಅರ್ಧ ಚಮಚದಷ್ಟು ಲಿಂಬೆ ರಸವನ್ನು ಸೇರಿಸಿ. ಫೋರ್ಕ್ ಬಳಸಿಕೊಂಡು ಎಲ್ಲವನ್ನೂ ಮಿಶ್ರ ಮಾಡಿ, ನಿಮಗೆ ನುಣ್ಣನೆಯ ಪೇಸ್ಟ್ ದೊರೆಯುವಂತೆ ಕಲಸಿಕೊಳ್ಳಿ.

ಹಂತ 5

ಹಂತ 5

ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುವ ಮುನ್ನ ಸ್ಟೀಮ್ ತೆಗೆದುಕೊಳ್ಳಿ. ಇದು ರಂಧ್ರಗಳನ್ನು ತೆರೆಯಲಿದೆ, ತದನಂತರವೇ ಮಾಸ್ಕ್‌ನಲ್ಲಿರುವ ಅಂಶಗಳು ಮುಖದಲ್ಲಿರುವ ಪದರಗಳ ಆಳಕ್ಕೆ ಇಳಿಯಲಿವೆ.

ಹಂತ 6

ಹಂತ 6

ಸ್ವಚ್ಛವಾದ ಬೆರಳುಗಳಿಂದ ಮಾಸ್ಕ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ಮಾಸ್ಕ್ ಮುಖದಲ್ಲಿ 15 ರಿಂದ 30 ನಿಮಿಷಗಳ ಕಾಲ ಇರುವಂತೆ ನೋಡಿಕೊಳ್ಳಿ.

ಹಂತ 7

ಹಂತ 7

ನಿಮ್ಮ ಮುಖದಲ್ಲಿರುವ ಮಾಸ್ಕ್ ಎಳೆಯಲು ಆರಂಭಗೊಳ್ಳುತ್ತಿದ್ದಂತೆ, ಮುಖಕ್ಕೆ ಸ್ವಲ್ಪ ನೀರನ್ನು ಚಿಮುಕಿಸಿಕೊಳ್ಳಿ ಮತ್ತು ವೃತ್ತಾಕಾರವಾಗಿ ಮುಖದಲ್ಲಿರುವ ಮಾಸ್ಕ್‌ನ ಸಹಾಯದಿಂದ ಮಸಾಜ್ ಮಾಡಿಕೊಳ್ಳಿ. ಇದನ್ನು 2 ನಿಮಿಷಗಳ ಕಾಲ ಮಾಡಿ. ಉಗುರು ಬೆಚ್ಚನೆಯ ನೀರಿನಿಂದ ಮುಖವನ್ನು ತೊಳೆದುಕೊಂಡು ನಂತರ ತಣ್ಣೀರನ್ನು ಬಳಸಿ.

ಹಂತ 8

ಹಂತ 8

ತ್ವಚೆಯನ್ನು ಒಣಗಲು ಬಿಡಿ. ಎಣ್ಣೆ ಮುಕ್ತವಾಗಿರುವ ಮಾಯಿಶ್ವರೈಸ್‌ನಿಂದ ತ್ವಚೆಯನ್ನು ಮಸಾಜ್ ಮಾಡಿ ಇದು ನಿಮ್ಮ ತ್ವಚೆಗೆ ಉತ್ತಮಾಗಿರುತ್ತದೆ.

ಕೆಲವೊಂದು ಸಲಹೆಗಳು

ಮಾಸ್ಕ್ ಮುಖದಲ್ಲಿ ಚೆನ್ನಾಗಿ ಹೊಂದಿಕೆಯಾಗುವಂತೆ ಮಾಡಲು ಶೇವ್ ಮಾಡಿಕೊಳ್ಳಿ

ಮುಖದಲ್ಲಿ ಮೊಡವೆ ಪೀಡಿತ ತ್ವಚೆ ನಿಮ್ಮದಾಗಿದೆ ಎಂದಾದಲ್ಲಿ, ಲಿಂಬೆಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಿ ಇಲ್ಲದಿದ್ದರೆ ಇದು ತ್ವಚೆಗೆ ಕಿರಿಕಿರಿಯನ್ನುಂಟು ಮಾಡುತ್ತದೆ.

ಮಹಿಳೆಯರಿಗಿಂತ ಪುರುಷರ ತ್ವಚೆಯು ಎಣ್ಣೆಯುಕ್ತವಾಗಿರುವುದರಿಂದ ಸೋಪು ಬಳಸುವುದೇ ಸಾಲುತ್ತದೆ, ಆದರೆ ನೀವು ಬಳಸುತ್ತಿರುವುದು ಮಾಯಿಶ್ಚರೈಸಿಂಗ್ ಸೋಪು ಎಂಬುದನ್ನು ಖಾತ್ರಿಪಡಿಸಿ, ನಿಮ್ಮದು ಡ್ರೈ ಸ್ಕಿನ್ ಆಗಿದ್ದರೆ ಇಂತಹ ಸೋಪು ಉತ್ತಮವಾಗಿದೆ.

ಪ್ರಯೋಜನವೇನು?

ಈ ಕ್ಲೆನ್ಸಿಂಗ್ ಮಾಸ್ಕ್‌ನಲ್ಲಿರುವ ನೈಸರ್ಗಿಕ ಉತ್ಪನ್ನಗಳು ತ್ವಚೆಯನ್ನು ನಿರಾಳಗೊಳಿಸಲಿದೆ, ಮತ್ತು ಆಳಕ್ಕೆ ಹುದುಗಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಿ, ಟ್ಯಾನ್ ಅನ್ನು ದೂರವಾಗಿಸಲಿದೆ.

English summary

This Lemon Face Mask For Men Will Keep Dirt Off & Face Fresh, Try It!

Para Gone are the days when men being particularly considerate about their skin were looked down upon. Now, men take pride on how they look, and invest time on their skin as well. And we absolutely love that! Here is a lemon face mask recipe for the gentlemen who like to keep the dirt off and face fresh!
Story first published: Monday, December 19, 2016, 23:41 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X